Wednesday 20 February 2013


ಪರೀಕ್ಷಾ ಕೊಠಡಿಯ ನಿಯಮಗಳು

1. ಪ್ರವೇಶ ಪತ್ರವಿಲ್ಲದೆ ಅಭ್ಯರ್ಥಿಗೆ ಪರೀಕ್ಷೆಯ ಕೊಠಡಿಗೆ ಪ್ರವೇಶ ನೀಡಲಾಗುವುದಿಲ್ಲ

2. ಪರೀಕ್ಷೆ ಪ್ರಾರಂಭವಾಗುವುದಕ್ಕೆ ಗೊತ್ತು ಪಡಿಸಿದ ವೇಳೆಗಿಂತ ಹತ್ತು ನಿಮಿಷ ಮುಂಚಿತ ವಾಗಿ ನಿಮ್ಮ ಜಾಗದಲ್ಲಿ ಕುಳಿತುಕೊಳ್ಳಬೇಕು. ಪ್ರಾರಂಭವಾದ ಅರ್ಧ ಗಂಟೆ ಅಥವಾ ನಂತರ ಪರೀಕ್ಷೆಗೆ ಬಂದರೆ ಸೇರಿಸಲಾಗುವುದಿಲ್ಲ.
 3. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಯನ್ನು ಮೊದಲ ಅರ್ಧ ಗಂಟೆ ಆಗುವವರೆಗೆ ಪರೀಕ್ಷಾ ಕೊಠಡಿಯ ಹೊರಗೆ ಹೋಗಲು ಬಿಡುವುದಿಲ್ಲ ಮತ್ತು ಒಮ್ಮೆ ಉತ್ತರ ಪುಸ್ತಕ ಹಿಂದಿರುಗಿಸಿದ ನಂತರ, ಪರೀಕ್ಷಾ ಕೊಠಡಿ ಬಿಟ್ಟು ಹೊರಗೆ ಹೋದ ನಂತರ ಪುನಃ ಪ್ರವೇಶ ನೀಡುವುದಿಲ್ಲ.
4. ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದಂತೆ ಬರೆದಿರುವ ಪುಸ್ತಕ, ಚೀಟಿ, ಮೊಬೈಲ್ ಫೋನ್ ಮತ್ತು ಕ್ಯಾಲ್ಕುಲೇಟರ್ ಬಳಸುವಂತಿಲ್ಲ.
5. ಉತ್ತರ ಪುಸ್ತಕ ಪುರವಣಿ ಮತ್ತು ಗ್ರಾಫ್ ಮೇಲೆ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಕಡ್ಡಾಯವಾಗಿ ಬರೆಯಲೇಬೇಕು. ಮರೆಯಬಾರದು.
6. ಯಾವುದೇ ಕಾರಣದಿಂದ ಗೈರು ಹಾಜರಿ ರುವ ಅಭ್ಯರ್ಥಿಗಳ ಸ್ಥಳದಲ್ಲಿ ಕುಳಿತುಕೊಳ್ಳ ಬಾರದು. ಪರೀಕ್ಷೆ ಬರೆಯಬಾರದು.
7. ವಿದ್ಯಾರ್ಥಿಗಳು ಸಹ ಹಾಜರಾತಿ ಪುಸ್ತಕದಲ್ಲಿ ಸಹಿ ಪಡೆಯಬೇಕು.
8. ಪ್ರಶ್ನೆಪತ್ರಿಕೆಯಲ್ಲಿ ಯಾವ ಮಾಧ್ಯಮದಲ್ಲಿ (ಕನ್ನಡ, ಇಂಗ್ಲಿಷ್) ಉತ್ತರಿಸುತ್ತೇವೆ ಎಂಬುದನ್ನು ಬರೆಯಬೇಕು. ಉತ್ತರ ಪತ್ರಿಕೆಯಲ್ಲಿ ಕೊಠಡಿಯ ಮೇಲ್ವಿಚಾರಕರ ಸಹಿ ಮತ್ತು ಪ್ರವೇಶ ಪತ್ರದಲ್ಲಿ ಯೂ ಸಹಿ ಪಡೆಯಬೇಕು.
ವಿದ್ಯಾರ್ಥಿಗಳಿಗೆ ಸಲಹೆಗಳು

1. ಪರೀಕ್ಷಾ ಸಮಯದಲ್ಲಿ ಇತರ ಯಾವುದೇ ಕೌಟುಂಬಿಕ ಸಮಸ್ಯೆಗಳಿಗೆ ಗಮನ ಕೊಡಬಾರದು.

2. ಶಿಕ್ಷಕರು ನೀಡಿದ ಅಥವಾ ತಾವೇ ಸಿದ್ಧಪಡಿ ಸಿದ ನೋಟ್ಸ್ ಅನ್ನು ಪ್ರತಿದಿನ ಅವಲೋಕಿಸಿ ಮನನ ಮಾಡಿಕೊಳ್ಳಬೇಕು.
3. ಕಾಲದ ಮಿತಿಯೊಳಗೆ ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೂ ಮನಸ್ಸಿಗೆ ಬಂದ ಅನುಮಾನಗಳನ್ನು ಸಕಾಲದಲ್ಲಿ ಶಿಕ್ಷಕರ ಬಳಿ ಕೇಳಿ ಪರಿಹರಿಸಿ ಕೊಳ್ಳಬೇಕು.
4. ಸಂಭವನೀಯ ಪ್ರಶ್ನೆಗಳನ್ನು ಸ್ವತಃ ತಯಾರು ಮಾಡಿ ಅಥವಾ ಶಿಕ್ಷಕರ ನೆರವಿನಿಂದ ಬರೆದು ಉತ್ತರಗಳನ್ನು ಅಭ್ಯಸಿಸಬೇಕು ಹಾಗೂ ಪ್ರತಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ನಿಖರವಾದ ಉತ್ತರವನ್ನೇ ಬರೆಯಬೇಕು.
5. ಪ್ರಶ್ನೆಗಳ ಅಂಕಕ್ಕೆ ತಕ್ಕಂತೆ ಉತ್ತರ ಬರೆಯ ಬೇಕು. ಕೈ ಬರಹ ಸ್ಪಷ್ಟವಾಗಿರಬೇಕು. ಚಿತ್ರಗಳನ್ನು ಅಂದವಾಗಿ ಬರೆದು ಭಾಗಗಳನ್ನು ಗುರುತಿಸಬೇಕು. ಉತ್ತರ ಪತ್ರಿಕೆಗಳ ಚಿತ್ತು ಮಾಡುವುದು, ಬಣ್ಣ ಬಣ್ಣದ ಶಾಯಿ ಬಳಸುವುದು ಸರಿಯಲ್ಲ.

ವಿದ್ಯಾರ್ಥಿಗಳಿಗೆ ನೆನಪಿಡಬೇಕಾದ ಅಂಶಗಳು

1. ಪರೀಕ್ಷಾ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಬಯಲು ವದಂತಿಗೆ ಗಮನ ನೀಡಬೇಡಿ.

2. ಪರೀಕ್ಷೆಗಳಲ್ಲಿ ನಕಲು ಮಾಡಿದ್ದಕ್ಕೆ

3 ತಿಂಗಳ ಕಾರಾಗೃಹ ವಾಸ ಹಾಗೂ ಒಂದು ಸಾವಿರ ರೂಪಾಯಿಗಳ ಜುಲ್ಮಾನೆಗೆ ಕಾನೂನಿನಲ್ಲಿ ಅವಕಾಶವಿದೆ.
3. ಪರೀಕ್ಷೆಗಳಲ್ಲಿ ಇತರರಂತೆ ನಟಿಸಿ ಹಾಜರಾ ಗಿದ್ದರೆ 1 ವರ್ಷದ ಕಾರಾಗೃಹ ವಾಸ ಹಾಗೂ 5 ಸಾವಿರ ರೂ.ಗಳ ಜುಲ್ಮಾನೆ ವಿಧಿಸಬಹುದು.
4. ಪರೀಕ್ಷೆಗೆ ಸಂಬಂಧಿಸಿದ ಅಂಕಗಳನ್ನು ವಿದ್ಯಾರ್ಥಿಗಳು ಮಾಹಿತಿ ಹಕ್ಕು ಪಡೆದುಕೊಳ್ಳಲು ನ್ಯಾಯಾಲಯದ ಆದೇಶವಿದೆ.
5. ಪರೀಕ್ಷೆಯಲ್ಲಿ ಬರೆದ ಉತ್ತರ ವ್ಯತ್ಯಾಸ ಗೊಳಿಸಿದರೆ ಯಾವುದೇ ವ್ಯಕ್ತಿಯು ಸಹ ಒಂದು ವರ್ಷ ಕಾರಾಗೃಹ ವಾಸ, 5 ಸಾವಿರ ರೂ.ಗಳು ಜುಲ್ಮಾನೆ ವಿಧಿಸಬಹುದು.
6. ಪ್ರಥಮ ಭಾಷೆ ಹಾಗೂ ಇತರ ವಿಷಯ ಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆಯು 3 ಗಂಟೆಯ ಅವಧಿಯದ್ದಾಗಿರುತ್ತದೆ.
7. ದ್ವಿತೀಯ ಭಾಷೆ ಹಾಗೂ ತೃತೀಯ ಭಾಷೆಯ ಪರೀಕ್ಷೆಗಳು ಎರಡೂವರೆ ಗಂಟೆ ಸಮಯದ್ದಾಗಿರುತ್ತದೆ.8. ಅಂಧ ವಿದ್ಯಾರ್ಥಿಗಳು ಇತರರ ಸಹಾಯ ಪಡೆದು ಪರೀಕ್ಷೆ ಬರೆಯಲು 1 ಗಂಟೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು.
9. ಪ್ರತಿನಿತ್ಯ ಪರೀಕ್ಷಾ ಕೊಠಡಿಗೆ, ಕೇಂದ್ರಕ್ಕೆ ಹೋಗುವ ಮೊದಲು ಸಾಮಗ್ರಿಗಳನ್ನು (ಪ್ರವೇಶ ಪತ್ರ, ಪೆನ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್, ರಬ್ಬರ್...) ಜೊತೆಗೆ ತೆಗೆದುಕೊಂಡು ಹೋಗಲು ಮರೆಯಬಾರದು.10. ಉಪವಾಸ ಮಾಡಿ ಪರೀಕ್ಷೆಗೆ ಹೋಗ ಬೇಡಿ. ಲಘು ಉಪಾಹಾರ ಸೇವನೆ ಅಗತ್ಯ.
11. ದೀರ್ಘ ಕಾಯಿಲೆ ಇರುವವರು ಪ್ರತಿನಿತ್ಯ ಔಷಧ ಸೇವನೆ ಮಾಡಿರಿ. ನಿಲ್ಲಿಸಬೇಡಿ.
12. 10 ನಿಮಿಷದ ಎಚ್ಚರಿಕೆ ಗಂಟೆಗೆ ಮುಂಚೆ ಉತ್ತರ ಬರೆದು ಅವಲೋಕಿಸಿರಿ.
13. ಪ್ರವೇಶ ಪತ್ರದ ಝೆರಾಕ್ಸ್‌ನ್ನು ವಿದ್ಯಾರ್ಥಿ ಗಳು ಇಟ್ಟುಕೊಂಡಿರಬೇಕು. ಪ್ರವೇಶ ಪತ್ರ ಕಳೆದು ಹೋದರೆ ಪರೀಕ್ಷ್ಷಾ ಕೇಂದ್ರದಲ್ಲಿ ಡೂಪ್ಲಿಕೇಟ್ ಹಾಲ್ಟಿಕೇಟ್ ಪಡೆಯಲು ಅವಕಾಶವಿದೆ.

ಶಿಕ್ಷಕರು ಮತ್ತು ಪೋಷಕರು ಮಾಡಬೇಕಾದ ಕೆಲಸಗಳು
1. ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಅಡಿಗ ಲ್ಲಾಗಿರುವ ಈ ಪರೀಕ್ಷೆಯ ಹಂತದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆಯ ವೌಲ್ಯಮಾಪನದಲ್ಲಿ ಕಂಡು ಬಂದ ದೋಷಗಳ ಬಗ್ಗೆ, ರೀತಿ ನೀತಿಗಳ ಬಗ್ಗೆ, ಕಲಿಕಾ ಸುಧಾರಣೆಯ ಬಗ್ಗೆ ಮಾರ್ಗದರ್ಶನ ಮಾಡಬೇಕು.
2. ಶಿಕ್ಷಕರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 1 ಗಂಟೆಗಳ ಕಾಲ ವಿಶೇಷ ತರಗತಿಗಳನ್ನು ನಡೆಸಿ ಮಾರ್ಗದರ್ಶನ ಮಾಡಬೇಕು.
3. ರಸಪ್ರಶ್ನೆ ಆಧಾರಿತ 1 ಮತ್ತು 2 ಅಂಕಗಳ ಪ್ರಶ್ನೆಗಳನ್ನು ರಚಿಸಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ಉತ್ತೇಜನಕ್ಕಾಗಿ ಬಹುಮಾನ ಗಳನ್ನು ನೀಡಿ ಫಲಿತಾಂಶ ಉತ್ತಮಗೊಳ್ಳಲು ದಾರಿ ಮಾಡಬೇಕು.
4. ಗುಂಪು ಚರ್ಚೆ, ವ್ಯಾಕರಣದ ಅಂಶಗಳು, ಇತಿಹಾಸದ ಇಸವಿಗಳು, ಪದ್ಯಗಳ ಭಾವಾರ್ಥ, ಪ್ರಶ್ನೆ ಭಂಡಾರದ ಉತ್ತರಗಳನ್ನು ಕರಾರುವಕ್ಕಾಗಿ ಕಲಿಸಿ, 3 ಗಂಟೆಯೊಳಗೆ ಉತ್ತರಿಸುವಂತೆ ವಿದ್ಯಾರ್ಥಿಗಳನ್ನು ತಯಾರಿ ಮಾಡಬೇಕು. ಹಾಗೂ ಬಾಯಿಪಾಠ ಮಾಡಿ ಉತ್ತರಿಸುವ ಕ್ರಮವನ್ನು ನಿಲ್ಲಿಸಬೇಕು.


No comments:

Post a Comment