ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಇಲ್ಲಿಗೆ ವೆಬ್ ಮಾರ್ಗ
* ರಾಘವೇಂದ್ರ ಗುಡಿ
'ಗೊತ್ತಿಲ್ಲ ಸರ್, ಎಸ್‌ಎಸ್‌ಎಲ್‌ಸಿಯಲ್ಲಿ ನಂಗೆ ಈ ಬಾರಿ ಉತ್ತಮ ಅಂಕ ಬಂದಿದೆ. ಸೈನ್ಸ್ ಮಾಡಿದ್ರೆ ಉತ್ತಮ ಅಂತ ನನ್ನ ಟೀಚರ್ ಹೇಳಿದ್ದಾರೆ. ಹೀಗಾಗಿ ನಾನು ಅದನ್ನೇ ಮಾಡಬೇಕು ಅಂತಾ ಇದ್ದೀನಿ'
'ಆರ್ಟ್ಸ್ ಮಾಡಿ ನಂತರ ಟಿಸಿಎಚ್ ಮಾಡಿದ್ರೆ ಬೇಗ ಸಂಬಳ ಸಿಗುತ್ತೆ ಅಂತಾ ನಮ್ಮ ಫ್ರೆಂಡ್ಸ್ ಹೇಳ್ತಾ ಇದ್ದಾರೆ. ನಾನೂ ಅದನ್ನೇ ಯೋಚನೆ ಮಾಡ್ತಾ ಇದ್ದೀನಿ'
'ನಂಗೊತ್ತಿಲ್ಲ ಸರ್, ಯಾವುದರಲ್ಲಿ ಸೀಟ್ ಸಿಗುತ್ತೋ ಆ ಕೋರ್ಸ್‌ನ್ನೇ ಆಯ್ಕೆ ಮಾಡಿ ಕೊಳ್ತೇನೆ'
ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಮಾಡುತ್ತೀರಿ? ಎಂಬ ಪ್ರಶ್ನೆಗೆ ಬೆಂಗಳೂರಿನ ಶಶಿಕಾಂತ್, ಧಾರವಾಡದ ಬಸವರಾಜ್ ಮತ್ತು ಹಾವೇರಿಯ ಸಂಜನಾ ನೀಡಿದ ಉತ್ತರಗಳಿವು. ಇವು ಕೇವಲ ಈ ಮೂವರು ನೀಡಿದ ಉತ್ತರಗಳು ಮಾತ್ರವಲ್ಲ, ಇಂದು ಎಸ್‌ಎಸ್‌ಎಲ್‌ಸಿ ಮುಗಿಸಿ, ಹೆಚ್ಚಿನ ವಿದ್ಯಾಭ್ಯಾಸ ಮಾಡುವ ನಿರೀಕ್ಷೆ ಇಟ್ಟುಕೊಂಡಿರುವ ಬಹುತೇಕ ವಿದ್ಯಾರ್ಥಿಗಳು ನೀಡುವ ಉತ್ತರಗಳಿವು. ತಂದೆ ಹೇಳಿದರಂತಲೋ, ತಾಯಿ ಮಾತಿಗೆ ಕಟ್ಟುಬಿದ್ದೋ, ಸ್ನೇಹಿತರು, ಶಾಲಾ ಉಪಾಧ್ಯಾಯರು, ಮತ್ತೊಬ್ಬರು-ಮಗದೊಬ್ಬರು ಹೇಳುವ ಮಾತುಗಳನ್ನೇ ಶಿರಸಾ ಪಾಲಿಸಿ ಬಹುತೇಕ ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ವಿದ್ಯಾಭ್ಯಾಸದ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಅವರಲ್ಲಿ ಬಹುತೇಕರು ತಮ್ಮ ಕೆರಿಯರ್‌ನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಅನೇಕ ವಿದ್ಯಾರ್ಥಿಗಳು ಕೋರ್ಸ್ ಸೇರಿದ ನಂತರ ಅದು ತಮಗೆ ಹೊಂದದೆಯೋ, ಆ ಕೋರ್ಸ್‌ನಲ್ಲಿ ಆಸಕ್ತಿಮೂಡದೆಯೋ ಅದನ್ನು ಅರ್ಧಕ್ಕೇ ಬಿಡುವ ವಿದ್ಯಾರ್ಥಿಗಳ ಸಂಖ್ಯೆಗೆ ಕೊರತೆಯಿಲ್ಲ.
ನಾವು ನೋಡುವಂತೆ ಅನೇಕ ವಿದ್ಯಾರ್ಥಿಗಳು ಪ್ರಾರಂಭದಲ್ಲಿ ಬಹಳ ಆಸಕ್ತಿಕರವಾಗಿ ತರಗತಿಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಬರಬರುತ್ತಾ ಪಾಠಗಳಲ್ಲಿ ಆಸಕ್ತಿಯನ್ನೇ ಕಳೆದು ಕೊಂಡು ಬಿಡುತ್ತಾರೆ, ಎನ್ನುತ್ತಾರೆ ಸೈನ್ಸ್ ಕಾಲೇಜೊಂದರಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಪ್ರೊ. ವರೂರ್.
ಮಾರ್ಗದರ್ಶನದ ಕೊರತೆ ಸರಿಯಾದ ಮಾರ್ಗದರ್ಶನದ ಕೊರತೆಯೇ ಈ ರೀತಿ ಅರ್ಧಕ್ಕೆ ಕೋರ್ಸ್ ಬಿಡುವುದಕ್ಕೆ, ಕೋರ್ಸ್ ಪಾಸ್ ಮಾಡಿದರೂ ಅದರ ಅಪ್ಲಿಕೇಶನ್ ಅರಿಯದಿರುವುದಕ್ಕೆ ಅಥವಾ ಕೆಲಸದಲ್ಲಿ ಪ್ರಗತಿ ಸಾಧಿಸದಿರುವುದಕ್ಕೆ ಕಾರಣವಾಗಿದೆ. ಮರವೇರುವುದು ಮಂಗಕ್ಕೆ ಸುಲಭವಾದರೆ, ಮರ ಉರುಳಿಸುವುದು ಆನೆಗೆ ಸಹಜ. ಅದೇ ರೀತಿ ಮಕ್ಕಳು ಹೊಸ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ಸಾಮಾರ್ಥ್ಯ, ಆಸಕ್ತಿ ಮತ್ತು ಪ್ರತಿಭೆಗೆ ತಕ್ಕ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾರ್ಗದರ್ಶನ ನೀಡುವುದು ಮುಖ್ಯ. ಮನೆ ಮನೆಗೆ ಅಂತರ್ಜಾಲ ಅಡಿಯಿಟ್ಟಿರುವಾಗ, ಸಾಫ್ಟ್‌ವೇರ್ ಮತ್ತು ವೆಬ್‌ಸೈಟ್ ತಂತ್ರಜ್ಞಾನವನ್ನು ಬಳಸಿಕೊಂಡು ಮಾರ್ಗದರ್ಶನ ಮಾಡುವಂಥ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಲಿದ್ದು, ಮಂಗಳೂರಿನ ಮೂವರು ಯುವ ಟೆಕ್ಕಿಗಳು ವಿಶ್ವೇಶ್ವರಯ್ಯಾ ತಾಂತ್ರಿಕ ಮಹಾವಿದ್ಯಾಲಯದ ವೈಸ್ ಚಾನ್ಸಲರ್ ಪ್ರೊ. ಎಚ್. ಮಹೇಶಪ್ಪನವರ ಮಾರ್ಗದರ್ಶನದಲ್ಲಿ ಎಸ್‌ಎಲ್‌ಎಲ್‌ಸಿ ಮತ್ತು ಪಿಯೂಸಿ ವಿದ್ಯಾರ್ಥಿಗಳ ಕೋರ್ಸುಗಳ ಆಯ್ಕೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಬ್ರ್ಯಾಂಚ್ ಸೆಲೆಕ್ಟರ್ ಎಂಬ ನವೀನ ಉಚಿತ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.
ವೆಬ್ ಮಾರ್ಗ ಇತ್ತೀಚೆಗೆ ಅನಾವರಣಗೊಂಡ ಈ ಕೆರಿಯರ್ ಗೈಡ್ ವೆಬ್ ಸೈಟ್‌ನ್ನು ಮಂಗಳೂರಿನ ಅಸಿಸ್ಟಂಟ್ ಪ್ರೊಫೆಸರ್ ಹಾಗೂ ವಿಟಿಯುನ ವಿಶೇಷ ಅಧಿಕಾರಿ ಅನಂತ ಪ್ರಭು, ರಾಘವ್ ಶೆಟ್ಟಿ ಮತ್ತು ವಸೀಮ್ ಅಭಿವೃದ್ಧಿ ಪಡಿಸಿದ್ದಾರೆ. ಇಂದು ಭಾರತದಲ್ಲಿ ಶಿಕ್ಷಣ ಧಾರಾಳವಾಗಿ ಸಿಗುತ್ತಿದ್ದರೂ, ಅನೇಕ ಗ್ರಾಜ್ಯುಯೇಟೆಡ್ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಅಂದು ಕೊಂಡಷ್ಟರ ಮಟ್ಟಿಗೆ ಇರುವುದಿಲ್ಲ. ಬೇಗ ಹೆಚ್ಚು ಹಣ ಗಳಿಸಬೇಕೆಂತಲೋ ಅಥವಾ ಇನ್ನಾವುದಾದರೂ ಕಟ್ಟುಪಾಡಿಗೆ ಒಳಗಾಗಿಯೋ ಅವರು ಕೋರ್ಸ್‌ಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಇದರಿಂದಾಗಿ ಆಳ ಜ್ಞಾನವನ್ನು ಪಡೆಯಲಿಕ್ಕಾಗದೇ, ಕೇವಲ ಪಾಸ್ ಆಗುವುದರ ಕಡೆಗೆ ಹೆಚ್ಚು ಒತ್ತು ನೀಡುತ್ತಾರೆ. ಇದರಿಂದಾಗಿಯೇ ಇಂದು ಅಂತಾರಾಷ್ಟ್ರೀ ಮಟ್ಟದಲ್ಲಿ ಭಾರತದಿಂದ ಹೊಸ ಆವಿಷ್ಕಾರಗಳಾಗಲೀ, ಇಲ್ಲವೇ ಪೇಟೆಂಟ್ ಅಪ್ಲಿಕೇಶನ್‌ಗಳಾಗಲೀ ನೆಗ್ಲಿಜಿಬಲ್ ಮಟ್ಟದಲ್ಲಿವೆ. ಇವುಗಳನ್ನೆಲ್ಲ ಗಮನಿಸಿ ಮತ್ತು ನಮ್ಮ ವೈಯಕ್ತಿಕ ಅನುಭವವನ್ನಾಧರಿಸಿ, ಸಂಶೋಧನೆಯನ್ನು ಕೈಗೊಂಡು ಈ ವೆಬ್‌ಸೈಟನ್ನು ಅಭಿವೃದ್ಧಿ ಪಡಿಸಿದ್ದೇವೆ ಎನ್ನುತ್ತಾರೆ ಅನಂತ ಪ್ರಭು.
ಹಲವು ಪ್ರಶ್ನೆ ಮಾರ್ಗ ಒಂದು ಅನಂತ ಪ್ರಭು ಹೇಳುವಂತೆ ಈ ವೆಬ್‌ಸೈಟ್ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬ್ರ್ಯಾಂಚನ್ನು ಸೆಲೆಕ್ಟ್ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಉಚಿತವಾಗಿ ಈ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿ ಕೊಳ್ಳಬೇಕು, ನಂತರದಲ್ಲಿ ಅಲ್ಲಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಆ ಪ್ರಶ್ನೋತ್ತರದ ಆಧಾರದ ಮೇಲೆ, ವಿದ್ಯಾರ್ಥಿಗಳಿಗೆ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿ ಕೊಳ್ಳಬೇಕೆಂದು ವೆಬ್‌ಸೈಟ್ ಮಾರ್ಗದರ್ಶನ ನೀಡುತ್ತದೆ ಎನ್ನುತ್ತಾರೆ ಪ್ರಭು.
ಪ್ರಭು ಹೇಳುವಂತೆ, ಈ ವೆಬ್‌ಸೈಟಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 20 ಪ್ರಶ್ನೆಗಳನ್ನು ಮತ್ತು ಎಂಜಿನಿಯರಿಂಗ್ ಸೇರ ಬಯಸುವ ಪಿಯುಸಿ ವಿದ್ಯಾರ್ಥಿಗಳಿಗೆ 30 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆ ಪ್ರಶ್ನೆಗಳು ಸರಳವಾಗಿದ್ದು, ಅಕಾಡೆಮಿಕ್ ಹೊರತು ಪಡಿಸಿದ ಪ್ರಶ್ನೆಗಳಾಗಿರುತ್ತವೆ. ವಿವಿಧ ಮಾನದಂಡಗಳ ಆಧಾರದ ಮೇಲೆ ಪ್ರತಿಯೊಂದು ಪ್ರಶ್ನೆಗಳನ್ನು ಸಂಯೋಜಿಸಿದ್ದು, ಅದರ ಆಧಾರದ ಮೇಲೆ ವೆಬ್‌ಸೈಟ್ ಆಟೊಮೆಟಿಕ್ ಆಗಿ ಯಾವ ವಿದ್ಯಾರ್ಥಿ ಯಾವ ಕೋರ್ಸ್ ಸೇರಿದರೆ ಉತ್ತಮ ಎಂದು ತಿಳಿಸುತ್ತದೆ. ರಾಜ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಒಟ್ಟು 25 ಕೋರ್ಸ್‌ಗಳು ಲಭ್ಯವಿದ್ದು, ಅದರಲ್ಲಿ ಯಾವುದು ಉತ್ತಮ ಆಯ್ಕೆ ಎಂದು ವಿದ್ಯಾರ್ಥಿಗಳಿಗೆ ಸಾಫ್ಟವೇರ್ ತಿಳಿಸುತ್ತದೆ.

No comments:
Post a Comment