Wednesday 20 February 2013

ಪರೀಕ್ಷಾ ಸಿದ್ಧತೆ ಹೇಗಿರಬೇಕು?

ಪರೀಕ್ಷಾ ಕೊಠಡಿಯ ನಿಯಮಗಳು

1. ಪ್ರವೇಶ ಪತ್ರವಿಲ್ಲದೆ ಅಭ್ಯರ್ಥಿಗೆ ಪರೀಕ್ಷೆಯ ಕೊಠಡಿಗೆ ಪ್ರವೇಶ ನೀಡಲಾಗುವುದಿಲ್ಲ.
 2. ಪರೀಕ್ಷೆ ಪ್ರಾರಂಭವಾಗುವುದಕ್ಕೆ ಗೊತ್ತು ಪಡಿಸಿದ ವೇಳೆಗಿಂತ ಹತ್ತು ನಿಮಿಷ ಮುಂಚಿತ ವಾಗಿ ನಿಮ್ಮ ಜಾಗದಲ್ಲಿ ಕುಳಿತುಕೊಳ್ಳಬೇಕು. ಪ್ರಾರಂಭವಾದ ಅರ್ಧ ಗಂಟೆ ಅಥವಾ ನಂತರ ಪರೀಕ್ಷೆಗೆ ಬಂದರೆ ಸೇರಿಸಲಾಗುವುದಿಲ್ಲ.
 3. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಯನ್ನು ಮೊದಲ ಅರ್ಧ ಗಂಟೆ ಆಗುವವರೆಗೆ ಪರೀಕ್ಷಾ ಕೊಠಡಿಯ ಹೊರಗೆ ಹೋಗಲು ಬಿಡುವುದಿಲ್ಲ ಮತ್ತು ಒಮ್ಮೆ ಉತ್ತರ ಪುಸ್ತಕ ಹಿಂದಿರುಗಿಸಿದ ನಂತರ, ಪರೀಕ್ಷಾ ಕೊಠಡಿ ಬಿಟ್ಟು ಹೊರಗೆ ಹೋದ ನಂತರ ಪುನಃ ಪ್ರವೇಶ ನೀಡುವುದಿಲ್ಲ.
4. ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದಂತೆ ಬರೆದಿರುವ ಪುಸ್ತಕ, ಚೀಟಿ, ಮೊಬೈಲ್ ಫೋನ್ ಮತ್ತು ಕ್ಯಾಲ್ಕುಲೇಟರ್ ಬಳಸುವಂತಿಲ್ಲ.
5. ಉತ್ತರ ಪುಸ್ತಕ ಪುರವಣಿ ಮತ್ತು ಗ್ರಾಫ್ ಮೇಲೆ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಕಡ್ಡಾಯವಾಗಿ ಬರೆಯಲೇಬೇಕು. ಮರೆಯಬಾರದು.
6. ಯಾವುದೇ ಕಾರಣದಿಂದ ಗೈರು ಹಾಜರಿ ರುವ ಅಭ್ಯರ್ಥಿಗಳ ಸ್ಥಳದಲ್ಲಿ ಕುಳಿತುಕೊಳ್ಳ ಬಾರದು. ಪರೀಕ್ಷೆ ಬರೆಯಬಾರದು.
7. ವಿದ್ಯಾರ್ಥಿಗಳು ಸಹ ಹಾಜರಾತಿ ಪುಸ್ತಕದಲ್ಲಿ ಸಹಿ ಪಡೆಯಬೇಕು.
8. ಪ್ರಶ್ನೆಪತ್ರಿಕೆಯಲ್ಲಿ ಯಾವ ಮಾಧ್ಯಮದಲ್ಲಿ (ಕನ್ನಡ, ಇಂಗ್ಲಿಷ್) ಉತ್ತರಿಸುತ್ತೇವೆ ಎಂಬುದನ್ನು ಬರೆಯಬೇಕು. ಉತ್ತರ ಪತ್ರಿಕೆಯಲ್ಲಿ ಕೊಠಡಿಯ ಮೇಲ್ವಿಚಾರಕರ ಸಹಿ ಮತ್ತು ಪ್ರವೇಶ ಪತ್ರದಲ್ಲಿ ಯೂ ಸಹಿ ಪಡೆಯಬೇಕು.

ವಿದ್ಯಾರ್ಥಿಗಳಿಗೆ ಸಲಹೆಗಳು: 1. ಪರೀಕ್ಷಾ ಸಮಯದಲ್ಲಿ ಇತರ ಯಾವುದೇ ಕೌಟುಂಬಿಕ ಸಮಸ್ಯೆಗಳಿಗೆ ಗಮನ ಕೊಡಬಾರದು.
2. ಶಿಕ್ಷಕರು ನೀಡಿದ ಅಥವಾ ತಾವೇ ಸಿದ್ಧಪಡಿ ಸಿದ ನೋಟ್ಸ್ ಅನ್ನು ಪ್ರತಿದಿನ ಅವಲೋಕಿಸಿ ಮನನ ಮಾಡಿಕೊಳ್ಳಬೇಕು.
3. ಕಾಲದ ಮಿತಿಯೊಳಗೆ ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೂ ಮನಸ್ಸಿಗೆ ಬಂದ ಅನುಮಾನಗಳನ್ನು ಸಕಾಲದಲ್ಲಿ ಶಿಕ್ಷಕರ ಬಳಿ ಕೇಳಿ ಪರಿಹರಿಸಿ ಕೊಳ್ಳಬೇಕು.
4. ಸಂಭವನೀಯ ಪ್ರಶ್ನೆಗಳನ್ನು ಸ್ವತಃ ತಯಾರು ಮಾಡಿ ಅಥವಾ ಶಿಕ್ಷಕರ ನೆರವಿನಿಂದ ಬರೆದು ಉತ್ತರಗಳನ್ನು ಅಭ್ಯಸಿಸಬೇಕು ಹಾಗೂ ಪ್ರತಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ನಿಖರವಾದ ಉತ್ತರವನ್ನೇ ಬರೆಯಬೇಕು.
5. ಪ್ರಶ್ನೆಗಳ ಅಂಕಕ್ಕೆ ತಕ್ಕಂತೆ ಉತ್ತರ ಬರೆಯ ಬೇಕು. ಕೈ ಬರಹ ಸ್ಪಷ್ಟವಾಗಿರಬೇಕು. ಚಿತ್ರಗಳನ್ನು ಅಂದವಾಗಿ ಬರೆದು ಭಾಗಗಳನ್ನು ಗುರುತಿಸಬೇಕು. ಉತ್ತರ ಪತ್ರಿಕೆಗಳ ಚಿತ್ತು ಮಾಡುವುದು, ಬಣ್ಣ ಬಣ್ಣದ ಶಾಯಿ ಬಳಸುವುದು ಸರಿಯಲ್ಲ.ವಿದ್ಯಾರ್ಥಿಗಳಿಗೆ ನೆನಪಿರಬೇಕಾದ ಅಂಶಗಳು
1. ಪರೀಕ್ಷಾ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಬಯಲು ವದಂತಿಗೆ ಗಮನ ನೀಡಬೇಡಿ.
2. ಪರೀಕ್ಷೆಗಳಲ್ಲಿ ನಕಲು ಮಾಡಿದ್ದಕ್ಕೆ 3 ತಿಂಗಳ ಕಾರಾಗೃಹ ವಾಸ ಹಾಗೂ ಒಂದು ಸಾವಿರ ರೂಪಾಯಿಗಳ ಜುಲ್ಮಾನೆಗೆ ಕಾನೂನಿನಲ್ಲಿ ಅವಕಾಶವಿದೆ.
3. ಪರೀಕ್ಷೆಗಳಲ್ಲಿ ಇತರರಂತೆ ನಟಿಸಿ ಹಾಜರಾ ಗಿದ್ದರೆ 1 ವರ್ಷದ ಕಾರಾಗೃಹ ವಾಸ ಹಾಗೂ 5 ಸಾವಿರ ರೂ.ಗಳ ಜುಲ್ಮಾನೆ ವಿಧಿಸಬಹುದು.
4. ಪರೀಕ್ಷೆಗೆ ಸಂಬಂಧಿಸಿದ ಅಂಕಗಳನ್ನು ವಿದ್ಯಾರ್ಥಿಗಳು ಮಾಹಿತಿ ಹಕ್ಕು ಪಡೆದುಕೊಳ್ಳಲು ನ್ಯಾಯಾಲಯದ ಆದೇಶವಿದೆ.
5. ಪರೀಕ್ಷೆಯಲ್ಲಿ ಬರೆದ ಉತ್ತರ ವ್ಯತ್ಯಾಸ ಗೊಳಿಸಿದರೆ ಯಾವುದೇ ವ್ಯಕ್ತಿಯು ಸಹ ಒಂದು ವರ್ಷ ಕಾರಾಗೃಹ ವಾಸ, 5 ಸಾವಿರ ರೂ.ಗಳು ಜುಲ್ಮಾನೆ ವಿಧಿಸಬಹುದು.
6. ಪ್ರಥಮ ಭಾಷೆ ಹಾಗೂ ಇತರ ವಿಷಯ ಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆಯು 3 ಗಂಟೆಯ ಅವಧಿಯದ್ದಾಗಿರುತ್ತದೆ.
7. ದ್ವಿತೀಯ ಭಾಷೆ ಹಾಗೂ ತೃತೀಯ ಭಾಷೆಯ ಪರೀಕ್ಷೆಗಳು ಎರಡೂವರೆ ಗಂಟೆ ಸಮಯದ್ದಾಗಿರುತ್ತದೆ.8. ಅಂಧ ವಿದ್ಯಾರ್ಥಿಗಳು ಇತರರ ಸಹಾಯ ಪಡೆದು ಪರೀಕ್ಷೆ ಬರೆಯಲು 1 ಗಂಟೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು.
9. ಪ್ರತಿನಿತ್ಯ ಪರೀಕ್ಷಾ ಕೊಠಡಿಗೆ, ಕೇಂದ್ರಕ್ಕೆ ಹೋಗುವ ಮೊದಲು ಸಾಮಗ್ರಿಗಳನ್ನು (ಪ್ರವೇಶ ಪತ್ರ, ಪೆನ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್, ರಬ್ಬರ್...) ಜೊತೆಗೆ ತೆಗೆದುಕೊಂಡು ಹೋಗಲು ಮರೆಯಬಾರದು.10. ಉಪವಾಸ ಮಾಡಿ ಪರೀಕ್ಷೆಗೆ ಹೋಗ ಬೇಡಿ. ಲಘು ಉಪಾಹಾರ ಸೇವನೆ ಅಗತ್ಯ.
11. ದೀರ್ಘ ಕಾಯಿಲೆ ಇರುವವರು ಪ್ರತಿನಿತ್ಯ ಔಷಧ ಸೇವನೆ ಮಾಡಿರಿ. ನಿಲ್ಲಿಸಬೇಡಿ.
12. 10 ನಿಮಿಷದ ಎಚ್ಚರಿಕೆ ಗಂಟೆಗೆ ಮುಂಚೆ ಉತ್ತರ ಬರೆದು ಅವಲೋಕಿಸಿರಿ.
13. ಪ್ರವೇಶ ಪತ್ರದ ಝೆರಾಕ್ಸ್‌ನ್ನು ವಿದ್ಯಾರ್ಥಿ ಗಳು ಇಟ್ಟುಕೊಂಡಿರಬೇಕು. ಪ್ರವೇಶ ಪತ್ರ ಕಳೆದು ಹೋದರೆ ಪರೀಕ್ಷ್ಷಾ ಕೇಂದ್ರದಲ್ಲಿ ಡೂಪ್ಲಿಕೇಟ್ ಹಾಲ್ಟಿಕೇಟ್ ಪಡೆಯಲು ಅವಕಾಶವಿದೆ.

ಶಿಕ್ಷಕರು ಮತ್ತು ಪೋಷಕರು ಮಾಡಬೇಕಾದ ಕೆಲಸಗಳು
1. ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಅಡಿಗ ಲ್ಲಾಗಿರುವ ಈ ಪರೀಕ್ಷೆಯ ಹಂತದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆಯ ವೌಲ್ಯಮಾಪನದಲ್ಲಿ ಕಂಡು ಬಂದ ದೋಷಗಳ ಬಗ್ಗೆ, ರೀತಿ ನೀತಿಗಳ ಬಗ್ಗೆ, ಕಲಿಕಾ ಸುಧಾರಣೆಯ ಬಗ್ಗೆ ಮಾರ್ಗದರ್ಶನ ಮಾಡಬೇಕು.
2. ಶಿಕ್ಷಕರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 1 ಗಂಟೆಗಳ ಕಾಲ ವಿಶೇಷ ತರಗತಿಗಳನ್ನು ನಡೆಸಿ ಮಾರ್ಗದರ್ಶನ ಮಾಡಬೇಕು.
3. ರಸಪ್ರಶ್ನೆ ಆಧಾರಿತ 1 ಮತ್ತು 2 ಅಂಕಗಳ ಪ್ರಶ್ನೆಗಳನ್ನು ರಚಿಸಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ಉತ್ತೇಜನಕ್ಕಾಗಿ ಬಹುಮಾನ ಗಳನ್ನು ನೀಡಿ ಫಲಿತಾಂಶ ಉತ್ತಮಗೊಳ್ಳಲು ದಾರಿ ಮಾಡಬೇಕು.
4. ಗುಂಪು ಚರ್ಚೆ, ವ್ಯಾಕರಣದ ಅಂಶಗಳು, ಇತಿಹಾಸದ ಇಸವಿಗಳು, ಪದ್ಯಗಳ ಭಾವಾರ್ಥ, ಪ್ರಶ್ನೆ ಭಂಡಾರದ ಉತ್ತರಗಳನ್ನು ಕರಾರುವಕ್ಕಾಗಿ ಕಲಿಸಿ, 3 ಗಂಟೆಯೊಳಗೆ ಉತ್ತರಿಸುವಂತೆ ವಿದ್ಯಾರ್ಥಿಗಳನ್ನು ತಯಾರಿ ಮಾಡಬೇಕು. ಹಾಗೂ ಬಾಯಿಪಾಠ ಮಾಡಿ ಉತ್ತರಿಸುವ ಕ್ರಮವನ್ನು ನಿಲ್ಲಿಸಬೇಕು.

ಪರೀಕ್ಷಾ ಕೊಠಡಿಯ ನಿಯಮಗಳು

1. ಪ್ರವೇಶ ಪತ್ರವಿಲ್ಲದೆ ಅಭ್ಯರ್ಥಿಗೆ ಪರೀಕ್ಷೆಯ ಕೊಠಡಿಗೆ ಪ್ರವೇಶ ನೀಡಲಾಗುವುದಿಲ್ಲ

2. ಪರೀಕ್ಷೆ ಪ್ರಾರಂಭವಾಗುವುದಕ್ಕೆ ಗೊತ್ತು ಪಡಿಸಿದ ವೇಳೆಗಿಂತ ಹತ್ತು ನಿಮಿಷ ಮುಂಚಿತ ವಾಗಿ ನಿಮ್ಮ ಜಾಗದಲ್ಲಿ ಕುಳಿತುಕೊಳ್ಳಬೇಕು. ಪ್ರಾರಂಭವಾದ ಅರ್ಧ ಗಂಟೆ ಅಥವಾ ನಂತರ ಪರೀಕ್ಷೆಗೆ ಬಂದರೆ ಸೇರಿಸಲಾಗುವುದಿಲ್ಲ.
 3. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಯನ್ನು ಮೊದಲ ಅರ್ಧ ಗಂಟೆ ಆಗುವವರೆಗೆ ಪರೀಕ್ಷಾ ಕೊಠಡಿಯ ಹೊರಗೆ ಹೋಗಲು ಬಿಡುವುದಿಲ್ಲ ಮತ್ತು ಒಮ್ಮೆ ಉತ್ತರ ಪುಸ್ತಕ ಹಿಂದಿರುಗಿಸಿದ ನಂತರ, ಪರೀಕ್ಷಾ ಕೊಠಡಿ ಬಿಟ್ಟು ಹೊರಗೆ ಹೋದ ನಂತರ ಪುನಃ ಪ್ರವೇಶ ನೀಡುವುದಿಲ್ಲ.
4. ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದಂತೆ ಬರೆದಿರುವ ಪುಸ್ತಕ, ಚೀಟಿ, ಮೊಬೈಲ್ ಫೋನ್ ಮತ್ತು ಕ್ಯಾಲ್ಕುಲೇಟರ್ ಬಳಸುವಂತಿಲ್ಲ.
5. ಉತ್ತರ ಪುಸ್ತಕ ಪುರವಣಿ ಮತ್ತು ಗ್ರಾಫ್ ಮೇಲೆ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಕಡ್ಡಾಯವಾಗಿ ಬರೆಯಲೇಬೇಕು. ಮರೆಯಬಾರದು.
6. ಯಾವುದೇ ಕಾರಣದಿಂದ ಗೈರು ಹಾಜರಿ ರುವ ಅಭ್ಯರ್ಥಿಗಳ ಸ್ಥಳದಲ್ಲಿ ಕುಳಿತುಕೊಳ್ಳ ಬಾರದು. ಪರೀಕ್ಷೆ ಬರೆಯಬಾರದು.
7. ವಿದ್ಯಾರ್ಥಿಗಳು ಸಹ ಹಾಜರಾತಿ ಪುಸ್ತಕದಲ್ಲಿ ಸಹಿ ಪಡೆಯಬೇಕು.
8. ಪ್ರಶ್ನೆಪತ್ರಿಕೆಯಲ್ಲಿ ಯಾವ ಮಾಧ್ಯಮದಲ್ಲಿ (ಕನ್ನಡ, ಇಂಗ್ಲಿಷ್) ಉತ್ತರಿಸುತ್ತೇವೆ ಎಂಬುದನ್ನು ಬರೆಯಬೇಕು. ಉತ್ತರ ಪತ್ರಿಕೆಯಲ್ಲಿ ಕೊಠಡಿಯ ಮೇಲ್ವಿಚಾರಕರ ಸಹಿ ಮತ್ತು ಪ್ರವೇಶ ಪತ್ರದಲ್ಲಿ ಯೂ ಸಹಿ ಪಡೆಯಬೇಕು.
ವಿದ್ಯಾರ್ಥಿಗಳಿಗೆ ಸಲಹೆಗಳು

1. ಪರೀಕ್ಷಾ ಸಮಯದಲ್ಲಿ ಇತರ ಯಾವುದೇ ಕೌಟುಂಬಿಕ ಸಮಸ್ಯೆಗಳಿಗೆ ಗಮನ ಕೊಡಬಾರದು.

2. ಶಿಕ್ಷಕರು ನೀಡಿದ ಅಥವಾ ತಾವೇ ಸಿದ್ಧಪಡಿ ಸಿದ ನೋಟ್ಸ್ ಅನ್ನು ಪ್ರತಿದಿನ ಅವಲೋಕಿಸಿ ಮನನ ಮಾಡಿಕೊಳ್ಳಬೇಕು.
3. ಕಾಲದ ಮಿತಿಯೊಳಗೆ ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೂ ಮನಸ್ಸಿಗೆ ಬಂದ ಅನುಮಾನಗಳನ್ನು ಸಕಾಲದಲ್ಲಿ ಶಿಕ್ಷಕರ ಬಳಿ ಕೇಳಿ ಪರಿಹರಿಸಿ ಕೊಳ್ಳಬೇಕು.
4. ಸಂಭವನೀಯ ಪ್ರಶ್ನೆಗಳನ್ನು ಸ್ವತಃ ತಯಾರು ಮಾಡಿ ಅಥವಾ ಶಿಕ್ಷಕರ ನೆರವಿನಿಂದ ಬರೆದು ಉತ್ತರಗಳನ್ನು ಅಭ್ಯಸಿಸಬೇಕು ಹಾಗೂ ಪ್ರತಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ನಿಖರವಾದ ಉತ್ತರವನ್ನೇ ಬರೆಯಬೇಕು.
5. ಪ್ರಶ್ನೆಗಳ ಅಂಕಕ್ಕೆ ತಕ್ಕಂತೆ ಉತ್ತರ ಬರೆಯ ಬೇಕು. ಕೈ ಬರಹ ಸ್ಪಷ್ಟವಾಗಿರಬೇಕು. ಚಿತ್ರಗಳನ್ನು ಅಂದವಾಗಿ ಬರೆದು ಭಾಗಗಳನ್ನು ಗುರುತಿಸಬೇಕು. ಉತ್ತರ ಪತ್ರಿಕೆಗಳ ಚಿತ್ತು ಮಾಡುವುದು, ಬಣ್ಣ ಬಣ್ಣದ ಶಾಯಿ ಬಳಸುವುದು ಸರಿಯಲ್ಲ.

ವಿದ್ಯಾರ್ಥಿಗಳಿಗೆ ನೆನಪಿಡಬೇಕಾದ ಅಂಶಗಳು

1. ಪರೀಕ್ಷಾ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಬಯಲು ವದಂತಿಗೆ ಗಮನ ನೀಡಬೇಡಿ.

2. ಪರೀಕ್ಷೆಗಳಲ್ಲಿ ನಕಲು ಮಾಡಿದ್ದಕ್ಕೆ

3 ತಿಂಗಳ ಕಾರಾಗೃಹ ವಾಸ ಹಾಗೂ ಒಂದು ಸಾವಿರ ರೂಪಾಯಿಗಳ ಜುಲ್ಮಾನೆಗೆ ಕಾನೂನಿನಲ್ಲಿ ಅವಕಾಶವಿದೆ.
3. ಪರೀಕ್ಷೆಗಳಲ್ಲಿ ಇತರರಂತೆ ನಟಿಸಿ ಹಾಜರಾ ಗಿದ್ದರೆ 1 ವರ್ಷದ ಕಾರಾಗೃಹ ವಾಸ ಹಾಗೂ 5 ಸಾವಿರ ರೂ.ಗಳ ಜುಲ್ಮಾನೆ ವಿಧಿಸಬಹುದು.
4. ಪರೀಕ್ಷೆಗೆ ಸಂಬಂಧಿಸಿದ ಅಂಕಗಳನ್ನು ವಿದ್ಯಾರ್ಥಿಗಳು ಮಾಹಿತಿ ಹಕ್ಕು ಪಡೆದುಕೊಳ್ಳಲು ನ್ಯಾಯಾಲಯದ ಆದೇಶವಿದೆ.
5. ಪರೀಕ್ಷೆಯಲ್ಲಿ ಬರೆದ ಉತ್ತರ ವ್ಯತ್ಯಾಸ ಗೊಳಿಸಿದರೆ ಯಾವುದೇ ವ್ಯಕ್ತಿಯು ಸಹ ಒಂದು ವರ್ಷ ಕಾರಾಗೃಹ ವಾಸ, 5 ಸಾವಿರ ರೂ.ಗಳು ಜುಲ್ಮಾನೆ ವಿಧಿಸಬಹುದು.
6. ಪ್ರಥಮ ಭಾಷೆ ಹಾಗೂ ಇತರ ವಿಷಯ ಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆಯು 3 ಗಂಟೆಯ ಅವಧಿಯದ್ದಾಗಿರುತ್ತದೆ.
7. ದ್ವಿತೀಯ ಭಾಷೆ ಹಾಗೂ ತೃತೀಯ ಭಾಷೆಯ ಪರೀಕ್ಷೆಗಳು ಎರಡೂವರೆ ಗಂಟೆ ಸಮಯದ್ದಾಗಿರುತ್ತದೆ.8. ಅಂಧ ವಿದ್ಯಾರ್ಥಿಗಳು ಇತರರ ಸಹಾಯ ಪಡೆದು ಪರೀಕ್ಷೆ ಬರೆಯಲು 1 ಗಂಟೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು.
9. ಪ್ರತಿನಿತ್ಯ ಪರೀಕ್ಷಾ ಕೊಠಡಿಗೆ, ಕೇಂದ್ರಕ್ಕೆ ಹೋಗುವ ಮೊದಲು ಸಾಮಗ್ರಿಗಳನ್ನು (ಪ್ರವೇಶ ಪತ್ರ, ಪೆನ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್, ರಬ್ಬರ್...) ಜೊತೆಗೆ ತೆಗೆದುಕೊಂಡು ಹೋಗಲು ಮರೆಯಬಾರದು.10. ಉಪವಾಸ ಮಾಡಿ ಪರೀಕ್ಷೆಗೆ ಹೋಗ ಬೇಡಿ. ಲಘು ಉಪಾಹಾರ ಸೇವನೆ ಅಗತ್ಯ.
11. ದೀರ್ಘ ಕಾಯಿಲೆ ಇರುವವರು ಪ್ರತಿನಿತ್ಯ ಔಷಧ ಸೇವನೆ ಮಾಡಿರಿ. ನಿಲ್ಲಿಸಬೇಡಿ.
12. 10 ನಿಮಿಷದ ಎಚ್ಚರಿಕೆ ಗಂಟೆಗೆ ಮುಂಚೆ ಉತ್ತರ ಬರೆದು ಅವಲೋಕಿಸಿರಿ.
13. ಪ್ರವೇಶ ಪತ್ರದ ಝೆರಾಕ್ಸ್‌ನ್ನು ವಿದ್ಯಾರ್ಥಿ ಗಳು ಇಟ್ಟುಕೊಂಡಿರಬೇಕು. ಪ್ರವೇಶ ಪತ್ರ ಕಳೆದು ಹೋದರೆ ಪರೀಕ್ಷ್ಷಾ ಕೇಂದ್ರದಲ್ಲಿ ಡೂಪ್ಲಿಕೇಟ್ ಹಾಲ್ಟಿಕೇಟ್ ಪಡೆಯಲು ಅವಕಾಶವಿದೆ.

ಶಿಕ್ಷಕರು ಮತ್ತು ಪೋಷಕರು ಮಾಡಬೇಕಾದ ಕೆಲಸಗಳು
1. ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಅಡಿಗ ಲ್ಲಾಗಿರುವ ಈ ಪರೀಕ್ಷೆಯ ಹಂತದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆಯ ವೌಲ್ಯಮಾಪನದಲ್ಲಿ ಕಂಡು ಬಂದ ದೋಷಗಳ ಬಗ್ಗೆ, ರೀತಿ ನೀತಿಗಳ ಬಗ್ಗೆ, ಕಲಿಕಾ ಸುಧಾರಣೆಯ ಬಗ್ಗೆ ಮಾರ್ಗದರ್ಶನ ಮಾಡಬೇಕು.
2. ಶಿಕ್ಷಕರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 1 ಗಂಟೆಗಳ ಕಾಲ ವಿಶೇಷ ತರಗತಿಗಳನ್ನು ನಡೆಸಿ ಮಾರ್ಗದರ್ಶನ ಮಾಡಬೇಕು.
3. ರಸಪ್ರಶ್ನೆ ಆಧಾರಿತ 1 ಮತ್ತು 2 ಅಂಕಗಳ ಪ್ರಶ್ನೆಗಳನ್ನು ರಚಿಸಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ಉತ್ತೇಜನಕ್ಕಾಗಿ ಬಹುಮಾನ ಗಳನ್ನು ನೀಡಿ ಫಲಿತಾಂಶ ಉತ್ತಮಗೊಳ್ಳಲು ದಾರಿ ಮಾಡಬೇಕು.
4. ಗುಂಪು ಚರ್ಚೆ, ವ್ಯಾಕರಣದ ಅಂಶಗಳು, ಇತಿಹಾಸದ ಇಸವಿಗಳು, ಪದ್ಯಗಳ ಭಾವಾರ್ಥ, ಪ್ರಶ್ನೆ ಭಂಡಾರದ ಉತ್ತರಗಳನ್ನು ಕರಾರುವಕ್ಕಾಗಿ ಕಲಿಸಿ, 3 ಗಂಟೆಯೊಳಗೆ ಉತ್ತರಿಸುವಂತೆ ವಿದ್ಯಾರ್ಥಿಗಳನ್ನು ತಯಾರಿ ಮಾಡಬೇಕು. ಹಾಗೂ ಬಾಯಿಪಾಠ ಮಾಡಿ ಉತ್ತರಿಸುವ ಕ್ರಮವನ್ನು ನಿಲ್ಲಿಸಬೇಕು.

Monday 18 February 2013

ಮಕ್ಕಳೇ, ಕೇವಲ 'ಪರೀಕ್ಷಾರ್ಥಿ' ಆಗದೆ ನಿಜವಾದ ಅರ್ಥದಲ್ಲಿ ವಿದ್ಯಾರ್ಥಿ ಆಗಿ !

ಇತ್ತೀಚಿಗೆ, ಅಧ್ಯಯನ ಅಂದರೆ ಕೇವಲ ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಹೋಗಲು ಮಾಡುವ ಪ್ರಯತ್ನಕ್ಕೆ ಸೀಮಿತವಾಗಿದೆ. ಇಂತಹ ಅಧ್ಯಯನ ಕೇವಲ ಪರೀಕ್ಷೆಯ ಪೂರ್ವ ತಯಾರಿ ಆಗಿದ್ದ ಕಾರಣ, ಪರೀಕ್ಷೆ ಮುಗಿದ ನಂತರ ಕಾಲಾಂತರದಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮಕ್ಕಳಲ್ಲಿ ವಿಚಾರಿಸಿದಾಗ ಉತ್ತರಗಳನ್ನು ನೀಡುವಲ್ಲಿ ಅವರು ಅಶಕ್ತರಾಗಿರುತ್ತಾರೆ. ಆದುದರಿಂದ 'ವಿದ್ಯಾರ್ಥಿ' ಆಗದೆ ಮಕ್ಕಳು ತಿಳಿಯದೆ 'ಪರೀಕ್ಷಾರ್ಥಿ' ಆಗುತ್ತಾರೆ.
. ಮಕ್ಕಳೇ, ನಿಮ್ಮ ಧ್ಯೇಯ, ಕೇವಲ ಪರೀಕ್ಷೆಯಲ್ಲಿ ಉತ್ತಿರ್ಣರಾಗುವುದಕ್ಕೆ ಸೀಮಿತವಾಗಿರಬಾರದು. ಅಂದರೆ ದೊಡ್ಡವರಾದ ನಂತರ ಗಳಿಸಿದ ವಿದ್ಯೆಯಿಂದ ವಿದ್ಯಾದಾನ ಮಾಡುವಂತಿರಬೇಕು, ಗಳಿಸಿದ ವಿದ್ಯೆ ರಾಷ್ಟ್ರಕ್ಕಾಗಿ ಉಪಯುಕ್ತವಾಗಿರಬೇಕು, ಎಂಬುದೇ ನಿಮ್ಮ ಉದ್ದೇಶವಾಗಿರಬೇಕುರಾಷ್ಟ್ರಕ್ಕಾಗಿ ಸರ್ವಸ್ವವನ್ನೇ ಅರ್ಪಣೆ ಮಾಡಿದ ಲೋಕಮಾನ್ಯ ಟಿಳಕ, ಸ್ವಾತಂತ್ರ್ಯವೀರ ಸಾವರಕರ, ಧರ್ಮಕ್ಕಾಗಿ ಜೀವನ ಸವೆಸಿದ ಸ್ವಾಮಿ ವಿವೇಕಾನಂದ ಮತ್ತಿತರರ ಚರಿತ್ರೆಗಳನ್ನು ಅಭ್ಯಾಸ ಮಾಡಿದಾಗ ಇದು ಲಕ್ಷ್ಯಕ್ಕೆ ಬರುತ್ತದೆ.
. ಒಂದು ವಿಷಯದ ಅಧ್ಯಯನ ಮಾಡುವುದೆಂದರೆ ಕೇವಲ ಪರೀಕ್ಷೆಯಲ್ಲಿ ಉತ್ತಿರ್ಣರಾಗಲು ಆ ವಿಷಯವನ್ನು ಓದುವುದಲ್ಲದೆ, ಆ ವಿಷಯವನ್ನು ತಿಳಿದುಕೊಂಡು ಕೃತಿಯಲ್ಲಿ ತರುವುದು ಎಂದಾಗುತ್ತದೆ. ಮುಂದಿನ ಎರಡು ಉದಾಹರಣೆಗಳಿಂದ ಅದು ಸ್ಪಷ್ಟವಾಗಬಹುದು. ಪೌರನೀತಿಯಲ್ಲಿ (civics) ಹೇಳಿರುವಂತೆ, 'ವಾಹನವನ್ನು ಎಡಬದಿಯಲ್ಲಿ ಚಲಾಯಿಸಿ' ಎಂದು. ಪ್ರತ್ಯಕ್ಷ ಜೀವನದಲ್ಲಿಯೂ ನಾವು ಸೈಕಲನ್ನು ಯಾವಾಗಲೂ ಎಡಬದಿಯಲ್ಲಿ ನಡೆಸಬೇಕು. ವಿಜ್ಞಾನ ಹೇಳುತ್ತದೆ, 'ಮುಚ್ಚಿಡದ ಖಾದ್ಯಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕವೆಂದು'. ಈ ವಿಷಯವನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು ಮತ್ತು ಪ್ರವಾಸಕ್ಕೆ ಹೋದಾಗ ಮುಚ್ಚಿಡದ ಖಾದ್ಯಪದಾರ್ಥಗಳನ್ನು ತಿನ್ನಬಾರದು.
ಮನಸ್ಸಿನಲ್ಲಿರುವ ಪರೀಕ್ಷೆಯ ಅಂಜಿಕೆ ಅಥವಾ ಚಿಂತೆಯನ್ನು ಹೇಗೆ ದೂರ ಮಾಡುವಿರಿ?
ಮಕ್ಕಳೇ, ಪರೀಕ್ಷೆ ಸಮೀಪಿಸಿದಂತೆ, ನಿಮ್ಮಲ್ಲಿ ಅನೇಕರಿಗೆ ಹೊಟ್ಟೆ ನೋವು ಬರುವುದು, ಕೆಲವರಿಗೆ ಹುಷಾರಿಲ್ಲದಾಗುವುದು ಇತ್ಯಾದಿ ಕಂಡುಬರುತ್ತದೆ. ಪರೀಕ್ಷೆಯ ಹೆದರಿಕೆ ಅಥವಾ ಚಿಂತೆ ಹೋಗಲಾಡಿಸಲು ಮುಂದಿನ ವಿಚಾರಗಳನ್ನು ನೆನಪಿನಲ್ಲಿ ಇಡಬೇಕು.. ನಕಾರಾತ್ಮಕ ವಿಚಾರ ಮಾಡಬಾರದು ಉದಾ. 'ಉತ್ತರ ಪತ್ರಿಕೆಯಲ್ಲಿ ಬರೆಯುವಾಗ ನನಗೆ ಏನು ನೆನಪಿಗೆ ಬರಲಿಕ್ಕಿಲ್ಲ' ಇತ್ಯಾದಿ. ಹೀಗೆ ನಕಾರಾತ್ಮಕ ವಿಚಾರ ಮನಸ್ಸಿನಲ್ಲಿ ಬಂದರೆ ಅವುಗಳನ್ನು ಬರೆದು, ಆ ವಿಷಯವನ್ನು ತಾಯಿ-ತಂದೆಗೆ, ಅಣ್ಣನಿಗೆ ಅಥವಾ ಶಿಕ್ಷಕರಿಗೆ ತಿಳಿಸಿ ಅವರ ಸಲಹೆ ಪಡೆಯಬೇಕು..
.ಸ್ವಂತ ಕ್ಷಮತೆಯನ್ನು ತಿಳಿದುಕೊಂಡಿರಬೇಕು ಅವನಿಗೆ ಇಷ್ಟು ಅಂಕಗಳು ಸಿಕ್ಕಿವೆ ನನಗೂ ಅಷ್ಟೇ ಸಿಗಬೇಕು ಹೀಗೆ ಇತರರೊಂದಿಗೆ ತುಲನೆಯನ್ನು ಮಾಡಬಾರದು.
. ಪರೀಕ್ಷೆಯಲ್ಲಿ ಸಿಗುವ ಅಂಕಗಳೇ ಸರ್ವಸ್ವ ಎಂದು ತಿಳಿಯಬಾರದು.
. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಬೇಕು. ಅದರಿಂದ ಆತ್ಮವಿಶ್ವಾಸ ಬೇಳೆಯುತ್ತದೆ.
. ಕೆಲವು ದಿನಗಳ ಮುಂಚೆಯೆ ಪರೀಕ್ಷೆಯ ಪ್ರಸಂಗದ ಪ್ರಾತ್ಯಕ್ಷಿಕೆಯನ್ನು ಮಾಡಬೇಕು ಇದು ಪರೀಕ್ಷೆಯ ಒತ್ತಡ, ಅಂಜಿಕೆ ಮುಂತಾದ ಸ್ವಭಾವ ದೋಷಗಳನ್ನು ದೂರ ಮಾಡಲು ಉಪಯುಕ್ತ ಮಾನಸೋಪಚಾರ ಪದ್ಧತಿಯಾಗಿದೆ. ಹೀಗೆ ಮಾಡುವಾಗ 'ನಮಗೆ ಎಲ್ಲ ಸಾಧ್ಯವಾಗುತ್ತದೆ', ಎಂದು ಕಲ್ಪನೆ ಮಾಡಿ ಆ ಸೂಚನೆಯನ್ನು ಮನಸ್ಸಿಗೆ ನೀಡಬೇಕು.
. ಪರೀಕ್ಷೆಗೆ ಹೋಗುವ ಮುನ್ನ ಬಡಿದಾಟ, ಹತ್ಯೆ ಇತ್ಯಾದಿ ಪ್ರಸಂಗಗಳಿರುವಂತಹ ಚಲನಚಿತ್ರಗಳನ್ನು ನೋಡಬಾರದು. ನಾವು ಆ ಪ್ರಸಂಗದ ಬಗ್ಗೆಯೇ ವಿಚಾರ ಮಾಡುತ್ತಿರುತ್ತೇವೆ. ಅದರಿಂದ ನಮ್ಮ ಮನಸ್ಸು ದೂಷಿತವಾಗುತ್ತದೆ. ಇದರಿಂದ ಮನಸ್ಸಿನ ಏಕಾಗ್ರತೆಯ ಮೇಲೆ ಪರಿಣಾಮ ಆಗುತ್ತದೆ. ಆದುದರಿಂದ ಪರೀಕ್ಷೆಯ ಮುಂಚೆ ಸಾಧ್ಯವಾದಷ್ಟು ಆನಂದದ ಕ್ಷಣಗಳನ್ನು ನೆನಪಿಸಿಕೊಳ್ಳಬೇಕು.
. ಪರೀಕ್ಷೆಗೆ ಹೋಗುವ ಮುನ್ನ ಮನೆಯಲ್ಲಿಯೇ ಅನ್ನ ಪದಾರ್ಥಗಳನ್ನು ಸೇವಿಸಬೇಕು; ಕಾರಣ ಅನ್ನವನ್ನು ತಯಾರಿಸುವ ವ್ಯಕ್ತಿಯ ಮನಸ್ಸಿನಲ್ಲಿರುವ ವಿಚಾರಗಳ ಪರಿಣಾಮ ಅನ್ನದ ಮೇಲೆ ಆಗುತ್ತದೆ ಮತ್ತು ಆ ಅನ್ನವನ್ನು ಸೇವಿಸಿದವರ ಮೇಲೆಯೂ ಆಗುತ್ತದೆ. ಹೊರಗಿನ (ಹೋಟೆಲ್, ಕ್ಯಾಂಟೀನ್) ಅನ್ನ ವ್ಯವಸಾಯದ ದೃಷ್ಟಿಯಿಂದ ತಯಾರಿಸಿರುತ್ತಾರೆ, ಆದರೆ ಮನೆಯವರು ನಮ್ಮ ಮೇಲಿನ ಪ್ರೀತಿಯಿಂದ ಅದನ್ನು ತಯಾರಿಸಿರುವುದರಿಂದ ಅದು ಸಾತ್ವಿಕವಾಗಿರುತ್ತದೆ.
ಮಕ್ಕಳೇ, ಮೇಲೆ ತಿಳಿಸಿರುವ ಪ್ರತಿಯೊಂದು ಕೃತಿ ನಿಮ್ಮ ನಿಯಂತ್ರಣದಲ್ಲಿ ಇದೆಯೆ? ಅದಕ್ಕೆ ಪರೀಕ್ಷೆಯ ಒತ್ತಡ ಏಕೆ ತೆಗೆದುಕೊಳ್ಳುವಿರಿ? ಅದೆಲ್ಲವನ್ನು ಈಗ ಮರೆತು ಬಿಡಿ ಮತ್ತು ಪರೀಕ್ಷೆಯನ್ನು ಆನಂದದಿಂದ ಎದುರಿಸಿ!

ಪ್ರಶ್ನೆಪತ್ರಿಕೆಯನ್ನು ಉತ್ತರಿಸುವ ಬಗೆ

ಮಿತ್ರರೇಪರೀಕ್ಷಾ ಕೇಂದ್ರದಲ್ಲಿ ನಮ್ಮ ಮನಸ್ಥಿತಿ ಹೇಗಿರುತ್ತದೆ ಅಂದರೆಕೈಯಲ್ಲಿ ಪ್ರಶ್ನೆಪತ್ರಿಕೆ ಹಿಡಿದ ಕೂಡಲೇ ಅದನ್ನು ಉತ್ತರಿಸಲು ಪ್ರಾರಂಭಿಸಬೇಕೆಂದು. ಇದರಿಂದಾಗಿ ಕೆಲವು ಮುಖ್ಯವಾದ ಸೂಚನೆಗಳನ್ನು ಓದಿ ಪಾಲಿಸದಿರುವುದರಿಂದ ನಮ್ಮಿಂದ ತಪ್ಪುಗಳು ಆಗುವ ಸಾಧ್ಯತೆಗಳಿವೆ. ಇಂತಹ ತಪ್ಪುಗಳನ್ನು ತಡೆಗಟ್ಟಲು ಮುಂದೆ ಸೂಚಿಸಿರುವ ಅಂಶಗಳನ್ನು ಗಮನವಿಟ್ಟು ಓದಿ.
 
ಪ್ರಶ್ನೆಗಳ ಬಗ್ಗೆ ವಿಚಾರ ಮಾಡಬೇಕು!
ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಏನು ಕೇಳಿದ್ದಾರೆ, ಎಷ್ಟು ಅಂಶಗಳನ್ನು ಬರೆಯಬೇಕು, ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಬರೆಯಲು ಪ್ರಾರಂಭಿಸಬೇಕು. ‘ಸಿದ್ಧಾಂತಗಳನ್ನುಬರೆಯಬಾರದು ಅಥವಾ ಚಿತ್ರವನ್ನು ಬಿಡಿಸಬಾರದು’, ಎಂದು ಬರೆದಿದ್ದರೆ ಹಾಗೆ ಮಾಡಬಾರದು.
. ಪ್ರತಿಯೊಂದು ಪ್ರಶ್ನೆಗೆ ಎಷ್ಟು ಅಂಕಗಳಿವೆ, ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಉತ್ತರ ಬರೆಯುವಾಗ ಅದಕ್ಕೆ ಎಷ್ಟು ಸಮಯ ಕೊಡಬೇಕು ಎಂಬುದನ್ನು ನಿರ್ಧರಿಸಬೇಕು. ಅದರಂತೆ ನಮ್ಮ ಉತ್ತರ ಬರೆದು ಆಗುತ್ತಿದೆಯೋ ಅಥವಾ ಇಲ್ಲವೋ, ಎಂಬುದರ ಕಡೆ ಗಮನವಿಡಬೇಕು.
. ಆದಷ್ಟು ಸುಲಭ ಪ್ರಶ್ನೆಗಳನ್ನು ಮೊದಲು ಉತ್ತರಿಸಬೇಕು. ಕಠಿಣ ಪ್ರಶ್ನೆಗಳಿಗೆ ಹೆಚ್ಚು ಸಮಯವನ್ನು ಕೊಟ್ಟು ಕೈಯಲ್ಲಿರುವ ಸುಲಭ ಪ್ರಶ್ನೆಗಳ ಅಂಕಗಳನ್ನು ಕಳೆದುಕೊಳ್ಳಬಾರದು.
. ಆವಶ್ಯಕವಿರುವ ಎಲ್ಲ ಪ್ರಶ್ನೆಗಳನ್ನು ಮೊದಲು ಬಿಡಿಸಿ ಸಮಯ ಉಳಿದರೆ ಮಾತ್ರ ಹೆಚ್ಚಿನ ಪ್ರಶ್ನೆಗಳನ್ನು ಬಿಡಿಸಬೇಕು.
 
ಪ್ರಶ್ನೆಪತ್ರಿಕೆಯನ್ನು ಬಿಡಿಸುವಾಗ ವಹಿಸಿಕೊಳ್ಳಬೇಕಾದ ಕಾಳಜಿ
. ಹೊಸ ಪ್ರಶ್ನೆಗಳ ಉತ್ತರವನ್ನು ಹೊಸ ಪುಟದಲ್ಲಿ ಬರೆಯಲು ಪ್ರಾರಂಭಿಸಬೇಕು. ಪ್ರತಿಯೊಂದು ಪುಟದಲ್ಲಿ ಬದಿಯನ್ನು (ಮಾರ್ಜಿನ್) ಬಿಡಬೇಕು.
.ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳ ಕ್ರಮಕ್ಕನುಸಾರ ಉತ್ತರಗಳನ್ನು ಬರೆಯದಿದ್ದರೆ ಅಥವಾ ಯಾವುದಾದರೊಂದು ಮುಖ್ಯ ಪ್ರಶ್ನೆಯ ಉಪಪ್ರಶ್ನೆಯ ಉತ್ತರವನ್ನು ಪ್ರತ್ಯೇಕ ಪುಟಗಳಲ್ಲಿ ಬರೆದರೂ ನಡೆಯುತ್ತದೆ; ಆದರೆ ಪ್ರಶ್ನೆ ಮತ್ತು ಉಪಪ್ರಶ್ನೆಯ ಕ್ರಮಾಂಕಗಳನ್ನು ಕಾಳಜಿಪೂರ್ವಕವಾಗಿ ಸರಿಯಾಗಿಯೇ ಬರೆಯಬೇಕು.
.ಪ್ರಶ್ನೆಯ ಉತ್ತರವನ್ನು ಬರೆಯುವಾಗಲೇ ಉತ್ತರವನ್ನು ಪರಿಶೀಲಿಸಬಹುದಾದರೆ ಒಳ್ಳೆಯದು, ಇಲ್ಲದಿದ್ದರೆ ಕೊನೆಯ ೧೦ ನಿಮಿಷಗಳನ್ನು ಸಂಪೂರ್ಣ ಉತ್ತರಪತ್ರಿಕೆಯನ್ನು ಪರಿಶೀಲಿಸಲು ಇಡಬೇಕು.
.ಉತ್ತರಪತ್ರಿಕೆಯಲ್ಲಿ (ಭೇದದ) ವ್ಯತ್ಯಾಸದ ಅಂಶಗಳನ್ನು ಬರೆಯುವಾಗ ತುಲನಾತ್ಮಕವಾಗಿ ಬರೆಯಬೇಕು.
.ಪರೀಕ್ಷಾ ಕೊಠಡಿಯಲ್ಲಿ ಇತರ ವಿದ್ಯಾರ್ಥಿಗಳು ಏನಾದರೂ ಕೇಳಿದರೆ, ಅವರೆಡೆಗೆ ಗಮನ ಕೊಡದೇ ನಮ್ಮ ಉತ್ತರಪತ್ರಿಕೆಯ ಮೇಲೆ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಬೇಕು ಮತ್ತು ಸಂಪೂರ್ಣ ಪ್ರಶ್ನೆಪತ್ರಿಕೆಯನ್ನು ಉತ್ತರಿಸಬೇಕು.
 
ಗಣಿತ ಮತ್ತು ವಿಜ್ಞಾನ, ಈ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವಾಗ ವಹಿಸಬೇಕಾದ ಕಾಳಜಿ
. ಗಣಿತದ ಪ್ರಶ್ನೆಗಳನ್ನು ಉತ್ತರಿಸುವಾಗ ಅಂಕಿ-ಅಂಶಗಳ ತಪ್ಪುಗಳ ಕಡೆಗೆ ಗಮನವಿರಲಿ. 
. ಗಣಿತದ ಪ್ರಶ್ನೆಗಳನ್ನು ಉತ್ತರಿಸುವಾಗ ಕರಡು ಮತ್ತು ಚೊಕ್ಕ (ರಫ್/ಫೇರ್) ಲೆಕ್ಕ ಎಂದು ಬಿಡಿಸಿ ಸಮಯ ವ್ಯರ್ಥ ಮಾಡಬಾರದು. ಉತ್ತರ ಪತ್ರಿಕೆಯಲ್ಲಿ ಬಲಬದಿಗೆ ಅವಶ್ಯಕತೆಗನುಸಾರ ಚಿಕ್ಕ ಚಿಕ್ಕ ಲೆಕ್ಕಗಳನ್ನು ಮಾಡಬಹುದು.
. ಗಣಿತ ಮತ್ತು ವಿಜ್ಞಾನದ ಉತ್ತರಪತ್ರಿಕೆಗಳಲ್ಲಿ ಆಯಾ ಘಟಕಗಳನ್ನು (ಯುನಿಟ್ಸ್) ಬರೆಯಲು ಮರೆಯದಿರಿ. ಬರೆಯದಿದ್ದರೆ ದಂಡರೂಪದಲ್ಲಿ ಅಂಕಗಳನ್ನು ಕಡಿಮೆ ಮಾಡಲಾಗುತ್ತದೆ.
(
ಸಂದರ್ಭ : ದೈನಿಕ ಗೋಮಾಂತಕ, ೧೧.೦೩.೨೦೧೧)
 
ಪ್ರಶ್ನೆಗೆ ಉತ್ತರ ನೆನೆಪಾಗದೆ ಇದ್ದಲ್ಲಿ ಮಾಡಬೇಕಾದ ಪ್ರಾರ್ಥನೆ
ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವಾಗ ಯಾವುದಾದರೂ ಉತ್ತರ ನೆನೆಪು ಆಗದೆ ಇದ್ದರೆ ಕುಲದೇವರಿಗೆ ಅಥವಾ ಇಷ್ಟ ದೇವತೆಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು 'ನನ್ನ ಬುದ್ಧಿಯ ಮೇಲೆ ಬಂದಿರುವ ಕಪ್ಪು ಆವರಣವು ನಾಶವಾಗಲಿ, ಮತ್ತು ನನಗೆ ಈ ಪ್ರಶ್ನೆಯ ಯೋಗ್ಯ ಉತ್ತರ ನೆನಪು ಆಗುವಂತಾಗಲಿ'.

ಮಕ್ಕಳೇ, ನಿಮ್ಮಲ್ಲಿ ಈ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಿ !

. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಹಾಗೂ ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಿ.
. ರಸ್ತೆಯಲ್ಲಿ ಹೋಗುವಾಗ ಉಗುಳಬೇಡಿ, ಕಸವನ್ನು ಎಸೆಯಬೇಡಿ.
. ನಿಮಗೆ ತಿನ್ನುವ ಪದಾರ್ಥಗಳು ಸಿಕ್ಕಿದರೆ ಅದನ್ನು ಎಲ್ಲರಿಗೂ ಹಂಚಿ ತಿನ್ನಬೇಕು. ಅಂದರೆ ಸ್ವಂತ ಸುಖದಲ್ಲಿ ಎಲ್ಲರನ್ನೂ ಸಹಭಾಗಿಗಳಾಗಿ ಮಾಡಿಕೊಳ್ಳಬೇಕು.
. ಕೊಟ್ಟ ಮಾತು ಮತ್ತು ಸಮಯವನ್ನು ತಪ್ಪಬಾರದು.
. ಮನೆಯಿಂದ ಹೊರಗಡೆ ತೆರಳುವಾಗ ಪ್ರತಿಯೊಂದು ಬಾರಿಯೂ ದೇವರಿಗೆ ನಮಸ್ಕರಿಸಿ ಹೋರಡಬೇಕು, ಮತ್ತು ಮನೆಯಲ್ಲಿರುವ ಹಿರಿಯರಿಗೆ 'ಎಲ್ಲಿ ಹೋಗುತ್ತಿದ್ದೇನೆ' ಎಂದು ತಿಳಿಸಿ ಹೋಗಬೇಕು.
. ಯಾರಾದರೂ ಸಿಕ್ಕಿದರೆ ನಗು ಮುಖದಿಂದ ಅವರನ್ನು ವಂದಿಸಬೇಕು. ಎಲ್ಲರೊಂದಿಗೂ ವಿನಮ್ರತೆಯಿಂದ ವ್ಯವಹರಿಸಬೇಕು.
. ವಯಸ್ಸಿನಲ್ಲಿ, ಜ್ಞಾನದಲ್ಲಿ ನಮಗಿಂತ ಹಿರಿಯರನ್ನು ಮತ್ತು ಸಂತರನ್ನು ಆದರದಿಂದ ನೋಡಿಕೊಳ್ಳಬೇಕು.
. ಇಬ್ಬರು ಮಾತನಾಡುವಾಗ ಮಧ್ಯದಲ್ಲಿ ಮಾತನಾಡಬಾರದು.
. ದೊಡ್ಡವರ ಮುಂದೆ ಕುರ್ಚಿ ಅಥವಾ ಎತ್ತರದ ಸ್ಥಳದಲ್ಲಿ ಕುಳಿತುಕೊಳ್ಳಬಾರದು.
೧೦. ಯಾರನ್ನೂ ಹೀಯಾಳಿಸಿ ಅಥವಾ ನಿಂದಿಸಿ ಮಾತನಾಡಬಾರದು.
೧೧. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಬೇಕು. ಅವಶ್ಯಕತೆಗನುಸಾರ ಇತರರಿಗೆ ಸಹಾಯ ಮಾಡಬೇಕು.
೧೨. ಯಾರ ಬಗ್ಗೆಯೂ ಕೆಟ್ಟ ವಿಚಾರಗಳನ್ನು ಮಾಡಬಾರದು ಮತ್ತು ಯಾರಿಗೂ ದುಃಖವನ್ನು ನೀಡಬಾರದು.
೧೩. ನಾವು ಏನಾದರೂ ವಿಷಯವನ್ನು ಕಲಿತರೆ, ಆ ಜ್ಞಾನವನ್ನು ಇತರರಿಗೂ ಕಲಿಸಿಕೊಡಿ. ಜ್ಞಾನವನ್ನು ಹಂಚಿಕೊಂಡರೆ ಬೆಳೆಯುತ್ತದೆ ಎಂದು ನೆನಪಿರಲಿ.

ಮಕ್ಕಳೇ, ಶಿಕ್ಷಕರೊಂದಿಗೆ ನೀವು ಹೇಗೆ ವರ್ತಿಸುವಿರಿ?

. ಶಾಲೆಯಲ್ಲಿ ಶಿಕ್ಷಕರನ್ನು 'ಸರ್' ಅಥವಾ 'ಮೇಡಂ' ಬದಲು 'ಗುರುಗಳೇ' ಎಂದು ಸಂಬೋಧಿಸಿ.
ಶಿಕ್ಷಕರ ಭೇಟಿಯಾದಾಗ, ಕೈ ಜೋಡಿಸಿ 'ನಮಸ್ಕಾರ ಗುರುಗಳೇ' ಎಂದು ವಂದಿಸಿ.
. ಉತ್ಸವಗಳ ಸಂದರ್ಭದಲ್ಲಿ ಶಿಕ್ಷಕರನ್ನು ನಮಸ್ಕರಿಸುವಾಗ, ಬಗ್ಗಿ ನಮಸ್ಕರಿಸಿ.
ಶಿಕ್ಷರತ್ತ ಆದರದಿಂದ ವ್ಯವಹರಿಸಿ; ಅವರನ್ನು ಮಾತನಾಡಿಸುವಾಗ ನಿಮ್ಮಲ್ಲಿ ನಮ್ರತೆ ಮತ್ತು ಪ್ರೇಮವಿರಲಿ.
. ನಿಮ್ಮ ತರಗತಿಯಲ್ಲಿರುವ ಇತರ ಮಕ್ಕಳಿಗೂ ಶಿಕ್ಷಕರನ್ನು ಗೌರವಿಸುವಂತೆ ಪ್ರೇರೇಪಿಸಿ.
. ಶಿಕ್ಷಕರು ನಮಗೆ ಅನೇಕ ವಿಷಯಗಳಲ್ಲಿ ಜ್ಞಾನದ ಭಂಡಾರವನ್ನೇ ನೀಡುತ್ತಾರೆ, ಆದುದರಿಂದ ನಾವು ಅವರಲ್ಲಿ ಕೃತಜ್ಞರಾಗಿರಬೇಕು.
ಹಿರಿಯರಿಗೆ ಸೂಚನೆ: ಮೇಲೆ ಕೊಟ್ಟಿರುವ ವಿಷಯಗಳನ್ನು ನೀವು ಸಂಸ್ಕಾರ ವರ್ಗ ಅಥವಾ ಶಾಲೆಗಳಲ್ಲಿ ಮಕ್ಕಳಿಗೆ ತಿಳಿಸಲು ಉಪಯೋಗಿಸಬಹುದು. ಇದರಿಂದ ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ಗೌರವ ಮತ್ತು ಆದರ ಹೆಚ್ಚಾಗುತ್ತದೆ. ನಾವು ಇಂತಹ ವಿಷಯಗಳನ್ನು ಮಕ್ಕಳಿಗೆ ತಿಳಿಸುವುದರಿಂದ ಶಿಕ್ಷಕರಿಗೂ ಇದರ ಬಗ್ಗೆ ಒಳ್ಳೆಯದೆನಿಸಿ ಅವರೂ ಸಹ ಸುಸಂಸ್ಕಾರಿತ ಪೀಳಿಗೆಯನ್ನು ನಿರ್ಮಿಸುವ ಈ ಈಶ್ವರೀ ಕಾರ್ಯದಲ್ಲಿ ಸಹಭಾಗಿಯಾಗುವರು.