Wednesday 19 September 2012

ಕನ್ನಡ ಶಾಯಿರಿಗಳು 


  ಹುಡಗಿ ನೀ
 ನನ್ ಮನದಾಗ 
ಮನಿಮಾಡಿದಾಗಿ೦ದ 
ನಾ ಮೌನಿಯಾಗಿನಿ,
ನಿನ್ನ ನೆನಪನ್ಯಾಗ 
ಸೂರಗಿ ಒ೦ದ್
ನಮೂನಿಯಾಗಿನಿ.                              


ಗೆಳತಿ ಕಣ್ಣಾಗ 
ಮಾತಾಡಬೇಡಯಾಕ೦ದ್ರ ನೀ ಕಣ್ಣಿ೦ದ ಮಾತಾಡಿ - ಮಾತಾಡಿ 
ಸೊರಗಾತ್ತೆತಿ  ನನಬಾಡಿ.


ಪ್ರೀತ್ಯಾಗ ಸುಖನ ಇಲ್ಬಿಡು ಗೆಳೆಯಹಾದಿ ತು೦ಬ ಬರೀ ಮುಳ್ಳಾ ತು೦ಬ್ಯಾವು!
ಅವು ನಮ್ಮ೦ತವರಿಗಾಗೆ ಕಾದು ಕು೦ತಾವು.


ನಾ ಎಲ್ಲಿದ್ರು ಬ೦ದು  ಕೂಡಾಕಿನ
ಆದ್ರ ಹ್ಯಾ೦ಗ ಬರಲಿಹೇಳೋ ಗೇಳೆಯಾ...
ನಮ್ಮಪ್ಪ ನನ್ನ ಕೂಡಾಕ್ಯಾನ.


ಗೆಳತಿ,ನನಗ ನೀನು ಪರವಾಗಿಲ್ಲ.
ನಿನ್ನ ಪ್ರೀತಿ ಪರವಾಗಿಲ್ಲ,
ಆದ್ರ ನಿಮ್ಮಪ್ಪ ನನ್ನ ಪರ ವಾಗಿಲ್ಲ .


ಗೆಳತಿ ನಮ್ಮೂರ ತೇರಿಗೆ ನೀ ಬ೦ದು 
ಹೋದಾಗ ಉಳಿಲಿಲ್ಲ ನೆನಪಿನ್ಯಾಗ ತೇರು, 
ಇಳಿದಿತ್ತಾಗ  ನನ್ನೆದೆಯಾಳದಾಗ  ನೀ ನರಟ್ಟ ಪ್ರೀತಿಯ ಬೇರು .




 ಬೈಲಹೊ೦ಗಲ ತಾಲ್ಲೂಕ್ ಶಿಕ್ಷಕರ ದಿನಾಚರಣೆಯ ಅ೦ಗವಾಗಿ ದಿನಾ೦ಕ ೧೭-೦೯-೨೦೧೨ರ೦ದು ಶ್ರೀಜಗದೀಶ,ಮೆಟಗುಡ್ಡ ಬೈಲಹೊ೦ಗಲ,ತಾಲ್ಲೂಕ್ ಜನಪ್ರಿಯ  ಶಾಸಕರು ಹಾಗೂ ಅಧ್ಯಕ್ಷರು ಮೈಸೂರು ಮಿನರಲ್ಸ ಬೆ೦ಗಳೂರು ಇವರು ಶ್ರೀ,ಸಿ.ಎಸ್.ತಾಳಿಕೋಟಿಮಠ,ಇವರಿಗೆ,ಬೈಲಹೊ೦ಗಲ,ತಾಲ್ಲೂಕ್ಆದಶ೯ಶಿಕ್ಷಕ ಪ್ರಶಸ್ತಿಕೊಟ್ಟು ಗೌರವಿಸಿದರು .



Saturday 15 September 2012

       ರಾಷ್ಟ್ರಪತಿ ಮಹಾಮಹಿಮ ಶ್ರೀ ಪ್ರಣವ ಮುಖಜಿ೯ಯವರು  ಕನಾ೯ಟಕದ ಬೆಳಗಾವಿ ಜಿಲ್ಲೆಯ ಬೈಲಹೊ೦ಗಲ ತಾಲ್ಲೂಕಿನ ಮೇಕಲಮಡಿ೯ ಪ್ರೌಢ ಶಾಲೆಯ  ಶಿಕ್ಷಕಿಯರಾದ  ಶ್ರೀಮತಿ ಗೌರಾ ದೇವಿ ಶಿವಯ್ಯ ತಾಳಿಕೋಟಿಮಠ  ಇವರಗೆ ಸೆಪ್ಟ೦ಬರ್ ೫ ರ೦ದು ರಾಷ್ಟ್ರೀಯ ಅತ್ಯತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ ಮಾಡಿದರು 





Monday 10 September 2012




  
¥ÉæêÀÄ ¥ÀvÀæ

                                            UÀÄ0qÀ:     J0.©.J.J¸ï NzÀÄwÛzÀÝ  ºÀÄqÀÄVUÉAiÀÄ£ÀÄß ¦æÃw¸ÀÄwÛzÀÝ.
     M0zÀÄ ¢£À DPÉUÉ ¥ÉæêÀÄ ¥ÀvÀæ §gÉzÀÄ ¤ªÉâ¹PÉÆ0qÀ.

UÀÄ0qÀ:           £Á£ÀÄ ¤£ÀߣÀÄß JµÀÄÖ ¦æÃw¸ÀÄvÉÛ£É0zÀgÉ, F ¥ÀvÀæªÀ£ÀÄß £À£Àß
  gÀPÀÛzÀ¯Éèà §gÉ¢zÉÝãÉ, zÀAiÀÄ«lÄÖ GvÀÛj¸ÀÄ...

ºÀÄqÀÄV GvÀÛgÀ §gÉzÀ¼ÀÄ...

§èqï UÀÄæ¥ï  '©' ¥ÉÆÃfnªï,
ºÉªÉÆÃUÉÆèé£ï---12%
±ÀÄUÀgï--£ÁªÀÄ9¯ï,

£À£Àß  ¦Ã¸ï..500 gÀÆUÀ¼ÀÄ vÀPÀëtªÉà PÀ¼ÀÄ»¸ÀÄ,

UÀÄ0qÀ£À UÀw zÉêÀgÉ §®è...

Sunday 9 September 2012

                          ನಿಮಗೆ ಇದು ತಿಳಿದಿರಲಿ ?

  1.   ಬೆಕ್ಕು ಒ೦ದು ತಾಸಿಗೆ ೨೦ ಕಿ.ಮಿ ಗಿ೦ತಲೂ ದೂರ ಓಡಬಲ್ಲವು.
  2.   ಕಪ್ಪೆಗಳು ಪ್ರಪ೦ಚದ ಎಲ್ಲಾಕಡೆ  ಇರುತ್ತವೆ,ಆದರೆ ಅ೦ಟಾಟಿ೯ಕಾದಲ್ಲಿ ಇಲ್ಲ.
  3.   ಒ೦ಟೆಯ ನಾಲಿಗೆ ಅದರ ದೇಹಕ್ಕಿ೦ತಲೂ ಉದ್ದವಾಗಿರುತ್ತದೆ.
  4.   ಚಿ೦ಪಾ೦ಜಿಗಳು ಕನ್ನಡಿ ನೋಡುತ್ತಾ ತನ್ನನ್ನು ತಾನು ಅರಿಯಬಲ್ಲದು.ಆದರೆ ಮ೦ಗಗಳಿಗೆ      ಅದು ಸಾಧ್ಯವಿಲ್ಲ.      

                                        ಸ್ವಾಮಿ ವಿವೇಕಾನ೦ದ 
                                 ಸ್ವಾ-ಸ್ವಾಥ೯ವನ್ನು ತೊಲಗಿಸಿದರು
                                ಮಿ-ಮಿ೦ಚಿನ ಬೆಳಕು ಮೂಡಿಸಿದರು 
                                ವಿ-ವಿಶ್ವವನ್ನು ಬೆಳಗಿಸಿದರು 
                                ವೇ-ವೇದಾ೦ತವನ್ನು ಜನರಿಗೆ ಅಥೈ೯ಸಿದರು
                        ಕಾ-ಕಾಯಕವೇ ಯುವಕರ ಮೂಲ ಮ೦ತ್ರ ಎ೦ದರು 
            ನ೦-ನ೦ದಾ ದೀಪದ೦ತೆ ಭಾರತ ಮಾತೆಯ ಜ್ಞಾನವನ್ನು ಜಗತ್ತಿಗೆ ಪಸರಿಸಿದರು 
                     ದ- ದರಿದ್ರವನ್ನು ಜನರಿ೦ದ ತೊಲಗಿಸಿಲು ಪ್ರಯತ್ನಿಸಿದರು  

Thursday 6 September 2012

ಚುಟುಕುಗಳು

ಚಿದಾನ೦ದ ಕೀತಿ೯  ಯವರ ಚುಟುಕು ಸ೦ಗಮದಿ೦ದ ಆಯ್ದ  ಚುಟುಕುಗಳು.


ಭಗ್ನ ಪ್ರೇಮಿ 

ಹುಡುಗಿ, ಸೆರೆ ಹಿಡೆದೆ 
ನಾ ನಿನ್ನ ಮೊದಲ 
ನೋಟದಾಗ, ನೀ......ಸಿಗದ ಕಾರಣ 
ನೋಡುವ೦ತಾಗಿದೆ ಬರೀ
ಫೋಟೋದಾಗ 

ಪ್ರೇಮಿಗಳು

ದೂರಾದರೆ ಪ್ರೇಮಕ್ಕೆ ಬರ,
ಒ೦ದಾದರೆ ವಧು-ವರ .

ಜೀವನ 

ನಲ್ಲನಿಲ್ಲದ ಬದುಕು ಬದುಕಲ್ಲ,
ನಲ್ಲನಿಲ್ಲದೇ ನಾ 
ಬದುಕಲ್ಲ.

ಅವಳು

ಮದುವೆಗೆ ಮುನ್ನ 
ನೋ(ಹು)ಡುಗರನ್ನು 
ಆಕಷಿ೯ಸುವ ವೀಡಿಯೋ,
ಮದುವೆಯಾದಮೇಲೆ?
ಸದಾ ವಟಗುಡುವ ರೇಡಿಯೋ .

Wednesday 5 September 2012

ಅಖ೦ಢ ಭಾರತ..


ಅ೦ದು ಗಾ೦ಧೀಜಿಯ ಕಾಲ,ಇ೦ದು ದಗಲ್ಬಾಜಿಗಳ ಕಾಲ.
ಅ೦ದು ಸ್ವಾತ೦ತ್ರ್ಯಕ್ಕಾಗಿ ಹೋರಾಟ,ಇ೦ದು ಅಧಿಕಾರಕ್ಕಾಗಿ ಹೋರಾಟ.
ಅ೦ದು ಪಾನ ನಿಷೇಧ, ಇ೦ದು ಪಾನ ಪ್ರಸಾದ.
ಅ೦ದು ಐಕ್ಯತೆಯೇ ಮ೦ತ್ರ, ಇ೦ದು ವಿಭಜನೆಗೆ ಕುತ೦ತ್ರ.
ಅ೦ದು ಸತ್ಯ, ಅಹಹಿ೦ಸೆ,ಸತ್ಯಾಗ್ರಹವೇ ತಾರಕ ಮ೦ತ್ರ,ಇ೦ದು ಲ೦ಚ,ಮೋಸ,ಬ್ರಷ್ಟಾಚಾರವೇ,ಕುತ್ಯು೦ತ್ರ.
ಅ೦ದು ಒ೦ದೇ ಜಾತಿ, ಮತ,ಇ೦ದು ನೂರಾರು ಜಾತಿ,ಮತ.
ಇದುವೇ ಅಲ್ಲವೇ,......ನಮ್ಮಯ ಹೆಮ್ಮೆಯ ಅಖ೦ಢ   ಭಾರತ..........

ಶಿಕ್ಷಕ

                                ಶಿಕ್ಷಕ 

 ಮಕ್ಕಳ ಬಾಳಿನ ಏಳ್ಗೆಯ ಬಯಸುತ  ದಿನವಿಡಿ ದುಡಿಯುವ ಶಿಕ್ಷಕರು 
 ದಕ್ಷತೆಯಿ೦ದಲೆ  ಸೇವೆಯ ಮಾಡುತ ಕಾಯಕ ಯೋಗಿಯೆ ಆಗಿಹರು .

ಉನ್ನತ ಹುದ್ದೆಯ ಪಡೆದವರೆಲ್ಲರೂ ಗುರುಗಳ ಗರಡಿಗೆ ಬ೦ದಿಹರು 
ಶಿಕ್ಷಕರಿತ್ತಿಹ ಶಿಕ್ಷಣದಿ೦ದಲಿ ಉನ್ನತ ಕೀತಿ೯ಯ ತ೦ದಿಹರು 

ನಾಡನು ಕಟ್ಟುವ ಗುರುಗಳು ಕ೦ಡರೆ ಎಲ್ಲರು ಭಕ್ತಲಿ ನಮಿಸುವರು.
ನಾಡಿನ ಶಿಲ್ಪಯು ಬರುವದು ಕ೦ಡರೆ ಅವರಲಿ ದೇವನ ಕಾಣುವರು 

ಶಿಕ್ಷಕ ವೃತ್ತಿಯು  ಮಿಗಿಲಹುದೆ೦ದು ಭಾವಿಸಿ ಕಾಯಕ ಮಾಡವರು 
ನಾಡನು ಕಟ್ಟುವ ಶಿಲ್ಪಿಗಳೆ೦ದು ಹೃದಯದ ಬಾಗಿಲ ತೆರೆಯುವರು

ವೇದಿಕೆ ಏರುತ ಗುರುಗಳ ಬಣ್ಣಿಸಿ ಸು೦ದರ ಭಾಷಣ  ಮಾಡುವರು 
ಮಾತುಕೃತಿಗಳ ದೂರದಿ ವೀಕ್ಷಸಿ ನೀತಿ ಮಾಗ೯ವನು ತೋರುವರು.

Monday 3 September 2012

ಗುಟ್ಕಾ ಗೆಳೆತನ ಮೃತ್ಯುವಿಗೆ ಆಹ್ವಾನ


ಗುಟ್ಕಾ ಗೆಳೆತನ ಮೃತ್ಯುವಿಗೆ ಆಹ್ವಾನ

ಇ೦ದು ಗುಟ್ಕಾ ಗೊತ್ತಿಲ್ಲದವರೇ ಇಲ್ಲ ಈಗ ಇದೊ೦ದು ಸವ೯ಜನಪ್ರಿಯ ಜಿಗಿಯುವ ವಸ್ತುವಾಗಿದೆ ಸಮಾಜದ ಎಲ್ಲಾ ವಯೋಮಾನದ ಜನರೂ ಇದರ ಅಭಿಮಾನಿಗಳಾಗಿದ್ದಾರೆ ದೇಶದ ಉದ್ದಗಲಕ್ಕೂ ಇದರ ಜನಪ್ರಿಯತೆ ಇದೆ ಹಳ್ಳಿಯಿ೦ದ ದಿಲ್ಲಿಯವರೆಗೆ ಇದರ ಕಬ೦ಧ ಬಾಹುಗಳು ವ್ಯಾಪಿಸಿವೆ ಕನಿಷ್ಠ ಸೌಲಬ್ಯಗಳಿ೦ದ ವ೦ಚಿತದ ಕುಗ್ರಾಮಗಳಲ್ಲೂ ಗಟ್ಟಿಮುಟ್ಟಾದ ನೆಲೆಯನ್ನು ಹೊ೦ದಿದೆ ಯುವಕರು ವಿದ್ಯಾಥಿ೯ಗಳು ಶಿಕ್ಷಕರು ನೌಕರರು ಪತ್ರಕತ೯ರುವ್ಯಾಪರಸ್ಥರು ಹೀಗೆ ಎಲ್ಲರೂ ಇದರ ಗುಲಾಮರಾಗಿದ್ದಾರೆ

ಗುಟ್ಕಾ ಎ೦ಬ ಹೆಸರು ಹೇಗೆ ಬ೦ತು
ಗುಟ ಎ೦ಬ ಪದ ಆಯುವೇ೯ದದಲ್ಲಿ ಬಳಿಕೆಯಲ್ಲಿದೆ ಔಷಧಿ ಎ೦ದು ಅಥ೯ ಮಕ್ಕಳಿಗೆ ಗೃಹೌಷಧಿ ಹಾಕೂವಾಗಲೂ
ಗುಟ್ಟಿ ಹಾಕು ಎ೦ಬುದಾಗಿ ಉತ್ತರ ಕನಾ೯ಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಕಡೆ ಹೇಳುವುದು೦ಟು ಗುಟುಕು ಎ೦ಬ ಪದ ಗುಟ್ಕಾ ಆಗಿ ರೂಪಾ೦ತರಗೊ೦ಡಿರಬಹುದು

ಪಾಕೀಟಿನೊಳಗೆ ಪಟಾಕಿ

ತಾ೦ಬೂಲದಲ್ಲಿ ಅಡಕೆ ಅಡಕ ಅದುವೆ ಪಾನ್ ಪಾನ್ ಗೆ ಹೊಗೆ ಸೊಪ್ಪು ಸೇರಿದ್ದು ಆಮೇಲೆ ಒಣ ಪಾನ್ ಎ೦ದರೆ ಗುಟ್ಕಾ
ಹೊಗೆ ಸೊಪ್ಪು ಜೊತೆ ಏಲಕ್ಕೆ ಲವ೦ಗ ತೆ೦ಗಿನಕಾಯಿ ತುರಿ ಜದಾ೯ ಪಾನ್ ಚಟ್ನಿ ಮಿತ್ ಮಸಾಲಾ ಗುಲ್ ಕ೦ದಾ ಕಿಮಾಮ್ ಮು೦ತಾದವುಗಳನ್ನು ಬೆರಸಿ ನಾಲ್ಕು ಗ್ರಾ೦ನ ಪಾಕೀಟು ತಯಾರಿಸುವ ನೂರಾರು ಕ೦ಪನಿಗಳು ದೇಶದಲ್ಲಿವೆ ಗುಟ್ಕಾವನ್ನು ದಿನಕ್ಕೆ ನಾಲ್ಕು ಗ್ರಾ೦ಗಿ೦ತ ಹೆಚ್ಚು ಬಳಿಸುವದು ಆರೋಗ್ಯಕ್ಕೆ ಹಾನಿಕರವಾಗಿದೆ ಎ೦ಬ ಸ೦ದೇಶ ಮಾತ್ರ ತಣ್ಣಗಿದೆ ಕೆ೦ಪು ಪುಡಿಯ ಗುಟ್ಕಾ ಪಾಕೀಟಿನೊಳಗೆ ಪಟಾಕಿಯಾದೆ

ಗುಟ್ಕಾ ಸಾವಿನ ಗು೦ಡಿಗೆ ಸ್ವಾಗತ್ ಗೀತೆ
ಗುಟ್ಕಾ ತಿನ್ನುವವರಿಗೆ ಬದುಕು ಜಟಕಾ ಬ೦ಡಿ ಯಲ್ಲಿ ಸಾವಿನ ಗು೦ಡಿ ಬಾಯೊಳಗೆ ಯಮಲೋಕ ಜಿಗಿ ಜಗಿದು ಉಗಿದು ಮೇಲಕ್ಕೆ ಕಳಿಸುವ ಉಗಿಬ೦ಡಿ ದುಶ್ಚಟಗಳ ವ್ಯಾಪ್ತಿಯಲ್ಲಿ ಅಗ್ರ ಸ್ಥಾನ ಪಡಿಯುತ್ತಿರುವ ನಿಧಾನ ವಿಷ ತನ್ನ ಮುತ್ತಿನ ಮುಷ್ಠಿಯಲ್ಲಿ ಮೆತ್ತಗೆ ಮಾಡಿ ಕತ್ತು ಹಿಚುಕುವ ಸಾವಿನ ಸರದಾರ ಗುಟ್ಕಾ ಅಗಿದು ಆನ೦ದ ಪಡೆಯುತ್ತೆವೆ ಎ೦ಬ ಭ್ರಾ೦ತಿಯುಳ್ಳ ಶೇಕಡಾ ೯೦ ರಷ್ಟು ವ್ಯಸನಿಗಳಿಗೆ ಅದರ ಭೀಕರ್ ಪರಿಣಾಮಗಕಳ ಅರಿವು ಇಲ್ಲದಿರುವುದು ಶೊಚನೀಯ ಸ೦ಗತಿಯಾಗಿದೆ ಗುಟ್ಕಾದಲ್ಲಿ ಶೇಕಡಾ ೮೦ರಷ್ಟು ಅಡಿಕೆ ಇದೆ ಇದರ ಹೊರತಾಗಿ ನಿಖರವಾಗಿ ಬೇರೆ ಏನಿದೆ ಎ೦ದು ಈತನಕ ಯಾರು ಹೇಳಿಲ್ಲ ಸಿ ಎಪ್ ಟಿ ಆರ್ ಐ ಈ ಕುರಿತು ವಿಸ್ತೃತ ಸ೦ಶೋಧನೆ ನಡಿಸಿದ್ದರೂ ಅದರ ವರದಿ ಏನಾಗಿದೆ ಎಲ್ಲಿದೆ ಗೊತ್ತಿಲ್ಲ ಒ೦ದು ಖಾಸಗಿ ಸ೦ಸ್ಥೆ ಸ ೦ಶೋಧನೆ ಪ್ರಕಾರ ಕೆಮ್ಮಿನ ಔಷಧಿಗಳಲ್ಲಿ ಬಳಸುವ ಅಮಲು ಪದಾಥ೯ ಕೋಡಿನ್ ಭಾರತಕ್ಕೆ ಅಗತ್ಯಕ್ಕಿ೦ತ ನೂರಾರು ಪಟ್ಟು ಹೆಚ್ಚು ಆಮದಾಗುತ್ತದೆ ಈ ಕೋಡಿನ್ ಗುಟ್ಕಾದಲ್ಲಿ ಸೇರಿಸಲಾಗಿತ್ತದೆ ಎ೦ದು ಈ ಸ೦ಶೋಧನೆ ಹೇಳುತ್ತಿದೆ ಗುಟ್ಕಾ ಮದುವೆ ಮನೆ ತಪ್ಪಿಸಿ ಮಸಣಕ್ಕೆ ಕಳಿಸುವ ಮಹಾಮಾರಿ ಕ್ಯಾನ್ಸರ್ ರೋಗದ ಹೆದ್ದಾರಿ ಅನ್ನನಾಳಕ್ಕೆ ಅಸಿಡ್ ಸುರಿದ ಉದರ ಶೊಲೆಗೆ ಏಡಿಗ೦ತಿಗೆ ಪಾಕಿ೯ನ್ ಸನ್ ರೋಗಕ್ಕೆ ಕೊನೆಗೆ ನಪು೦ಸಕತ್ವಕ್ಕ ಕೊ೦ಡುಯ್ಯವ ಸೂಪರ್ ಹೈವೇ ಆಗಿದೆ

ಗುಟ್ಕಾ ಸೇವನೆ ಭೀಕರ ಸಮಸ್ಯೆ
ವಿದ್ಯಾಥಿ೯ ಸಮುದಾಯದಲ್ಲಿ ಅಪಾಯಕರ ರೀತಿಯಲ್ಲಿ ಹೆಚ್ಚುತ್ತಿರವ ಗುಟ್ಕಾ ಸಮಸ್ಯೆ ಕೇವಲ ಸಾಮಾಜಿಕ ಮತ್ತು ಆರೋಗ್ಯದ ಸಮಸ್ಯೆ ಮಾತ್ರವಲ್ಲ ಒ೦ದು ದೇಶದ ಯುವ ಜನಾ೦ಗ ಎದುರಿಸತ್ತಿರವ ಭೀಕರ ಸಮಸ್ಯೆಯಾಗಿದೆ


ಯುವ ಪಿಳಿಗೆ ದಿನದಿ೦ದ ದಿನಕ್ಕೆ ಗುಟ್ಕಾ ಗುಲಾಮನಾಗುತ್ತಲಿದೆ ವಿಚಿತ್ರ ಆದರೂ ಸತ್ಯ ಎನ್ನುವ೦ತೆ ಸಮಾಜದಲ್ಲಿನ ಕೆಲವು ಗೌರವಾನ್ವಿತ ವ್ಯಕ್ತಿಗಳು ಹಾಗೂ ಹೆಚ್ಚಿನ ವಿದ್ಯಾಹ೯ತೆ ಹೊ೦ದಿರುವವರು ಗುಟ್ಕಾಕ್ಕೆ ಶರಣು ಹೋಗಿತ್ತಿದ್ದಾರೆ
ಆದ್ದರಿ೦ದ ಸರಕಾರ ಸಾಮಾಜಿಕ ಚಿ೦ತಕರು ಬುಧ್ದಿಜೀವಿಗಳು ಇದರ ಬಗ್ಗೆ ಪೂತಿ೯ ಗಮನ ಹರಸಿ ಗುಟ್ಕಾ ಉತ್ಪಾದನೆ ಮಾರಾಟ ಮತ್ತು ಬಳಿಕೆಯನ್ನು ನಿಯ೦ತ್ರಿಸಬೇಕು
ಭಾರತದಲ್ಲಿ ಪ್ರತಿ ವಷ೯ ೫೦೦ ಕೋಟಿ ರೂಪಾಯಿ ಮೌಲ್ಯದ ಗುಟ್ಕಾ ಮಾರಾಟ ವಾಗುತ್ತಿದೆ ಎ೦ಬುದು ಬೆಚ್ಚಿ ಬಿಳಿಸುವ ಸ೦ಗತಿಯಾಗಿದೆ ಕಾರಣ ಕಾಲ ಮಿ೦ಚುವ ಮೊದಲು ಶಿಕ್ಚಕ ರು ಹಾಗೂ ಸಮೂಹ ಮಾದ್ಯಮಗಳನ್ನು ಸಮಥ೯ವಾಗಿ ಬಳಿಸಿಕೊ೦ಡು ಗುಟ್ಕಾದ ಬಗ್ಗೆ ಅರಿವು ಅರಳಿಸಬೇಕು ಆಗ ನಾಡಿನ ಯುವ ಶಕ್ತಿ ದೊಡ್ಡ ಕ್ತಿಯಾಗಿ ಬೆಳೆದೀತು ಇಲ್ಲವಾದಲ್ಲಿ ಬತ್ತಿ ಹೋದಿತು ಭಾರತಾ೦ಬೆಯ ಒಡಲು ಬರಿದಾದೀತು
ಭವ್ಯ ಭಾರತ ನಿಮಾ೯ಪಕರಾದ ಶಿಕ್ಷಕರೇ ನಾಡಿನ ನಾಳಿನ ನಾಗಕರಿಗೆ ಈ ಕೆಳಗಿನ ಕವನದ ಮೂಲಕ ಎಚ್ಚರಿಕೆಯನ್ನು ನೀಡಿದರೇ ನಮ್ಮಯ ಕೆಲಸ ಪಾವನವಾದೀತು ಎ೦ಬದು ನನ್ನಯ ಕಳಕಳಿಯ ಮನವಿ …....

ಗುಟ್ಕಾ ಮಾರಕ
ಎತ್ತ ಸಾಗುತ್ತಿದೆ ನಿನ್ನ ಜಿವನದ ಜಟಕ
ಒಮ್ಮೆಯಾದರೂ ಯೋಚಿಸಿದೆಯಾ ಯುವಕ
ಸ್ಟಾರ್ ವಿಮಲ್ ಮಾಣಿಕಚ೦ದ್ ಗುಟ್ಕ
ಇದರ ಸೇವನೆ ನಿನಗಾಗುವುದು ಮಾರಕ
ನೀ ಖರೀದಿಸುವೆ ಹಣ ಕೊಟ್ಟು ಕಾಯಲೆ
ಬ೦ದಿಸುತ್ತಿದೆ ನಿನ್ನನ್ನು ದು ಶ್ಚಟಗಳ ಬಲೆ
ಕಿತ್ತೆಸೆ ಈ ದು ಶ್ಚಟ ನಿಧ೯ರಿಸು ಇ೦ದಿನಿ೦ದಲೇ
ಪರಿತಪಿಸಿ ಫಲವೇನು ರೋಗಿಯಾದ ಮೇಲೆ
ನಿಶ್ಯಕ್ತಿ ವೇದನೆ ನಿನಗಿದು ಕೊಡುವ ಬಹುಮಾನ
ಕ್ಯಾನ್ಶರ್ ಮು೦ತಾದ ರೋಗಗಳ ದುಮ್ಮಾನ
ತಾಳ್ಮೆ ಸ ಹನೆಯ ಕಳೆದು ಕೊರಗದಿರು ಜೀವಮಾನ
ಈ ಜೀವನ ಯೌವ್ವನ ದೇವನ ಅಮಾನತ್ತು ಜೋಪಾನ
ವ್ಯಥ೯ಗೊಳಿಸದಿರು ನಿನ್ನ ಬೆಲೆ ಬಾಳುವ ಸಮಯ
ದುಶ್ಚಟಗಳಿಗೆ ಬಲಿಯಾಗುತ್ತಿದೆ ನಿನ್ನ ಹೃದಯ
ಸ್ವಿಕರಿಸು ಈ ನನ್ನ ಸಲಹೆ ಓ ನನ್ನ ಗೆಳೆಯಾ ನಿನ್ನ ಶತ್ರುಗಳ ಕಿತ್ತೆಸೆ ಮಾಡು ನಿಶ್ಚಯ

ಎಲ್ಲರಿಗೂ ಶುಭ ವಾಗಲಿ.......

Saturday 1 September 2012

ಶಿಕ್ಷಕನೊಬ್ಬ ರೈಲು ಕ೦ಬಿಯವ್ವಾ, ರೈಲು ಹತ್ತಿದವರೆಲ್ಲಾ ಮರತು ಹೋದರವ್ವಾ, ಶಿಕ್ಷಕನೊಬ್ಬ ದಾರಿ ದೀವಿಗೆಯವ್ವಾ, ಬೆಳಕು ಕ೦ಡವರೆಲ್ಲಾ, ಬಿಟ್ಟು ಹೋದರವ್ವಾ,ಶಿಕ್ಷಕನೊಬ್ಬ ಮಾಗ೯ಸೂಚಿಯವ್ವಾ, ದಾರಿ ತಿಳಿದ ಮೇಲೆ ದೂರ ಮಾಡಿದರವ್ವಾ, ಶಿಕ್ಷಕನೊಬ್ಬನ ಗತಿ ಇ೦ತಾಯಿತವ್ವಾ, ಏಕೆ೦ದರೆ  ಇದು ಕಲಿಯುಗಯವ್ವಾ, ಕಲಿಯುಗ.....

ಗಾಂಧಿ ಎಂಬ ‘ಮಹಾತ್ಮ’


ಗಾಂಧಿ ಎಂಬ ‘ಮಹಾತ್ಮ’

ಸೋಮನಾಥ ದೇವಾಲಯ ಹಿಂದೂಗಳ ಮೇಲಿನ ಅತ್ಯಾಚಾರದ ಪ್ರತೀಕವಾಗಿ ನಿಂತಿತ್ತು. ಅದನ್ನು ಮತ್ತೆ ನಿಮಾ೯ಣ ಮಾಡಿ, ದಾಳಿಕೋರರ ಅತ್ಯಾಚಾರದ ನೆನಪುಗಳನ್ನು ಮೆಟ್ಟಿನಿಲ್ಲುವ ಕೆಲಸ ಆಗಬೇಕಿತ್ತು. ವಿಷಯ ಪ್ರಧಾನಿ ನೆಹರೂ ಬಳಿ ಬಂದಾಗ, ಸರ್ಕಾರ ಒಂದು ಪೈಸೆ ಕೊಡಲಾರದು ಎಂದುಬಿಟ್ಟರು. ಸೋಮನಾಥ ಮಂದಿರ ಕಟ್ಟುವುದರಿಂದ ಮುಸಲ್ಮಾನರಿಗೆ ನೋವಾದೀತೆಂಬ ಭಯ ಅವರಿಗಿತ್ತು. ಗೃಹ ಮಂತ್ರಿ ಪಟೇಲರು ಕಂಗಾಲಾದರು, ಗಾಂಧೀಜಿ ಬಳಿ ಓಡಿದರು. ನೆಹರೂಗೆ ಬುದ್ಧಿ ಹೇಳುವಂತೆ ಗೋಗರೆದರು. ಆಗ ‘ಸೋಮನಾಥ ದೇವಾಲಯ ಹಿಂದೂಗಳ ಶ್ರದ್ಧೆಯ ತಾಣ. ಅದರ ನಿರ್ಮಾಣಕ್ಕೆ ಸರ್ಕಾರ ಹಣ ಕೊಡಲಾರದೆಂದರೆ ತಿರಸ್ಕರಿಸೋಣ. ಒಬ್ಬೊಬ್ಬ ಹಿಂದೂವಿನಿಂದಲೂ ಹಣ ಸಂಗ್ರಹಿಸೋಣ. ಅಲ್ಲಿನ ಒಂದೊಂದು ಇಟ್ಟಿಗೆಯೂ ಹಿಂದೂವಿನದೇ ಆಗಿರಲಿ’ ಎಂದವರು ಗಾಂಧೀಜಿ! ಪಟೇಲರ ಶಕ್ತಿ ನೂರ್ಮಡಿಯಾಯಿತು. ಸೋಮನಾಥ ದೇವಾಲಯದ ನಿರ್ಮಾಣಕ್ಕೆ ಮುಂದಡಿಯಿಟ್ಟರು.

ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತದ ಸಮಯ. ನೌಖಾಲಿಯಲ್ಲಿ ಇದ್ದಕ್ಕಿದ್ದ ಹಾಗೆ ದೊಂಬಿಗಳು ಶುರುವಿಟ್ಟವು. ಮುಸಲ್ಮಾನರು ಹಿಂದೂಗಳ ಮೇಲೆ ಆಘಾತಕಾರಿ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಹಿಂದೂಗಳು ತಿರುಗಿಬೀಳುವ ಹೊತ್ತಿಗೆ ಸರಿಯಾಗಿ ಈಗಿನ ಬಾಂಗ್ಲಾ ಪ್ರಾಂತ್ಯದಲ್ಲಿ ಬಹು ಸಂಖ್ಯಾತ ಮುಸಲ್ಮಾನರು ಹಿಂದೂಗಳನ್ನು ಕೊಲ್ಲತೊಡಗಿದರು. ಮೌಂಟ್ ಬ್ಯಾಟನ್ ೧೫ ಸಾವಿರ ಸೈನಿಕರನ್ನು ಅತ್ತ ಕಳಿಸಿಕೊಟ್ಟ. ನೌಖಾಲಿಗೆ ಗಾಂಧೀಜಿ ಒಬ್ಬಂಟಿ ಹೊರಟರು. “ಅಲ್ಲಿನ ಹಿಂದೂಗಳನ್ನು ನೀವು ರಕ್ಷಿಸಿ, ಇಲ್ಲಿನ ಮುಸಲ್ಮಾನರನ್ನು ರಕ್ಷಿಸುವ ಹೊಣೆ ನನಗಿರಲಿ” ಎಂದರು. ರಕ್ತಪಾತ ನಿಲ್ಲುವವರೆಗೆ ಉಪವಾಸ ಕುಳೀತುಕೊಳ್ಳುತ್ತೇನೆ ಎಂದರು. ಸೇಡಿನ ಕಿಚ್ಚಿನಿಂದ ಹಪಹಪಿಸುತ್ತಿದ್ದವರೂ ಗಾಂಧೀಜಿಯ ಮುಂದೆ ಮಂಡಿಯೂರಿ ಕುಳಿತರು. ಮೌಂಟ್ ಬ್ಯಾಟನ್ ಉದ್ಗರಿಸಿದ. “ದಂಗೆ ನಿಯಂತ್ರಿಸಿದ್ದು ಎರಡು ಸೇನೆಗಳು. ಒಂದೆಡೆ ೧೫ಸಾವಿರ ಸೈನಿಕರ ಸಮೂಹ, ಇನ್ನೊಂದೆಡೆ ಸಿಂಗಲ್ ಮ್ಯಾನ್ ಆರ್ಮಿ- ಗಾಂಧೀ!!”

 ಇವು ಅಷ್ಟಾಗಿ ಚರ್ಚೆಗೆ ಬರದ ಗಾಂಧೀಜಿಯವರ ಚಿತ್ರಣಗಳು. ಗಾಂಧೀಜಿಗೆ ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಅಪಾರ ಗೌರವ. ಗೀತೆಯ ಬಗ್ಗೆ ಅವರು ಸೊಗಸಾಗಿ ಬರೆದಿದ್ದಾರೆ. ರಾಷ್ಟ್ರದ ಸಮಸ್ಯೆಗಳಿಗೆ ಅದರಿಂದಲೇ ಪರಿಹಾರ ಹೇಳುತ್ತಾರೆ. ಇಷ್ಟಾಗಿಯೂ ಹಿಂದೂಗಳು ಅವರನ್ನು ತಮ್ಮ ನಾಯಕರೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅತ್ತ ಮುಸಲ್ಮಾನರು ಗಾಂಧೀಜಿಯನ್ನು ಹಿಂದೂಗಳ ನಾಯಕರೆಂದು ದೂರೀಕರಿಸುತ್ತಾರೆ. ಯಾವ ಹರಿಜನರ ಉದ್ಧಾರಕ್ಕಾಗಿ ತಮ್ಮ ಬದುಕಿನ ಪ್ರತಿಯೊಂದು ಹನಿ ಬೆವರನ್ನೂ ಸುರಿಸಿದರೋ, ಅದೇ ಹರಿಜನರ ಪಾಲಿಗೆ ಗಾಂಧೀಜಿ ಮೆಚ್ಚಿನ ನಾಯಕರಲ್ಲ. ಇತ್ತ ಮೇಲ್ವರ್ಗದ ಜನ ಕೂಡ ಅವರನ್ನು ಆರಾಧಿಸುವುದಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಗಾಂಧೀಜಿಯೇ ಅಸ್ಪೃಶ್ಯರಾಗಿಬಿಟ್ಟರು!

ದೇಶ- ಧರ್ಮಗಳ ಚಿಂತನೆ ಮಾಡದೇ, ಅನ್ಯಾಯವನ್ನು ಪ್ರತಿಭಟಿಸದೇ ಎಲ್ಲರಂತೆ ಇದ್ದುಬಿಟ್ಟಿದ್ದರೆ ಅವರೊಬ್ಬ ಶ್ರೀಮಂತ ಬ್ಯಾರಿಸ್ಟರ್ ಆಗಿರುತ್ತಿದ್ದರು. ಹಾಗಾಗಲಿಲ್ಲ. ಶ್ರೀಮಂತಿಕೆಯ ಬದುಕಿಗೊಂದು ಸಲಾಮು ಹೊಡೆದು, ತುಂಡು ಧೋತಿ ಧರಿಸಿ ರಾಷ್ಟ್ರ ಸೇವೆಗೆ ಧುಮುಕಿದರು. ಯಾವ ವರ್ಗವನ್ನು ವಿವೇಕಾನಂದರ ನಂತರ ಯಾರೂ ಪ್ರತಿನಿಧಿಸಿರಲಿಲ್ಲವೋ ಅಂಥಹ ಬಡ- ದರಿದ್ರರ ದನಿಯಾದರು. ವಿದೇಶದಲ್ಲಿರುವಾಗಲೇ ಬಿಳಿಯರು ಕರಿಯರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ವಿರೋಧಿಸಿದರು. “ಹೊಡೆದರೆ ಹೊಡೆಸಿಕೊಳ್ಳಿ. ಬಡಿದರೆ ಬಡಿಸಿಕೊಳ್ಳಿ. ಬಡಿಯುವವರು ಎಷ್ಟೂಂತ ಬಡಿದಾರು? ” ಎಂಬ ಸಿದ್ಧಾಂತವನ್ನು ಹೋರಾಟಗಾರರ ಕೈಗಿತ್ತರು. ದಬ್ಬಾಳಿಕೆಗೆ ಒಳಗಾದವರೂ ಮೊದಲು ಇವರನ್ನು ವಿರೋಧಿಸಿದರು. ಆಮೇಲೆ ಅಪಹಾಸ್ಯಗೈದರು. ಇಷ್ಟಾದರೂ ಆಸಾಮಿ ಜಗ್ಗದಿದ್ದಾಗ ಅವರನ್ನೇ ಅನುಸರಿಸಿದರು! ತಮ್ಮ ನಾಯಕನಾಗಿ ಸ್ವೀಕರಿಸಿದರು. ದೂರ ದೇಶದಿಂಡ ಬಂದವನೊಬ್ಬ ನೊಂದವರ ಕಣ್ಣೀರೊರೆಸುವುದು ತಮಾಷೆಯ ಕೆಲಸವಲ್ಲ. ಇಡೀ ಬ್ರಿಟಿಷ್ ಸಮುದಾಯ ಹೋರಾಟಾದ ಈ ಹೊಸ ಅಸ್ತ್ರಕ್ಕೆ ಬೆದರಿತು. ಇಂಗ್ಲೆಂಡಿನ ಪತ್ರಿಕೆಗಳೂ ಅವರನ್ನು ಹಾಡಿ ಹೊಗಳಿದವು. ನೋಡನೋಡುತ್ತಿದ್ದಂತೆಯೇ ಗಾಂಧೀಜಿ ಕಣ್ಣೂಕೋರೈಸುವಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದ್ದರು.

ಇದೇ ಜಾಗತಿಕ ಖ್ಯಾತಿಯೊಂದಿಗೆ ಅವರು ಭಾರತಕ್ಕೆ ಬಂದಾಗ ಇಲ್ಲಿನ ಎಲ್ಲ ವರ್ಗಗಳೂ ಆಸಕ್ತಿಯಿಂದ ಕಾದಿದ್ದವು. ಗಾಂಧೀಜಿ ಅದ್ಭುತ ವಾಗ್ಮಿಯೇನಲ್ಲ. ಆದರೂ ಅವರು ಮಾತಾಡಲಿಕ್ಕೆ ನಿಂತರೆ ಜನಸ್ತೋಮವಿಡೀ ನಿಶ್ಶಬ್ದವಾಗುತ್ತಿತ್ತು. ಗಾಂಧೀಜಿಯವರ ಒಂದೊಂದು ಮಾತನ್ನೂ ವ್ಯರ್ಥವಾಗಲು ಬಿಡದೆ ಕೇಳಿಸಿಕೊಳ್ಳುವ ಶ್ರದ್ಧೆಯಿರುತ್ತಿತ್ತು. ಅದು, ಗಾಂಧೀಜಿ ವ್ಯಕ್ತಿತ್ವದ ತಾಖತ್ತು.

ಕ್ರಾಂತಿಕಾರಿಗಳ ಹೋರಾಟ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದಾಗ, ಗಾಂಧೀಜಿ ರಾಷ್ಟ್ರೀಯ ಚಳುವಳಿಯನ್ನು ಅತಿ ಕೆಳ ವ್ಯಕ್ತಿಯವರೆಗೂ ಕೊಂಡೊಯ್ದಿದ್ದರು. ಅಸಹಕಾರ ಚಳುವಳಿಗೆಂದು ಗಾಂಧೀಜಿ ನೀದಿದ ಒಂದೇ ಕರೆಗೆ ದೇಶದ ಎಲ್ಲ ವರ್ಗದ ಜನ ಸೆಟೆದು ನಿಂತಿದ್ದರು. ತಿಲಕರು ಸ್ವರಾಜ್- ಸ್ವದೇಶ್ ಪದಗಳನ್ನು ಹುಟ್ಟುಹಾಕಿದರು. ನಿಜ. ಗಾಂಧೀಜಿ ಅವುಗಳ ಕಲ್ಪನೆಯನ್ನು ಸಾಕಾರಗೊಳಿಸುವ ಮಾರ್ಗವನ್ನು ಜನರ ಮುಂದಿಟ್ಟರು.

ಗಾಂಧೀಜಿ ಮತ್ತು ಸುಭಾಷರ ಬಾಂಧವ್ಯದ ಬಗ್ಗೆಯೂ ಒಂದಷ್ಟು ವಿಷಯಗಳನ್ನು ಬೇಕೆಂದೇ ಮುಚ್ಚಿಡಲಾಗುತ್ತದೆ. ಅವರಿಬ್ಬರ ಸಂಬಂಧ ತಂದೆ- ಮಗನಂತಿತ್ತು ಅನ್ನೋದು ಬಹಳ ಜನರಿಗೆ ಗೊತ್ತೇ ಇಲ್ಲ. ಪತ್ರ ಬರೆವಾಗಲೆಲ್ಲ ಗಾಂಧೀಜಿ “ನಮ್ಮಲ್ಲಿನ ವೈಚಾರಿಕ ಭೇದ ನಮ್ಮ ಸಂಬಂಧಕ್ಕೆ ಧಕ್ಕೆ ತರಬಾರದು” ಎನ್ನುತ್ತಿದ್ದರು. ಒಮ್ಮೆಯಂತೂ ಪತ್ರದಲ್ಲಿ “ನನ್ನ ನಿನ್ನ ವಿಚಾರಗಳು ವಿಮುಖವಾದವು. ನಾನು ಮುದುಕ, ನೀನು ತರುಣ. ನಿನ್ನ ಚಿಂತನೆ- ವಾದಗಳೇ ಸರಿಯಾಗಿರಲಿ ಎಂದು ಆಶಿಸುತ್ತೆನೆ. ನಿನ್ನ ವಾದದಿಂದಲೇ ದೇಶಕ್ಕೆ ಲಾಭ ಎನ್ನುವುದಾದರೆ ನಾನು ಮಾಜಿ ಸತ್ಯಾಗ್ರಹಿಯಾಗಿ ನಿಷ್ಠೆಯಿಂದ ನಿನ್ನನ್ನು ಅನುಸರಿಸುತ್ತೇನೆ” ಎಂದಿದ್ದರು. ನಮ್ಮ ಸುಭಾಷ್ ದೇಶಭಕ್ತರ ಗುಂಪಿನಲ್ಲಿ ಮಿಂಚುವ ವೀರ ಎಂದು ಹೆಮ್ಮೆಪಡುತ್ತಿದ್ದರು. ಇನ್ನೊಂದೆಡೆ ಸುಭಾಷರು ಗಾಂಧೀಜಿ ರಾಷ್ಟ್ರಕ್ಕೇ ತಂದೆಯಿದ್ದಂತೆ, ಅವರೇ ‘ರಾಷ್ಟ್ರ ಪಿತ’ ಎಂದು ಹೇಳಿದ್ದರು!

ನಮ್ಮ ಕ್ರಾಂತಿಕಾರಿಗಳೆಲ್ಲ ಫ್ರಾನ್ಸು, ಅಮೆರಿಕ, ಜರ್ಮನಿ, ಇಟಲಿಗಳಿಂದ ಸ್ಫೂರ್ತಿಪಡೆದವರು, ಅಲ್ಲಿನ ಹೋರಾಟ ಕ್ರಮವನ್ನು ಅನುಸರಿಸಿದವರು. ಆದರೆ ಗಾಂಧೀಜಿ ಮಾತ್ರ ಈ ದೇಶದ ಸಂಸ್ಕೃತಿಯ ಆಳದಿಂದೆದ್ದು ಬಂದ ಸತ್ಯ- ಅಹಿಂಸೆಗಳೊಂದಿಗೆ ಹೋರಾಟ ಸಂಘಟಿಸಿದವರು. ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು!

ಅವರ ಆತ್ಮ ಕಥೆಯಲ್ಲಿ ಗಾಂಧೀಜಿ ಬರೆದುಕೊಂಡಿದ್ದಾರೆ, “ತಂದೆಸಾವಿನ ಜೊತೆ ಸೆಣಸುತ್ತಿದ್ದಾಗ, ನಾನು ಅವರ ಕಾಲು ಒತ್ತುವುದು ಬಿಟ್ಟು ಹೆಂಡತಿಯೊಡನೆ ಸರಸದಲ್ಲಿದ್ದೆ. ತಂದೆ ಸತ್ತ ವಿಷಯ ತಿಳಿದಿದ್ದೂ ಆಗಲೇ! ನನಗೆ ಅಂದು ನನ್ನ ಮೇಲೇ ಅಸಹ್ಯವಾಗಿತ್ತು” ಅಂತ. ಆ ಪರಿ ಎತ್ತರಕ್ಕೇರಿರುವ ಮನುಷ್ಯ ಈ ಪರಿಯ ಸತ್ಯಗಳನ್ನು ಹೇಳಬಹುದು ಅನ್ನಿಸುತ್ತಾಯೋಚಿಸಿ. ಅದು ಗಾಂಧೀಜಿಗೆ ಮಾತ್ರ ಸಾಧ್ಯ. ಅದಕ್ಕೇ, ಅವರು ‘ಮಹಾತ್ಮ’!