Tuesday, 28 May 2013

ನಿಶ - ಉಷಾ:ನನ್ನ ಮೊಟ್ಟ ಮೊದಲ ಹುಡುಗಿ ನಿಶ,                                              

ಹುಟ್ಟಿಸಿದಳು ತಲೆಗೆ ಅವಳದೆ ನಶ,

ಅವಳು ಕೈ ಕೊಟ್ಟಾಗ ..... ನನ್ನ ಪಾಲಿಗೆ ಉಳಿದ್ದಿದ್ದು ವಿಷ...

ಆದರು ನಾನು ಬದುಕಿರಲು ಕಾರಣ.....,

ಅವಳ ತ೦ಗಿ ಉಶಾ

***********************

ಬಾ ನನ್ನ ನಲ್ಲೆ...ಬಂದು ನನ್ನ ಮನದಲ್ಲಿ ನಿಲ್ಲೆ,

ತುಸು ಹೊತ್ತು ಮಾತ್ರ ನಿಲ್ಲೆ.

ಆದರೆ ನಿಂತ ನೀರಾಗಬೇಡ ಇಲ್ಲೇ ಏಕೆಂದರೆ,

ಬರಲಿರುವಳುನನ್ನ ಮುಂದಿನ ನಲ್ಲೆ...!!!!! 


****************************


ಏನೀ ಆ ನಿನ್ನ ದಪ್ಪ ಕಣ್ಣು..
ನಡೆಯಬೇಡ ನೀ
ಸಿಡಿಯುತಿದೆ ಮಣ್ಣು..
ಬಂದರೆ ನೀ
ಕಾಲೇಜಿನ ಹತ್ತಿರ..
ಕಾಲೇಜಿನ ಹುಡುಗರ
ಮನಸ್ಸೆಲ್ಲಾ ದುಸ್ತರ..

ನಿನ್ನ ಬಾಳಿನ ತುಂಬಾ ಇರಲಿ
ಈ ನಗೆ,
ಮರೆಯದೆ ಬರುವೆ ನಾ
ನಿನ್ನ ಮದುವೆಗೆ...
                                           
*****************************
" ಕವಿತೆಯೂ ನನ್ನ ಬಳಿ ಇದೆ
ಕವಿತ್ವವೂ ನನ್ನ ಬಳಿ ಇದೆ

ಕವಿತೆಯೂ ನನ್ನ ಬಳಿ ಇದೆ,
ಕವಿತ್ವವೂ ನನ್ನ ಬಳಿ ಇದೆ....

ಆದರೆ, ನಾ ಹೇಗೆ ಓದಿ ಹೇಳಲಿ?????
ತರಕಾರಿ ಹೆಚ್ಚುವ ಚಾಕು
ನಿನ್ನ ಬಳಿ ಇದೆ.....

***************************
ನಾ ನೋಡಬೇಕು ಅಂತಾ
ಕನ್ಯಾ ಕುಮಾರಿ
ಎಲ್ರಿಗೂ ಹೇಳಿದ್ದು
ತಪ್ಪಾಯಿತು ರೀ..

ನಾ ನೋಡಬೇಕಂತ
ಕನ್ಯಾ ಕುಮಾರಿ,
ಎಲ್ರಿಗೂ ಹೇಳಿದ್ದು
ತಪ್ಪಾತು ರೀ,,,,,

ಬ್ಯಾಡ ಬ್ಯಾಡ ಅಂದ್ರೂ
ಬಿಡವಲ್ ರೀ...
ನೋಡಲೇಬೇಕಂತಾ
ಗಂಟು ಬಿದ್ದಾರ
'ಕನ್ಯೆಯರ ಅಪ್ಪಾರು' ರೀ..

*****************************

ದಕ್ಷಿಣ ಕರ್ನಾಟಕದ ಅಲ್ಲಲ್ಲಿ ಸಿಗುವರು
ಭಯೋತ್ಪಾದಕರು/ ನಕ್ಸಲೀಯರು..

ದಕ್ಷಿಣ ಕರ್ನಾಟಕದ ಅಲ್ಲಲ್ಲಿ ಸಿಗುವರು
ಭಯೋತ್ಪಾದಕರು/ ನಕ್ಸಲೀಯರು..

ಉತ್ತರ ಕರ್ನಾಟಕದ ಎಲ್ಲೆಲ್ಲೂ ಸಿಗುವರು
ನಗೋತ್ಪಾದಕರು/ ನಗ್ಸಲೀಯರು..
.

************************



ಹತ್ತರ ನಂತರ ಉನ್ನತ ಮಟ್ಟ ಹತ್ತಲು ನೂರತ್ತು ದಾರಿ

ಹತ್ತರ ನಂತರ ಉನ್ನತ ಮಟ್ಟ ಹತ್ತಲು ನೂರತ್ತು ದಾರಿ
ಇದೇ ತಾನೇ ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿರುವ 84 ಪುಟಗಳ 2011-12ನೇ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. ದಾಖಲಾತಿ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಚಟುವಟಿಕೆಗಳ ಮಾರ್ಗಸೂಚಿಯಲ್ಲಿ ಹತ್ತನೇ ತರಗತಿಯ ತೇರ್ಗಡೆಯಾದವರಿಗಾಗಿಯೇ ಪದವಿ ಪೂರ್ವ ಶಿಕ್ಷಣದ ಅವಕಾಶಗಳನ್ನು ಪ್ರಕಟಿಸಿದೆ. (ಇದರ ಉಚಿತ ಪ್ರತಿ ಅಂತರಜಾಲದಲ್ಲಿ ಲಭ್ಯವಿದ್ದು ಹೆಚ್ಚಿನ ವಿವರಗಳಿಗೆ ನೋಡಿ :www.pue.kar.nic.in


12 ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳ ಪೈಕಿ ಕಲಾ (ಆರ್ಟ್ಸ್) ವಿಷಯಗಳಲ್ಲಿ 36, ವಾಣಿಜ್ಯ ವಿಷಯಗಳಲ್ಲಿ 08 ಮತ್ತು ವಿಜ್ಞಾನ ವಿಷಯಗಳಲ್ಲಿ 7 (P C M B / P C M C / P C M E / P C M S / P C B HSc / P C M G / C B Ps HSc ) ವಿವಿಧ ಕಾಂಬಿನೇಷನ್‌ಗಳನ್ನು ಪದವಿ ಪೂರ್ವ ಶಿಕ್ಷಣಕ್ಕಾಗಿ ಆಯ್ಕೆಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದಂಡಶುಲ್ಕವಿಲ್ಲದೇ ಬರುವ ಜೂನ್ 15 ದಾಖಲಾತಿಗೆ ಕೊನೆಯ ದಿನ. ಜೂನ್ 16 ರಿಂದ 30 ರವರೆಗೆ ರೂ.420 ರಿಂದ ರೂ.1820 ರವರೆಗೆ ದಂಡಶುಲ್ಕ ಸಹಿತ ದಾಖಲಾಗಲು ಅವಕಾಶವಿದೆ. ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ದಾಖಲಾಗಲು ಕೊನೆಯ ದಿನ ಬರುವ ಜುಲೈ 25 ಆಗಿರುತ್ತದೆ. ಈ ವೇಳಾಪಟ್ಟಿಯನ್ನು ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳು ಕಡ್ಡಾಯವಾಗಿ ಅನುಸರಿಸುತ್ತವೆ. 




ಎಸ್.ಎಸ್.ಎಲ್.ಸಿ. ನಂತರದ ಸಾಮಾನ್ಯ ಪದವಿ ಪೂರ್ವ ಶಿಕ್ಷಣದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳ ಜೊತೆ ತಾಂತ್ರಿಕ ಶಿಕ್ಷಣದಲ್ಲಿರುವ ಮೂರು ವರ್ಷಗಳ ಡಿಪ್ಲೊಮಾ (26 ವಿವಿಧ ವಿಷಯಗಳು), ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋರ್ಸ್ (6 ವಿಷಯಗಳು), ಒಂದು ವರ್ಷದ ಎ.ಎನ್.ಎಂ. ಸರ್ಟಿಫಿಕೇಟ್ ಕೋರ್ಸ್, ಅರೋಗ್ಯ ನಿರೀಕ್ಷಕರ ಕೋರ್ಸ್, ನರ್ಸಿಂಗ್ ಜನರಲ್ ಮತ್ತು ನರ್ಸಿಂಗ್ ಡಿಪ್ಲೊಮಾ, ಎರಡು ವರ್ಷಗಳ ಐ.ಟಿ.ಐ. (34 ವಿಷಯಗಳು) ತರಬೇತಿ ಅಲ್ಲದೇ ಅಲ್ಪಾವಧಿ ಮತ್ತು ದೀರ್ಘಾವಧಿಯ ಕ್ರಾಷ್ ಕೋರ್ಸ್‌ಗಳು ಲಭ್ಯವಿದೆ. ಹಾಗೆಯೇ ಪಿ.ಯು.ಸಿ. ನಂತರದ ಹತ್ತಾರು ಪ್ರಮುಖ ಕೋರ್ಸ್‌ಗಳು ಮತ್ತು ಉದ್ಯೋಗಾವಕಾಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ದಾರಿದೀಪ - ಶೈಕ್ಷಣಿಕ ವತ್ತಿ ಮಾರ್ಗದರ್ಶನ ಕೈಪಿಡಿಯಲ್ಲಿ ಸುದೀರ್ಘವಾಗಿ ಪಟ್ಟಿಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ನೋಡಿ : 



ಆಯ್ಕೆ ಏತಕ್ಕಾಗಿ - ಬದಲಾವಣೆ ಯಾರಿಗಾಗಿ? ಈ ಹಿಂದೆ ಎಸ್.ಎಸ್.ಎಲ್.ಸಿ ನಂತರ ಪಿ.ಯು.ಸಿ, ಪದವಿ, ಡಿ.ಇಡಿ. ಅಥವಾ ಬಿ.ಇ.ಡಿ., ಎಂ.ಎ. ಎಂಬ ಒಂದು ಸರಣಿ, ಕಾನೂನು, ತಾಂತ್ರಿಕ ಪದವಿ, ವೈದ್ಯಕೀಯ ಕೋರ್ಸುಗಳ ಇನ್ನೊಂದು ಸರಣಿಯ ಪ್ರಮುಖ ಆಯ್ಕೆಗಳು ಇದ್ದಕ್ಕಿದ್ದಂತೆ ಬದಲಾಗಿ ಯಾವುದಕ್ಕೆ ಸೇರಿದರೆ ಸ್ಕೋಪ್ ಜಾಸ್ತಿ, ಯಾವುದರಿಂದ ತಕ್ಷಣ ಲಾಭ ಆಗುತ್ತೆ ಎನ್ನುವ ಮಾನದಂಡವೇ ಪ್ರಮುಖವಾಗಿ ಬಾಲವೇ ನಾಯಿಯನ್ನು ಆಡಿಸುವ ಪರಿಸ್ಥಿತಿ ಉದ್ಭವಿಸಿದೆ. 



ವಿದ್ಯಾರ್ಥಿಗಳ ಆಸಕ್ತಿ, ಪರಿಶ್ರಮ, ದೀರ್ಘಾವಧಿಯಲ್ಲಿ ಅವರ ದೈಹಿಕ-ಮಾನಸಿಕ-ಸಾಮಾಜಿಕ ಸಂಬಂಧಗಳ ಮೇಲೆ ಆಗುವ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೇ ಕಬ್ಬಿನ ಸಿಪ್ಪೆಯಂತೆ ಹಿಂಡಿ ಹಿಪ್ಪೆಮಾಡುವ ಒತ್ತಡದ ದುಡಿಮೆಗೆ, ತಕ್ಷಣದ ಲಾಭಕ್ಕೆ ಅನುವಾಗುವ ಕೋರ್ಸುಗಳ ಆಯ್ಕೆಯಿಂದ, ಕುರಿಮಂದೆಯಂತೆ ನುಗ್ಗುತ್ತಿರುವ ಯುವಪಡೆ ಅತ್ಯುತ್ತಮವಾದದ್ದೇನನ್ನೂ ಸಾಧಿಸಲು ವಿಫಲವಾಗಿ ಚಿಕ್ಕ ವಯಸ್ಸಿಗೇ ರಿಟೈರ್ಡ್‌ ಆಗುವಷ್ಟು ಸುಸ್ತಾಗುತ್ತಿದ್ದಾರೆ. ಜೀವನದ ಜಂಜಾಟವೇ ಬೇಡ, ವೈವಾಹಿಕ ಬಂಧಗಳೂ ಬೇಡ, ಜವಾಬ್ದಾರಿಯಂತೂ ಬೇಡವೇ ಬೇಡ. ಉದ್ದಿಮೆಗಳ ಪೈಪೋಟಿಯಲ್ಲಿ ನುಜ್ಜು ಗುಜ್ಜಾಗುತ್ತಿರುವ ಉದ್ಯೋಗಿಗಳು, ನಿಗದಿತ ಸಮಯದ ಒಳಗಾಗಿ ಮಾಡಿ ಮುಗಿಸಲೇಬೇಕಾದ ಪ್ರಾಜೆಕ್ಟ್‌ಗಳ ಒತ್ತಡ, ಸಮವಯಸ್ಕರ ನಡುವಿನ ಸ್ಪರ್ಧೆಯಲ್ಲಿ ಇತ್ತೀಚಿಗೆ ಕಂಡುಬರುತ್ತಿರುವ ಯಶಸ್ಸು ಮತ್ತು ಹಿಂದುಳಿಯುವಿಕೆಯ ಭಯ ಇತ್ಯಾದಿಗಳ ಕಾರಣದಿಂದ ಸಾಂಪ್ರದಾಯಿಕ ಆಯ್ಕೆ ಯಾವ ಉಪಯೋಗಕ್ಕೂ ಬಾರದು ಅನ್ನಿಸಿ ಸ್ಕೋಪ್ ಜಾಸ್ತಿ ಇರುವ ವಿಷಯಗಳನ್ನೇ ಆಯ್ದುಕೊಳ್ಳುವಂತಾಗಿದೆ. ಯಾವುದೋ ಒಂದಕ್ಕೆ ಸ್ಕೋಪ್ ಇದೆ ಅಂದ ಮಾತ್ರಕ್ಕೆ ಅದನ್ನೇ ಅನುಸರಿಸಿದರೆ ಉಳಿದವು ಹಿಂದೆ ಬೀಳುವ ಮತ್ತು ಸ್ವಲ್ಪ ಕಾಲದ ನಂತರ ಹಿಂದೆ ಬಿದ್ದ ವಿಷಯಗಳಲ್ಲಿ ಅಗತ್ಯ ಪೈಪೋಟಿ ನೀಡುವ ಜನರೇ ಇಲ್ಲದಂತಾದಾಗ ಮತ್ತೆ ಅದಕ್ಕೆ ಸ್ಕೋಪ್ ಸಿಗುವ ಏರಿಳಿತದ ಆಟ ನಡೆದೇ ಇದೆ. ಇದಕ್ಕೆ ಕೊನೆಯ ಇಲ್ಲ. ಆದರೂ ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇದ್ದರೆ ನಮ್ಮ ಆಯ್ಕೆಯನ್ನು ಸಮರ್ಪಕ ಎನ್ನುವ ರೀತಿಯಲ್ಲಿ ನಿಭಾಯಿಸಬಹುದು. ಹಣಪ್ರಪಂಚದಲ್ಲಿ ಇವೆಲ್ಲಾ ಸಾಮಾನ್ಯ. ನೆಂಟರಿಷ್ಟರಲ್ಲಿ, ಅಕ್ಕಪಕ್ಕದವರಲ್ಲಿ ತಾವೂ ಕಡಿಮೆ ಇಲ್ಲ ಎನ್ನುವ ಒಣ ಪ್ರತಿಷ್ಠೆ ಈ ಮನೋಭಾವದ ಬದಲಾವಣೆಗೆ ಬಹುಮುಖ್ಯ ಕಾರಣ. ಗೆದ್ದೆತ್ತಿನ ಬಾಲ ಹಿಡಿಯುವವರನ್ನು, ಗೆದ್ದ ಕೋರ್ಸಿನ ಹಿಂದೆ ಬೀಳುವವರನ್ನು, ಒಂದು ಕುರಿ ಹಳ್ಳಕ್ಕೆ ಬಿದ್ದರೆ ಹಿಂದೆ ಮುಂದೆ ಯೋಚಿಸದೆಯೇ ತಾವೂ ಹಳ್ಳಕ್ಕೆ ಬೀಳಲು ಸಿದ್ಧವಿರುವ ಕುರಿಯಂಥವರನ್ನು ತಡೆಯುವವರು ಯಾರು?

ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಇಲ್ಲಿಗೆ ವೆಬ್ ಮಾರ್ಗ

ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಇಲ್ಲಿಗೆ ವೆಬ್ ಮಾರ್ಗ
* ರಾಘವೇಂದ್ರ ಗುಡಿ


'ಗೊತ್ತಿಲ್ಲ ಸರ್, ಎಸ್‌ಎಸ್‌ಎಲ್‌ಸಿಯಲ್ಲಿ ನಂಗೆ ಈ ಬಾರಿ ಉತ್ತಮ ಅಂಕ ಬಂದಿದೆ. ಸೈನ್ಸ್ ಮಾಡಿದ್ರೆ ಉತ್ತಮ ಅಂತ ನನ್ನ ಟೀಚರ್ ಹೇಳಿದ್ದಾರೆ. ಹೀಗಾಗಿ ನಾನು ಅದನ್ನೇ ಮಾಡಬೇಕು ಅಂತಾ ಇದ್ದೀನಿ'

'ಆರ್ಟ್ಸ್ ಮಾಡಿ ನಂತರ ಟಿಸಿಎಚ್ ಮಾಡಿದ್ರೆ ಬೇಗ ಸಂಬಳ ಸಿಗುತ್ತೆ ಅಂತಾ ನಮ್ಮ ಫ್ರೆಂಡ್ಸ್ ಹೇಳ್ತಾ ಇದ್ದಾರೆ. ನಾನೂ ಅದನ್ನೇ ಯೋಚನೆ ಮಾಡ್ತಾ ಇದ್ದೀನಿ'

'ನಂಗೊತ್ತಿಲ್ಲ ಸರ್, ಯಾವುದರಲ್ಲಿ ಸೀಟ್ ಸಿಗುತ್ತೋ ಆ ಕೋರ್ಸ್‌ನ್ನೇ ಆಯ್ಕೆ ಮಾಡಿ ಕೊಳ್ತೇನೆ'

ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಮಾಡುತ್ತೀರಿ? ಎಂಬ ಪ್ರಶ್ನೆಗೆ ಬೆಂಗಳೂರಿನ ಶಶಿಕಾಂತ್, ಧಾರವಾಡದ ಬಸವರಾಜ್ ಮತ್ತು ಹಾವೇರಿಯ ಸಂಜನಾ ನೀಡಿದ ಉತ್ತರಗಳಿವು. ಇವು ಕೇವಲ ಈ ಮೂವರು ನೀಡಿದ ಉತ್ತರಗಳು ಮಾತ್ರವಲ್ಲ, ಇಂದು ಎಸ್‌ಎಸ್‌ಎಲ್‌ಸಿ ಮುಗಿಸಿ, ಹೆಚ್ಚಿನ ವಿದ್ಯಾಭ್ಯಾಸ ಮಾಡುವ ನಿರೀಕ್ಷೆ ಇಟ್ಟುಕೊಂಡಿರುವ ಬಹುತೇಕ ವಿದ್ಯಾರ್ಥಿಗಳು ನೀಡುವ ಉತ್ತರಗಳಿವು. ತಂದೆ ಹೇಳಿದರಂತಲೋ, ತಾಯಿ ಮಾತಿಗೆ ಕಟ್ಟುಬಿದ್ದೋ, ಸ್ನೇಹಿತರು, ಶಾಲಾ ಉಪಾಧ್ಯಾಯರು, ಮತ್ತೊಬ್ಬರು-ಮಗದೊಬ್ಬರು ಹೇಳುವ ಮಾತುಗಳನ್ನೇ ಶಿರಸಾ ಪಾಲಿಸಿ ಬಹುತೇಕ ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ವಿದ್ಯಾಭ್ಯಾಸದ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಅವರಲ್ಲಿ ಬಹುತೇಕರು ತಮ್ಮ ಕೆರಿಯರ್‌ನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಅನೇಕ ವಿದ್ಯಾರ್ಥಿಗಳು ಕೋರ್ಸ್ ಸೇರಿದ ನಂತರ ಅದು ತಮಗೆ ಹೊಂದದೆಯೋ, ಆ ಕೋರ್ಸ್‌ನಲ್ಲಿ ಆಸಕ್ತಿಮೂಡದೆಯೋ ಅದನ್ನು ಅರ್ಧಕ್ಕೇ ಬಿಡುವ ವಿದ್ಯಾರ್ಥಿಗಳ ಸಂಖ್ಯೆಗೆ ಕೊರತೆಯಿಲ್ಲ.

ನಾವು ನೋಡುವಂತೆ ಅನೇಕ ವಿದ್ಯಾರ್ಥಿಗಳು ಪ್ರಾರಂಭದಲ್ಲಿ ಬಹಳ ಆಸಕ್ತಿಕರವಾಗಿ ತರಗತಿಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಬರಬರುತ್ತಾ ಪಾಠಗಳಲ್ಲಿ ಆಸಕ್ತಿಯನ್ನೇ ಕಳೆದು ಕೊಂಡು ಬಿಡುತ್ತಾರೆ, ಎನ್ನುತ್ತಾರೆ ಸೈನ್ಸ್ ಕಾಲೇಜೊಂದರಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಪ್ರೊ. ವರೂರ್.

ಮಾರ್ಗದರ್ಶನದ ಕೊರತೆ ಸರಿಯಾದ ಮಾರ್ಗದರ್ಶನದ ಕೊರತೆಯೇ ಈ ರೀತಿ ಅರ್ಧಕ್ಕೆ ಕೋರ್ಸ್ ಬಿಡುವುದಕ್ಕೆ, ಕೋರ್ಸ್ ಪಾಸ್ ಮಾಡಿದರೂ ಅದರ ಅಪ್ಲಿಕೇಶನ್ ಅರಿಯದಿರುವುದಕ್ಕೆ ಅಥವಾ ಕೆಲಸದಲ್ಲಿ ಪ್ರಗತಿ ಸಾಧಿಸದಿರುವುದಕ್ಕೆ ಕಾರಣವಾಗಿದೆ. ಮರವೇರುವುದು ಮಂಗಕ್ಕೆ ಸುಲಭವಾದರೆ, ಮರ ಉರುಳಿಸುವುದು ಆನೆಗೆ ಸಹಜ. ಅದೇ ರೀತಿ ಮಕ್ಕಳು ಹೊಸ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ಸಾಮಾರ್ಥ್ಯ, ಆಸಕ್ತಿ ಮತ್ತು ಪ್ರತಿಭೆಗೆ ತಕ್ಕ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾರ್ಗದರ್ಶನ ನೀಡುವುದು ಮುಖ್ಯ. ಮನೆ ಮನೆಗೆ ಅಂತರ್ಜಾಲ ಅಡಿಯಿಟ್ಟಿರುವಾಗ, ಸಾಫ್ಟ್‌ವೇರ್ ಮತ್ತು ವೆಬ್‌ಸೈಟ್ ತಂತ್ರಜ್ಞಾನವನ್ನು ಬಳಸಿಕೊಂಡು ಮಾರ್ಗದರ್ಶನ ಮಾಡುವಂಥ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಲಿದ್ದು, ಮಂಗಳೂರಿನ ಮೂವರು ಯುವ ಟೆಕ್ಕಿಗಳು ವಿಶ್ವೇಶ್ವರಯ್ಯಾ ತಾಂತ್ರಿಕ ಮಹಾವಿದ್ಯಾಲಯದ ವೈಸ್ ಚಾನ್ಸಲರ್ ಪ್ರೊ. ಎಚ್. ಮಹೇಶಪ್ಪನವರ ಮಾರ್ಗದರ್ಶನದಲ್ಲಿ ಎಸ್‌ಎಲ್‌ಎಲ್‌ಸಿ ಮತ್ತು ಪಿಯೂಸಿ ವಿದ್ಯಾರ್ಥಿಗಳ ಕೋರ್ಸುಗಳ ಆಯ್ಕೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಬ್ರ್ಯಾಂಚ್ ಸೆಲೆಕ್ಟರ್ ಎಂಬ ನವೀನ ಉಚಿತ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.

ವೆಬ್ ಮಾರ್ಗ ಇತ್ತೀಚೆಗೆ ಅನಾವರಣಗೊಂಡ ಈ ಕೆರಿಯರ್ ಗೈಡ್ ವೆಬ್ ಸೈಟ್‌ನ್ನು ಮಂಗಳೂರಿನ ಅಸಿಸ್ಟಂಟ್ ಪ್ರೊಫೆಸರ್ ಹಾಗೂ ವಿಟಿಯುನ ವಿಶೇಷ ಅಧಿಕಾರಿ ಅನಂತ ಪ್ರಭು, ರಾಘವ್ ಶೆಟ್ಟಿ ಮತ್ತು ವಸೀಮ್ ಅಭಿವೃದ್ಧಿ ಪಡಿಸಿದ್ದಾರೆ. ಇಂದು ಭಾರತದಲ್ಲಿ ಶಿಕ್ಷಣ ಧಾರಾಳವಾಗಿ ಸಿಗುತ್ತಿದ್ದರೂ, ಅನೇಕ ಗ್ರಾಜ್ಯುಯೇಟೆಡ್ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಅಂದು ಕೊಂಡಷ್ಟರ ಮಟ್ಟಿಗೆ ಇರುವುದಿಲ್ಲ. ಬೇಗ ಹೆಚ್ಚು ಹಣ ಗಳಿಸಬೇಕೆಂತಲೋ ಅಥವಾ ಇನ್ನಾವುದಾದರೂ ಕಟ್ಟುಪಾಡಿಗೆ ಒಳಗಾಗಿಯೋ ಅವರು ಕೋರ್ಸ್‌ಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಇದರಿಂದಾಗಿ ಆಳ ಜ್ಞಾನವನ್ನು ಪಡೆಯಲಿಕ್ಕಾಗದೇ, ಕೇವಲ ಪಾಸ್ ಆಗುವುದರ ಕಡೆಗೆ ಹೆಚ್ಚು ಒತ್ತು ನೀಡುತ್ತಾರೆ. ಇದರಿಂದಾಗಿಯೇ ಇಂದು ಅಂತಾರಾಷ್ಟ್ರೀ ಮಟ್ಟದಲ್ಲಿ ಭಾರತದಿಂದ ಹೊಸ ಆವಿಷ್ಕಾರಗಳಾಗಲೀ, ಇಲ್ಲವೇ ಪೇಟೆಂಟ್ ಅಪ್ಲಿಕೇಶನ್‌ಗಳಾಗಲೀ ನೆಗ್ಲಿಜಿಬಲ್ ಮಟ್ಟದಲ್ಲಿವೆ. ಇವುಗಳನ್ನೆಲ್ಲ ಗಮನಿಸಿ ಮತ್ತು ನಮ್ಮ ವೈಯಕ್ತಿಕ ಅನುಭವವನ್ನಾಧರಿಸಿ, ಸಂಶೋಧನೆಯನ್ನು ಕೈಗೊಂಡು ಈ ವೆಬ್‌ಸೈಟನ್ನು ಅಭಿವೃದ್ಧಿ ಪಡಿಸಿದ್ದೇವೆ ಎನ್ನುತ್ತಾರೆ ಅನಂತ ಪ್ರಭು.

ಹಲವು ಪ್ರಶ್ನೆ ಮಾರ್ಗ ಒಂದು ಅನಂತ ಪ್ರಭು ಹೇಳುವಂತೆ ಈ ವೆಬ್‌ಸೈಟ್ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬ್ರ್ಯಾಂಚನ್ನು ಸೆಲೆಕ್ಟ್ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಉಚಿತವಾಗಿ ಈ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿ ಕೊಳ್ಳಬೇಕು, ನಂತರದಲ್ಲಿ ಅಲ್ಲಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಆ ಪ್ರಶ್ನೋತ್ತರದ ಆಧಾರದ ಮೇಲೆ, ವಿದ್ಯಾರ್ಥಿಗಳಿಗೆ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿ ಕೊಳ್ಳಬೇಕೆಂದು ವೆಬ್‌ಸೈಟ್ ಮಾರ್ಗದರ್ಶನ ನೀಡುತ್ತದೆ ಎನ್ನುತ್ತಾರೆ ಪ್ರಭು.

ಪ್ರಭು ಹೇಳುವಂತೆ, ಈ ವೆಬ್‌ಸೈಟಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 20 ಪ್ರಶ್ನೆಗಳನ್ನು ಮತ್ತು ಎಂಜಿನಿಯರಿಂಗ್ ಸೇರ ಬಯಸುವ ಪಿಯುಸಿ ವಿದ್ಯಾರ್ಥಿಗಳಿಗೆ 30 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆ ಪ್ರಶ್ನೆಗಳು ಸರಳವಾಗಿದ್ದು, ಅಕಾಡೆಮಿಕ್ ಹೊರತು ಪಡಿಸಿದ ಪ್ರಶ್ನೆಗಳಾಗಿರುತ್ತವೆ. ವಿವಿಧ ಮಾನದಂಡಗಳ ಆಧಾರದ ಮೇಲೆ ಪ್ರತಿಯೊಂದು ಪ್ರಶ್ನೆಗಳನ್ನು ಸಂಯೋಜಿಸಿದ್ದು, ಅದರ ಆಧಾರದ ಮೇಲೆ ವೆಬ್‌ಸೈಟ್ ಆಟೊಮೆಟಿಕ್ ಆಗಿ ಯಾವ ವಿದ್ಯಾರ್ಥಿ ಯಾವ ಕೋರ್ಸ್ ಸೇರಿದರೆ ಉತ್ತಮ ಎಂದು ತಿಳಿಸುತ್ತದೆ. ರಾಜ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಒಟ್ಟು 25 ಕೋರ್ಸ್‌ಗಳು ಲಭ್ಯವಿದ್ದು, ಅದರಲ್ಲಿ ಯಾವುದು ಉತ್ತಮ ಆಯ್ಕೆ ಎಂದು ವಿದ್ಯಾರ್ಥಿಗಳಿಗೆ ಸಾಫ್ಟವೇರ್ ತಿಳಿಸುತ್ತದೆ.

ಪರಿಣಾಮಕಾರಿ ಬೋಧನೆಗೆ ಅತ್ಯಾವಶ್ಯಕ ಅಂಶಗಳು
ಬೋಧನೆ ಎಂಬುದು ಒಂದು ಕಲೆ ಆದರೆ ಅದರಲ್ಲಿ ಎಲ್ಲರೂ 10ಕ್ಕೆ 10 ಅಂಕವನ್ನು ಪಡೆಯ ಬಲ್ಲ ಕಲಾವಿದರಾಗಲಾರರು.  ಏಕೆಂದರೆ ಕೆಲವರು ಬೋಧನೆಯನ್ನು ಪರಿಸ್ಥಿತಿಯ ಆವಶ್ಯಕತೆಗೆ ಒಳಪಟ್ಟು ಕೈಗೊಳ್ಳುತಾರೆಯೇ ಹೊರತು ತಾವೆ ಇಷ್ಟಪಟ್ಟು ಕೈಗೊಳ್ಳುವುದಿಲ್ಲ.  ಹೀಗಿದ್ದರೂ ಒಂದಂತೂ ನಿಜ ಅವರೂ ಶಿಕ್ಷಕರೇ.  ಒಬ್ಬ ವ್ಯಕ್ತಿ ತಾನು ಶಿಕ್ಷಕನಾದ ಕೂಡಲೇ ಮನಗಾಣ ಬೇಕಾದ ಒಂದು ಮುಖ್ಯ ಅಂಶವೆಂದರೆ ಈ ವೃತ್ತಿ  ಭವಿಷ್ಯದ ಪೀಳಿಗೆಯ ಮೇಲೆ ಪರಿಣಾಮ ಬೀರುವಂತಹುದು.  ಅವರನ್ನು ರೂಪಿಸುವಂತಹದು ಎಂಬುದು.  ಯಾವುದೇ ದೇಶವು  ಎಷ್ಟು ಒಳ್ಳೆಯದು ಎಂಬುದು ಅದು ಎಂಥಾ ಉಪಾಧ್ಯಾಯರನ್ನು ಒಳಗೊಂಡಿದೆ ಎಂಬುದನ್ನು ಅವಲಂಬಿಸುತ್ತೆ.  ಆದ್ದರಿಂದ ಒಂದು ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕನು ಬಲು ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ.  ವಿಶ್ವದ ಎಲ್ಲ ಸಮಾಜದಲ್ಲೂ  ಶಿಕ್ಷಕರಿಗೆ ಅತ್ಯಂತ ಗೌರವದ ಸ್ಥಾನವಿದೆ.  ನಮ್ಮ ದೇಶದಲ್ಲಂತೂಆಚಾರ್ಯ ದೇವೋ ಭವ ಅಂದರೆ ಗುರುವು ದೇವರಿಗೆ ಸಮಾನನಾದವನು ಎಂದು ಗೌರವಿಸುತ್ತೇವೆ.  ಆದ್ದರಿಂದ ಸಮಾಜವು ಗುರುಗಳಿಂದ ಸತ್ಪರಿಣಾಮವನ್ನು ನಿರೀಕ್ಷಿಸುತ್ತದೆ.  ಅಂದರೆ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನೆರವಾಗುವುದೇ ಅಲ್ಲದೆ, ನೈತಿಕ ಮೌಲ್ಯಗಳು, ನಾಗರಿಕ ಪ್ರಜ್ಞಾವಂತಿಕೆ ಇವೆಲ್ಲವೂ ಅವರಲ್ಲಿ ಮೈಗೂಡುವಂತೆ ಮಾಡಬೇಕೆಂದು ನಿರೀಕ್ಷಿಸುತ್ತೇವೆ.
    ಶಿಕ್ಷಕನಾದವನು ಒಂದು ದೇಶದ ಮುನ್ನಡೆಯ ಹಾದಿಯನ್ನೇ ಬದಲಾಯಿಸಬಲ್ಲನು.  ಇಂದಿನ ಪ್ರಪಂಚದಲ್ಲಿ ಬೋಧನೆ ಎಂಬುದು ಹಿಂದೆಂದಿಗಿಂತಲೂ ಬಹಳ ಸಾಹಸದ ಸವಾಲಾಗಿರುತ್ತದೆ.  ತಾಂತ್ರಿಕ ಮುನ್ನಡೆ ಇಡಿ ವಿಶ್ವನ್ನೇ ಜಾಗತಿಕ ಹಳ್ಳಿಗಳನ್ನಾಗಿಸಿದೆ.  ಏನೇ ಪರಿಣಾಮವುಂಟಾದರೂ   ಅದನ್ನು ಜಾಗತಿಕ ದೃಷ್ಟಿ ಕೋನದಲ್ಲಿ ಪರಾಮರ್ಶೆ ಮಾಡಲಾಗುತ್ತದೆ.  ಈಗ ಅವಕಾಶಗಳು ಎಲ್ಲರಿಗೂ ತೆರೆದಿರುವ ಕಾರಣ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ಒಬ್ಬರೊಂದಿಗೊಬ್ಬರು ಸ್ಪರ್ಧಿಸುತ್ತಿರುತ್ತಾರೆ.
     ಒಬ್ಬ ವಿದ್ಯಾರ್ಥಿಯು ಉತ್ತಮ ಸಾಧನೆ ಮಾಡಿದರೆ ಅದರ ಹಿಂದೆ ಪ್ರೇರಕ ಶಕ್ತಿಯಾಗಿ ಗುರುವಾದವನು ಇರುತ್ತಾನೆ.  ಒಬ್ಬ ವಿದ್ಯಾರ್ಥಿಯು ಉತ್ತಮ ಸಾಧನೆ ಮಾಡದೆ ಸೋತಾಗ ಆ ಸೋಲಿನ ಹಿಂದೆಯೂ ಶಿಕ್ಷಕನು ಇರುತ್ತಾನೆ.  ವಿದ್ಯಾರ್ಥಿಯಾದವನ ದೃಷ್ಟಿಕೋನ ಮತ್ತು ಭವಿಷ್ಯದ ಮೇಲೆ ಶಿಕ್ಷಕರು ಅಗಾಧ ಪರಿಣಾಮವನ್ನು  ಬೀರಬಲ್ಲರು.  ಇದಕ್ಕೆ ನಿದರ್ಶನಗಳು  ಇತಿಹಾಸದಲ್ಲಿ  ಅಪಾರವಾಗಿ ಸಿಗುತ್ತವೆ.  ಒಬ್ಬ ಸಾಮಾನ್ಯ ಬಾಲಕನನ್ನು ಹುರುದುಂಬಿಸಿ ಪಳಗಿಸಿ ಚಾಣಿಕ್ಯನು ಚಂದ್ರಗುಪ್ತ ಮೌರ್ಯನಂತಹ ಮಹಾನ್ ಚಕ್ರವರ್ತಿಯನ್ನಾಗಿಸಿದನು.  ಅಹಿಂಸೆಯನ್ನೇ ಅಸ್ತ್ರವನ್ನಾಗಿ ಇರಿಸಿಕೊಂಡು ಗಾಂಧೀಜಿ ಅವರು ಇಡೀ ದೇಶವು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡುವಂತೆ ಮಾಡಿದರು.  ಮಾಜಿ ರಾಷ್ಟ್ರಪತಿಗಳಾದ ಶ್ರೀ ಸರ್ವಪಳ್ಳಿ ರಾಧಾ ಕೃಷ್ಣ ಅವರು ಒಬ್ಬ ಶಿಕ್ಷಕ ಎಂದೇ ತಮ್ಮನ್ನು ಗುರುತಿಸಿ ಕೊಳ್ಳಲು ಇಚ್ಛಿಸುತ್ತಾರೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅನೇಕರಿಗೆ ಸ್ಪೂರ್ತಿ ನೀಡಿದ್ದಾರೆ ಮತ್ತು ಮಿಲಿಯಾಂತರ ಜನರಿಗೆ ಕನಸುಗಳನ್ನು ಕಂಡು ಅದನ್ನು ನನಸಾಗಿಸಲು ಕಂಕಣಬದ್ಧರಾಗುವಂತೆ ಸ್ಪೂರ್ತಿ ನೀಡುತ್ತಿದ್ದಾರೆ.
     ಒಬ್ಬ ಮಹಾನ್ ಶಿಕ್ಷಕನ ಗುಣ ವಿಶೇಷಗಳು ಎಲ್ಲಾ ಶಿಕ್ಷಕರಲ್ಲೂ ಇರಬೇಕು.  ಒಬ್ಬ ಶಿಕ್ಷಕನಾದವನು ಉತ್ತಮ ಮತ್ತು ಪರಿಣಾಕಾರಿ ಬೋಧನೆಯನ್ನು ನೀಡಬೇಕು.  ಪರಿಣಾಮಕಾರಿಯಾಗಿ ಬೋಧನೆ ನೀಡಿದಾಗ ಮಾತ್ರ ಕಲಿಯುವವ ಇನ್ನೂ ಹೆಚ್ಚು ಕಲಿಯಲು ಸಾಧ್ಯ.  ಪರಿಣಾಮಕಾರಿ ಬೋಧನೆಗೆ ಇದಮಿಥ್ಥಂ ಎಂದು ಹೇಳುವ ಯಾವುದೇ ಏಕಮಾತ್ರ ಸೂತ್ರವಿಲ್ಲ.  ಏಕೆಂದರೆ ಆಯಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಶಿಕ್ಷಕನೇ ನಿರ್ಧರಿಸುತ್ತಾನೆ.  ಹೀಗಿದ್ದರೂ ಶಿಕ್ಷಕನಾದವನು ಹೆಚ್ಚು ಪರಿಣಾಮಕಾರಿಯಾಗಲು ಕೆಲವೊಂದು ಗುಣ ಲಕ್ಷಣಗಳಿವೆ.  ವಿವಿಧ ಸಂಶೋಧನೆಗಳಿಂದ ಕಂಡುಬಂದ ಅಂಥ ಕೆಲವೊಂದು ಗುಣ ವಿಶೇಷಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
  • ಬೋಧಿಸಲು ತೀವ್ರ ಆಸಕ್ತಿ ಇರುವುದು:   ಒಬ್ಬ ಶಿಕ್ಷಕನಿಗೆ ಬೋಧಿಸಲು ತೀವ್ರ ಆಸಕ್ತಿ ಇರಬೇಕು.  ಆತ ಅಥವಾ ಆಕೆಯು ತಾನು ಶಿಕ್ಷಕ/ಕಿ ಎಂಬ ಬಗ್ಗೆ ಹೆಮ್ಮೆ ಪಡಬೇಕು;
  • ಸಂಭಾಷಣೆ :  ಶಿಕ್ಷಕನಾದವನು ಬಹಳ ಉತ್ತಮ ಭಾಷಣಕಾರನಾಗಿರಬೇಕು, ಚೆನ್ನಾಗಿ ಕೇಳುವವನಾಗಿರಬೇಕು ಮತ್ತು ಉತ್ತಮವಾಗಿ ವಿಷಯ ತಿಳಿಸುವವನಾಗಿರಬೇಕು, ಆತ/ಆಕೆಯು ವಿದ್ಯಾರ್ಥಿಗಳು ಕೇಳಲು, ಮಾತನಾಡಲು, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಬಹಳಷ್ಟು ಅವಕಾಶ ನೀಡಬೇಕು;
  • ನಮ್ರತೆ:  ಉಪಾದ್ಯಾಯರು ತಮ್ಮ ಪಾಠಯೋಜನೆಯನ್ನು  ಕಾರ್ಯಗತಗೊಳಿಸುವಾಗ ಮಕ್ಕಳ ಕಲಿಕೆಯ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಲು ಮತ್ತು ಮರು ವಿನ್ಯಾಸಗೊಳಿಸಲು ಸಮರ್ಥನಿರಬೇಕು;
  • ಪರಿಣಾಮಕಾರಿ ಮುಖಂಡ:  ಶಿಕ್ಷಕನಾದವನು ಮಕ್ಕಳನ್ನು ನೇತಾರನಾಗಿ ಅಥವಾ ಬೆಂಬಲವಾಗಿ ಮತ್ತು ಕೆಲವೊಮ್ಮೆ ಅವರೊಡನೆ ಬೆರೆತು ಅವರನ್ನು ಮುನ್ನಡೆಸ ಬೇಕಾಗಿರುವುದರಿಂದ ಆತ ಬಲು ಸಮರ್ಥ ಮುಖಂಡನಾಗಿರಬೇಕು;
  • ಹಾಸ್ಯಪ್ರಜ್ಞೆ:  ತರಗತಿಯ ಬಿಗುವಾತಾವರಣ ಅಥವಾ ಮುಜಗರದ ವಾತಾವರಣವನ್ನು ತಿಳಿ ಮಾಡುವುದಕ್ಕಾಗಿ ತುಂಬ ಹಾಸ್ಯ ಪ್ರಜ್ಞೆಯನ್ನು ಹೊಂದಿರಬೇಕು;
  • ಸೃಜನಾತ್ಮಕತೆ:  ಶಿಕ್ಷಕನಾದವನು ತುಂಬ ಸೃಜನಾತ್ಮಕ ವ್ಯಕ್ತಿ ಆಗಿರಬೇಕು ಹೊಸ ಹೊಸ ವಿಷಯಗಳಿಗೆ ತೆರೆದ ಮನಸ್ಸಿನವನಾಗಿರಬೇಕು ಮತ್ತು ಮಕ್ಕಳಲ್ಲೂ ಸೃಜನಶೀಲತೆ ಹಾಗೂ ಹೊಸ ಹೊಸ ವಿಷಯಗಳಿಗೆ ತೆರೆದ ಮನಸ್ಸನ್ನು ಪ್ರೇರೇಪಿಸಬೇಕು;
  • ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳಲು ಸಿದ್ದನಿರಬೇಕು:  ಶಿಕ್ಷನು " ಅಹಂಬ್ರಹ್ಮಾಸ್ಮಿ" ಅಥವಾ ತಾನೇ ಸರ್ವಜ್ಞ  ಎಂದು ನಂಬಬಾರದು.  ಬೋಧಿಸುವಾಗ ತಾನು ತಪ್ಪೇಮಾಡುವುದಿಲ್ಲ ಎಂಬ ಅಹಂಭಾವ ವಿರಬಾರದು.  ಆತ ತಪ್ಪುಗಳನ್ನು ತನಗೆ ತೋರಿಸಿಕೊಟ್ಟಾಗ ಬಲು ನಯವಾಗಿ ಅದನ್ನು ಒಪ್ಪಿಕೊಳ್ಳಬೇಕು ಹಾಗೂ ಅದನ್ನು ಸರಿ ಪಡಿಸಿಕೊಳ್ಳಲು ಸಿದ್ದನಿರಬೇಕು;
  • ಕರ್ತವ್ಯ ಶ್ರದ್ಧೆ:   ಸಕಾಲದಲ್ಲಿ  ಕಾರ್ಯವನ್ನು ಮಾಡಿ ಮುಗಿಸಲು, ಕೆಲಸಗಳನ್ನು ಸಕಾಲದಲ್ಲಿ ಮುಗಿಸಲು ಶಿಕ್ಷಕನಾದವನು ಸ್ವಶಿಸ್ತು ಹೊಂದಿರಬೇಕು, ಕೆಲಸಕ್ಕೆ ನಿಯತವಾಗಿ ಸಕಾಲದಲ್ಲಿ ಬರಬೇಕು.  ಎಲ್ಲವನ್ನೂ ಕ್ರಮಬದ್ಧವಾಗಿ ನಡೆಸಲು ಸಿದ್ಧನಿರಬೇಕು;
  • ಸಕಾರಾತ್ಮಕ ನಿಲುವು:  ಶಿಕ್ಷಕನ ಸಕಾರಾತ್ಮಕ ನಿಲುವು ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವವನ್ನು ಮೈಗೂಡಿಸಲು ಸಹಾಯ ಮಾಡುತ್ತದೆ;
  • ಸ್ವಪ್ರೇರಿತನಾಗಿರಬೇಕು:  ಶಿಕ್ಷಕನಾದವನು  ಚೈತನ್ಯಶೀಲನಾಗಿ ಸ್ವಪ್ರೇರಿತನಾಗಿರಬೇಕು ಮತ್ತು  ಮಕ್ಕಳನ್ನು ಹೇಗೆ ಪ್ರೇರೇಪಿಸಬೇಕೆಂಬುದನ್ನು ತಿಳಿದಿರಬೇಕು;
  • ಸಹಾನುಭೂತಿ ಪರನಾಗಿರಬೇಕು:  ಶಿಕ್ಷಕನು ಮಕ್ಕಳ ಯಶಸ್ಸು ಮತ್ತು ಸೋಲುಗಳನ್ನು ಸಹಾನುಭೂತಿಯಿಂದ ಹಂಚಿಕೊಳ್ಳಬೇಕು;
  • ನೈತಿಕ ಮೌಲ್ಯಗಳನ್ನು ಹೊಂದಿರಬೇಕು:  ಬೋಧನೆ ಎಂಬುದು ಒಂದು ಸವಾಲು ಮತ್ತು ಮಕ್ಕಳು ಶಿಕ್ಷಕರನ್ನು ಆದರ್ಶ ವ್ಯಕ್ತಿಯಾಗಿ ನೋಡುತ್ತಾರೆ.  ಆತನ ನಡವಳಿಕೆಯು ಮಕ್ಕಳ ಮೇಲೆ ಒಂದು ನಿಚ್ಚಳ ಪರಿಣಾಮವನ್ನು ಬೀರುತ್ತದೆ.  ಶಿಕ್ಷಕನು ಅತ್ಯಂತ ನೈತಿಕ ಮೌಲ್ಯಗಳನ್ನು ಪಾಲಿಸಬೇಕು.  ಆತನು ಹಾಗೆ ಪಾಲಿಸುತ್ತಿರುವುದು ಮಕ್ಕಳ ಗಮನಕ್ಕೆ ಬರಬೇಕು;
  • ವಿಶ್ವಾಸಾರ್ಹತೆ:  ಮಕ್ಕಳಿಗೆ ಅವರ ಶಿಕ್ಷಕರ ಬಗ್ಗೆ ನಂಬಿಕೆ ಬೆಳೆಯಬೇಕು.  ಇದು ಶಿಕ್ಷಕನಾದವನು ವಿಶ್ವಾಸಾರ್ಹನೆಂದು ಮನಗಂಡಾಗ ಮಾತ್ರ ಸಾಧ್ಯ;
  • ವ್ಯಕ್ತಿವ್ಯಕ್ತಿ ನಡುವಣ ಸಂಬಂಧದಲ್ಲಿ ಆತನು ಪರಿಣಾಮಕಾರಿಯಾಗಿರಬೇಕು:  ಮಕ್ಕಳು ಉಪಾಧ್ಯಾಯನನ್ನು ಶಾಶ್ವತವಾಗಿ ಮತ್ತು ಫಲಪ್ರದವಾಗಿ ಅಂಗೀಕರಿಸುವುದು ಸಾಧ್ಯವಾಗುವಂತೆ ಉಪಾಧ್ಯಾಯನು ವ್ಯಕ್ತಿ ವ್ಯಕ್ತಿ ನಡುವಣ ಸಂಬಂಧವನ್ನು ಹೇಗೆ ಬೆಳಸಬೇಕೆಂದು ತಿಳಿದಿರಬೇಕು;
  • ಯೋಜಿತ ಬೋಧನೆ:  ತನ್ನ ಬೋಧನೆಯ ಬಗ್ಗೆ ಉಪಾಧ್ಯಾಯನಿಗೆ ಸದಾ ಒಂದು ಯೋಜನೆಯನ್ನು  ಇಟ್ಟುಕೊಂಡು ಬರಬೇಕು.  ಅದರಲ್ಲಿ ಒಂದು ಬಗೆಯ ನವ್ಯತೆ ಇರಬೇಕು.  ತನ್ನ ಪಾಠ ಬೋಧನೆಯ ಗುರಿ, ಧ್ಯೇಯ, ಫಲಿತಾಂಶಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿರಬೇಕು;
  • ಉತ್ತಮ ಮೌಲ್ಯ ಮಾಪಕ:  ಶಿಕ್ಷಕನಾದವನು ಅನೇಕ ಬಗೆಯ ಮೌಲ್ಯಮಾಪಕ ತಂತ್ರಗಳನ್ನು ಬಳಸಲು ಪಳಗಿರಬೇಕು.  ಅದನ್ನು ಆಗಾಗ್ಗೆ ಬಳಸಬೇಕು.  ಅವನು/ಅವಳು ಮೌಲ್ಯಮಾಪನವನ್ನು ಮಕ್ಕಳಲ್ಲಿ ಕಲಿಕೆಯ ನ್ಯೂನತೆ ಗುರುತಿಸಲು ಮತ್ತು ಅದಕ್ಕೆ ತಕ್ಕ ಪರಿಹಾರೋಪಾಯಗಳನ್ನು ಒದಗಿಸಲು ಬಳಸಿಕೊಳ್ಳಬೇಕು;
  • ಮನೋವಿಜ್ಞಾನ ತಿಳಿದಿರಬೇಕು:  ಶಿಕ್ಷಕನು ಮನೋವಿಜ್ಞಾನದ ಸಿದ್ಧಾಂತಗಳು ಕಲಿಕೆಯ ಸಿದ್ಧಾಂತಗಳು, ವ್ಯಕ್ತಿ ಪ್ರವೃತ್ತಿಗಳು, ಕಲಿಕೆ ಶೈಲಿಗಳು ಮುಂತಾದವುಗಳ ಬಗ್ಗೆ ಅರಿತಿರಬೇಕು;
  • ಶಿಕ್ಷಕನು ಸದಾ ವಿದ್ಯಾರ್ಥಿಯೇ:  ಒಬ್ಬ ಉತ್ತಮ ಶಿಕ್ಷಕನು ಸದಾ ಉತ್ತಮ ವಿದ್ಯಾರ್ಥಿಯಾಗಿರುತ್ತಾನೆ.  ಈತನು ಬೋಧನಾ ಸಮಸ್ಯೆಗಳು, ಕಲಿಕೆ ಸಾಮಗ್ರಿ ಮತ್ತು ಮೌಲ್ಯ ಮಾಪನ ತಂತ್ರಗಳು ಮುಂತಾದವುಗಳ ಬಗ್ಗೆ ಅಂದಂದಿನವರೆಗಿನ ಬೆಳವಣಿಗೆಯನ್ನು ಓದಿ ಅರಿತುಕೊಂಡಿರಬೇಕು;
  • ಮಾಹಿತಿ ತಂತ್ರಜ್ಞಾನದಲ್ಲಿ ನುರಿತಿರಬೇಕು:  ತಾಂತ್ರ್ರಿಕ ಮುನ್ನಡೆಯು ಕಲಿಕೆಯನ್ನು ಒಂದು ಸಂತೋಷದಾಯಕ ಅನುಭವವನ್ನಾಗಿಸುತ್ತದೆ.  ಉಪಾಧ್ಯಾಯನಾದವನು ಅಂತರ್ಜಾಲದಲ್ಲಿ ದೊರಕುವ ಅನೇಕ ಕಲಿಕಾ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ತಿಳಿದಿರಬೇಕು.  ಆತ/ಆಕೆಯು ತನ್ನದೇ ಆದ ಬಹುಮಾಧ್ಯಮ ವಿಷಯ ನಿರೂಪಣೆಗಳನ್ನು ತಯಾರಿಸಲು ಸಿದ್ಧನಿರಬೇಕು;
  • ಸ್ಶಳೀಯವಾಗಿ ಯೋಚಿಸಿ ಜಾಗತಿಕವಾಗಿ ಕ್ರಿಯಾಶೀಲರಾಗಿ ಎಂಬ ನಿಲುವು:  ಶಿಕ್ಷಕರಾದವರು ಶಿಕ್ಷಣದ ಬಗ್ಗೆ ಇರುವ ಜಾಗತಿಕ ದೃಷ್ಟಿಕೋನವನ್ನು ಅರಿತಿರಬೇಕು;  ಆತ/ಆಕೆಯು ಜಾಗತಿಕ ದೃಷ್ಟಿಕೋನವನ್ನು  ಇಟ್ಟುಕೊಂಡು ಸ್ಥಳೀಯ ಸನ್ನಿವೇಶಗಳಲ್ಲಿ ಕ್ರಿಯಾಶೀಲರಾಗಿರಬೇಕು;ಆದ್ದರಿಂದ ಶಿಕ್ಷಕರಾಗಿ ವೃತ್ತಿ ನಡೆಸುತ್ತಿರುವವರು ಶಿಕ್ಷಕರಾಗ ಬೇಕೆಂಬ ಅಭೀಪ್ಸೆ ಹೊಂದಿರುವವರು ಉತ್ತಮ ಶಿಕ್ಷಕ ಸಾಮರ್ಥ್ಯ ಪಡೆಯಬೇಕಾದರೆ ಪರಿಣಾಮಕಾರಿ ಬೋಧನೆಗೆ ಅತ್ಯಾವಶ್ಯಕ ಅಂಶಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸಬೇಕು.  ಶಿಕ್ಷಕರ ತರಬೇತಿ ಸಂಸ್ಥೆಗಳು ಮತ್ತು ಶಾಲಾ ಸಂಸ್ಥೆಗಳು ಶಿಕ್ಷಕರು ಅಂದಂದಿನ ಅಗತ್ಯಕ್ಕೆ ತಕ್ಕಂತೆ ಬೆಳೆಯಲು, ನೈಪುಣ್ಯ ಬೆಳಸಿಕೊಳ್ಳಲು ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಬೇಕಾದ ಸಾಧನೋಪಾಯಗಳನ್ನು ಒದಗಿಸಿಕೊಡಬೇಕು.

ಎಸ್‌ಎಸ್‌ಎಲ್‌ಸಿ ನಂತರದ ಡಿಪ್ಲೊಮಾ ಕೋರ್ಸ್‌ಗಳು
ಬೀದರಿನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪಶುಸಂಗೋಪನೆಯಲ್ಲಿ 2 ವರ್ಷ ಅವಧಿಯ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕಾಗಿ ಎಸ್‌ಎಸ್‌ಎಲ್‌ಸಿ. ತೇರ್ಗಡೆಯಾದ ಹಾಗೂ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಸೀಮಿತವಾಗಿ ನಿಗದಿತ ನಮೂನೆಗಳಲ್ಲಿ ಪ್ರತಿವರ್ಷ ಅರ್ಜಿಗಳನ್ನು ಆಹ್ವಾನಿಸುತ್ತದೆ.

ಪಶುಸಂಗೋಪನಾ ಡಿಪ್ಲೊಮಾದ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ನಡೆಸಲಾಗುವುದು. ಪ್ರತಿ ಪಾಲಿಟೆಕ್ನಿಕ್‌ಗೆ ಪ್ರತ್ಯೇಕವಾದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸದರಿ ಅರ್ಜಿಯ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಪ್ರವೇಶ ಪಡೆಯುವ ಎಲ್ಲಾ ಅಭ್ಯರ್ಥಿಗಳಿಗೆ ರೂ.1000/-ಗಳ ಮಾಸಿಕ ಶಿಷ್ಯ ವೇತನವನ್ನು ವ್ಯಾಸಂಗದ ಅವಧಿಯಲ್ಲಿ ನಿಯಮಾನುಸಾರ ನೀಡಲಾಗುವುದು.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೊನೆಹಳ್ಳಿಯಲ್ಲಿರುವ ಪಶುಸಂಗೋಪನಾ ಪಾಲಿಟೆಕ್ನಿಕ್, ಜಾನುವಾರು ಸಂಶೋಧನಾ ಹಾಗೂ ಮಾಹಿತಿ ಕೇಂದ್ರ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗಂಜಿಗಟ್ಟಿಯಲ್ಲಿ ಸ್ಥಾಪನೆಗೊಳ್ಳಿರುವ ಪಶುಸಂಗೋಪನಾ ಪಾಲಿಟೆಕ್ನಿಕ್‌ಗಳಲ್ಲಿ ಈ ಡಿಪ್ಲೋಮಾ ಕೋರ್ಸ್ ನಡೆಸಲಾಗುವುದು. ಗಂಜಿಗಟ್ಟಿಯ ಪಾಲಿಟೆಕ್ನಿಕ್ ಆರಂಭವಾಗುವವರೆಗೆ ಈ ವರ್ಷದ ತರಗತಿಗಳನ್ನು ಹಾವೇರಿಯ ಪಶುವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ನಡೆಸಲಾಗುತ್ತಿದೆ.

ಹೆಚ್ಚಿನ ವಿವರ ಹಾಗೂ ಅರ್ಜಿ ನಮೂನೆಗಳಿಗೆ ಭೇಟಿ ನೀಡಿ:
http://kvafsu.kar.nic.in
http://kvafsu.kar.nic.in/content/downloads/Diploma_noti_appl_pros_2012.pdf


ತೋಟಗಾರಿಕೆ ಮೇಲ್ವಿಚಾರಕರ ಡಿಪ್ಲೊಮಾ ತರಬೇತಿ
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರಾಜ್ಯ ಸರಕಾರದ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಪ್ರತಿವರ್ಷ ತೋಟಗಾರಿಕೆಯಲ್ಲಿ ಮೇಲ್ವಿಚಾರಕ ತರಬೇತಿಯ ಒಂದು ವರ್ಷದ ಡಿಪ್ಲೊಮಾ ಹಾಗೂ ಮೂರು ಮತ್ತು ಆರು ತಿಂಗಳ ಅವಧಿಯ ಉದ್ಯಮಶೀಲತ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸುತ್ತದೆ. 
ಬೆಂಗಳೂರು, ಧಾರವಾಡ, ಬಾಗಲಕೋಟೆ ಮತ್ತು ಬಿಜಾಪುರಗಳಲ್ಲಿರುವ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ಈ ತರಬೇತಿ ನೀಡಲಾಗುತ್ತಿದ್ದು ತರಬೇತಿಯ ಅವಧಿಯಲ್ಲಿ 800 ರಿಂದ 1000 ರೂಪಾಯಿಗಳ ಸ್ಟೈಫಂಡ್ ನೀಡಲಾಗುವುದು. 
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: www.uhsbagalkot.edu.in


ಕೃಷಿ ವಿಜ್ಞಾನದಲ್ಲಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು
ಬೆಂಗಳೂರು, ರಾಯಚೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿಯಲ್ಲಿ ಎರಡು ವರ್ಷದ ಡಿಪ್ಲೊಮಾ ಮತ್ತು ಬೀಜೋತ್ಪಾದನೆ, ಸಾವಯವ ಕಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಸಸ್ಯೋತ್ಪಾದನೆ ಹಾಗೂ ಸಸ್ಯಮಡಿ ನಿರ್ವಹಣೆ, ಹೈ-ಟೆಕ್ ಕಷಿ, ರೈತ ಮಹಿಳೆಯರಿಗಾಗಿ ಉದ್ದಿಮೆಗಳು, ಕಬ್ಬು ಹಾಗು ಸಕ್ಕರೆ ಗಡ್ಡೆ ಉತ್ಪಾದನೆ ತಾಂತ್ರಿಕತೆ ವಿಷಯಗಳಲ್ಲಿ ಒಂದು ಸೆಮಿಸ್ಟರ್‌ನ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು , ಎಸ್‌ಎಸ್‌ಎಲ್‌ಸಿ ಪಾಸಾದ ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣವನ್ನು ಸಂಪರ್ಕಿಸಬಹುದು: www.uasd.edu


ಪ್ಯಾರಾಮೆಡಿಕಲ್ ಕೋರ್ಸ್‌ಗಳು
ವೈದ್ಯಕೀಯ ಮತ್ತು ಆರೋಗ್ಯ ಸಂಬಂಧಿ ಕೋರ್ಸ್‌ಗಳು ದೀರ್ಘಾವಧಿಯ ಕೋರ್ಸ್‌ಗಳಾದರೂ ತಪಾಸಣೆ, ರೋಗನಿಧಾನ, ಸಂವಹನ, ಕೌನ್ಸೆಲಿಂಗ್, ನರ್ಸಿಂಗ್, ಫಾರ್ಮಸಿ, ರೇಡಿಯಾಲಜಿ ಕ್ಷೇತ್ರಗಳಲ್ಲಿ ಸರ್ಟಿಫಿಕೇಟ್/ಡಿಪ್ಲೊಮಾ ಕೋರ್ಸ್‌ಗಳಿವೆ.
ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಎಕ್ಸ್-ರೇ ಟೆಕ್ನಾಲಜಿ, ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್, ಡಿಪ್ಲೊಮಾ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಡೆಂಟಲ್ ಮೆಕ್ಯಾನಿಕ್ಸ್, ಡಿಪ್ಲೊಮಾ ಇನ್ ಡೆಂಟಲ್ ಹೈಜಿನ್ ಕೋರ್ಸ್‌ಗಳನ್ನು ಪ್ಯಾರಾ ಮೆಡಿಕಲ್ ಬೋರ್ಡ್ ಅನುಮೋದಿಸಿದ್ದು , ರಾಜ್ಯದ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಇವುಗಳನ್ನು ನಡೆಸುತ್ತಿವೆ. ಪಿಯುಸಿ. ಪಾಸಾದ ವಿದ್ಯಾರ್ಥಿಗಳನ್ನು ಡಿಪ್ಲೊಮಾ ತರಗತಿಗಳಿಗೆ ಸೇರಿಸಿಕೊಂಡರೆ ಅವೇ ವಿಷಯಗಳಲ್ಲಿ ನೀಡಲಾಗುವ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಹಾಜರಾಗುವವರಿಗೆ ಎಂಟು ಅಥವಾ ಹತ್ತನೇ ತರಗತಿ ಓದಿರಬೇಕಾಗುತ್ತದೆ. ಕೋರ್ಸ್‌ಗಳ ಅವಧಿ 2 ರಿಂದ 6 ತಿಂಗಳು. 
ವಿವರಗಳಿಗಾಗಿ ಭೇಟಿನೀಡಿ : www.pmbkarnataka.org


ಡಿಪ್ಲೊಮೊ ಇನ್ ನರ್ಸಿಂಗ್ ಅಂಡ್ ಮಿಡ್‌ವೈಫರಿ ಕೋರ್ಸ್
ಡಿಪ್ಲೊಮೊ ಇನ್ ನರ್ಸಿಂಗ್ ಅಂಡ್ ಮಿಡ್‌ವೈಫರಿ ಕೋರ್ಸ್‌ಗೆ ಪ್ರತಿ ವರ್ಷವೂ ಸರಕಾರಿ ನರ್ಸಿಂಗ್ ಶಾಲೆ ಮತ್ತು ಖಾಸಗಿ ನರ್ಸಿಂಗ್ ಶಾಲೆಗಳಲ್ಲಿನ ಸರಕಾರಿ ಕೋಟಾದ ಸೀಟುಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. 
ಹೆಚ್ಚಿನ ವಿವರಗಳಿಗಾಗಿ ನೋಡಿ: www.ksdneb.org www.ksdneb.net


ಅಖಿಲ ಭಾರತ ವಾಕ್-ಶ್ರವಣ ಸಂಶೋಧನಾ ಸಂಸ್ಥೆಯಲ್ಲಿ ತರಬೇತಿ
ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್-ಶ್ರವಣ ಸಂಶೋಧನಾ ಸಂಸ್ಥೆಯಲ್ಲಿ ಶ್ರವಣದೋಷ, ಮಾತಿನ ದೋಷ ಇರುವ ಮಕ್ಕಳಿಗೆ ಚಿಕಿತ್ಸೆ ಮತ್ತು ತರಬೇತಿ ನೀಡಿ ಸಾಮಾನ್ಯರಂತೆ ಬದುಕು ನಡೆಸಲು ಅವಕಾಶ ನೀಡುವ ವಿಶಿಷ್ಟ ಅಲ್ಪಾವಧಿಯ ಕೋರ್ಸ್‌ಗಳನ್ನು ಕಾಲಕಾಲಕ್ಕೆ ಆಯೋಜಿಸಲಾಗುತ್ತದೆ. ಹತ್ತು ಹದಿನೈದು ದಿನಗಳಿಂದ ಹಿಡಿದು ಆರು ತಿಂಗಳವರೆಗೆ ನಡೆಸಲಾಗುವ ಈ ಕೋರ್ಸ್‌ಗಳಿಗೆ ಅಗಾಧವಾದ ಬೇಡಿಕೆ ಇದೆ. ಇವುಗಳ ಜತೆಗೆ ಹದಿನಾಲ್ಕು ವಾರಗಳ ಸರ್ಟಿಫಿಕೇಟ್ ಕೋರ್ಸ್‌ಗಳು, ಆರು ತಿಂಗಳ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿಗೆ ಅವಕಾಶವಿದೆ. 

ಆಡಿಯಾಲಜಿ ಡಿಪಾರ್ಟ್‌ಮೆಂಟ್‌ನಲ್ಲಿ 20 ಕೋರ್ಸ್‌ಗಳು, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 4 ಕೋರ್ಸ್‌ಗಳು, ಸ್ಪೀಚ್ ಪೆಥಾಲಜಿ ವಿಭಾಗದಲ್ಲಿ 26, ಸ್ಪೀಚ್ ಲಾಂಗ್ವೇಜ್ ಸೈನ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ 10 ಕೋರ್ಸ್‌ಗಳು ನಿಯಮಿತವಾಗಿ ವರ್ಷವಿಡೀ ಆಯೋಜಿತವಾಗುತ್ತಿದ್ದು ಜನಸಾಮಾನ್ಯರು, ಶಿಕ್ಷಕರು, ತರಬೇತುದಾರರು, ಸ್ವಯಂ ಸೇವಕರು, ಯಾರು ಬೇಕಾದರೂ ಕಲಿತುಕೊಳ್ಳಬಹುದು.
ಹೆಚ್ಚಿನ ವಿವರಗಳಿಗಾಗಿ ನೋಡಿ: www.aiishmysore.com

ಕೆಲ ದುಂಡಿರಾಜ್ ಹನಿಗವನಗಳು
ಬ್ಯಾಂಕಿನ ಕ್ಯಾಶ್ ಕೌಂಟರಿನ ಹಿಂದಿನ ಹುಡುಗಿ ಕೊಂಚವೂ ನಗದು
ಆದ್ದರಿಂದ ಕ್ಯಾಶ್ ಕೌಂಟರಿನ ಮುಂದಿದೆ ಬೋರ್ಡು “ನಗದು”
ಕಣ್ಣಿಲ್ಲ, ಕಾಲಿಲ್ಲ ಎಂದು ಸತ್ಯ ಹೇಳಿ ಬೇಡುವುದು ಭಿಕ್ಷಾಟನೆ
ಸಾವಿರ ಸುಳ್ಳು ಹೇಳಿ ಮತ ಯಾಚಿಸುವುದು ಚುನಾವಣೆ..!!!
ಅತಿಥಿಗಳಿಗೆ ಮಾವಿನ ರಸ ಕೊಟ್ಟರೆ ಆಹಾ!! ಮ್ಯಾಂಗೊ ಜ್ಯೂಸ್
ಕಿತ್ತಳೆ ರಸವಾದರೆ ವ್ಹಾ ವ್ಹಾ!! ಆರೆಂಜ್ ಜ್ಯೂಸ್
ಬರೀ ನೀರು ಕೊಟ್ರೆ… ಕಂಜ್ಯೂಸ್…..!!!!
ಬಿಸಿ ರಕ್ತದ ಉತ್ಸಾಹದಲ್ಲಿ
ಲವ್ ಲವ್ ಲವ್,
ವಯಸ್ಸಾದಂತೆ ಕೋಪ ಹೆಚ್ಚಾಗಿ
ಬೌ ಬೌ ಬೌ….!!!
ಮರುಳಾಗಿದ್ದೆ ಅಂದು ಇವಳ ನಾಸಿಕ ಕಂಡು
ಹಾಡಿ ಹೊಗಳಿದ್ದೆ ಆಹಾ !!! ಸಂಪಿಗೆಗಿಂತ ಸುಂದರ
ಅನ್ನಿಸುತ್ತಿದೆ ಇಂದು ಎಂಥ ದರಿದ್ರ ಮೂಗು
ಕೇಳುತ್ತಿದ್ದಾಳೆ ಕುಡಿದು ಬಂದಿರಾ ???
ಹೇಗಿದೆ ನೋಡಿ
ಭಾರತೀಯರ ಸತ್ಯಪ್ರಿಯತೆ
ಕಳ್ಳ ನೊಟಿನಲ್ಲೂ ಅಚ್ಚಾಗಿರತ್ತೆ
ಸತ್ಯಮೇವ ಜಯತೆ !!!
ಮದುವೆಯ ನಂತರ
ಹೆಂಗಸರು ಅಗುತ್ತಾರೆ ದಪ್ಪ
ಗಂಡಸರೂ ಆಗುವರು
ಬರೆ “ಹೌದಪ್ಪ”.
ಪ್ರಿಯ ನಿನ್ನ ಮುಖವೇಕೆ ಹೀಗೆ
ಕಪ್ಪಿಟ್ಟಿದೆ
ಏನು ಮಾಡಲಿ ಪ್ರಿಯೆ ಎದುರಿಗೆ ನೀ ಮಾಡಿದ
ಉಪ್ಪಿಟ್ಟಿದೆ.
ಅಪ್ಪಟ್ಟ ಗಾಂಧಿವಾದಿ ಎಂದರೆ ನಾನೆ
ಒಂದು ಕೆನ್ನೆಗೆ ಕೊಟ್ಟರೆ ಕೂಡಲೆ ಒಡ್ಡುತ್ತೇನೆ ಇನ್ನೊಂದು ಕೆನ್ನೆ
ಬೇಕಿದ್ದರೆ ಕೇಳಿ
ನನ್ನ ಪ್ರೆಯಸಿ ಬಳಿ
ಹೇಗೆ ತಡೆಯಲಿ ಮೈ ನಡುಗುವ ಚಳಿ ?
ಇಲ್ಲ ನನ್ನ ಬಳಿ ಹೊದೆಯಲು ಕಂಬಳಿ,
ಆದ್ದರಿಂದ ಪ್ರಿಯೆ ನೀನೆ Come ಬಳಿ…..!!
ದೃಢ ಚಿತ್ತದ ದಡ
ಉತ್ತೇಜನ ಕೊಡದಿದ್ದರೂ ಕೂಡ
ಮತ್ತೆ ಮತ್ತೆ ಯತ್ನಿಸುತ್ತೆ ಕಡಲು
ಮುತ್ತು ಕೊಡಲು
ಕುಚೇಲ ಕೃಷ್ಣನಿಗೆ
ಕೊಟ್ಟ ಅವಲಕ್ಕಿ |
ನಿಜವಾಗಿಯೂ
ಅವ ಲಕ್ಕಿ
ನಡೆಯಲಿಲ್ಲ
ಓಡಲಿಲ್ಲ
ಕಾರಲ್ಲಿ ಬಂದರೂ
ಇಷ್ಟೊಂದು ಸುಸ್ತೆ ?
ಹೌದು ಮಾರಾಯ್ರೆ
ಹಾಗಿದೆ ನಮ್ಮ ರಸ್ತೆ.
ಭರತ ನಾಟ್ಯ
ಡಿಸ್ಕೋ ನೃತ್ಯ
ಕಥಕ್ಕಳಿ
ಕಲಿಕಲಿ
ಅನ್ನುತ್ತದೆ
ರಸ್ತೆಕುಳಿ.

Wednesday, 3 April 2013

World's Top Most Worthless Money List


World's Top Most Worthless Money List



Zimbabwe 10 Million Dollars


As Americans worry about the rate of inflation exceeding 4 percent, we should consider Zimbabwe, where the inflation rate broke the shocking 100,000 percent mark and the country released a 10 million-dollar note (now valued below $4 on the black market). But Zimbabwe's currency is hardly the only one inflated beyond reason. —George Quraishi


Vietnam 500,000 Dong


500,000-dong note. U.S. value: $31.37
An early-1980s U.S. embargo hobbled exports, leading to price controls and the printing of excess currency.


Iran 50,000 Rial


50,000-rial note. U.S. value: $5.35
Since the 1979 revolution, Iran's inflation rate has hovered around 15 percent, thanks in part to ever-rising oil prices.


São Tomé 50,000 Dobra


50,000-dobra note. U.S. value: $3.47.
This African island nation's economy is tied to the volatile price of its chief export, cocoa, and is measured against its trading partners' robust euro.


Indonesia 100,000 Rupiah


100,000-rupiah note. U.S. value: $11.05
During the 1997 Asian financial crisis, the rupiah lost 80 percent of its value within months, sparking riots in Jakarta (and soon ending President Suharto's 32-year rule).


Guinea 10,000 Franc


10,000-franc note. U.S. value: $2.33
In 2002, the mineral-rich African country refused to implement reforms mandated by the International Monetary Fund; foreign cash dried up, and the central bank printed too much money.