Saturday 24 June 2017

ಅಖಂಡ ಕರ್ನಾಟಕ ಕಲಾ ಶಿಕ್ಷಕರು: 7 wonders

ಅಖಂಡ ಕರ್ನಾಟಕ ಕಲಾ ಶಿಕ್ಷಕರು: 7 wonders: ♠ ಪ್ರಾಚೀನ ಯುಗದ ಏಳು ಅದ್ಭುತಗಳು ♠ ಕ್ರಮಸಂಖ್ಯೆ ಪ್ರಾಚೀನ ಕಾಲದ ಏಳು ಅದ್ಭುತಗಳು 01 ಬ್ಯಾಬಿಲೋನಿಯದ ತೂಗು ಉದ್ಯಾನ 02 ಇಪೆಸಸ್ ನ ಅರ್ಟೆಮಿಸ್ ದೇವಸ್ಥಾನ 0...

Saturday 3 October 2015

"ಜೈ ಜವಾನ್ ಜೈ ಕಿಸಾನ್" - ಲಾಲ್ ಬಹಾದ್ದೂರ್ ಶಾಸ್ತ್ರಿ.

"ಜೈ ಜವಾನ್ ಜೈ ಕಿಸಾನ್" - ಲಾಲ್ ಬಹಾದ್ದೂರ್ ಶಾಸ್ತ್ರಿ.
ಹೀಗೆ ಬದುಕಿದ್ದರು ನಮ್ಮ ಶಾಸ್ತ್ರೀಜಿ.
(ತಪ್ಪದೆ ಈ ಸಂದೇಶ ಶೇರ್ ಮಾಡಿ)
ಎರಡು ಘಂಟೆ ಯುದ್ಧ ಮುಂದುವರಿದಿದ್ದರೆ,ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ತನಕ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿತ್ತು.
ಎಚ್ಚೆತ್ತ ಪಾಕಿಸ್ತಾನ ಅಮೇರಿಕದ ಮುಂದೆ ಮಂಡಿಯೂರಿ ಕೂತಿತು.ಯುದ್ಧವನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೇ ಗೋಗರೆಯಿತು.
ಆಗ ಅಮೇರಿಕದ ಗೋಧಿ ಭಾರತಕ್ಕೆ ಆಮದಾಗುತ್ತಿತ್ತು.ಆ ಗೋಧಿಯ ಗುಣಮಟ್ಟ ಹೇಗಿತ್ತೆಂದರೆ,ಪ್ರಾಣಿಗಳು ತಿನ್ನಲೂ ಅಸಾಧ್ಯವಾದದ್ದು.ಈ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು ಜವಾಹರಲಾಲ್ ನೆಹರೂ.ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ,ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು.ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ”
“ಹೊಟ್ಟೆಗೆ ಆಹಾರವಿಲ್ಲದಿದ್ದರೆ ಭಾರತೀಯರು ಸಾಯುತ್ತಾರೆ”ಅಮೇರಿಕದ ಕುಚೋದ್ಯ ಪ್ರತಿಕ್ರಿಯೆ..!!
“ದೊಡ್ಡು ಕೊಟ್ಟು ನಿಮ್ಮ ಕಳಪೆಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ,ಹಸಿವಿನಿಂದ ಸಾಯುವುದೇ ವಾಸಿ.ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ” ಶಾಸ್ತ್ರೀಜಿಯವರ ತೀಕ್ಷ್ಣ ಪ್ರತಿಕ್ರಿಯೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಶಾಸ್ತ್ರೀಜಿ ಮಾತನಾಡುತ್ತಾರೆ..
“ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ.ಅಮೇರಿಕದಿಂದ ಗೋಧಿ ಆಮದಾಗುವುದು ನಿಂತಿದೆ.ದೇಶದ ಜನ ಸಹಕರಿಸಬೇಕಿದೆ.ಒಂದು..ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡಬಹುದು.ಎರಡು..ಪ್ರತಿ ಸೋಮವಾರ ನೀವು ಉಪವಾಸವೃತವನ್ನು ಆಚರಿಸಬಹುದು.ಇದರಿಂದ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಬಹುದು.ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು”
ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶ ಓಗೊಟ್ಟಿತು.ಹಲವರು ಸೇನೆಗೆ ಸಹಾಯ ಮಾಡಿದರು.ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು.ಸ್ವತಃ ಶಾಸ್ತ್ರೀಜಿಯವರೂ ಸೋಮವಾರದಂದು ಉಪವಾಸವೃತವನ್ನು ಕೈಗೊಂಡರು.
ಶಾಸ್ತ್ರೀಜಿಯವರ ಪತ್ನಿ,ಲಲಿತಾದೇವಿಯವರು ಅನಾರೋಗ್ಯಪೀಡಿತರಾಗಿದ್ದರು.ಮನೆಗೆಲಸಕ್ಕೆಂದು ಕೆಲಸದವಳೊಬ್ಬಳು ಬರುತ್ತಿದ್ದಳು.ಶಾಸ್ತ್ರೀಜಿಯವರು ಮಹಿಳೆಗೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದರು.ಆಕೆ”ಅಲ್ಲ,ನಿಮ್ಮ ಬಟ್ಟೆಯನ್ನು ತೊಳೆಯುವುದು,ಮನೆಯನ್ನು ಸ್ವಚ್ಛಗೊಳಿಸುವುದು,ನಿಮ್ಮ ಪತ್ನಿಯ ಆರೈಕೆಯನ್ನು ಯಾರು ಮಾಡಿಕೊಡುತ್ತಾರೆ ಸ್ವಾಮೀ”ಎಂದು ಕೇಳಿದಳು.
“ದೇಶಕ್ಕಾಗಿ ಇದು ಅನಿವಾರ್ಯವಮ್ಮಾ.ನಿನಗೆ ಕೊಡುವ ಸಂಬಳದ ಹಣವಾದರೂ ಉಳಿದೀತು.ದೇಶದ ಒಳಿತಿಗಾದೀತು” ಎಂದು ಹೇಳಿದರು.ನಂತರ ಮನೆಯ ಪ್ರತಿಯೊಂದು ಕೆಲಸವನ್ನೂ ಶಾಸ್ತ್ರೀಜಿಯವರೇ ನಿಭಾಯಿಸುತ್ತಿದ್ದರು.
ಶಾಸ್ತ್ರೀಜಿಯವರ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡಲೆಂದು ಟ್ಯೂಟರ್ ಬರುತ್ತಿದ್ದರು.ಅವರನ್ನೂ ಕೆಲಸದಿಂದ ವಿಮುಕ್ತಗೊಳಿಸಿದರು.”ಮಕ್ಕಳು ಇಂಗ್ಲೀಷಿನಲ್ಲಿ ಫೇಲಾಗುತ್ತಾರೆ”ಟ್ಯೂಟರ್ ಹೇಳಿದ್ದಕ್ಕೆ ಶಾಸ್ತ್ರೀಜಿ,”ಆಗಲಿ ಬಿಡಿ ಇಂಗ್ಲೀಷ್ ನಮ್ಮ ಭಾಷೆಯಲ್ಲ.ಇಂಗ್ಲಿಷರು ಹಿಂದಿಯನ್ನು ಬರೆದರೆ ಅವರೂ ಫೇಲಾಗುತ್ತಾರೆ”ಎಂದರು.
ಒಂದು ದಿನ ಶಾಸ್ತ್ರೀಜಿಯವರ ಪತ್ನಿ,ಹರಿದುಹೋಗಿರುವ ಅವರ ಧೋತಿಯನ್ನು ನೋಡಿ “ಒಂದು ಹೊಸ ಧೋತಿಯನ್ನಾದರೂ ತೆಗೆದುಕೊಳ್ಳಬಾರದೇ?”ಎಂದು ಕೇಳುತ್ತಾರೆ.”ಅದನ್ನು ಕೊಳ್ಳಲು ಹಣವೆಲ್ಲಿದೆ..?ಬರುವ ಸಂಬಳವನ್ನೂ ಬಿಟ್ಟಾಗಿದೆ.ಮನೆಯ ಖರ್ಚುಗಳನ್ನು ಕಡಿಮೆ ಮಾಡು” ಎಂದಿದ್ದರು.
ನಾಳೆ ಅಕ್ಟೋಬರ್ ಎರಡು ಬರುತ್ತಿದೆ.ಶಾಸ್ತ್ರೀಜಿಯವರ ಜನ್ಮದಿನ.ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ,ಸಜ್ಜನ ಮಹಾಪುರುಷನನ್ನು ನಾವಂದು ಸ್ಮರಿಸಬೇಕಿದೆ.. Forward this guys be proud about shastriji

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ."



ಶಾಲೆಯಿಂದ ಮನೆಗೆ ಬಂದ ೪ ವರ್ಷದ ಮಗುವೊಂದು ಊಟ ನಿರಾಕರಿಸಿ ತೆಪ್ಪಗೆ ಕುಳಿತುಬಿಟ್ಟಿತ್ತು. ತಾಯಿ, ಅಜ್ಜಿ, ತಾತ ಯಾರ ಜುಲುಮೆಗೂ ಬಗ್ಗಲಿಲ್ಲ. ಮುದ್ದು ಮಾಡಿದರು, ಚಾಕಲೇಟ್-ಐಸ್ಕ್ರೀಮ್ ನ ಆಮಿಷ ಒಡ್ಡಿದರು, ಗದರಿದರು, ಬುದ್ಧಿ ಹೇಳಿದರು-ಏನೇ ಮಾಡಿದರೂ ಒಂದು ತುತ್ತಿಗೂ ಬಾಯಿ ಬಿಡಲಿಲ್ಲ. ರಾತ್ರಿ ಆಫೀಸಿನಿಂದ ಮರಳಿ ಬಂದ ತಂದೆಗೆ ವರದಿ ಹೋಯಿತು. ಗಾಬರಿಗೊಂಡ ತಂದೆ ಎಲ್ಲ ಕೆಲಸವನ್ನೂ ಬಿಟ್ಟು ಮಗನನ್ನು ತೊಡೆಯ ಮೇಲೆತ್ತಿಕೊಂಡು ಊಟ ಮಾಡದಿರುವುದಕ್ಕೆ ಕಾರಣ ಕೇಳಿದ.
"ನಾನು ಕೇಳಿದ್ದನ್ನು ಒಪ್ಪಿಕೊಂಡರೆ ತಿನ್ನುವೆ."-ಎಂದಿತು ಮಗು.
"ಆಯ್ತು, ನಿನಗೇನು ಬೇಕು ಹೇಳು. ಕೈಲಾದಲ್ಲಿ ಕೊಡಿಸುವೆ. ತೀರ ದುಬಾರಿಯದ್ದು ಕೇಳಿದರೆ ಕೊಡಿಸಲಾರೆ." ಎಂದ ಅಪ್ಪ ಪಟ್ಟು ಬಿಡದೆ.

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ." ತಂದೆ ಒಪ್ಪಿದ.

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ." ತಂದೆ ಒಪ್ಪಿದ.
ಮಗು ಹೇಳಿತು-"ನೀನು ಸೆಲೂನಿಗೆ ಕರೆದುಕೊಂಡು ಹೋಗಿ ನನ್ನ ತಲೆ ಬೋಳಿಸಬೇಕು."
"ಇದೆಂಥ ವಿಲಕ್ಷಣ ಆಸೆ!" ವಿಸ್ಮಿತನಾಗಿ ತಂದೆ ನುಡಿದ. "ಎಷ್ಟು ಅವಲಕ್ಷಣವಾಗಿ ಕಾಣುವೆ ನೀನು ಗೊತ್ತೇ? ಶಾಲೆಯಲ್ಲೂ ಹುಡುಗರು ನಿನ್ನನ್ನು ನೋಡಿ ನಗುವರು."
"ನೀನು ಪ್ರಾಮಿಸ್ ಮಾಡಿದೀಯ"-ಮುಖ ಊದಿಸಿಕೊಂಡಿತು ಮಗು.
ಅಂತೂ ಇಂತೂ ಭರವಸೆಯನ್ನು ಈಡೇರಿಸದಿದ್ದರೆ ಮಗುವಿಗೆ ತಪ್ಪು ಸಂದೇಶ ಕೊಟ್ಟಂತಾಗುವುದೆಂದು ತಂದೆ ಒಪ್ಪಿದ. ಮಗು ಊಟ ಮಾಡಿತು. ತಂದೆ ಮಗುವನ್ನು ಸೆಲೂನಿಗೆ ಕರೆದುಕೊಂಡು ಹೋಗಿ ತಲೆ ಬೋಳಿಸಿಕೊಂಡು ಬಂದ.
ಮರುದಿನ ಬೋಡುತಲೆಯ, ಗುಂಡುಗುಂಡಾಗಿದ್ದ, ಮಗನ ಅರಳು ಕಣ್ಣುಗಳಲ್ಲಿ ಮಿಂಚುತ್ತಿದ್ದ ಸಂತಸವನ್ನು ಕಂಡು ಸಂಭ್ರಾಂತನಾದ. ಶಾಲೆಗೆ ಬಿಡುತ್ತಿದ್ದಂತೆ ಮಗು ಕಾರಿನಿಂದ ಇಳಿದು ತನ್ನಂತೆಯೇ ಬೋಡುತಲೆಯಿದ್ದ ಹೆಣ್ಣುಮಗುವಿನ ಕೈ ಹಿಡಿಯಲು ಓಡಿ ಹೋಯಿತು. ಎರಡು ಮಕ್ಕಳೂ ಜೋರಾಗಿ ಕೇಕೆ ಹಾಕಿ, ನಕ್ಕು ಕೈಹಿಡಿದು ಜೊತೆಯಾಗಿ ಶಾಲೆಯೊಳಕ್ಕೆ ಹೊರಟು ಹೋದವು.ಇನ್ನೊಂದು ಮಗುವಿನ ತಾಯಿ ಈತನಿದ್ದ ಕಡೆಗೆ ಬಂದು-" ಇಂಥ ಮಗುವನ್ನು ಪಡೆದ ನೀವು ಅದೃಷ್ಟಶಾಲಿ" ಎಂದು ಅಭಿನಂದಿಸಿದಳು.
ಅರೆಕ್ಷಣ ವಿಸ್ಮಿತನಾದ ಅವನಿಗೆ "ನನ್ನ ಮಗು ಕ್ಯಾನ್ಸರ್ ಪೀಡಿತೆ. ಕೀಮೋಥೆರಪಿ ಮತ್ತು ರೇಡಿಯೇಶನ್ ನಿಂದಾಗಿ ತಲೆ ಬೋಡಾಗಿದೆ. ಶಾಲೆಗೆ ಬರಲು ಮುಜುಗರ ಪಡುತ್ತಿದ್ದ ಅವಳನ್ನು ಸಂತೈಸಿ ನಿಮ್ಮ ಮಗು "ನಾನೂ ನಿನ್ನಂತೆಯೇ ಆಗುತ್ತೇನೆ, ನಿನಗೆ ಮುಜುಗರವಾಗದು" ಎಂದು ಹೇಳಿ ಕೊಟ್ಟ ಭಾಷೆ ಉಳಿಸಿಕೊಂಡು ಅವಳ ನೆಮ್ಮದಿಗೆ ಕಾರಣನಾಗಿದ್ದಾನೆ. ಇಷ್ಟು ಪುಟ್ಟ ಮಗು ಅವಳ ನೋವನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿದ್ದಾನೆ. ಅವನ ಮಾತನ್ನು ನಡೆಸಿಕೊಟ್ಟ ನೀವೆಷ್ಟು ವಿಶಾಲ ಹೃದಯಿಗಳು!" ಎಂದಳು.
ಹಿಂದಿನ ದಿನವಷ್ಟೇ ತೊಡೆಯ ಮೇಲೆ ಕೂರು ಹಠ ಮಾಡಿದ ಮಗು, ಇದ್ದಕ್ಕಿದ್ದ ಹಾಗೆ ಎಲ್ಲವನ್ನೂ ಮೀರಿಸಿ ಆಕಾಶದೆತ್ತರ ಬೆಳೆದು ನಿಂತಂತೆ ಭಾಸವಾಯಿತು ಅವನಿಗೆ. ಕಣ್ಣುಗಳು ಆರ್ದ್ರವಾದವು.
ಬಾಲ್ಯವೊಂದು ನಂದನ. ಎಳೆಯ ಮನಸ್ಸುಗಳು ತೆಗೆದುಕೊಳ್ಳುವ ನಿರ್ಧಾರಗಳಿಗೂ ವಯಸ್ಸಿಗೂ ಸಂಬಂಧವಿಲ್ಲ. ಅವರು ನೋವಿಗೆ, ಅಸಹಾಯಕತೆಗೆ, ಸ್ನೇಹಕ್ಕೆ, ಪ್ರೀತಿಗೆ, ಭಾವನೆಗಳಿಗೆ ತೆರೆದುಕೊಳ್ಳುವಷ್ಟು ನಾವು ತೆರೆದುಕೊಳ್ಳಲಾರೆವು. ಅವರು ಕ್ಷಣಾರ್ಧದಲ್ಲಿ ಅಚ್ಚರಿ, ಅಗಾಧತೆಗಳನ್ನು ಸೃಷ್ಟಿಸಿಬಿಡಬಲ್ಲರು. ಅವರ ಮಾತುಗಳನ್ನು ಅಪಹಾಸ್ಯಕ್ಕೀಡು ಮಾಡಿಯೋ, ಹಗುರವಾಗಿಯೋ ತೆಗೆದುಕೊಂಡರೆ ಅದಕ್ಕಿಂತ ಹೆಚ್ಚಿನ ದಡ್ಡತನ ಮತ್ತೊಂದಿಲ್ಲ.
ಕೆಲಸದ ಒತ್ತಡಗಳಲ್ಲಿ ಮಕ್ಕಳನ್ನು ಮಾತನಾಡಿಸಲು ಹೊತ್ತಿಲ್ಲವೆಂದು ನಿರಾಕರಿಸುವವರೇ ಬಹಳ ಮಂದಿ. ತುಂಬ ಮಾತನಾಡಬೇಕಾದ ವಯಸ್ಸು ಅದು. ಕಿವಿಯಷ್ಟನ್ನೇ ಅಲ್ಲ, ಮನಸ್ಸು ಕೊಟ್ಟು ಆಲಿಸಬೇಕಾದದ್ದು ಹಿರಿಯರೆಲ್ಲರ ಆದ್ಯ ಕರ್ತವ್ಯ..
ನಿಮಗಿಷ್ಟವಾಗಿದ್ರೆ ಶೇರ್ ಮಾಡಿ 🙏
ಇತಿಹಾಸ ಮರೆತ ಜನನಾಯಕ ಶಾಸ್ತ್ರಿಜಿ....
ಕಾಂಗ್ರೆಸ್ಸಿನವರು ಇಂದೇನಾದರೂ ಅಸ್ತಿತ್ವದಲ್ಲಿದ್ದರೆ ಅದು ಶಾಸ್ತ್ರಿ, ಪಟೇಲ್, ಮೊರಾರ್ಜಿ ಅಂಥವರ ಹೆಸರಿನಿಂದಲೇ ಹೊರತು ಇಂದಿನವರ ಕುಖ್ಯಾತ ಆಡಳಿತದಿಂದಲ್ಲ......
"We would prefer to live in poverty for as long as necessary but we shall not allow our freedom to be subverted" ಎಂದಿದ್ದರು ಶಾಸ್ತ್ರಿ. ಆದರೆ ಇಂದಿನ ರಾಜಕಾರಣಿಗಳು ಇದಕ್ಕೆ ತದ್ವಿರುದ್ಧ. ತಮ್ಮ ಇಲಾಖೆಯ ಸಚಿವಾಲಯದಲ್ಲಿ ಇರುವ ಖಜಾನೆಯ ಹಣವನ್ನು ನುಂಗಿ ನೀರು ಕುಡಿಯುವ ಮತ್ತು ಕಾನೂನಿನ ಕೈಗೆ ಸಿಗದೆ ನುಣುಚಿಕೊಳ್ಳುವ ಮೇಧಾವಿ ರಾಜಕಾರಣಿಗಳ ದಂಡೇ ಇಂದಿನ ಭಾರತ ಘನ ಸರ್ಕಾರದ ಸಂಪತ್ತು. 1965ರ ಯುಧ್ಧದ ಪರಿಣಾಮದಿಂದ ಖಾಲಿಯಾಗಿದ್ದ ಖಜಾನೆಯನ್ನು ತುಂಬಲು ಮತ್ತು ದೇಶದ ಒಳಿತಿಗಾಗಿ ಒಂದು ಹೊತ್ತು ಉಪವಾಸ ಮಾಡಲು ಕರೆ ಕೊಟ್ಟ ಅಂದಿನ ಪ್ರಧಾನಿ ಒಂದೆಡೆಯಾದರೆ, ಇಂದು ಇಡಿ ರಾಷ್ಟ್ರದ ಖಜಾನೆಯನ್ನೇ ಲೂಟಿ ತಾನು ಶುಧ್ಧಹಸ್ತನೆಂದು ಸಾರುತ್ತ ತಿರುಗುವ ತಮ್ಮ ಮಂತ್ರಿಗಳ ದಂಡು ಇನ್ನೊಂದೆಡೆ. ರಾಷ್ಟ್ರದ ಸಂಪತ್ತನ್ನು ಬರಿದಾಗಿಸಿ ವಿದೇಶದಲ್ಲಿ ತಮ್ಮ ಖಾತೆಗಳಲ್ಲಿ ಜಮೆ ಮಾಡಿಕೊಂಡಿರುವ ದೇಶ್ದ್ರೋಹಿಗಳು ನಮ್ಮನಾಳುವುದು ನಮ್ಮ ದೇಶದ ದುರ್ದೈವ.
ಅದೊಂದು ದಿನ ಪ್ರಧಾನ ಮಂತ್ರಿ ಶಾಸ್ತ್ರಿ ಅವರು ಬಳಸುತ್ತಿದ್ದ ವಾಹನವನ್ನು ಅವರ ಮಗ ಸುನಿಲ್ ಶಾಸ್ತ್ರಿ ವೈಯ್ಯಕ್ತಿಕ ಕೆಲಸಕ್ಕೆ ಉಪಯೋಗಿಸಿದ್ದು ಅವರ ಗಮನಕ್ಕೆ ಬಂದಾಗ ವಾಹನದ ಚಾಲಕನನ್ನು ಕರೆದು ವಾಹನ ಕ್ರಮಿಸಿದ ವಿವರವನ್ನು ಪಡೆದ ಶಾಸ್ತ್ರೀಜಿ ಅವರು ಅದರ ವೆಚ್ಚವನ್ನು ಸರ್ಕಾರಕ್ಕೆ ಪಾವತಿಸಿದರು!. ಇವರು ಬಹುಶಃ ಭಾರತ ಕಂಡ ಪ್ರಧಾನಿಯಾದ ಅತ್ಯಂತ ಪ್ರಾಮಾಣಿಕ ಜೀವಿ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಇವರ ಸ್ವಾಭಿಮಾನ್, ದೇಶಾಭಿಮಾನ ಕೂಡ ತಲೆದೂಗುವಂತದ್ದು.
ಇಂಥಹ ಪ್ರಾಮಾಣಿಕ ನಾಯಕತ್ವದ ಮಹಾನ್ ಚೇತನವನ್ನು ಅವರ ಜನ್ಮದಿನದಂದು ನೆನೆಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
ಜೈ ಹಿಂದ್. ಜೈ ಜವಾನ್, ಜೈ ಕಿಸಾನ್....









ಗಾಂಧೀಜಿ ಹತ್ಯೆಯ ರಹಸ್ಯ ...

Tuesday 11 March 2014

ಆಧುನಿಕ ಮಹಿಳೆ

ಆಧುನಿಕ ಮಹಿಳೆ


ಮಹಿಳೆ ಇಂದು ಬದಲಾಗಿದ್ದಾಳೆ, ಬದಲಾಗುತ್ತಿದ್ದಾಳೆ. ಆಧುನಿಕ ಸಮಾಜದಲ್ಲಿ ಹೆಣ್ಣು ಮುಂದುವರಿದಿದ್ದಾಳೆ, ಮುಂದುವರಿಯುತ್ತಿದ್ದಾಳೆ. ಆಕೆಯ ಸ್ಥಾನಮಾನ ಬದಲಾಗಿದೆ. ಒಟ್ಟು ಸಮಾಜದ ಬದಲಾವಣೆಯ ಒಂದು ಭಾಗ ಇದು. ಒಳಗಡೆ ಹೊಕ್ಕರೆ ಅಲ್ಪಸ್ವಲ್ಪ ಹುಳುಕುಗಳಿವೆ ನಿಜ. ಆದರೆ ಮೇಲುನೋಟಕ್ಕೆ ಕಾಣುವ ಹಾಗೆ ಮಹಿಳೆಯ ಸ್ಥಿತಿ-ಗತಿಯಲ್ಲಿ ಇಂದು ಮಹತ್ತರ ಬದಲಾವಣೆ ಕಾಣಬಹುದು. ಮಹಿಳೆ ಇಂದು ಸ್ವಸಾಮರ್ಥ್ಯದಿಂದಲೇ ಪುರುಷನಿಗೆ ಸರಿಸಾಟಿಯಾಗಿ ನಿಂತಿದ್ದಾಳೆ. ಸಮಾನತೆ ಸಾಧಿಸುವತ್ತ ದೃಢಹೆಜ್ಜೆ ಇಟ್ಟಿದ್ದಾಳೆ. ಇದು ನನ್ನ ಬಲವಾದ ನಂಬಿಕೆ.
ಇದು ಯಾವುದೋ ಒಂದು ಕ್ಷೇತ್ರಕ್ಕೆಸಂಬಂಧಪಟ್ಟ ಮಾತಲ್ಲ. ಶಿಕ್ಷಣದಲ್ಲಿ ಇರಬಹುದು, ಉದ್ಯೋಗದಲ್ಲಿ ಇರಬಹುದು, ವ್ಯವಹಾರದಲ್ಲಿ ಆಗಬಹುದು. ಮಹಿಳೆಯರು ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ರಾಜಕಾರಣಿಯಾಗಿ, ಸಾಮಾಜಿಕ ಚಿಂತಕನಾಗಿ ನಾನು ನೂರಾರು ಹಳ್ಳಿಗಳನ್ನು ಸುತ್ತಾಡುತ್ತೇನೆ. ನಮ್ಮ ರಾಜ್ಯದ ಸ್ಥಿತಿ-ಗತಿಯನ್ನೇ ನೋಡುವುದಾದರೆ, ಕೇವಲ 25 ವರ್ಷಗಳ ಹಿಂದೆ ಹಳ್ಳಿಯ ಹೆಣ್ಣು ಮಕ್ಕಳಲ್ಲಿ ಸೆಲ್ವಾರ್ ಕಮೀಜ್, ನೈಟಿ ನೋಡಿಯೇ ಇಲ್ಲ. ಆದರೆ ಇಂದು ಎಷ್ಟು ಧೈರ್ಯವಾಗಿ ಅವುಗಳನ್ನು ತೊಟ್ಟುಕೊಂಡು ತಿರುಗಾಡುತ್ತಾರೆ. ಇದೊಂದು ಸಾಂಕೇತಿಕ ಉದಾಹರಣೆ ಅಷ್ಟೆ. ಆದರೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಇದು ಮುಖ್ಯವಾದ ವಿಷಯ.
ಸಮಾಜದಲ್ಲಿನ ಘೋಷಿತ ಹಾಗೂ ಅಘೋಷಿತ ಪದ್ಧತಿಗಳು ಬದಲಾಗಿವೆ. ಸಮಾಜವೂ ಇದನ್ನು ಒಪ್ಪುತ್ತದೆ ಎಂದಾಯ್ತು. ಹೆಣ್ಣನ್ನು ಒಂದು ಕಡೆ ಸಂಪ್ರದಾಯದ ‘ಫ್ರೇಮ್’ ಹಾಕಿಸಿ ಕೂರಿಸುವಂತಹ ಪುರೋಹಿತಶಾಹಿಗಳಿಗೆ ಇದು ತಲೆನೋವು ತರುವ ವಿಚಾರವೇ. ಅಂದರೆ ಮಹಿಳೆ ಇಂತಹ ಸಾಂಪ್ರದಾಯಿಕ, ಸನಾತನ ಕಲ್ಪನೆಗಳನ್ನು ದಾಟಿ ಹೊರಬಂದಿದ್ದಾಳೆ.
ಈ ಬೆಳವಣಿಗೆಯನ್ನು ಗಮನಿಸಿದರೆ ಒಂದೆರಡು ಜನರೇಷನ್ ಬದಲಾಗಿದೆ ಎಂದಾಯ್ತು. ಇದನ್ನು ಫ್ಯಾಷನ್ ಅಂತ ಕರೆಯಲಾಗದು. ‘ಡಿಫಯನ್ಸ್’  (defiance) ಅಂದರೆ ಧಿಕ್ಕರಿಸುವ ಸಂಕೇತ ಅಂತಲೂ ಹೇಳಲಾಗದು. ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು, ಹೊಸತನವನ್ನು ತೋರುವ ಕುತೂಹಲಕಾರಿ ಬೆಳವಣಿಗೆ ಎನ್ನಬಹುದು. ಈ ಬೆಳವಣಿಗೆ ಇಡೀ ದೇಶದಲ್ಲೇ ಆಗಿದೆ. ಆಧುನಿಕ ಪ್ರಪಂಚಕ್ಕೆ ಸ್ಪಂದಿಸುತ್ತಿರುವ ಮಹಿಳೆಯ ಸ್ವರೂಪ ಇದು.
ಜಾಗೃತ ಮಹಿಳೆ...
ಮಹಿಳೆಗೆ ನ್ಯಾಯವಾಗಿ ಸಲ್ಲಬೇಕಾದ ಅಧಿಕಾರ, ಸ್ವಾತಂತ್ರ್ಯ ಇತ್ತೀಚಿನ ದಿನಗಳಲ್ಲಿ ಸಿಗತೊಡಗಿದೆ ಎನ್ನಬಹುದು. ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಮಹಿಳೆ ಜಾಗೃತಳಾಗುತ್ತಿರುವುದೂ ಇದಕ್ಕೆ ಕಾರಣ. ಟಿವಿ, ಮಾಧ್ಯಮಗಳ ಪ್ರಭಾವವನ್ನೂ ಇದರಲ್ಲಿ ಗುರುತಿಸಬಹುದು. ಈಗ ಕೂತೆಡೆಗೇ ಎಲ್ಲವೂ ಲಭ್ಯ.
ಕನ್ನಡದಲ್ಲೇ ಏಳೆಂಟು ಟಿವಿ ಚಾನೆಲ್‌ಗಳಿವೆ. ಕೃಷಿ, ರಾಜಕಾರಣ, ನಿತ್ಯ ಜೀವನದ ಎಲ್ಲ ಕ್ರಾಂತಿಕಾರಿ ಮಾಹಿತಿಗಳೂ ಬೆರಳತುದಿಯಲ್ಲಿ ಸಿಗುತ್ತವೆ. ಕೆಟ್ಟದ್ದಿರಲಿ, ಕಿಲುಬಿರಲಿ ಅದರ ಬಗ್ಗೆ ಆಲೋಚನೆಗೆ ಪ್ರಚೋದಿಸುವ ಚಿತ್ರಣಗಳು ಬರ್ತಾ ಇವೆ. ಇದು ಬರೀ ಅಡುಗೆ ಮನೆ ಅಥವಾ ಊಟದ ಮನೆ ಪ್ರಪಂಚ ಅಲ್ಲ. ಮಾಹಿತಿ ಜೊತೆಗೆ ಜಾಗೃತಿ ಯುಗವಾಗಿಯೂ ಪರಿಣಮಿಸಿದೆ.
ಎಲ್ಲವೂ ಬದಲಾಗಿಬಿಟ್ಟಿದೆಯೇ?
ಇಲ್ಲ, ಹಲವರಲ್ಲಿ ಇನ್ನೂ ಹಳೆಯತನ ಉಳಿದುಬಂದಿರಬಹುದು. ಆಯ್ಕೆ ವಿಚಾರ ಇದು. ಆದರೆ ಎಲ್ಲರಿಗೂ ಒಂದು ರೀತಿಯ ‘ಎಕ್ಸ್‌ಪೋಷರ್’ ಸಿಗ್ತಾ ಇದೆ. ಲೈಫ್‌ಸ್ಟೈಲ್ ಮೇಲೆ ಇದು ಪ್ರಭಾವ ಬೀರ್ತಾ ಇದೆ. ಪ್ರಶ್ನೆ ಕೇಳುವ ಮನೋಭಾವ ಬರ್ತಾ ಇದೆ. ಇದು ಬಹಳ ಮುಖ್ಯ ಬದಲಾವಣೆ ಅಂತ ನನಗನಿಸ್ತಿದೆ.
ದುಡಿಯುವ ಮಹಿಳೆಯರಲ್ಲೇ ಬೇರೆ ಬೇರೆ ರೀತಿ ಇದೆ. ಕಚೇರಿ, ಕೂಲಿ. ಮನೆ ಕೆಲಸ, ಸ್ವಂತ ಉದ್ಯೋಗ, ವೈದ್ಯೆ, ವಕೀಲೆ, ಉನ್ನತ ಅಧಿಕಾರಿ ವರ್ಗ ಹೀಗೆ ನಾನಾ ವರ್ಗಗಳನ್ನು ಗುರುತಿಸಬಹುದು. ಶಾಲಾ ಶಿಕ್ಷಕಿ ಎಂಬುದಂತೂ ಈಗ ಸಾಮಾನ್ಯ ಪ್ರೊಫೆಷನ್ ಆಗಿದೆ.
ಸಮಾಜಕ್ಕೆ ಭದ್ರವಾದ ಕಿಟಿಕಿ ಇದ್ದ ಹಾಗೆ ಇದು. ಬೇರೆ ಬೇರೆ ಇಲಾಖೆಗಳ ಜೊತೆಗೆ ಸಂಪರ್ಕಕ್ಕೆ ಹಾಗೂ ಮಾಹಿತಿ ಲೋಕಕ್ಕೆ ಮಹಿಳೆ ಇಂದು ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದಾಳೆ. ಹೊರಗಿನ ಪ್ರಪಂಚದ ಜೊತೆಗೆ ನೇರ ಸಂಪರ್ಕ, ಸಮನ್ವಯ ಸಾಧಿಸುತ್ತಾಳೆ. ಸ್ವಂತ ಉದ್ಯೋಗ ಅಥವಾ ಉದ್ಯಮ ಇದ್ದರೆ ಮಹಿಳೆ ಅದರಲ್ಲಿ ತೊಡಗಿಸಿಕೊಳ್ಳುವ ರೀತಿ ಅದ್ಭುತವಾದ್ದು. ಅವೇಕ್ ಸಂಸ್ಥೆಯ ಪದ್ಮಾ ಶೇಷಾದ್ರಿ, ಕಲೆಯಲ್ಲಿ ವಿಮಲಾ ರಂಗಾಚಾರ್.. ಹೀಗೆ ಹಲವರನ್ನು ಇಲ್ಲಿ ಉಲ್ಲೇಖಿಸಬಹುದು. ಜಾಗತಿಕ ಮನ್ನಣೆ ಗಳಿಸಿಕೊಡುತ್ತಿರುವ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಿಗುತ್ತಾರೆ. ಇದು ಅನಿರ್ಬಂಧಿತ ಸ್ವಾತಂತ್ರ್ಯದ ಫಲ.
ರಾಜಕೀಯ, ಕಲೆ, ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಎಲ್ಲ ಕ್ಷೇತ್ರದಲ್ಲೂ ಇಂದು ಮಹಿಳೆಯ ಪಾಲ್ಗೊಳ್ಳುವಿಕೆ ಪ್ರಬಲವಾಗಿದೆ. ಅದನ್ನು ಪುರುಷ ನಿರಾಕರಿಸಲಾಗದಷ್ಟು ಪರಿಣಾಮಕಾರಿಯಾಗಿ ಆಕೆ ನಿರ್ವಹಿಸುತ್ತಿದ್ದಾಳೆ. ನನ್ನ ಪತ್ನಿ ಲಕ್ಷ್ಮಿಯೇ ಇದಕ್ಕೆ ಸಾಕ್ಷಿ. ಅಧ್ಯಾಪನ, ರಾಜಕೀಯ, ಕಲೆ.. ಹೀಗೆ ಆಕೆಯ ಕ್ರಿಯಾಶೀಲ ಬದುಕಿನ ಜೊತೆಗೆ ಮಕ್ಕಳ ವ್ಯಕ್ತಿತ್ವವನ್ನು ಕೂಡ ಅದೇ ರೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾಳೆ.
ಎಲ್ಲವೂ ಚೆನ್ನಾಗಿದೆಯೇ?
ಹೀಗೆಂದ ಮಾತ್ರಕ್ಕೆ ಸಮಾಜವೆಲ್ಲ ಬಹಳ ಚೆನ್ನಾಗಿದೆ ಎಂದು ಹೇಳಲಾರೆ. ಶೇಕಡಾ 90ರಷ್ಟು ಮನೆಯೊಳಗಿನ ಜವಾಬ್ದಾರಿ ಮಹಿಳೆಗೇ ಬರುತ್ತದೆ. ಅದನ್ನು ದಾಟಬೇಕು. ನಾವು ಅಂದರೆ ಪುರುಷರು ಅವರನ್ನು ಹೇಗೆ ನೋಡುತ್ತೇವೆ ಎನ್ನುವುದೂ ಮುಖ್ಯ. ತಾರ್ಕಿಕವಾಗಿ ನೋಡಿದ್ರೆ ಪತ್ನಿಗೆ ಸಮಾಜದ ಹಾಗೂ ನನ್ನ ಬಗ್ಗೆ ಎಲ್ಲವನ್ನೂ ‘ಇನ್‌ಫಾರ್ಮ್‌ಡ್’ ಆಗಿ ಇಡಲು ಬಯಸುತ್ತೇನೆ. ಆಕೆಯೂ ಸಮಾಜಕ್ಕೆ ‘ಕಮಿಟೆಡ್’ ಆಗಿ ಇರಲು ಪ್ರೋತ್ಸಾಹಿಸುತ್ತೇನೆ. ಅದಿಲ್ಲದೆ ಇದ್ದರೆ ಆಭಾಸ ಅನಿಸ್ತದೆ. ಇದೊಂದು ರೀತಿ ‘ಪ್ರೈಡ್’ ನನಗೆ. ಆ ರೀತಿಯ ಭಾವನೆ ನನ್ನಲ್ಲಿ ಬರ್ತದೆ ಅನ್ನೋದು ಮುಖ್ಯವಲ್ಲ, ಎಲ್ಲರಲ್ಲೂ ಬರಬೇಕು. ನನ್ನ ಕೌಟುಂಬಿಕ ವ್ಯವಸ್ಥೆಯನ್ನು ಆ ರೀತಿ ರೂಪಿಸಿಕೊಂಡಿದ್ದೇನೆ ಎಂಬ ಅಭಿಮಾನ ಇದೆ.
ಬದಲಾವಣೆಗೆ ಪ್ರೇರಣೆ...
ಸ್ತ್ರೀ ಶಕ್ತಿ ಮತ್ತು ಮಹಿಳಾ ಸ್ವಸಹಾಯ ಗುಂಪುಗಳೂ ಸಮಾಜದಲ್ಲಿ ಇಂದು ಅಮೂಲಾಗ್ರವಾದ ಬದಲಾವಣೆಗೆ ಪ್ರೇರಣೆ ಆಗುತ್ತಿವೆ. ಪುರುಷರಿಗೆ ಮಾದರಿಯಾಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ.
ಹಳ್ಳಿಗಳಲ್ಲಿ ಜಾಗೃತಿ ಮೂಡಿದೆ. ಮಹಿಳೆಯರು ಜಾಣರಾಗಿದ್ದಾರೆ. ಉಳಿತಾಯ ಮನೋಭಾವ ಹೆಚ್ಚಿದೆ. ಸಾಮಾಜಿಕ ಪ್ರಜ್ಞೆ ಜಾಗೃತವಾಗಿದೆ. ಸಂಘಟನೆಯಂದ ಬಂದ ಶಕ್ತಿ ಇದು. ಇದೊಂದು ಗಮನಾರ್ಹ ಬದಲಾವಣೆ. ಅಧಿಕಾರ ವಿಕೇಂದ್ರೀಕರಣ ಮತ್ತು ಮಹಿಳಾ ಮೀಸಲಾತಿಯಿಂದಾಗಿ ಪಂಚಾಯತ್ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳೆಯ ಪ್ರಾಧಾನ್ಯ ಹೆಚ್ಚಾಗಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಆಕೆ ನಿರ್ಣಾಯಕ ಪಾತ್ರ ವಹಿಸಿದ್ದಾಳೆ. ವ್ಯಕ್ತಿತ್ವ ಬೆಳವಣಿಗೆಗೂ ಇದು ಸಹಕಾರಿ. ಸಮಾಜಕ್ಕೂ ದೊಡ್ಡ ಕೊಡುಗೆಯಾಗಿದೆ.
ಇರುವ ಅವಕಾಶ, ಸ್ವಾತಂತ್ರ್ಯ ಬಳಸಿಕೊಂಡು ಮಹಿಳೆ ಬೆಳೆಯುತ್ತಿದ್ದಾಳೆ. ಇದರ ಇಂಪ್ಯಾಕ್ಟ್ ನೋಡಬೇಕು. ಸ್ಕೇಲ್ ಇಟ್ಟುಕೊಂಡು ಇದನ್ನು ಅಳೆಯಲಾಗದು. ಆದರೆ ಸಾಧನೆ ದೊಡ್ಡದು. ಕೌಟುಂಬಿಕ ವ್ಯವಸ್ಥೆಯಲ್ಲಿದ್ದರೂ ಅವಲಂಬಿತ ಜೀವನ ಅಗತ್ಯ ಇಲ್ಲದ ರೀತಿ ಮಹಿಳೆಯರು ಬದುಕುತ್ತಿದ್ದಾರೆ. ಇದನ್ನು ಗಮನಿಸಬೇಕು. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸ್ವಾವಲಂಬನೆ ಬಂದ ಮೇಲೆ ಸಮಾಜದಲ್ಲಿ ಮಹಿಳೆಯ ಸ್ಥಿತಿ-ಗತಿ ಸಾಕಷ್ಟು ಬದಲಾಗಿದೆ ಎಂಬುದಂತು ಸತ್ಯ.
ವಾದ-ವಿವಾದ, ಮನೆ ಜಗಳ ಆದರೆ ತಕ್ಷಣಕ್ಕೆ ಮನೆ ಬಿಟ್ಟು ಓಡಿಹೋಗಲಾಗದು. ಮಹಿಳೆಗೂ ಅಷ್ಟೆ, ಪುರುಷರಿಗೂ ಅಷ್ಟೆ. ಸ್ವಂತಿಕೆಗೆ ಅವಕಾಶ ಕೊಡಬೇಕು. ಒಬ್ಬರನ್ನೊಬ್ಬರು ಗೌರವಿಸಬೇಕು. ಅಭಿಪ್ರಾಯಗಳನ್ನು ಸ್ವೀಕರಿಸಬೇಕು. ಇದು ಪುರುಷರು ಮಾಡಬೇಕಾದ ಕೆಲಸ. ಸಾಮರಸ್ಯ ಅಡುಗೆ ಮನೆಯಿಂದಲೇ ಬೆಳೆಯಬೇಕು. ಈ ನಿಟ್ಟಿನಲ್ಲಿ ಆಗಬೇಕಾದ್ದು ಇನ್ನೂ ಬಹಳಷ್ಟಿದೆ. ಆ ನಿರೀಕ್ಷೆ ಅಂತೂ ನನ್ನಲ್ಲಿದೆ. ಚರಿತ್ರೆಯೇ ಅದನ್ನು ಸಾರಿ ಹೇಳುತ್ತದೆ.

Tuesday 4 February 2014

ಸಾಂಸ್ಕೃತಿಕ ಆಕ್ರಮಣಗಳು ಮತ್ತು ಪರಿಣಾಮಗಳು

ಶ್ರೀ ಚಕ್ರವತಿ೯ ಸೂಲಿಬೇಲಿ ಯವರ  ಬ್ಲಾಗ್ ದಿ೦ದ ಆಯ್ದ   ಲೇಖನ ..........


ಸಾಂಸ್ಕೃತಿಕ ಆಕ್ರಮಣಗಳು ಮತ್ತು ಪರಿಣಾಮಗಳು



ರಾಷ್ಟ್ರವೆಂದರೇನು?
ಬರಿಯ ಕಲ್ಲು – ಮಣ್ಣೇ? ನಾವು ಕಟ್ಟಿ ನಿಲ್ಲಿರುವ ಕಟ್ಟಡಗಳೇ? ಹರಿಯುವ ನದಿಯೇ? ಎದೆಯೆತ್ತಿ ನಿಂತಿರುವ ಪರ್ವತ ಸಮೂಹಗಳೇ? ಅಲ್ಲಿ ಜನಿಸಿರುವ ಮಹಾಪುರುಷರೇ? ಅಥವಾ ಅವರು ಬರೆದಿರುವ ಗ್ರಂಥಗಳೇ?ಊಹೂಂ… ಉತ್ತರ ಅಷ್ಟು ಸುಲಭವೇನಲ್ಲ. ಬಹಳ ಬಾರಿ ರಾಷ್ಟ್ರವೆಂದೊಡನೆ ನಾವು ಇಂಥ ವಿಷಯಗಳ ಸುತ್ತಲೇ ಅಡ್ಡಾಡುತ್ತಿರುತ್ತೇವೆ. ವಾಸ್ತವವಾಗಿ, ರಾಷ್ಟ್ರ ಸಂಸ್ಕೃತಿಯ ಪ್ರವಾಹ. ಸಂಸ್ಕೃತಿ ಇವುಗಳೆಲ್ಲವನ್ನೂ ಒಳಗೊಂಡಂತಹ, ಇವುಗಳನ್ನೂ ಮೀರಿದಂತಹ ಅಂಶ.
ರಾಷ್ಟ್ರಕವಿ ಕುವೆಂಪು ಇದನ್ನು ಸಮರ್ಥವಾಗಿ ಚಿತ್ರಿಸುತ್ತಾರೆ.ಮಾನವನನ್ನುದೃಷ್ಟಿಯಲ್ಲಿರಿಸಿಕೊಂಡು ಅವರು ಪ್ರಗತಿಯ ಬಗೆಗಳನ್ನು ವಿವರಿಸುತ್ತಾರೆ. ಮಾನವನ ಆಂತರಿಕ ಬೆಳವಣಿಗೆಯನ್ನು ಸಂಸ್ಕೃತಿ ಎಂದು ಗುರುತಿಸಿ, ಬಾಹ್ಯ ಬೆಳವಣಿಗೆಯನ್ನು ನಾಗರಿಕತೆ ಎನ್ನುತ್ತಾರೆ. ಇದೇ ಚಿಂತನೆಯನ್ನು ವಿಸ್ತರಿಸಿ ರಾಷ್ಟ್ರಕ್ಕೆ ಹೇಳುವುದಾದರೆ, ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಅಂತರ್ಪ್ರವಾಹ ಇರುತ್ತದೆಯಲ್ಲ, ಅದನ್ನೇ ‘ಸಂಸ್ಕೃತಿ’ ಎನ್ನುವುದು. ಈ ಅಂತರ್ಪ್ರವಾಹಕ್ಕೆ ಧಕ್ಕೆ ಬಂದಾಗಲೆಲ್ಲ ದೇಶ ಸಾಂಸ್ಕೃತಿಕವಾಗಿ ನಲುಗಿಹೋಗುತ್ತದೆ.ಭಾರತದ ಪಾಲಿನ ಅಂತರ್ಪ್ರವಾಹ ಇತರೆಲ್ಲ ರಾಷ್ಟ್ರಗಳಿಗಿಂತಲೂ ವಿಭಿನ್ನವಾದುದು. ಈ ಪ್ರವಾಹದ ಮೂಲ ಋಷಿಗಳ ಪಾದದಲ್ಲಿದೆ. ಆತ್ಮ ಚಿಂತನೆಯತ್ತ ತಮ್ಮನ್ನು ತಾವು ತೊಡಗಿಸಿಕೊಂಡು, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸಿನ ತೆರೆಗಳನ್ನು ಸರಿಸುತ್ತ ಹೋದ ಋಷಿಗಳು ಶಾಶ್ವತ ಸತ್ಯವನ್ನು ಅಲ್ಲಿಂದ ಅರಸಿ ತಂದರು. ಅವರ ಇಡಿಯ ಜೀವನವೇ ಸತ್ಯಾನ್ವೇಷಣೆಯದಾಯಿತು. ಹೀಗೆ ಅರಸಿದ ಸತ್ಯವನ್ನು ಎಲ್ಲರಿಗೂ ತಿಳಿಸಿ, ಅವರನ್ನೂ ಸತ್ಯ ಮಾರ್ಗಿಗಳಾಗಿಸಬೇಕೆನ್ನುವ ಋಷಿಗಳ ಪ್ರಯತ್ನ ಸ್ತುತ್ಯರ್ಹವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಜಗತ್ತಿಗೆ ಒಳಿತಾಗಲಿ, ಜಗತ್ತೇ ಕುಟುಂಬವಾಗಲಿ ಎಂಬ ಚಿಂತನೆ ಈ ನೆಲದಿಂದ ಹೊರಟಿದ್ದು. ಆರ್ಥಿಕ ದೃಷ್ಟಿಕೋನದಿಂದ ‘ಎಲ್ಲರಿಗೂ ಸಮಬಾಳು,ಎಲ್ಲರಿಗೂ ಸಮಪಾಲು’ ಎನ್ನುವ ಆಧುನಿಕ ಸಮಾಜವಾದ ಚಿಗಿತುಕೊಳ್ಳುವ ಸಾವಿರಾರು ವರ್ಷಗಳ ಮೊದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ಭಾರತ ಸಾಕ್ಷಾತ್ಕರಿಸಿಕೊಂಡಿತ್ತು. ಅದನ್ನು ಜಗತ್ತಿನ ಮುಂದಿರಿಸಿತು. ಜಗತ್ತಿನ ವಿವಿಧೆಡೆಗಳಿಂದ ಜ್ಞಾನಾಕಾಂಕ್ಷಿಗಳು ಭಾರತದತ್ತ ನಡೆದುಬಂದರು. ತಾನೇ ತಾನಾಗಿ ಭಾರತ ಜಗತ್ತಿನ ಗುರುಪೀಠವನ್ನು ಅಲಂಕರಿಸಿಬಿಟ್ಟಿತ್ತು. ಭಾರತೀಯ ಸಂಸ್ಕೃತಿ ಎಂದರೆ, ಜ್ಞಾನ ಅರಸುವ, ಜ್ಞಾನ ನೀಡುವ ಸಂಸ್ಕೃತಿ ಎಂದು ಸ್ಥಾಪಿತವಾಯ್ತು.ಸ್ವಾಮಿ ವಿವೇಕಾನಂದರು ಒಂದೆಡೆ, ‘ಭಾರತದ ಆತ್ಮ ಆಧ್ಯಾತ್ಮ’ ಎಂದು ಹೇಳಿರುವರು. ಈ ಕೇಂದ್ರವನ್ನು ಬದಲಾಯಿಸಲು ಪ್ರಯತ್ನ ನಡೆದಾಗಲೆಲ್ಲ ಇಲ್ಲಿ ಅಲ್ಲೋಲಕಲ್ಲೋಲವಾಗಿದೆ. ಪ್ರತಿ ಬಾರಿ ಮಹಾ ಪುರುಷರು ಜನ್ಮವೆತ್ತಿ ಬಂದು ಅದನ್ನು ಮತ್ತೆ ಕೇಂದ್ರದಲ್ಲಿ ತಂದು ನಿಲ್ಲಿಸಿದ್ದಾರೆ. ಪ್ರತಿ ಬಾರಿಯ ಆಕ್ರಮಣದಲ್ಲೂ ಭಾರತದ ಕೇಂದ್ರಕ್ಕೆ ಧಕ್ಕೆ ಉಂಟಾಗಿದೆ.ಇರಲಿ ಈ ರಾಷ್ಟ್ರದ ಮೇಲೆ ಆಕ್ರಮಣವಾಗಿದೆ ಎಂದಾಗ ಅದು ಬರಿಯ ಭೂಕಬಳಿಕೆಯ ಆಕ್ರಮಣವಲ್ಲ. ಅದು ಸಂಸ್ಕೃತಿಯ ಮೇಲಿನ ಆಕ್ರಮಣ. ಹಾಗೆ ನೋಡಿದರೆ ಭೂಕಬಳಿಕೆ ಶಾಶ್ವತವಾಗುವುದೂ ಸಂಸ್ಕೃತಿಯ ನಾಶದಿಂದಲೇ. ಈಗಿನ ಆಫ್ಘಾನಿಸ್ಥಾನ, ಗಾಂಧಾರಿಯ ತವರು. ಇತಿಹಾಸಕ್ಕೆ ಹೋದರೆ, ಬುದ್ಧ ತತ್ತ್ವದಿಂದ ಸಂಪನ್ನವಾಗಿದ್ದ ನಾಡು. ಈ ಭೂಮಿಯ ಮೇಲೆ ಇಸ್ಲಾಮೀಯ ದಾಳಿಗಳು ನಡೆದವು. ಅವರಂತೂ ಸಂಸ್ಕೃತಿಗೇ ಕೊಡಲಿಯಿಟ್ಟರು. ಜನರ ಸತ್ತ್ವ ನಾಶವಾಯ್ತು. ಪರಿಣಾಮವಾಗಿ ಆ ನಾಡು ನಮ್ಮಿಂದ ದೂರವಾಗುತ್ತ ಹೋಯ್ತು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಮ್ಮ ವಿರೋಧಿಯೂ ಆಗಿಹೋಯ್ತು!ಸಂಸ್ಕೃತಿಯ ಮೇಲಿನ ಆಕ್ರಮಣ ಉದ್ದೇಶಪೂರ್ವಕವಾದುದು. ಬೇರೊಂದು ಸಂಸ್ಕೃತಿಯನ್ನು ನಾಶಮಾಡಿ ತಮ್ಮ ಸಂಸ್ಕೃತಿಯನ್ನು ಹೇರುವ ಪ್ರಯತ್ನ ಅದು.ಭಾರತೀಯ ಸಂಸ್ಕೃತಿ ಕೂಡ ಜಗತ್ತಿನ ಇತರೆಡೆಯಲ್ಲಿ ವ್ಯಾಪಿಸಿದೆ. ಮಲಯ, ಜಾವಾ, ಸುಮಾತ್ರ, ಬಾಲಿ ಮೊದಲಾದೆಡೆಗಳಲ್ಲಿ ಸೂಕ್ಷ್ಮವಾಗಿ ನಮ್ಮ ಸಂಸ್ಕೃತಿ ಹಾಸುಹೊಕ್ಕಾಗಿರುವುದನ್ನು ನಾವು ಗಮನಿಸಬಹುದು. ಆದರೆ ಅದು ಒತ್ತಾಯದ ಹೇರಿಕೆಯಲ್ಲ. ಜ್ಞಾನ ದಾನಕ್ಕೆ, ವ್ಯಾಪಾರಕ್ಕೆ, ಸಾಂಸ್ಕೃತಿಕ ರಾಯಭಾರಕ್ಕೆಂದೇ ಭಾರತದಿಂದ ತೆರಳಿದ ಜನರು ಅಲ್ಲಿ ಪಸರಿಸಿದ, ಅಲ್ಲಿನ ಜನ ಆದರದಿಂದ ಸ್ವೀಕರಿಸಿದಂಥದ್ದು ಅದು. ಭಾರತೀಯರು ತಮ್ಮಲ್ಲಿರುವ ಸತ್ತ್ವಯುತ ಚಿಂತನೆಗಳನ್ನು ಹಂಚಿ ಜನಮನ್ನಣೆ ಗಳಿಸಿದರು. ಅವರೆಂದೂ ಖಡ್ಗ ಹಿಡಿದು ತಮ್ಮ ವಿಚಾರಗಳನ್ನು ಹೇರಲಿಲ್ಲ. ಹೀಗಾಗಿ ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸಿದ ಯಾವ ದೇಶಕ್ಕೂ ನಷ್ಟವಾಗಲಿಲ್ಲ. ಬದಲಿಗೆ ಲಾಭವೇ ಆಯಿತು. ಭಾರತದ ಮೇಲೆ ಆಕ್ರಮಣ ಮಾಡಿದ ಶಕರು, ಹೂಣರು ಕೇವಲ ಸಂಪತ್ತಿಗಾಗಿ ಆಕ್ರಮಣ ಮಾಡಿದ್ದರಿಂದ, ಕ್ರಮೇಣ ಅವರು ಭಾರತೀಯರಲ್ಲಿ ಒಂದಾಗಿ ಬೆರೆತು ಹೋದರು.ಆದರೆ…. ಒಂದು ಸಾಮ್ರಾಜ್ಯ ಕಟ್ಟುವ ಬಯಕೆಯಿಂದ, ತಾವು ಅನುಸರಿಸುವ ಮತವನ್ನು ಹೇರುವ ಉದ್ದೇಶದಿಂದ ಆಕ್ರಮಣ ಮಾಡಿದ ಇಸ್ಲಾಮೀಯರು ನಮ್ಮ ದೇಶದ ಕೇಂದ್ರಕ್ಕೆ ಕೈಹಾಕಿದರು. ಹೆಣ್ಣನ್ನು ತಾಯಿಯೆಂದು ಪೂಜಿಸುವ ಸಂಸ್ಕೃತಿಯ ಮೇಲೆ ಹೆಣ್ನನ್ನು ಭೋಗದ ವಸ್ತುವೆಂದು ಕಾಣುವ ಸಂಸ್ಕೃತಿಯ ಅಕ್ರಮಣವಾಯ್ತು. ಅವರ ಕ್ರೌರ್ಯದೆದುರು ಭಾರತೀಯರ ಒಗ್ಗಟ್ಟು ಕದಡಿ ಹೋಯ್ತು. ಉತ್ತರ ಭಾರತದ ಅನೇಕ ಭೂಭಾಗಗಳಂತೂ ತತ್ತರಿಸಿಹೋದವು. ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವ ಸಲುವಾಗಿ ಹಿಂದೆಲ್ಲೂ ಇಲ್ಲದ ಬಾಲ್ಯ ವಿವಾಹ ಜಾರಿಗೆ ಬಂತು. ಬುರ್ಖಾ ಪದ್ಧತಿ ಆರಂಭವಾಯ್ತು. ಮಾನ ರಕ್ಷಣೆಗೆ ಜೌಹರ್ ಪದ್ಧತಿ ವಾಪಕವಾಯ್ತು.ಈ ದೇಶಕ್ಕೆ ಒಗ್ಗದ ಸಂಸ್ಕೃತಿಯನ್ನು ಹೇರಲು ಹೊರಟವರ ವಿರುದ್ಧ ಎದೆ ಸೆಟೆದು ನಿಂತ ಸಿಖ್ ಪಂಥ, ಕತ್ತಿಯನ್ನೇ ಕುತ್ತಿಗೆಗೆ ಇಳಿಬಿಟ್ಟುಕೊಂಡಿತು. ಜನರ ಆಚಾರ ವಿಚಾರಗಳು ಆತ್ಮ ರಕ್ಷಣೆಯ ಅನಿವಾರ್ಯಕ್ಕೆ ಸಿಲುಕಿ ಬದಲಾಗುತ್ತ ಸಾಗಿದವು. ಒತ್ತಾಯವಾಗಿ ಹೇರಲ್ಪಟ್ಟ ಹೊರಗಿನ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗದೆ, ತಮ್ಮದನ್ನು ಬಿಟ್ಟುಕೊಡಲಾಗದೆ, ಮಿಶ್ರ ಸಂಸ್ಕೃತಿಯೊಂದು ಹುಟ್ಟಿಕೊಂಡು, ಜನರನ್ನು ಎಲ್ಲಿಯೂ ಸಲ್ಲದ ಸ್ಥಿತಿಗೆ ತಂದುನಿಲ್ಲಿಸಿತು. ಇದು ಮತಾಂತರಕ್ಕೆ ಪ್ರಚೋದನೆ ನೀಡಿತು. ಹೀಗೆ ಮತಾಂತರಗೊಂದ ಜನ ತಮ್ಮ ಮೂಲ ಧರ್ಮದ ವಿರುದ್ಧ ಮಾತನಾಡಲಾರಂಭಿಸಿದರು. ಸ್ವಯಂ ರಕ್ಷಣೆಗೆ ಅದು ಅವರು ಆರಿಸಿಕೊಂಡ ಅಸ್ತ್ರವಾಗಿತ್ತು. ಕ್ರಮೇಣ ಅದು ಅಭ್ಯಾಸವೂ ಆಗಿ ಹೋಯ್ತು.“ಒಬ್ಬ ಮತಾಂತರಗೊಂಡರೆ ಹಿಂದೂ ಧರ್ಮಕ್ಕೆ ಒಬ್ಬನ ನಷ್ಟವಲ್ಲ, ಒಬ್ಬ ವಿರೋಧಿಯ ಹೆಚ್ಚಳ!” ಸ್ವಾಮಿ ವಿವೇಕಾನಂದರು ಹೇಳಿದ ಮಾತು ಅದೆಷ್ಟು ಸತ್ಯ!ಭೂಮಾರ್ಗದ ಮೂಲಕ ಅರಬರು ನಡೆಸಿದ ಆಕ್ರಮಣಗಳು ಈ ಬಗೆಯ ಸಾಂಸ್ಕೃತಿಕ ಪಲ್ಲಟ ಉಂಟು ಮಾಡುತ್ತಿದ್ದ ಕಾಲದಲ್ಲಿ ಶಿವಾಜಿ ಮಹಾರಾಜರಂಥವರು ಅದಕ್ಕೆ ತಕ್ಕ ಪ್ರತಿರ್‍ಓಧವೊಡ್ಡಿ ಮತ್ತೆ ಭಾರತೀಯತೆಯನ್ನು ಸ್ಥಾಪಿಸುವ ಸಾರ್ಥಕ ಯತ್ನ ನಡೆಸಿದರು. ಭರತದ ಅಂತರ್ಪ್ರವಾಹವನ್ನು ಮತ್ತೆ ಸರಿಯಾದ ದಿಕ್ಕಿನತ್ತ ಹೊರಳಿಸಿದರು.ಇದೇ ವೇಳೆಗೆ ಪಶ್ಚಿಮದ ಕಡಲ್ಗಳ್ಳರ ಸುವ್ಯವಸ್ಥಿತ ಆಕ್ರಮನ ಅದಾಗಲೇ ಆರಂಭವಾಗಿಬಿಟ್ಟಿತ್ತು!ಹಡಗುಗಳ ಮೂಲಕ ಸಂಪದ್ಭರಿತ ದೇಶಗಳನ್ನು ಹುಡುಕುತ್ತಾ ಸಾಗಿ, ಅದನ್ನು ಕೊಳ್ಳೆಹೊಡೆದು, ಅಲ್ಲಿ ತಮ್ಮ ರಾಜ್ಯವನ್ನೂ, ಮತವನ್ನೂ ಸ್ಥಾಪಿಸಿ ಮೆರೆಯುತ್ತಿದ್ದ ಪಾಶ್ಚಾತ್ಯರು ಭಾರತಕ್ಕೂ ಕಾಲಿಟ್ಟರು. ವ್ಯಾಪಾರದ ಸೋಗಿನಲ್ಲಿ ಬಂದವರು, ಬರಬರುತ್ತ ನಮ್ಮ ಮೇಲೆ ಆಳ್ವಿಕೆ ನಡೆಸುವ ಉಮೇದಿಗೆ ಬಿದ್ದರು. ಭಾರತದ ಆತ್ಮವನ್ನೇ ನಾಶಗೊಳಿಸದೆ ಅದು ಸಾಧ್ಯವಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿತ್ತು. ಅದನ್ನು ಮೆಕಾಲೆ, ವಿಲ್ಟರ್ ಫೋರ್ಸ್ ನಂಥವರು ಬೇರೆ ಬೇರೆ ಸಂದರ್ಬಗಳಲ್ಲಿ ಹೇಳಿಯೂಬಿಟ್ಟರು. ಎಲ್ಲಿಯವರೆಗೆ ಇವರ ಆತ್ಮೋನ್ನತಿಯ ಶಿಕ್ಷಣವನ್ನು ಹಾಳುಮಾಡಲಾಗುವುದಿಲ್ಲವೋ, ಅಲ್ಲಿಯವರೆಗೆ ತಮ್ಮ ಸಾಮ್ರಾಜ್ಯ ಸ್ಥಾಪನೆಯೂ ಸಾಧ್ಯವಿಲ್ಲ ಎಂಬ ಅಳಲು ಅವರಿಗಿತ್ತು!ಅಸಾಮಾನ್ಯ ತಂತ್ರ ನಿಪುಣರಾಗಿದ್ದ ಆಂಗ್ಲರು ಭಾರತದ ಬೌದ್ಧಿಕ ಸಂಪತ್ತಿಗೂ ಲಗ್ಗೆ ಹಾಕಿದರು. ತಮ್ಮ ಶಿಕ್ಷಣದ ಮೂಲಕ ಒಂದು ಬುದ್ಧಿವಂತರ ವರ್ಗ ಸೃಷ್ಟಿಸಿ, ಅವರ ಮೂಲಕವೇ ಇಲ್ಲಿನ ಸಂಸ್ಕೃತಿಯನ್ನು ಹಾಳುಗೆಡವುವ, ಇಲ್ಲಿನ ಜನರು ‘ಪಶ್ಚಿಮದ ನಾಗರಿಕತೆಯೇ ಶ್ರೇಷ್ಠ’ ಎಂದು ಭ್ರಮಿಸುವಂತೆ ಮಾಡುವ ಯೋಜನೆಗಳನ್ನು ರೂಪಿಸಿದರು. ಪರಿಣಾಮವಾಗಿ, ಭಾರತೀಯ ಚಿಂತನೆಗಳು ಅನಗರಿಕ, ಕೀಳು ಅಭಿರುಚಿಯವು ಎಂದು ತಿಳಿಯುತ್ತ, ಅದನ್ನೇ ಹೇಳಿಕೊಂಡು ತಿರುಗುವ ತಥಾಕಥಿತ ಬುದ್ಧಿಜೀವಿಗಳ ವರ್ಗವೊಂದು ನಿರ್ಮಾಣವಾಗಿಯೇಬಿಟ್ಟಿತು. ನೋಡನೋಡುತ್ತ, ಮೆಕಾಲೆ ಹೇಳಿದಂತೆ, ‘ಕರಿ ಚರ್ಮದ ಆಂಗ್ಲರ’ ಸಂತತಿ ನಾವಾಗಿಬಿಟ್ಟೆವು.ಇಂಗ್ಲೀಶ್ ಭಾರತದ ಪಾಲಿಗೆ ಮರ್ಮಾಘಾತವನ್ನೇ ನೀಡಿತು. ಇಲ್ಲಿನ ಸ್ಥಳೀಯ ಭಾಷೆಗಳ ನಾಶಕ್ಕೆ, ಸಂಸ್ಕೃತಿಯ ನಾಶಕ್ಕೆ ಅದರ ಕೊಡುಗೆ ಅಪಾರ! ಭಾಷೆಯೊಂದಿಗೆ ಯಾರ ದ್ವೇಷವೂ ಇಲ್ಲ. ಆದರೆ, ಅದು ಹೊತ್ತು ತರುವ ಸಂಸ್ಕೃತಿ ವಿನಾಶಕಾರಿ. ( ಇವತ್ತಿಗೂ ಹಳ್ಳಿಯವನಂತೆ ಕಾಣುವ ವ್ಯಕ್ತಿಯೊಬ್ಬ ಅತ್ಯುನ್ನತ ಮಟದ ಇಂಗ್ಲಿಶ್ ಮಾತಾಡಿದರೆ ಅದನ್ನು ಅಚ್ಚರಿಯಿಂದ ನೋಡಲಾಗುತ್ತದೆ. ಇಂಗ್ಲಿಶ್ ಮಾತಾಡುವವನು ಅಪ್ಪಟ ಭಾರತೀಯನಂತಿರಲಾರನೆಂಬುದೇ ಸುಪ್ತ ಮನಸ್ಸಿನ ಚಿಂತನೆ!). ಇಂಗ್ಲಿಶ್ ಕಲಿತ ಶ್ರೀಮಂತ ಜನಗಳು ಆಚಾರ ವಿಚಾರಗಳೆಲ್ಲದರಲ್ಲಿ ಆಂಗ್ಲರನ್ನೇ ಅನುಕರಿಸುವುದು ಯಾರೂ ಅರಿಯದ ಸಂಗತಿಯೇನಲ್ಲ. ಸ್ವತಃ ವಿಲಿಯಂ ಬೆಂಟಿಕನೇ ಪತ್ರದಲ್ಲಿ ಹೇಳಿಕೊಂಡಿದ್ದ,

ಈ ಜನರು ದಾನ, ಭಿಕ್ಷೆಗಳನ್ನು ನೀಡುವುದು ಬಿಟ್ಟು ನಮ್ಮ ಪಾರ್ಟಿಗಳಿಗೆ ಖರ್ಚು ಮಾಡುತ್ತಿರುವುದು ನೋಡಿ ನನಗೆ ವಿಪರೀತ ಖುಷಿಯಾಗುತ್ತಿದೆ” ಎಂದು!

ಹೌದು. ಈ ಸಾಂಸ್ಕೃತಿಕ ಆಕ್ರಮಣ ಬರಿಯ ವೇಷ ಭೂಷಣಗಳನ್ನಷ್ಟೆ ಬದಲಾಯಿಸಿಲ್ಲ. ಮನಸ್ಸುಗಳನ್ನೂ ಕಲ್ಲಾಗಿಸಿಬಿಟ್ಟಿವೆ. ಅತ್ಯಂತ ಭವುಕವಾಗಿದ್ದ, ಜಗತ್ತಿನ ನೋವಿಗೆ ಸ್ಪಂದಿಸುತ್ತಿದ್ದ ಭಾರತ ಇಂದು ತನ್ನ ನೋವಿಗೆ ಅಳುವಷ್ಟು ಕಣ್ಣೀರನ್ನೂ ಉಳಿಸಿಕೊಂಡಿಲ್ಲ. ಟೀವಿಯಲ್ಲಿ ಬಾಂಬ್ ಸ್ಫೋಟದ- ಸತ್ತವರ ದೃಶ್ಯಗಳನ್ನು ನೋಡುತ್ತಲೇ ಕೇಕು ತಿನ್ನುವವರ ಸಂಖ್ಯೆ ಕಡಿಮೆಯೇನಿಲ್ಲ. ಇದು ಸಾಂಸ್ಕೃತಿಕ ಪಲ್ಲಟದ ಪರಿಣಾಮವಲ್ಲದೆ ಮತ್ತೇನು?ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯನ್ನು ಹಾಳುಮಾಡಿದ್ದೇ ಇವೆಲ್ಲಕ್ಕೂ ಮೂಲ ಕಾರಣ. ಬರಿಯ ಕಾರಕೂನರ ನಿರ್ಮಾಣದ ಶಿಕ್ಷಣ ಅದೆಷ್ಟು ನಿಸ್ತೇಜವಾಯ್ತೆಂದರೆ, ಅದು ಭಾರತೀಯ ಸಭ್ಯತೆ- ಸಂಸ್ಕೃತಿಗಳ ಅಶ್ವತ್ಥ ವೃಕ್ಷವನ್ನು ಮಕ್ಕಳಿಗೆ ಪರಿಚಯ ಮಾಡಿಸಿಕೊಡುವಲ್ಲಿ ಸೋತುಹೋಯಿತು. ಹೀಗಾಗಿಯೇ ಇಂದಿನ ಶಾಲಾ ಕಾಲೇಜುಗಳಲ್ಲಿ ಭಾರತದ ಬಗ್ಗೆ ಹೆಮ್ಮೆಯಿಂದ ಮಾತಾಡಬಲ್ಲ ವಿದ್ಯಾರ್ಥಿಗಳ ಸಂಖ್ಯೆ ಅತಿ ವಿರಳ. ತಮ್ಮನ್ನು ತಾವು ಗೆದ್ದುಕೊಳ್ಳುವ ವಿದ್ಯೆಯಲ್ಲಿ ಸಿದ್ಧ ಹಸ್ತವಾಗಿದ್ದ ಭಾರತ ಇಂದು ಆತ್ಮ ವಿಶ್ವಾಸವೇ ಇಲ್ಲದ ಸ್ಥಿತಿಗೆ ಇಳಿದುಬಿಟ್ಟಿದೆ. ಅಂತರ್ಮುಖತೆಯನ್ನು ಗಳಿಸಿಕೊಂಡು, ಕಣ್ಣೂ ಮುಚ್ಚಿಯೂ ನೋಡಬಲ್ಲ ಸಮರ್ಥ್ಯ ಹೊಂದಿದ್ದ ಭಾರತೀಯರು ತೆರೆದ ಕಣ್ಣಿಂದಲೂ ನೋಡಲು ಸಾಧ್ಯವಾಗದ ಹಂತ ತಲುಪಿದ್ದಾರೆ.ಸಾನೆ ಗುರೂಜಿ ಒಂದು ಮಾತು ಹೇಳುತ್ತಾರೆ. “ಹಾಗೇನಾದರೂ ಬೇರೆ ಸಂಸ್ಕೃತಿಗಳ ಆಘಾತಕ್ಕೆ ಸಿಕ್ಕಿ ನಾಶವಾಗುವ ಸಂಸ್ಕೃತಿ ನಮ್ಮದಾದರೆ, ಅದು ನಾಶವಾಗುವುದೇ ಒಳ್ಳೆಯದು. ಆದರೆ, ಹಾಗೆಲ್ಲ ಸಣ್ಣ ಗಾಳಿಗೆ ಪತರಗುಟ್ಟುವ ಸಂಸ್ಕೃತಿ ನಮ್ಮದಲ್ಲ” ಎಂದು.ಇಲ್ಲೊಂದು ಭರವಸೆ ಮೂಡುತ್ತದೆ. ‘ನಿತ್ಯ ನೂತನೇ ಸನಾತನೀ’ ಎನ್ನುವ ಮಾತಿದೆ. ಯಾವುದು ಸದಾ ಹೊಸ ಹೊಸ ಝರಿಗಳನ್ನು ತನ್ನೊಳಗೆ ಸೇರಿಸಿಕೊಂಡು ಹರಿಯುತ್ತದೆಯೋ, ಅದರ ಸತ್ತ್ವವನ್ನು ಅರಗಿಸಿಕೊಂಡು ಪ್ರವಾಹವಾಗಿ ಮುನ್ನುಗ್ಗುತ್ತದೆಯೋ ಅದೇ ‘ಸನಾತನ’. ಅದು, ಎಲ್ಲವನ್ನೂ ಜೀರ್ಣಿಸಿಕೊಂಡು ಬೆಳೆಯುವ ಮಹಾವೃಕ್ಷ. ನಾವಿದರ ರೆಂಬೆಗಳಾಗೋಣ. ಈ ಮಹಾಪ್ರವಾಹವನ್ನು ಸೇರುವ ಉಪನದಿಗಳಾಗೋಣ. ದಾರಿ ತಪ್ಪುವ ಕವಲುಗಳನ್ನೂ ಸೇರಿಸಿಕೊಂಡು ಮುನ್ನಡೆಯೋಣ.ಭವಿಷ್ಯದ ಅಧಿಪತಿಗಳು ನಾವು; ವರ್ತಮಾನವನ್ನೂ ನಮ್ಮದಾಗಿಸಿಕೊಳ್ಳೋಣ.