ಯಕ್ಷರು, ಕಿನ್ನರರು, ಕಿಂಪುರುಷರ ಗಂಧರ್ವ ಲೋಕದಲ್ಲಿ..
ಹಚ್ಚ ಹಸಿರು ಸೀರೆ ಉಟ್ಟು, ಕಡು ನೀಲಿ ಸೆರಗನ್ನು ಮಂದ ಮಾರುತಕ್ಕೆ ಹಾರಿ ಬಿಟ್ಟು ಮಲಗಿದೆ ಬೆಟ್ಟಗಳ ಸಾಲು. ಎಲ್ಲವೂ ಸ್ತಭœ; ಆದರೆ, ಒಂದೇ ಕ್ಷಣ. ಮರುಕ್ಷಣ ಎಲ್ಲಾ ದೃಶ್ಯವೂ ಬದಲು- ಬಾಲ್ಯದಲ್ಲಿ ನಾವು ನೋಡುತ್ತಿದ್ದ ವಾರ್ಷಿಕೋತ್ಸವ ನಾಟಕಗಳ ಪರದೆ ಸರಿದು ಇನ್ನೊಂದು ದೃಶ್ಯ ಬಂದ ಹಾಗೆ. ಒಮ್ಮೆಲೇ ಚಟುವಟಿಕೆಗಳು ಆರಂಭ. ಗಡಿಬಿಡಿಗೊಂಡ ಬೆಟ್ಟ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಹಸಿರು ಸೀರೆಯ ಮೇಲೆ ಬಿಳಿಯ ಚಾದರ ಹೊದೆದು ಮುಗಿಲಿನಿಂದ ಬಂತೋ ಎಂಬಂತಹ ಮಂಜಿನಧಾರೆಗೆ ಸಿದœವಾಗಿದೆ.
ಭಾನುಭೂಮಿಗೆ ನಿಸರ್ಗ ಕಟ್ಟಿದ ಸೇತುವೆ

ಈಗ ತಾನೇ ಮೌನದಿಂದಿದ್ದ ಬೆಟ್ಟದ ಬಣ್ಣ ಬದಲು. ಸುಮ್ಮನಿದ್ದ ಬೆಟ್ಟದ ಎಲ್ಲೆಡೆಯಿಂದ ಹೇಗೆ ಉದ್ಭವವಾಯಿತು ಈ ಆಸನವನ್ನೇ ಮರೆಮಾಚುವಂತಹ ಮಂಜಿನ ಪರದೆ ? ದಟ್ಟ ಮಂಜು, ತೆಳು ಮಂಜು, ದಪ್ಪ ಮಂಜು, ಭಾಷ್ಪ ಮಂಜು. ಏನಿದು ಬಣ್ಣಬಣ್ಣದ ವೈವಿಧ್ಯಮಯ ಜಾಲ ? ಏರುಏರುತ್ತಿರುವ ಮಂಜೇ ಈಗ ಕರಗುತ್ತಿದೆಯೇ ? ಅಡ್ಡಅಡ್ಡವಾಗಿ ಅದು ದಟ್ಟೆ$çಸುತ್ತಿದೆಯೇ ? ಒಮ್ಮಿಂದೊಮ್ಮೆಲೇ ಸುರಿಯ ತೊಡಗಿದೆ.. ಆವರಿಸತೊಡಗುತ್ತಿದೆ ಮಂಜು.. ಇಳೆಯೆಲ್ಲಾ ಮುಳುಗಿ ಹೋಗುವುದೇ ಎಂಬ ಭಯವನ್ನು ಉಂಟು ಮಾಡುತ್ತಿದೆ ಈಗ ಯಾವುದೂ ಕಾಣಿಸದು.
ಎಲ್ಲಿ ಮಾಯವಾಯಿತು ಬೆಟ್ಟ ? ಎಲ್ಲಿ ಕಾಣದಾಯಿತು ಶಿಖರ ? ಈ ಮಂಜಿಗೆ ಉಳಿದೀತೇ ಉಟ್ಟಚಾದರ ? ಇನ್ನು ಎಂದಿಗೂ ನಿಲ್ಲದೆ ಈ ಮಂಜು ? ಕಾಣಿಸದೆ ಇಳೆಯ ಉಡುಗೆಯ ಹಸಿರು ? ತಟ್ಟನೆ ಹೊಸತೊಂದು ದೃಶ್ಯಾವಳಿ. ಮಂಜಿನ ಛಾಯೆ ಎಲ್ಲಿಯೋ ಮಾಯೆ ! ಅಟ್ಟಿಸಿಕೊಂಡು ಬರುತ್ತಿರುವ ಕುಳಿರ್ಗಾಳಿಗೆ ಬೆದರಿ ಹತ್ತಿ ಮೂಟೆಯ ಹಾಗೆ ಸಾಗಿ ಬೆಟ್ಟದ ಆಚೆ ಬದಿಗೆ ತೇಲಿ ತೇಲಿ ಹೋಯಿತು. ಅಳಿದುಳಿದ ಒಂದಷ್ಟು ಮಂಜಿನ ಮಾಯೆಯ ಎಡೆಯಿಂದ ಕಣ್ಣು ಮಿಟುಕಿಸುತ್ತಾನಲ್ಲ ಸೂರ್ಯ ! ಎಲ್ಲಿಂದ ಬಂತು ಅವನಿಗೆ ಈ ತುಂಟ ನಗೆ ? ನಿನ್ನೆ ಮೊನ್ನೆ ಇದೇ ವೇಳೆ ಭೂಮಿಯನ್ನು ಸುಡುವಂತಹ ಕೆಂಡದ ಉಂಟೆಯಾಗಿದ್ದ ಈ ಸೂರ್ಯ ಈಗ ಬೆಳದಿಂಗಳಿನಂತಹ ಬಿಸಿಲನ್ನು ಪಸರಿಸುತ್ತಿರುವನಲ್ಲ ! ಏನು ಸೋಜಿಗ!?

ದಾಂವರಿ ಜಲಪಾತ
ಸೂರ್ಯನನ್ನು ಮುಚ್ಚುವ ಮುಚ್ಚಾಟದಲ್ಲಿ ನಿತರವಾಗಿವೆ ಎರಡು ಮೂಟೆ ಹತ್ತಿಯ ರಾಶಿ. ಈ ಓಟದ ಪ್ರತಿಫಲನವಿದೆ ಬೆಟ್ಟದ ಶ್ರೇಣಿಗಳಲ್ಲಿ. ಬೆಟ್ಟದ ನಡುವೆ ಒಂದು ಚಿನ್ನದ ಬಟ್ಟಲು ಓಡಿದ ಹಾಗೆ ತಿರುಗುತ್ತಾ ಓಡುತ್ತಿದೆ ಈ ಬಟ್ಟಲು. ಇವೆಲ್ಲ ಘಟನಾವಳಿಯ ನಡುವೆ ಹರ್ಷಚಿತ್ತದಿಂದ ಬೀಗುತ್ತಿರುವ ವೃಕ್ಷ ಸಮೂಹ. ಬಾನೆತ್ತರಕ್ಕೆ ಜಿಗಿಯುವ ಉತ್ಸಾಹದ ತರುಗಳು. ಬಾನಿನಿಂದ ಉದುರುವ ಮಂಜಿನ ಮುತ್ತಾಗಲೀ, ಮಳೆಯ ಹನಿಯಾಗಲೀ, ಬಾನಿನಿಂದ ಬಿರಿಯುವ ಸೂರ್ಯಕಿರಣವಾಗಲೀ ತಮ್ಮನ್ನು ಭೇದಿಸಿ ಭೂಮಿಗೆ ಇಳಿಯಲು ಬಿಡಲಾರೆವೆಂಬ ಛಲದಿಂದ ಬೀಗುತ್ತಿವೆ.
.. .. .. ..
ಶಿಮ್ಲಾದ ಮಡಿಲಲ್ಲಿ ಮೈಮರೆತಂತೆ ಹೊತ್ತು ಸಾಗಿದ ಅರಿವೇ ಇಲ್ಲ. ಅರೆ.. ದಿಢೀರನೇ ನಟ್ಟಿರುಳು ಕವಿಯಿತೇ? ಇದೇನಿನು ? ಏನೂ ಕಾಣಿಸದು, ಏನೂ ಕೇಳಿಸದು. ಎಲ್ಲಿ ಹೋದ ಸೂರ್ಯ? ಈಗತಾನೇ ಕಣ್ಣು ಮಿಟುಕಿಸುತ್ತಾ, "ಅರರೆ ಎನ್ನಯ.. ಸಮಾನರಾರಿಹರು' ಅನ್ನುತ್ತಿದ್ದನಲ್ಲ. ಬೆಟ್ಟಕ್ಕೆ ಈಗ ಕಪ್ಪು ಚಾದರ. ತಟ್ಟನೆ ಬೀಸಿದೆ ಬಿರುಗಾಳಿ. ಎಲ್ಲವನ್ನೂ, ಎಲ್ಲರನ್ನೂ ಶಿಖರದ ಆಚೆ ಎಸೆದು ಬಿಡುವಂತ ಗಾಳಿ. ಬೆಟ್ಟವೆಲ್ಲ ಒಮ್ಮೆಲೇ ಅಡುಗೆ ಕೋಣೆಯಾಯಿತೆ ? ಹಳ್ಳಿಮನೆಯಲ್ಲಿ ಮಳೆಗಾಲದಲ್ಲಿ ಅಮ್ಮ ಹಸಿದ ಕಟ್ಟಿಗೆಯಲ್ಲಿ ಒಲೆ ಉರಿಸಲು ಪ್ರಯತ್ನಿಸುತ್ತಿದ್ದ ಹಾಗೆ. ಒಲೆಯಿಂದ ದಟ್ಟ ಹೊಗೆ. ಚಟಪಟ ಸದ್ದು. ಸಿಡಿವ ಹನಿ ಒಲೆಯಲ್ಲಿ. ಸುರಿವ ಹನಿ ಅಮ್ಮನ ಕಣ್ಣುಗಳಲ್ಲಿ..
.. .. .. ..
ಚಳಿಗಾಲದಲ್ಲಿ ಹನುಮಾನ್ ದೇವಾಲಯ

ಮತ್ತೆ ಬೆಳಕು. ಶುಭ್ರ ಬೆಳಕು. ಅಲ್ಲಿ ಕಾಮನಬಿಲ್ಲು ಮೂಡಿದೆಯೇ ?- "ಗಿಡಗಳ ಮೇಲೆ ಹೂಗಳ ಒಳಗೆ ಅಮೃತದಾ ಬಿಂದು. ಕಂಡವು ಅಮೃತದಾ ಬಿಂದು. ಯಾರಿರಿಸಿಹರು ಮುಗಿಲಿನ ಮೇಲಿಂದ ಇಲ್ಲಿಗೆ ಇದ ತಂದ.. ಈಗಾ.. ಇಲ್ಲಿಗೆ ಇದ ತಂದು ?
ಜಗತ್ತಿಗೆ ಛಾವಣಿ ಬಿರುದಾಂಕಿತ ಹಿಮಾಚಲ ಪ್ರದೇಶ ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ. ವಸ್ತುಶಃ ಪ್ರತ್ಯೇಕವಾದ ಜಗತ್ತೇ ಎಂಬಷ್ಟು ಪ್ರಸಿದ್ಧ. ಪಂಜಾಬಿನ ಸಮೃದ್ಧ ಸಮತಟ್ಟು ಪ್ರದೇಶದಿಂದ ಶಿವಾಲಿಕ್ ಪರ್ವತ ಶ್ರೇಣಿ ಮೂಲಕ ಅಥವಾ ಶಿಮ್ಲಾ ಬೆಟ್ಟಗಳ ಮೂಲಕ ನದಿಗಳು, ಕಣಿವೆಗಳು, ಅಪೂರ್ವ ಹೂರಾಶಿ ವನ ಸಮೃದಿœಯ ನಾಡು. ಚಳಿಗಾಲದಲ್ಲಿ ಪೂರ್ತಿ ಹಿಮಾಚ್ಛಾದಿತವಾದ ರಾಜ್ಯ. ಸುಮಾರು ಮೂರು ತಿಂಗಳು ದೈನಂದಿನ ಚಟುವಟಿಕೆಗಳೇ ಸ್ತಬ್ಧ. ಹಿಮದ "ಹೆಪ್ಪುಗಟ್ಟುವ' ಅನುಭವಕ್ಕಾಗಿ ಈ ಸಂದರ್ಭದಲ್ಲೂ ಪ್ರವಾಸಿಗಳಿಂದ ಇದು ಸಮೃದ್ಧ.

ಶಿಮ್ಲಾದ ರಿಡ್ಜ್ನಲ್ಲಿರುವ ಶತಮಾನ ಹಿನ್ನೆಲೆಯ ಚರ್ಚ್
ಆದಿವಾಸಿಗಳು ಮುಂತಾದ ವಿವಿಧ ರಾಜಮನೆತನಗಳು ಆಳಿದ ನಾಡಿದು. ಅಕಾಸ್ಮಾತ್ತಾಗಿ ಈ ನಾಡಿನ ಕಡೆಗೆ ಬ್ರಿಟಿಷರು ಕಣ್ಣು ಹಾಯಿಸಿದರು. ಪುರಾಣಗಳಲ್ಲಿ "ದೇವಭೂಮಿ' ಎಂದು ಉಲ್ಲೇಖೀತ ಈ ನಾಡಲ್ಲಿ ಅವರು ತಮ್ಮ ತಾಯ್ನಾಡನ್ನು ಕಂಡುಕೊಳ್ಳಲು ಯತ್ನಿಸಿದರು. ಇಲ್ಲಿನ ಪ್ರಕೃತಿ, ಮಂಜು, ಹಿಮ, ನಿಸರ್ಗ ಸೌಂದರ್ಯದಿಂದಾಗಿ ಅವರಿಗೆ ಇದು ಪುನಶ್ಚೇತನದ ಕೇಂದ್ರವಾಯಿತು. 1814 ರಲ್ಲಿ ನೇಪಾಲದ ದೊರೆಯ ಗೂರ್ಖಾ ಸೈನಿಕರು ಸಿಕ್ಕಿಮ್ಗೆ ದಾಳಿ ನಡೆಸಿದ ಸಂದರ್ಭ ಇದಾಗಿತ್ತು. ಸಿಕ್ಕಿಂ ಆಳರಸರ ಪರವಾಗಿ ಬ್ರಿಟಿಷರು ಬಂದರು. ಜಯಿಸಿದರು. 1822 ರಲ್ಲಿ ತರುಣ ಬ್ರಿಟಿಷ್ ಸೇನಾ—ಕಾರಿ ಮೆ| ಕೆನಡಿ ಇಲ್ಲಿ ತನಗಾಗಿ ಒಂದು ಬಂಗಲೆಯನ್ನು ನಿರ್ಮಿಸಿದ ಮುಂದೆ ಬ್ರಿಟಿಷರು ಇಲ್ಲಿ ರಜಾಕಾಲವನ್ನು ಸವಿದರು. ಶಿಮ್ಲಾ ಅವರ ಬೇಸಗೆಯ ರಾಜಧಾನಿಯಾಯಿತು. ಈ ಎಲ್ಲಾ ಘಟನಾವಳಿ ಸ್ಮಾರಕಗಳ ರೂಪದಲ್ಲಿ ಇಲ್ಲಿ ಈಗಲೂ ಲಭ್ಯವಿದೆ. ಭಾರತದ ಸ್ವಾತಂತ್ರಾéನಂತರ ಕೇಂದ್ರಾಡಳಿತ ಪ್ರದೇಶವಾಗಿದ್ದು, ಟಿಬೆಟ್-ಜಮ್ಮು ಮತ್ತು ಕಾಶ್ಮೀರ-ಉತ್ತರಾಂಚಲ-ಹರ್ಯಾನಾಗಳನ್ನು ಗಡಿಯಾಗಿ ಈಗ ಹೊಂದಿರುವ ಹಿಮಾಚಲ ಪ್ರದೇಶ 1971 ರಲ್ಲಿ ಭಾರತದ ಭುಟ್ಟೋ ಅವರ ನಡುವಣ ಐತಿಹಾಸಿಕ ಒಪ್ಪಂದದಿಂದ ಜಗತ್ತಿನ ಗಮನ ಸೆಳೆಯಿತು. 61 ಲಕ್ಷ ಜನಸಂಖ್ಯೆ. 55673 ಚದರ ಮೈಲಿ ವಿಸ್ತೀರ್ಣ.
ಬೇಸಗೆಯ ಶಿಮ್ಲಾ
ರಾಜಧಾನಿ ಶಿಮ್ಲಾ ಜಗತ್ತಿನ ಅತ್ಯಂತ ಎತ್ತರದ ವಿಹಾರಧಾಮ ಅಥವಾ ನಿಸರ್ಗಧಾಮ ಎಂದೇ ಪ್ರಸಿದ್ಧ. ದಿಲ್ಲಿಯಿಂದ ವಿಮಾನ, ರೈಲು, ರಸ್ತೆ ಮೂಲಕ ಸುಲಭ ಪ್ರಯಾಣ. ದಿಲ್ಲಿಯಿಂದ ವಾಹನಗಳ ಮೂಲಕ ಏಳೆಂಟು ತಾಸುಗಳಲ್ಲಿ ತಲುಪಬಹುದು. ಜುಲೈ ಬಳಿಕ ಹೋದರೆ ಜಗತ್ಪಸಿದ್ಧ ಶಿಮ್ಲಾ ಸೇಬು ಹಣ್ಣುಗಳ ತೋಟಗಳಲ್ಲಿ ಸುತ್ತಾಡಬಹುದು. ನವೆಂಬರ್ ನಂತರ ಮೂರು ತಿಂಗಳು ಹಿಮಾಚಲವಿಡೀ ನಿಜ ಅರ್ಥದಲ್ಲಿ ಹಿಮದ ಅಡಿಯಲ್ಲಿ ಪವಡಿಸಿರುತ್ತದೆ. ಇದು ಅದ್ಭುತವಾದ ಮಾಯಾಲೋಕ. ಜನಸಾಮಾನ್ಯರು ವರ್ಷದ ಇತರ ತಿಂಗಳಲ್ಲಿ ದುಡಿದು ಈ ಅವಧಿಗಾಗಿ ಕೂಡಿಡಬೇಕು. ಎಪ್ರಿಲ್ನಿಂದ ಜೂನ್ ಅಂತ್ಯದವರೆಗೆ ಸೆಕೆಗಾಲ. ಸೆಪ್ಟೆಂಬರ್ವರೆಗೆ ಮಳೆಗಾಲ. ಮುಂದೆ ನವೆಂಬರ್ನಿಂದ ಮಾರ್ಚ್ವರೆಗೆ ಚಳಿಗಾಲ. ಬಳಿಕ ವಸಂತಕಾಲ. ಒಂದೊಂದು ಋತುವಿಗೂ ಇಲ್ಲಿ ಅದರದ್ದೇ ಆದ ವೈಭವ. ಹೂವುಗಳು ಅರಳಿದರೆ ಶಿಮ್ಲಾಕ್ಕೆ ಶಿಮ್ಲವೇ ಅರಳಿದ ಹಾಗೆ. ಮಂಜು ತುಂಬಿದರೆ ಬಿಳಿಯ ಚಾದರ. ಹಿಮಪಾತವಾದರೆ ಶಿಮ್ಲಾಕ್ಕೆ ಶಿಮ್ಲವೇ ಹಿಮದ ಹೊದಿಕೆಯ ಒಳಗೆ. ಒಂದಿಷ್ಟು ಮಳೆ ಸುರಿದರೆ ಶಿಮ್ಲಾಪೂರ್ತಿ ವರ್ಷಧಾರೆಯಲ್ಲಿ ಮಿಂದ ಹಾಗೆ.
.. .. .. ..

ಸರ್ಹಾನ್ನಲ್ಲಿರುವ ಭೀಮ ಕಾಳಿ ದೇವಾಲಯ
ಶಿಮ್ಲಾದ ಜನರೇ ಒಂಥರಾ ಹೂವುಗಳ ಹಾಗೆ. ಸದಾ ನಗುಮುಖ. ಪ್ರವಾಸಿಗರೆಂದರೆ ಅವರಿಗೆ ನಿಜ ಅರ್ಥದ ಮನೆಯ ಅತಿಥಿ. ನಿಸರ್ಗ ಸಂಪತ್ತಿನ ಬಳಿಕ ಶಿಮ್ಲಾದ ಪ್ರಮುಖ ಆದಾಯವೇ ಪ್ರವಾಸೋದ್ಯಮ. ಆದ್ದರಿಂದ, ಇಲ್ಲಿ ಸದಾ ಶಾಂತಿ. ಹಿಮಾಚಲ ಪ್ರದೇಶವೆಂದರೆ ಶಾಂತಿಯ ಆಲಯವೆಂದೂ ಪ್ರಖ್ಯಾತಿ.
ಇಲ್ಲಿ ಪ್ರವಾಸಿಗರನ್ನು ದೋಚುವವರಿಲ್ಲ. ಹೆಜ್ಜೆ ಹೆಜ್ಜೆಗೂ ನಿಖರವಾದ ಮಾಹಿತಿಯನ್ನು ಆತ್ಮೀಯತೆಯಿಂದ ಜನ ನೀಡುತ್ತಾರೆ. ಆದರೂ, ಕೆಲವರು ಪ್ರವಾಸಕ್ಕೆ ಮಾರ್ಗದರ್ಶಿಗಳೆಂದು ಹೇಳಿಕೊಳ್ಳುವವರಿದ್ದಾರೆ. ಅಂತಹವರ ವಿರುದ್ಧ ಎಚ್ಚರಿಕೆಯ ಫಲಕಗಳು ಅಲ್ಲಲ್ಲಿ ಕಾಣಿಸುತ್ತವೆ. ಮಾರ್ಗದರ್ಶನಕ್ಕೆ ಸರಕಾರವೇ ಅ—ಕೃತರನ್ನು ನೇಮಿಸಿ, ಗುರುತಿನ ಚೀಟಿಯನ್ನು ಒದಗಿಸುತ್ತದೆ. ಬಗೆಬಗೆಯ ಬಜೆಟ್ನಿಂದ, ಅಂದರೆ ಇನ್ನೂರು ರೂಪಾಯಿಯಿಂದ ಇಪ್ಪತ್ತೈದು ಸಾವಿರ ರೂಪಾಯಿವರೆಗೂ ಹೊಟೇಲ್ಗಳು ಇಲ್ಲಿ ಲಭ್ಯ.

ಶಿಮ್ಲಾದ ಟಾಯ್ ಟ್ರೈನ್
ಶಿಮ್ಲಾ ಸಹಿತ ಹಿಮಾಚಲ ಪ್ರದೇಶದ ಪ್ರೇಕ್ಷಣೀಯ ಸ್ಥಳಗಳ ಹೆಸರುಗಳನ್ನು, ಗಿರಿಶಿಖರಗಳನ್ನು, ನದಿ ಕಿನಾರೆಗಳನ್ನು, ಕಣಿವೆಗಳನ್ನು, ಸ್ಮಾರಕಗಳನ್ನು, ಆಧುನಿಕ ಸಂಭ್ರಮಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಲಾಗಿಲ್ಲ. ಏಕೆಂದರೆ, ಸಂಪೂರ್ಣ ಹಿಮಾಚಲವೇ ಪ್ರೇಕ್ಷಣೀಯ ಸ್ಥಳ, ಪ್ರಕೃತಿ ಸೌಂದರ್ಯದ ಆಡುಂಬೊಲ.
ಈ ಪ್ರದೇಶದಲ್ಲಿ ಸಹಸ್ರಮಾನಗಳಿಂದ ಅಸ್ತಿತ್ವದಲ್ಲಿರುವ ಮೂಲ ನಿವಾಸಿಗಳು, ಬುಡಕಟ್ಟು ಮತ್ತಿತರ ಜನಾಂಗದವರು: ದಾಸರು, ಖಾಸರ, ಪಿಶಾಚರು, ಗುಜ್ಜಾರರು, ಲಾಂಬಾರು, ಖಾಂಪತರು, ಜಾಡರು, ಯಕ್ಷರು, ಕಿರಾತರು, ನಾಗಾಗಳು, ಕಿನ್ನರು, ಕಿಂಪುರುಷರು.... ಪುರಾಣ, ಮಹಾಕಾವ್ಯಗಳ ನೆನಪಾಗುತ್ತಿದೆಯೇ ?
.. .. .. ..
ಹಿಮಾಚಲದಾದ್ಯಂತ ದೇವಿ ಮತ್ತು ಶಿವನಿಗೆ ವಿಶೇಷ ಪೂಜೆ. ಆಂಜನೇಯ ಸಹಿತ ಸರ್ವರ ಆರಾಧನೆಯಿದೆ. ದೇವಿ-ಕಾಳಿಯನ್ನಂತೂ ಸಾರ್ವತ್ರಿಕವಾಗಿ ದೇವಾಲಯಗಳಲ್ಲಿ ಆರಾ—ಸಲಾಗುತ್ತಿದೆ. ಕಾಳಿಯು ಇನ್ನೊಂದು ರೂಪಶ್ಯಾಮಲೆ. ಬೆಟ್ಟಗುಡ್ಡ ಪರ್ವತಗಳಲ್ಲೆಲ್ಲ ಈ ಶ್ಯಾಮಲೆಯ ಆರಾಧನೆ. ಶ್ಯಾಮಲೆಯಿಂದಲೇ ಬಂದಿರುವ ಹೆಸರು ಶಿಮ್ಲಾ.
ಹಿಮಚ್ಚಾದಿತ ಶಿಮ್ಲಾ

ಶಿಮ್ಲಾದಿಂದ ಮುಂಜಾನೆ ನಾವು ಹೊರಟದ್ದು 22 ಕಿ.ಮೀ. ಅಂತರದಲ್ಲಿರುವ ನಾಲೆªàರಾಕ್ಕೆ. ಈ ಬಾರಿ ಮಂಜು, ಮೋಡ, ಮಳೆ ಎಲ್ಲವನ್ನೂ ನೋಡುವ ಅವಕಾಶ. ಆದರೆ, ಮೀಟರುಗಟ್ಟಲೆ ದಪ್ಪ, ಊರಿಗೇ ಊರನ್ನೇ ಆವರಿಸುವ ಹಿಮ ನೋಡಬೇಕಾದರೆ ಡಿಸೆಂಬರ್ನಲ್ಲಿ ಇಲ್ಲಿಗೆ ಬರಬೇಕು. ಟ್ಯಾಕ್ಸಿ ಚಾಲಕ ಭೂಪಿಂದರ್ ಸಿಂಗ್ ಅಲ್ಲಲ್ಲಿ ರಮಣೀಯ ತಾಣಗಳಲ್ಲಿ ವಾಹನ ನಿಲ್ಲಿಸುತ್ತಾ ಅಲ್ಲಿನ ವಿಶೇಷಗಳನ್ನು ಹಿಂದಿಯಲ್ಲಿ ವಿವರಿಸುತ್ತಿದ್ದರು. ಬ್ರಿಟಿಷರ ವೈಸರಾಯ್ಗಳ ಸಹಿತ ಎಲ್ಲಾ ಹಿರಿಯ ಅಧಿಕಾರಿಗಳು ವಿಹರಿಸುತ್ತಿದ್ದ ತಾಣವಿದು.
ಜಗತ್ತಿನ ಜನಪ್ರಿಯ ತಾಣಗಳಲ್ಲೊಂದಾದ ಗಾಲ್ಫ್ಕೋರ್ಸ್ ಇಲ್ಲಿದೆ. ದೇವದಾರು ವೃಕ್ಷಗಳ ನಡುವೆ ಅರಳಿರುವ ಪುಟ್ಟ ಊರಿದು. ಕೋಗೀ ಎಂಬಲ್ಲಿ ಮಹಾನಾಗ್ ದೇವಸ್ಥಾನ. ಉತ್ತರ ಭಾರತದ ಅತೀ ದೊಡ್ಡ ಫಲ ಸಂಸ್ಕರಣಾ ಕೆಂದ್ರವೂ ಇಲ್ಲಿದೆ. ಹಿಮಾಚಲದಲ್ಲಿ ಡಿಡಿಂಬೆಗೂ ಎರಡು ದೇವಾಲಯಗಳಿವೆ.

ಅದ್ಭುತ ಆತಿಥ್ಯ
ನಾಲೆªàರಾ ಸಹಿತ ಶಿಮ್ಲಾದ ವಿವಿಧ ತಾಣಗಳಲ್ಲಿನ ಪ್ರಧಾನ ಆಕರ್ಷಣೆ ಕುದುರೆ ಸವಾರಿ. ನೂರಾರು ಕುದುರೆಗಳು- ಪರಿಣತ, ಚಾಣಾಕ್ಷ ಸವಾರರು. ಸರಕಾರದಿಂದ ಅ—ಕೃತ ಮಾನ್ಯತೆ. ಕಡಿದಾದ ಬೆಟ್ಟಗಳ ಸೌಂದರ್ಯ ವೀಕ್ಷಿಸಲು ಕುದುರೆ ಸವಾರಿ ರೋಮಾಂಚಕ. ನಮ್ಮ ಆತಿಥೇಯರು ಆಗ ಪಾಣಿಪತ್ನಲ್ಲಿ ನೆಲೆಸಿದ್ದ (ಈಗ ಮುಂಬಯಿಯಲ್ಲಿ ಇದ್ದಾರೆ) ಕಾಪೊಳಿ ದಿವಾಕರ ಹೆಬ್ಟಾರ್- ಪ್ರಶೀಲಾ ದಂಪತಿ, ಅವರ ಪುತ್ರಿ ದಿಪಿಂತಿ; ನನ್ನ ಜತೆಯಲ್ಲಿದ್ದ ಶ್ರೀನಾಥ್ ಕುಟುಂಬ.. ಅದಾಗಲೇ ಈ ಅಭಿಯಾನಕ್ಕೆ ಸಿದœರಾಗಿದ್ದರು ! ಸುಮಾರು ಎರಡು ತಾಸುಗಳ ಈ ಕುದುರೆ ಸವಾರಿ ಅಪೂರ್ವ ಅನುಭವ. ಅಲ್ಲಿಂದ ನಾವು ಬಂದದ್ದು ಕುಫ್ರಿಗೆ. ಇದು ಹಿಮಾಚಲದ ಇನ್ನೊಂದು ಜನಪ್ರಿಯ ತಾಣ. ಚಳಿಗಾಲದಲ್ಲಿ ಸಂಪೂರ್ಣ ಹೆಪ್ಪುಗಟ್ಟುವ ಸಂಭ್ರಮ ಸವಿಯಲು ಈ ತಾಣ ಪ್ರಸಿದ್ಧ.
ಇದು ಕೆಲವು ಸ್ಯಾಂಪಲ್ಗಳು ಅಷ್ಟೆ. ಹಾದಿಯುದ್ದಕೂ ಬಗೆಬಗೆಯ ಹಣ್ಣುಗಳನ್ನು ಆಸ್ವಾದಿಸುವುದು ಇನ್ನೊಂದು "ರಸಮಯ' ಅನುಭವ. ಲಿಚಿಯಂತಹ ಹಣ್ಣುಗಳೆಂದರೆ ಪ್ರವಾಸಿಗಳಿಗೆ ಅಚ್ಚುಮೆಚ್ಚು. ಲಸ್ಸಿಯ ಸೊಗಸೇ ಸೊಗಸು. ಸಾಮಾನ್ಯವಾಗಿ ಇಲ್ಲಿ ಮೊಸರನ್ನು ಹೆಚ್ಚಾಗಿ ಬಳಸುತ್ತಾರೆ. ಅದು ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ ಅನ್ನುವುದು ಇದಕ್ಕೆ ಕಾರಣ. ಯಾಕ್ ಮೂಲಕ ಸಮದœವಾಗಿ ಪಡೆಯಲು ಸಾಧ್ಯ.

ನಿಸರ್ಗದ ವೈಭವ
ಶಿಮ್ಲಾ ಸಹಿತ ಹಿಮಾಚಲದಲ್ಲಿ ಗಮನ ಸೆಳೆಯುವ ಅಂಶವೆಂದರೆ ಬೆಟ್ಟಗಳು, ಪರ್ವತಗಳಲ್ಲಿ ನಿರ್ಮಾಣವಾಗಿರುವ ಗುಂಪು ಗುಂಪು ಮನೆಗಳು. ದೂರದಿಂದ ನೋಡಿದರೆ, ಬಣ್ಣಬಣ್ಣದ ಈ ಮನೆಗಳ ಸಮೂಹ ಕೂಡಾ ಅರಳಿದ ಹೂಗೊಂಚಲಿನ ಹಾಗೆಯೇ ಕಾಣಿಸುತ್ತಿದೆ. ಈ ಬಡಾವಣೆಗಳನ್ನು ತಲುಪಲು ಹಾವಿನಂತೆ ಅಂಕುಡೊಂಕಾದ ಹಾದಿಗಳು ! ರಾತ್ರಿ ಈ ಮನೆಗಳ ದೀಪಗಳು ಕೂಡಾ ತಾರೆಗಳು ಮಿನುಗಿದಂತೆ ಕಾಣಿಸುತ್ತದೆ !
.. .. .. ..
ಕುದುರೆ ಸವಾರಿಯ ರೋಮಾಂಚನ

ದೇವರುಗಳ ಬಗ್ಗೆ ಅಪಾರ ಶ್ರದ್ಧೆ. ದೇವಿ ಮಂದಿಗಳು ಅನನ್ಯವಾದ ಕೇಂದ್ರಗಳು. ಮೈಲುಗಟ್ಟಲೆ ವಿಸ್ತಾರದಲ್ಲಿ ಬೆಳೆದಿರುವ ವೃಕ್ಷಗಳು. ಬಗೆಬಗೆಯ ಫಲಪುಷ್ಪಗಳು. ಆದ್ದರಿಂದಲೇ, ಇದು ನಿಜ ಅರ್ಥದ ದೇವರ ನಾಡು.
.. .. .. ..
ಶಿಮ್ಲಾದ ಬಗ್ಗೆ ಪ್ರಸಿದœವಾದ ಒಂದು ಉಲ್ಲೇಖ ಹೀಗಿದೆ:
""ನೀವು ಶಿಮ್ಲಾದಿಂದ ನಿಮ್ಮ ಊರಿಗೆ ಮರಳಿ ಹೊರಟು ಬಂದಿರಬಹುದು. ಆದರೆ, ನಿಮ್ಮ ಹೃದಯದಿಂದ ಶಿಮ್ಲಾ ಎಂದೆಂದಿಗೂ ಹೊರಟು ಹೋಗುವುದಿಲ್ಲ'!

--ಹಚ್ಚ ಹಸಿರು ಸೀರೆ ಉಟ್ಟು, ಕಡು ನೀಲಿ ಸೆರಗನ್ನು ಮಂದ ಮಾರುತಕ್ಕೆ ಹಾರಿ ಬಿಟ್ಟು ಮಲಗಿದೆ ಬೆಟ್ಟಗಳ ಸಾಲು. ಎಲ್ಲವೂ ಸ್ತಭœ; ಆದರೆ, ಒಂದೇ ಕ್ಷಣ. ಮರುಕ್ಷಣ ಎಲ್ಲಾ ದೃಶ್ಯವೂ ಬದಲು- ಬಾಲ್ಯದಲ್ಲಿ ನಾವು ನೋಡುತ್ತಿದ್ದ ವಾರ್ಷಿಕೋತ್ಸವ ನಾಟಕಗಳ ಪರದೆ ಸರಿದು ಇನ್ನೊಂದು ದೃಶ್ಯ ಬಂದ ಹಾಗೆ. ಒಮ್ಮೆಲೇ ಚಟುವಟಿಕೆಗಳು ಆರಂಭ. ಗಡಿಬಿಡಿಗೊಂಡ ಬೆಟ್ಟ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಹಸಿರು ಸೀರೆಯ ಮೇಲೆ ಬಿಳಿಯ ಚಾದರ ಹೊದೆದು ಮುಗಿಲಿನಿಂದ ಬಂತೋ ಎಂಬಂತಹ ಮಂಜಿನಧಾರೆಗೆ ಸಿದœವಾಗಿದೆ.
ಈಗ ತಾನೇ ಮೌನದಿಂದಿದ್ದ ಬೆಟ್ಟದ ಬಣ್ಣ ಬದಲು. ಸುಮ್ಮನಿದ್ದ ಬೆಟ್ಟದ ಎಲ್ಲೆಡೆಯಿಂದ ಹೇಗೆ ಉದ್ಭವವಾಯಿತು ಈ ಆಸನವನ್ನೇ ಮರೆಮಾಚುವಂತಹ ಮಂಜಿನ ಪರದೆ ? ದಟ್ಟ ಮಂಜು, ತೆಳು ಮಂಜು, ದಪ್ಪ ಮಂಜು, ಭಾಷ್ಪ ಮಂಜು. ಏನಿದು ಬಣ್ಣಬಣ್ಣದ ವೈವಿಧ್ಯಮಯ ಜಾಲ ? ಏರುಏರುತ್ತಿರುವ ಮಂಜೇ ಈಗ ಕರಗುತ್ತಿದೆಯೇ ? ಅಡ್ಡಅಡ್ಡವಾಗಿ ಅದು ದಟ್ಟೆ$çಸುತ್ತಿದೆಯೇ ? ಒಮ್ಮಿಂದೊಮ್ಮೆಲೇ ಸುರಿಯ ತೊಡಗಿದೆ.. ಆವರಿಸತೊಡಗುತ್ತಿದೆ ಮಂಜು.. ಇಳೆಯೆಲ್ಲಾ ಮುಳುಗಿ ಹೋಗುವುದೇ ಎಂಬ ಭಯವನ್ನು ಉಂಟು ಮಾಡುತ್ತಿದೆ ಈಗ ಯಾವುದೂ ಕಾಣಿಸದು.
ಎಲ್ಲಿ ಮಾಯವಾಯಿತು ಬೆಟ್ಟ ? ಎಲ್ಲಿ ಕಾಣದಾಯಿತು ಶಿಖರ ? ಈ ಮಂಜಿಗೆ ಉಳಿದೀತೇ ಉಟ್ಟಚಾದರ ? ಇನ್ನು ಎಂದಿಗೂ ನಿಲ್ಲದೆ ಈ ಮಂಜು ? ಕಾಣಿಸದೆ ಇಳೆಯ ಉಡುಗೆಯ ಹಸಿರು ? ತಟ್ಟನೆ ಹೊಸತೊಂದು ದೃಶ್ಯಾವಳಿ. ಮಂಜಿನ ಛಾಯೆ ಎಲ್ಲಿಯೋ ಮಾಯೆ ! ಅಟ್ಟಿಸಿಕೊಂಡು ಬರುತ್ತಿರುವ ಕುಳಿರ್ಗಾಳಿಗೆ ಬೆದರಿ ಹತ್ತಿ ಮೂಟೆಯ ಹಾಗೆ ಸಾಗಿ ಬೆಟ್ಟದ ಆಚೆ ಬದಿಗೆ ತೇಲಿ ತೇಲಿ ಹೋಯಿತು. ಅಳಿದುಳಿದ ಒಂದಷ್ಟು ಮಂಜಿನ ಮಾಯೆಯ ಎಡೆಯಿಂದ ಕಣ್ಣು ಮಿಟುಕಿಸುತ್ತಾನಲ್ಲ ಸೂರ್ಯ ! ಎಲ್ಲಿಂದ ಬಂತು ಅವನಿಗೆ ಈ ತುಂಟ ನಗೆ ? ನಿನ್ನೆ ಮೊನ್ನೆ ಇದೇ ವೇಳೆ ಭೂಮಿಯನ್ನು ಸುಡುವಂತಹ ಕೆಂಡದ ಉಂಟೆಯಾಗಿದ್ದ ಈ ಸೂರ್ಯ ಈಗ ಬೆಳದಿಂಗಳಿನಂತಹ ಬಿಸಿಲನ್ನು ಪಸರಿಸುತ್ತಿರುವನಲ್ಲ ! ಏನು ಸೋಜಿಗ!?
ಸಮೃದ್ಧ ಸಂಸ್ಕೃತಿ
ಮತ್ತೆ ಹಸಿರು ಸೀರೆಯ ಬೆಟ್ಟಗಳ ಸಾಲು. "ಶಿಮ್ಲಾ' ಎಂಬ ಹೆಸರು ಹೊತ್ತ ಚಿತ್ರ ಬಿಡಿಸಿದಂತಹ ಊರಿನ ತುಂಬಾ ನಿಸರ್ಗದ ಆಟವೇ ಆಟ. ಪ್ರಕೃತಿ ಬಿಡಿಸಿದ ಚಿತ್ತಾರವಾದ ಶಿಮ್ಲಾದ ಬಾನೆತ್ತರದ ವೃಕ್ಷ ಸಮೂಹಗಳಿಂದ ಈಗ ಹೊರಡುತ್ತಿವೆ ಹಕ್ಕಿಗಳ ಸಾಲು. ತಟ್ಟನೆ ನೆನಪಾಯಿತು ಕವಿವರ್ಯ ಬೇಂದ್ರೆಯವರ ಹಾಡು: "ಗಿಡಗಂಟಿಗಳ ಕೊರಳೊಳಗಿಂದ ಹೊರಟಿತು ಹಕ್ಕಿಗಳ ಹಾಡು.. ಗಂಧರ್ವರ ಸೀಮೆಯಾಯಿತು ಕಾಡಿನ ನಾಡು.. ಕ್ಷಣದೊಳು.. ಕಾಡಿನ ನಾಡು..'
ದೃಷ್ಟಿ ಹಾಯಿಸಿದಲ್ಲೆಲ್ಲಾ, ಬಾನ ಚುಂಬಿಸಲು ಹೊರಟಂತಿರುವ ದೇವದಾರು ವೃಕ್ಷಗಳು. ಸ್ಪರ್ಧೆ ನೀಡುತ್ತಿರುವ ಪೈನ್ (ಸೂಜಿಪರ್ಣ?) ವೃಕ್ಷಗಳು. ಅವುಗಳ ಎಡೆಯಿಂದ ಎಳೆ ಬಿಸಿಲಿಗೆ ಕರಗಿ ತೊಟ್ಟಿಕ್ಕುತ್ತಿರುವ ಹನಿಗಳು- "ಮೂಡಲ ಮನೆಯ.. ಮುತ್ತಿನ ನೀರಿನ.. ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದಾ.. ಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲಾ ತೊಯ್ದಾ..ದೇವನು.. ಜಗವೆಲ್ಲಾ ತೊಯ್ದಾ..'.

ಶಿಮ್ಲಾದ ಪಕ್ಷಿನೋಟ
ಹಿಮಾಲಯ ಪರ್ವತದ ತಪ್ಪಲಿನ ಹಿಮಾಚಲ ಪ್ರದೇಶ. ಹೆಸರೇ ಸೂಚಿಸುವಂತೆ ಹಿಮವತ್ಪರ್ವತಗಳ ಆಲಯ. ಈ ಆಲಯದೊಳಗೆ ರಾಜಧಾನಿಯಾಗಿರುವ ಪುಟ್ಟ ಆಲಯವೇ ಶಿಮ್ಲಾ. ಸಮುದ್ರಮಟ್ಟದಿಂದ ಮುನ್ನೂರ ಐವತ್ತು ಮೀಟರುಗಳಿಂದ ಏಳು ಸಾವಿರ ಮೀಟರು ಎತ್ತರದವರೆಗೆ ವ್ಯಾಪಿಸಿರುವ ಬೆಟ್ಟಗಳ ಶ್ರೇಣಿ. ಶಿಮ್ಲಾದಲ್ಲಿ ನಾನು ಸಾವಿರದ ಇನ್ನೂರು ಮೀಟರ್ ಎತ್ತರದಲ್ಲಿ ಹೊಟೇಲ್ನ ಕೊಠಡಿಯ ಆವರಣದಿಂದ ಹೊರ ಬಂದು ಮುಂಜಾನೆ "ಶಿಮ್ಲಾ'ವನ್ನು ನೋಡುತ್ತಿದ್ದೆ. ನೋಡು ನೋಡುತ್ತಿದ್ದಂತೆಯೇ ಮುಂಜಾನೆಯೇ ಆವರಿಸಿದ ಕತ್ತಲು. ಮತ್ತೆ ಸೂರ್ಯನ ಕಣ್ಣು ಮಿಟುಕಿಗೆ ಸಮನಾಗಿ ವೃಕ್ಷ ಸಮೃದ್ಧ ಬೆಟ್ಟಗಳಲ್ಲಿ ಹಸಿರಿನ ವೈವಿಧ್ಯ. ನಸು ಹಸಿರು, ಹಸಿರು, ಕಡು ಹಸಿರು, ಒಮ್ಮೊಮ್ಮೆ ಪಾಚಿಯ ಹಾಗೆ ದಟ್ಟ. ಒಮ್ಮೊಮ್ಮೆ ಎಳೆ ಲಿಂಬೆಯ ಹಾಗೆ ಮಂದ. ಈಗ ಮಂಜಿನ ಜಾಗವನ್ನು ಮೋಡಗಳು ಆಕ್ರಮಿಸಿಕೊಂಡವೇ? ಪಲಾಯನ ಸನ್ನದœವಾಗಿರುವ ಮೋಡಗಳು. ತುಂಡು ಮೋಡಗಳ ಓಟದ ವೇಗವೇ.. ಒಲಿಂಪಿಕ್ ಓಟಕ್ಕೆ ಸಿದœವಾಗಿರುವ ಹಾಗೆಯೇ.
ದಾಂವರಿ ಜಲಪಾತ
ಸೂರ್ಯನನ್ನು ಮುಚ್ಚುವ ಮುಚ್ಚಾಟದಲ್ಲಿ ನಿತರವಾಗಿವೆ ಎರಡು ಮೂಟೆ ಹತ್ತಿಯ ರಾಶಿ. ಈ ಓಟದ ಪ್ರತಿಫಲನವಿದೆ ಬೆಟ್ಟದ ಶ್ರೇಣಿಗಳಲ್ಲಿ. ಬೆಟ್ಟದ ನಡುವೆ ಒಂದು ಚಿನ್ನದ ಬಟ್ಟಲು ಓಡಿದ ಹಾಗೆ ತಿರುಗುತ್ತಾ ಓಡುತ್ತಿದೆ ಈ ಬಟ್ಟಲು. ಇವೆಲ್ಲ ಘಟನಾವಳಿಯ ನಡುವೆ ಹರ್ಷಚಿತ್ತದಿಂದ ಬೀಗುತ್ತಿರುವ ವೃಕ್ಷ ಸಮೂಹ. ಬಾನೆತ್ತರಕ್ಕೆ ಜಿಗಿಯುವ ಉತ್ಸಾಹದ ತರುಗಳು. ಬಾನಿನಿಂದ ಉದುರುವ ಮಂಜಿನ ಮುತ್ತಾಗಲೀ, ಮಳೆಯ ಹನಿಯಾಗಲೀ, ಬಾನಿನಿಂದ ಬಿರಿಯುವ ಸೂರ್ಯಕಿರಣವಾಗಲೀ ತಮ್ಮನ್ನು ಭೇದಿಸಿ ಭೂಮಿಗೆ ಇಳಿಯಲು ಬಿಡಲಾರೆವೆಂಬ ಛಲದಿಂದ ಬೀಗುತ್ತಿವೆ.
.. .. .. ..
ಶಿಮ್ಲಾದ ಮಡಿಲಲ್ಲಿ ಮೈಮರೆತಂತೆ ಹೊತ್ತು ಸಾಗಿದ ಅರಿವೇ ಇಲ್ಲ. ಅರೆ.. ದಿಢೀರನೇ ನಟ್ಟಿರುಳು ಕವಿಯಿತೇ? ಇದೇನಿನು ? ಏನೂ ಕಾಣಿಸದು, ಏನೂ ಕೇಳಿಸದು. ಎಲ್ಲಿ ಹೋದ ಸೂರ್ಯ? ಈಗತಾನೇ ಕಣ್ಣು ಮಿಟುಕಿಸುತ್ತಾ, "ಅರರೆ ಎನ್ನಯ.. ಸಮಾನರಾರಿಹರು' ಅನ್ನುತ್ತಿದ್ದನಲ್ಲ. ಬೆಟ್ಟಕ್ಕೆ ಈಗ ಕಪ್ಪು ಚಾದರ. ತಟ್ಟನೆ ಬೀಸಿದೆ ಬಿರುಗಾಳಿ. ಎಲ್ಲವನ್ನೂ, ಎಲ್ಲರನ್ನೂ ಶಿಖರದ ಆಚೆ ಎಸೆದು ಬಿಡುವಂತ ಗಾಳಿ. ಬೆಟ್ಟವೆಲ್ಲ ಒಮ್ಮೆಲೇ ಅಡುಗೆ ಕೋಣೆಯಾಯಿತೆ ? ಹಳ್ಳಿಮನೆಯಲ್ಲಿ ಮಳೆಗಾಲದಲ್ಲಿ ಅಮ್ಮ ಹಸಿದ ಕಟ್ಟಿಗೆಯಲ್ಲಿ ಒಲೆ ಉರಿಸಲು ಪ್ರಯತ್ನಿಸುತ್ತಿದ್ದ ಹಾಗೆ. ಒಲೆಯಿಂದ ದಟ್ಟ ಹೊಗೆ. ಚಟಪಟ ಸದ್ದು. ಸಿಡಿವ ಹನಿ ಒಲೆಯಲ್ಲಿ. ಸುರಿವ ಹನಿ ಅಮ್ಮನ ಕಣ್ಣುಗಳಲ್ಲಿ..
.. .. .. ..
ಚಳಿಗಾಲದಲ್ಲಿ ಹನುಮಾನ್ ದೇವಾಲಯ
ಮತ್ತೆ ಬೆಳಕು. ಶುಭ್ರ ಬೆಳಕು. ಅಲ್ಲಿ ಕಾಮನಬಿಲ್ಲು ಮೂಡಿದೆಯೇ ?- "ಗಿಡಗಳ ಮೇಲೆ ಹೂಗಳ ಒಳಗೆ ಅಮೃತದಾ ಬಿಂದು. ಕಂಡವು ಅಮೃತದಾ ಬಿಂದು. ಯಾರಿರಿಸಿಹರು ಮುಗಿಲಿನ ಮೇಲಿಂದ ಇಲ್ಲಿಗೆ ಇದ ತಂದ.. ಈಗಾ.. ಇಲ್ಲಿಗೆ ಇದ ತಂದು ?
ಜಗತ್ತಿಗೆ ಛಾವಣಿ ಬಿರುದಾಂಕಿತ ಹಿಮಾಚಲ ಪ್ರದೇಶ ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ. ವಸ್ತುಶಃ ಪ್ರತ್ಯೇಕವಾದ ಜಗತ್ತೇ ಎಂಬಷ್ಟು ಪ್ರಸಿದ್ಧ. ಪಂಜಾಬಿನ ಸಮೃದ್ಧ ಸಮತಟ್ಟು ಪ್ರದೇಶದಿಂದ ಶಿವಾಲಿಕ್ ಪರ್ವತ ಶ್ರೇಣಿ ಮೂಲಕ ಅಥವಾ ಶಿಮ್ಲಾ ಬೆಟ್ಟಗಳ ಮೂಲಕ ನದಿಗಳು, ಕಣಿವೆಗಳು, ಅಪೂರ್ವ ಹೂರಾಶಿ ವನ ಸಮೃದಿœಯ ನಾಡು. ಚಳಿಗಾಲದಲ್ಲಿ ಪೂರ್ತಿ ಹಿಮಾಚ್ಛಾದಿತವಾದ ರಾಜ್ಯ. ಸುಮಾರು ಮೂರು ತಿಂಗಳು ದೈನಂದಿನ ಚಟುವಟಿಕೆಗಳೇ ಸ್ತಬ್ಧ. ಹಿಮದ "ಹೆಪ್ಪುಗಟ್ಟುವ' ಅನುಭವಕ್ಕಾಗಿ ಈ ಸಂದರ್ಭದಲ್ಲೂ ಪ್ರವಾಸಿಗಳಿಂದ ಇದು ಸಮೃದ್ಧ.
ಶಿಮ್ಲಾದ ರಿಡ್ಜ್ನಲ್ಲಿರುವ ಶತಮಾನ ಹಿನ್ನೆಲೆಯ ಚರ್ಚ್
ಆದಿವಾಸಿಗಳು ಮುಂತಾದ ವಿವಿಧ ರಾಜಮನೆತನಗಳು ಆಳಿದ ನಾಡಿದು. ಅಕಾಸ್ಮಾತ್ತಾಗಿ ಈ ನಾಡಿನ ಕಡೆಗೆ ಬ್ರಿಟಿಷರು ಕಣ್ಣು ಹಾಯಿಸಿದರು. ಪುರಾಣಗಳಲ್ಲಿ "ದೇವಭೂಮಿ' ಎಂದು ಉಲ್ಲೇಖೀತ ಈ ನಾಡಲ್ಲಿ ಅವರು ತಮ್ಮ ತಾಯ್ನಾಡನ್ನು ಕಂಡುಕೊಳ್ಳಲು ಯತ್ನಿಸಿದರು. ಇಲ್ಲಿನ ಪ್ರಕೃತಿ, ಮಂಜು, ಹಿಮ, ನಿಸರ್ಗ ಸೌಂದರ್ಯದಿಂದಾಗಿ ಅವರಿಗೆ ಇದು ಪುನಶ್ಚೇತನದ ಕೇಂದ್ರವಾಯಿತು. 1814 ರಲ್ಲಿ ನೇಪಾಲದ ದೊರೆಯ ಗೂರ್ಖಾ ಸೈನಿಕರು ಸಿಕ್ಕಿಮ್ಗೆ ದಾಳಿ ನಡೆಸಿದ ಸಂದರ್ಭ ಇದಾಗಿತ್ತು. ಸಿಕ್ಕಿಂ ಆಳರಸರ ಪರವಾಗಿ ಬ್ರಿಟಿಷರು ಬಂದರು. ಜಯಿಸಿದರು. 1822 ರಲ್ಲಿ ತರುಣ ಬ್ರಿಟಿಷ್ ಸೇನಾ—ಕಾರಿ ಮೆ| ಕೆನಡಿ ಇಲ್ಲಿ ತನಗಾಗಿ ಒಂದು ಬಂಗಲೆಯನ್ನು ನಿರ್ಮಿಸಿದ ಮುಂದೆ ಬ್ರಿಟಿಷರು ಇಲ್ಲಿ ರಜಾಕಾಲವನ್ನು ಸವಿದರು. ಶಿಮ್ಲಾ ಅವರ ಬೇಸಗೆಯ ರಾಜಧಾನಿಯಾಯಿತು. ಈ ಎಲ್ಲಾ ಘಟನಾವಳಿ ಸ್ಮಾರಕಗಳ ರೂಪದಲ್ಲಿ ಇಲ್ಲಿ ಈಗಲೂ ಲಭ್ಯವಿದೆ. ಭಾರತದ ಸ್ವಾತಂತ್ರಾéನಂತರ ಕೇಂದ್ರಾಡಳಿತ ಪ್ರದೇಶವಾಗಿದ್ದು, ಟಿಬೆಟ್-ಜಮ್ಮು ಮತ್ತು ಕಾಶ್ಮೀರ-ಉತ್ತರಾಂಚಲ-ಹರ್ಯಾನಾ
.. .. .. ..
ಸರ್ಹಾನ್ನಲ್ಲಿರುವ ಭೀಮ ಕಾಳಿ ದೇವಾಲಯ
ಶಿಮ್ಲಾದ ಜನರೇ ಒಂಥರಾ ಹೂವುಗಳ ಹಾಗೆ. ಸದಾ ನಗುಮುಖ. ಪ್ರವಾಸಿಗರೆಂದರೆ ಅವರಿಗೆ ನಿಜ ಅರ್ಥದ ಮನೆಯ ಅತಿಥಿ. ನಿಸರ್ಗ ಸಂಪತ್ತಿನ ಬಳಿಕ ಶಿಮ್ಲಾದ ಪ್ರಮುಖ ಆದಾಯವೇ ಪ್ರವಾಸೋದ್ಯಮ. ಆದ್ದರಿಂದ, ಇಲ್ಲಿ ಸದಾ ಶಾಂತಿ. ಹಿಮಾಚಲ ಪ್ರದೇಶವೆಂದರೆ ಶಾಂತಿಯ ಆಲಯವೆಂದೂ ಪ್ರಖ್ಯಾತಿ.
ಇಲ್ಲಿ ಪ್ರವಾಸಿಗರನ್ನು ದೋಚುವವರಿಲ್ಲ. ಹೆಜ್ಜೆ ಹೆಜ್ಜೆಗೂ ನಿಖರವಾದ ಮಾಹಿತಿಯನ್ನು ಆತ್ಮೀಯತೆಯಿಂದ ಜನ ನೀಡುತ್ತಾರೆ. ಆದರೂ, ಕೆಲವರು ಪ್ರವಾಸಕ್ಕೆ ಮಾರ್ಗದರ್ಶಿಗಳೆಂದು ಹೇಳಿಕೊಳ್ಳುವವರಿದ್ದಾರೆ. ಅಂತಹವರ ವಿರುದ್ಧ ಎಚ್ಚರಿಕೆಯ ಫಲಕಗಳು ಅಲ್ಲಲ್ಲಿ ಕಾಣಿಸುತ್ತವೆ. ಮಾರ್ಗದರ್ಶನಕ್ಕೆ ಸರಕಾರವೇ ಅ—ಕೃತರನ್ನು ನೇಮಿಸಿ, ಗುರುತಿನ ಚೀಟಿಯನ್ನು ಒದಗಿಸುತ್ತದೆ. ಬಗೆಬಗೆಯ ಬಜೆಟ್ನಿಂದ, ಅಂದರೆ ಇನ್ನೂರು ರೂಪಾಯಿಯಿಂದ ಇಪ್ಪತ್ತೈದು ಸಾವಿರ ರೂಪಾಯಿವರೆಗೂ ಹೊಟೇಲ್ಗಳು ಇಲ್ಲಿ ಲಭ್ಯ.
ಶಿಮ್ಲಾದ ಟಾಯ್ ಟ್ರೈನ್
ಶಿಮ್ಲಾ ಸಹಿತ ಹಿಮಾಚಲ ಪ್ರದೇಶದ ಪ್ರೇಕ್ಷಣೀಯ ಸ್ಥಳಗಳ ಹೆಸರುಗಳನ್ನು, ಗಿರಿಶಿಖರಗಳನ್ನು, ನದಿ ಕಿನಾರೆಗಳನ್ನು, ಕಣಿವೆಗಳನ್ನು, ಸ್ಮಾರಕಗಳನ್ನು, ಆಧುನಿಕ ಸಂಭ್ರಮಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಲಾಗಿಲ್ಲ. ಏಕೆಂದರೆ, ಸಂಪೂರ್ಣ ಹಿಮಾಚಲವೇ ಪ್ರೇಕ್ಷಣೀಯ ಸ್ಥಳ, ಪ್ರಕೃತಿ ಸೌಂದರ್ಯದ ಆಡುಂಬೊಲ.
ಈ ಪ್ರದೇಶದಲ್ಲಿ ಸಹಸ್ರಮಾನಗಳಿಂದ ಅಸ್ತಿತ್ವದಲ್ಲಿರುವ ಮೂಲ ನಿವಾಸಿಗಳು, ಬುಡಕಟ್ಟು ಮತ್ತಿತರ ಜನಾಂಗದವರು: ದಾಸರು, ಖಾಸರ, ಪಿಶಾಚರು, ಗುಜ್ಜಾರರು, ಲಾಂಬಾರು, ಖಾಂಪತರು, ಜಾಡರು, ಯಕ್ಷರು, ಕಿರಾತರು, ನಾಗಾಗಳು, ಕಿನ್ನರು, ಕಿಂಪುರುಷರು.... ಪುರಾಣ, ಮಹಾಕಾವ್ಯಗಳ ನೆನಪಾಗುತ್ತಿದೆಯೇ ?
.. .. .. ..
ಹಿಮಾಚಲದಾದ್ಯಂತ ದೇವಿ ಮತ್ತು ಶಿವನಿಗೆ ವಿಶೇಷ ಪೂಜೆ. ಆಂಜನೇಯ ಸಹಿತ ಸರ್ವರ ಆರಾಧನೆಯಿದೆ. ದೇವಿ-ಕಾಳಿಯನ್ನಂತೂ ಸಾರ್ವತ್ರಿಕವಾಗಿ ದೇವಾಲಯಗಳಲ್ಲಿ ಆರಾ—ಸಲಾಗುತ್ತಿದೆ. ಕಾಳಿಯು ಇನ್ನೊಂದು ರೂಪಶ್ಯಾಮಲೆ. ಬೆಟ್ಟಗುಡ್ಡ ಪರ್ವತಗಳಲ್ಲೆಲ್ಲ ಈ ಶ್ಯಾಮಲೆಯ ಆರಾಧನೆ. ಶ್ಯಾಮಲೆಯಿಂದಲೇ ಬಂದಿರುವ ಹೆಸರು ಶಿಮ್ಲಾ.
ಹಿಮಚ್ಚಾದಿತ ಶಿಮ್ಲಾ
ಶಿಮ್ಲಾದಿಂದ ಮುಂಜಾನೆ ನಾವು ಹೊರಟದ್ದು 22 ಕಿ.ಮೀ. ಅಂತರದಲ್ಲಿರುವ ನಾಲೆªàರಾಕ್ಕೆ. ಈ ಬಾರಿ ಮಂಜು, ಮೋಡ, ಮಳೆ ಎಲ್ಲವನ್ನೂ ನೋಡುವ ಅವಕಾಶ. ಆದರೆ, ಮೀಟರುಗಟ್ಟಲೆ ದಪ್ಪ, ಊರಿಗೇ ಊರನ್ನೇ ಆವರಿಸುವ ಹಿಮ ನೋಡಬೇಕಾದರೆ ಡಿಸೆಂಬರ್ನಲ್ಲಿ ಇಲ್ಲಿಗೆ ಬರಬೇಕು. ಟ್ಯಾಕ್ಸಿ ಚಾಲಕ ಭೂಪಿಂದರ್ ಸಿಂಗ್ ಅಲ್ಲಲ್ಲಿ ರಮಣೀಯ ತಾಣಗಳಲ್ಲಿ ವಾಹನ ನಿಲ್ಲಿಸುತ್ತಾ ಅಲ್ಲಿನ ವಿಶೇಷಗಳನ್ನು ಹಿಂದಿಯಲ್ಲಿ ವಿವರಿಸುತ್ತಿದ್ದರು. ಬ್ರಿಟಿಷರ ವೈಸರಾಯ್ಗಳ ಸಹಿತ ಎಲ್ಲಾ ಹಿರಿಯ ಅಧಿಕಾರಿಗಳು ವಿಹರಿಸುತ್ತಿದ್ದ ತಾಣವಿದು.
ಜಗತ್ತಿನ ಜನಪ್ರಿಯ ತಾಣಗಳಲ್ಲೊಂದಾದ ಗಾಲ್ಫ್ಕೋರ್ಸ್ ಇಲ್ಲಿದೆ. ದೇವದಾರು ವೃಕ್ಷಗಳ ನಡುವೆ ಅರಳಿರುವ ಪುಟ್ಟ ಊರಿದು. ಕೋಗೀ ಎಂಬಲ್ಲಿ ಮಹಾನಾಗ್ ದೇವಸ್ಥಾನ. ಉತ್ತರ ಭಾರತದ ಅತೀ ದೊಡ್ಡ ಫಲ ಸಂಸ್ಕರಣಾ ಕೆಂದ್ರವೂ ಇಲ್ಲಿದೆ. ಹಿಮಾಚಲದಲ್ಲಿ ಡಿಡಿಂಬೆಗೂ ಎರಡು ದೇವಾಲಯಗಳಿವೆ.
ಅದ್ಭುತ ಆತಿಥ್ಯ
ನಾಲೆªàರಾ ಸಹಿತ ಶಿಮ್ಲಾದ ವಿವಿಧ ತಾಣಗಳಲ್ಲಿನ ಪ್ರಧಾನ ಆಕರ್ಷಣೆ ಕುದುರೆ ಸವಾರಿ. ನೂರಾರು ಕುದುರೆಗಳು- ಪರಿಣತ, ಚಾಣಾಕ್ಷ ಸವಾರರು. ಸರಕಾರದಿಂದ ಅ—ಕೃತ ಮಾನ್ಯತೆ. ಕಡಿದಾದ ಬೆಟ್ಟಗಳ ಸೌಂದರ್ಯ ವೀಕ್ಷಿಸಲು ಕುದುರೆ ಸವಾರಿ ರೋಮಾಂಚಕ. ನಮ್ಮ ಆತಿಥೇಯರು ಆಗ ಪಾಣಿಪತ್ನಲ್ಲಿ ನೆಲೆಸಿದ್ದ (ಈಗ ಮುಂಬಯಿಯಲ್ಲಿ ಇದ್ದಾರೆ) ಕಾಪೊಳಿ ದಿವಾಕರ ಹೆಬ್ಟಾರ್- ಪ್ರಶೀಲಾ ದಂಪತಿ, ಅವರ ಪುತ್ರಿ ದಿಪಿಂತಿ; ನನ್ನ ಜತೆಯಲ್ಲಿದ್ದ ಶ್ರೀನಾಥ್ ಕುಟುಂಬ.. ಅದಾಗಲೇ ಈ ಅಭಿಯಾನಕ್ಕೆ ಸಿದœರಾಗಿದ್ದರು ! ಸುಮಾರು ಎರಡು ತಾಸುಗಳ ಈ ಕುದುರೆ ಸವಾರಿ ಅಪೂರ್ವ ಅನುಭವ. ಅಲ್ಲಿಂದ ನಾವು ಬಂದದ್ದು ಕುಫ್ರಿಗೆ. ಇದು ಹಿಮಾಚಲದ ಇನ್ನೊಂದು ಜನಪ್ರಿಯ ತಾಣ. ಚಳಿಗಾಲದಲ್ಲಿ ಸಂಪೂರ್ಣ ಹೆಪ್ಪುಗಟ್ಟುವ ಸಂಭ್ರಮ ಸವಿಯಲು ಈ ತಾಣ ಪ್ರಸಿದ್ಧ.
ಇದು ಕೆಲವು ಸ್ಯಾಂಪಲ್ಗಳು ಅಷ್ಟೆ. ಹಾದಿಯುದ್ದಕೂ ಬಗೆಬಗೆಯ ಹಣ್ಣುಗಳನ್ನು ಆಸ್ವಾದಿಸುವುದು ಇನ್ನೊಂದು "ರಸಮಯ' ಅನುಭವ. ಲಿಚಿಯಂತಹ ಹಣ್ಣುಗಳೆಂದರೆ ಪ್ರವಾಸಿಗಳಿಗೆ ಅಚ್ಚುಮೆಚ್ಚು. ಲಸ್ಸಿಯ ಸೊಗಸೇ ಸೊಗಸು. ಸಾಮಾನ್ಯವಾಗಿ ಇಲ್ಲಿ ಮೊಸರನ್ನು ಹೆಚ್ಚಾಗಿ ಬಳಸುತ್ತಾರೆ. ಅದು ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ ಅನ್ನುವುದು ಇದಕ್ಕೆ ಕಾರಣ. ಯಾಕ್ ಮೂಲಕ ಸಮದœವಾಗಿ ಪಡೆಯಲು ಸಾಧ್ಯ.
ನಿಸರ್ಗದ ವೈಭವ
ಶಿಮ್ಲಾ ಸಹಿತ ಹಿಮಾಚಲದಲ್ಲಿ ಗಮನ ಸೆಳೆಯುವ ಅಂಶವೆಂದರೆ ಬೆಟ್ಟಗಳು, ಪರ್ವತಗಳಲ್ಲಿ ನಿರ್ಮಾಣವಾಗಿರುವ ಗುಂಪು ಗುಂಪು ಮನೆಗಳು. ದೂರದಿಂದ ನೋಡಿದರೆ, ಬಣ್ಣಬಣ್ಣದ ಈ ಮನೆಗಳ ಸಮೂಹ ಕೂಡಾ ಅರಳಿದ ಹೂಗೊಂಚಲಿನ ಹಾಗೆಯೇ ಕಾಣಿಸುತ್ತಿದೆ. ಈ ಬಡಾವಣೆಗಳನ್ನು ತಲುಪಲು ಹಾವಿನಂತೆ ಅಂಕುಡೊಂಕಾದ ಹಾದಿಗಳು ! ರಾತ್ರಿ ಈ ಮನೆಗಳ ದೀಪಗಳು ಕೂಡಾ ತಾರೆಗಳು ಮಿನುಗಿದಂತೆ ಕಾಣಿಸುತ್ತದೆ !
.. .. .. ..
ದೇವರುಗಳ ಬಗ್ಗೆ ಅಪಾರ ಶ್ರದ್ಧೆ. ದೇವಿ ಮಂದಿಗಳು ಅನನ್ಯವಾದ ಕೇಂದ್ರಗಳು. ಮೈಲುಗಟ್ಟಲೆ ವಿಸ್ತಾರದಲ್ಲಿ ಬೆಳೆದಿರುವ ವೃಕ್ಷಗಳು. ಬಗೆಬಗೆಯ ಫಲಪುಷ್ಪಗಳು. ಆದ್ದರಿಂದಲೇ, ಇದು ನಿಜ ಅರ್ಥದ ದೇವರ ನಾಡು.
.. .. .. ..
ಶಿಮ್ಲಾದ ಬಗ್ಗೆ ಪ್ರಸಿದœವಾದ ಒಂದು ಉಲ್ಲೇಖ ಹೀಗಿದೆ:
""ನೀವು ಶಿಮ್ಲಾದಿಂದ ನಿಮ್ಮ ಊರಿಗೆ ಮರಳಿ ಹೊರಟು ಬಂದಿರಬಹುದು. ಆದರೆ, ನಿಮ್ಮ ಹೃದಯದಿಂದ ಶಿಮ್ಲಾ ಎಂದೆಂದಿಗೂ ಹೊರಟು ಹೋಗುವುದಿಲ್ಲ'!
No comments:
Post a Comment