Tuesday 19 March 2013


ಬೆಳಗಾವಿ ಜಿಲ್ಲೆಯ ಪರಿಚಯ

ಆತ್ಮೀಯರೆ,
ಬೆಳಗಾವಿ ಜಿಲ್ಲೆಯ ಚಿಣ್ಣರ ಜಿಲ್ಲಾ ದರ್ಶನಕ್ಕೆ ತಮಗೆಲ್ಲ ಸ್ವಾಗತ. ವೇಣುಗ್ರಾಮ, ಬೆಳ್ಳಿಗಾವಿ, ಬೆಳಗಾವಿ ಎಂದು ಪ್ರಸಿದ್ಧವಾದ ಕರ್ನಾಟಕದ ವಾಯುವ್ಯ ದಿಕ್ಕಿನಲ್ಲಿ, ಸಹ್ಯಾದ್ರಿ ಪರ್ವತ ಶ್ರೇಣಿಯ ಸೆರಗಿನಲ್ಲಿರುವ ಬೆಳಗಾವಿ ಜಿಲ್ಲೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ನದಿ, ಪರ್ವತ, ಜಲಪಾತಗಳಿಂದ ತುಂಬಿ ಭತ್ತ, ಹತ್ತಿ, ಜೋಳ, ಕಬ್ಬು, ತಂಬಾಕು ಬೆಳೆಗಳನ್ನು ಸಮೃದ್ಧವಾಗಿ ಬೆಳೆದು, ಸಾಹಿತಿ, ಕಲಾವಿದರ ತವರೂರಾಗಿ ಔದ್ಯೋಗಿಕ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿ, ರಾಜ್ಯದ ಎರಡನೇ ರಾಜಧಾನಿ ಎನಿಸಿದೆ.
ಕರ್ನಾಟಕದ ಇತಿಹಾಸ ಮತ್ತು ಭಾರತ ಸ್ವಾತಂತ್ರ‍್ಯ ಹೋರಾಟದ ಪುಟಗಳಲ್ಲಿ ಅಗ್ರಸ್ಥಾನ ಪಡೆದ ಹೆಮ್ಮೆ ನಮ್ಮದು. ಕನ್ನಡದ ಕೀರ್ತಿ ಪತಾಕೆಯನ್ನು ಬಾನಿನೆತ್ತರಕ್ಕೆ ಹಾರಿಸಿದ ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಬೆಳ್ಳಿಚುಕ್ಕಿ ಕತ್ತೂರ ರಾಣಿ ಚೆನ್ನಮ್ಮ ನಮ್ಮವಳು. ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಬಿಚ್ಚುಗತ್ತಿ ಚನ್ನಬಸಪ್ಪ, ಶಿವಾಪುರದ ಸತ್ಯಪ್ಪ ದೇಶಭಕ್ತಿಗೆ ಮಾದರಿ. ಜಿಲ್ಲೆಯಲ್ಲಿರುವಷ್ಟು ಕೋಟೆ ಕೊತ್ತಲಗಳು ರಾಜ್ಯದಲ್ಲಿ ಬೇರೆಲ್ಲೂ ಸಿಗಲಾರವು. ವೀರ ಇತಿಹಾಸಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಇಲ್ಲ. ಅದಕ್ಕಾಗಿಯೇ ಇದು ಗಂಡು ಮೆಟ್ಟಿನ ನಾಡು.
ಕುಂತಲನಾಡು-ಕುಂದರನಾಡು, ಕುಹಂಭ-ಮೂರು ಸಾವಿರ ಪ್ರದೇಶ ಎಂದು ಇತಿಹಾಸ ಕಾಲದಿಂದಲೂ ಪ್ರಸಿದ್ಧವಾದ ಬೆಳಗಾವಿ ಕರ್ನಾಟಕವನ್ನು ಆಳಿದ ಮೊದಲ ಅಚ್ಚ ಕನ್ನಡದ ಅರಸರಾದ ರಟ್ಟರು ಅಂದರೆ ರಾಷ್ಟ್ರಕೂಟರ ಮೂಲ ಸ್ಥಾನವಾಗಿದೆ. ರಟ್ಟರು, ದೇವಗಿರಿಯ ಯಾದವರು, ಉತ್ತರದ ಮಹ್ಮದಬಿನ್‌ತುಘಲಕ್‌, ವಿಜಯನಗರದ ಅರಸರು, ಬಹಮನಿ ಸುಲ್ತಾನರು, ಆದಿಲ್‌ಷಾಹಿಗಳು, ಮರಾಠರು, ಕದಂಬರು  ಹೀಗೆ ಹಲವಾರು ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟರೂ ತನ್ನತನ ಕಾಯ್ದುಕೊಂಡು ಬಂದಿದೆ.
೧೨ನೇ ಶತಮಾನದ ಶರಣ ಕ್ರಾಂತಿಯ ಹೆಜ್ಜೆಗುರುತುಗಳು ಇಲ್ಲಿ ಅಚ್ಚಳಿಯದೆ ಮೂಡಿವೆ. ಕಲ್ಯಾಣದಲ್ಲಿ ಶರಣರನ್ನು ಕೊಲ್ಲಲಾರಂಭಿಸಿದಾಗ ಚನ್ನಬಸವಣ್ಣನ ಮುಂದಾಳತ್ವದಲ್ಲಿ (೧೧೬೭ರಲ್ಲಿ) ಕಲ್ಯಾಣದಿಂದ ಉಳವಿಯೆಡೆಗೆ ಹೊರಟರು. ಮಾರ್ಗ ಮಧ್ಯದ ಬೆಳಗಾವಿ ಜಿಲ್ಲೆಯ ಕಲ್ಲೂರಿನಲ್ಲಿ ಕಲ್ಯಾಣಮ್ಮ, ಮರಡಿ ನಾಗಲಾಪುರದಲ್ಲಿ ಅಕ್ಕ ನಾಗಲಾಂಬಿಕೆ, ಹುಣಶೀಕಟ್ಟಿಯಲ್ಲಿ ರುದ್ರಮುನಿ ದೇವರು, ಎಂ.ಕೆ. ಹುಬ್ಬಳ್ಳಿಯ ಮಲಪ್ರಭೆಯಲ್ಲಿ ಗಂಗಾಂಬಿಕೆ, ಕಕ್ಕೇರಿಯಲ್ಲಿ ಕಕ್ಕಯ್ಯ ಲಿಂಗೈಕ್ಯರಾದರು. ಅಂದು ಅವರು ಬಿತ್ತಿದ ಶರಣ ಸಂಪ್ರದಾಯ ಇಂದಿಗೂ ಜನರಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಜೀವಂತವಾಗಿಸಿದೆ.
ದುರ್ಗಗಳು, ವಾಡೆಗಳು, ಬಸದಿಗಳು, ದೇಗುಲಗಳು, ಮಠಮಾನ್ಯಗಳು, ಮಸೀದಿಗಳು, ಚರ್ಚ್‌ಗಳು, ಸಮಾಧಿಗಳ ಜೊತೆಗೆ ಅಸಂಖ್ಯಾತ ಪುರಾತನ ಸ್ಮಾರಕಗಳು ತಮ್ಮ ಗತವೈಭವವನ್ನು, ನೋವು-ನಲಿವುಗಳನ್ನು ನಮ್ಮ ಮುಂದೆ ಹೇಳಲು ಕಾತರವಾಗಿವೆ. ನಮ್ಮ ಮುಂದಿನ ಜೀವನಕ್ಕೆ ದಾರಿದೀಪವೂ ಸಹ ಆಗಿವೆ.
ಇಲ್ಲಿ ಸುಂದರ ನದಿ ಕಣಿವೆಗಳಿವೆ. ಅದ್ಭುತವಾದ ಗುಡ್ಡಗಾಡುಗಳು, ರಮ್ಯ ಅರಣ್ಯ ಪ್ರದೇಶ, ಗಾಂಭೀರ್ಯದ ಕೋಟೆ ಕೊತ್ತಲುಗಳು, ಪ್ರಗತಿಯ ಔದ್ಯೋಗಿಕ ಕೇಂದ್ರಗಳು, ಉನ್ನತ ಶಿಕ್ಷಣದ ಜ್ಞಾನ ದೇಗುಲಗಳು, ಜಾಗತಿಕ ಮಟ್ಟದ ಆರೋಗ್ಯ ಸೇವೆ ಎಲ್ಲವೂ ಇವೆ.
ಕೊಳವಿ, ಹುದಲಿ, ಕುಮರಿ, ಸಂಪಗಾಂವ, ಶಿವಾಪುರ ಗ್ರಾಮಗಳು ಸ್ವಾತಂತ್ರ‍್ಯ ಚಳುವಳಿಗೆ ವೀರ ಯೋಧರನ್ನು ನೀಡಿ ಧನ್ಯವಾಗಿವೆ. ಇಲ್ಲಿಯ ಸ್ವಾತಂತ್ರ‍್ಯ ಚಳುವಳಿಯ ಅಗಾಧತೆ ಗಾಂಧೀಜಿಯವರನ್ನು ಕರೆಸಿಕೊಂಡಿತು. ಸೇವಾದಳದಸಂಸ್ಥಾಪಕ ಡಾ|| ನಾ.ಸು. ಹರ್ಡೀಕರರ ಕಾರ್ಯಕ್ಷೇತ್ರವಾಯಿತು. ದೇಶ ಬಿಟ್ಟು ತೊಲಗಿ ಚಳುವಳಿಯಲ್ಲಿ ದೇಶದಲ್ಲಿಯೇ ಹೆಚ್ಚು ಸ್ವಾತಂತ್ರ‍್ಯ ಯೋಧರು ಸೆರೆಮನೆವಾಸ ಕಂಡ ಜಿಲ್ಲೆ ನಮ್ಮದು. ಗಂಗಾಧರರಾವ ದೇಶಪಾಂಡೆ, ವಾಲಿ ಚನ್ನಪ್ಪ, ಅಣ್ಣುಗುರೂಜಿ, ಯಶವಂತರಾವ ಯಾಳಗಿ, ಬಿದರಿ ದಂಪತಿಗಳು, ಮಿರ್ಜಿ ಅಣ್ಣಾರಾಯ, ಗುರುಬಸಮ್ಮ ಮರಿಲಿಂಗನವರ ಮುಂತಾದ ಸಾವಿರಾರು ಜನ ಸ್ವಾತಂತ್ರ‍್ಯ ಹೋರಾಟಗಾರರು ನಮ್ಮ ಜಿಲ್ಲೆಯವರು.
ಸವದತ್ತಿ, ಚಿಂಚಲಿ, ಮಂಗಸೂಳಿ, ಕೊಕಟನೂರ, ಕುಡಚಿ, ಗೊಡಚಿ, ಬಡಕುಂದ್ರಿ, ಹೂಲಿ, ಅಮ್ಮಣಗಿ, ಅರಭಾವಿ, ವಡಗಾಂವಿ, ಮರಡಿ ನಾಗಲಾಪೂರ, ಬಾಳೇಕುಂದ್ರಿ, ಸುಳೇಭಾವಿಗಳಲ್ಲಿ ನಡೆಯುವ ಜಾತ್ರೆಗಳು ಜಿಲ್ಲೆಯ ವಿಭಿನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪರಿಚಯಿಸುತ್ತವೆ.
ಸಹ್ಯಾದ್ರಿಯ ಬೆಟ್ಟ ಸಾಲುಗಳಿಂದ ಹರಿಯುವ ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ಮಾರ್ಕಂಡೇಯ, ಪಂಚಗಂಗಾ, ಮಹಾದಾಯಿ ನದಿಗಳು ಜಿಲ್ಲೆಯ ಜೀವನದಿಗಳಾಗಿವೆ. ಹಿಡಕಲ್‌ನ ರಾಜಾ ಲಖಮಗೌಡ, ನವಿಲುತೀರ್ಥದ ರೇಣುಕಾ ಸಾಗರ ದೂಫದಾಳ ಅಣೆಕಟ್ಟು, ತಿಗಡಿಯ ಹರಿನಾಲಾ ಅಣೆಕಟ್ಟು, ಶಿರೂರ ಅಣೆಕಟ್ಟು ನೀರಾವರಿ ಚಟುವಟಿಕೆಗಳಿಗೆ ಆಶ್ರಯವಾಗಿವೆ.
ವಜ್ರಪೋ, ಕಳಸಾ, ಓಜರ್‌, ಗೋಕಾಕ, ಗೊಡಚಿನಮಲ್ಕಿ, ಅಂಬೋಳಿ ಜಲಪಾತಗಳು, ಲೋಂಡಾ, ಗುಂಜಿ, ಜಾಂಬೋಟಿ, ಕಣಕುಂಬಿ, ಕೃಷ್ಣಾಪುರ ಮೊದಲಾದ ಚಾರಣಸ್ಥಳಗಳು ಸಾಹಸ ಕ್ರೀಡೆಗಳಾದ ಚಾರಣ, ಬೆಟ್ಟ ಹತ್ತುವುದು, ನದಿ ದಾಟುವುದು, ರೋವಿಂಗ್‌ಮುಂತಾದವುಗಳಿಗೆ ಪ್ರಸಿದ್ಧವಾಗಿವೆ. ಭೂತರಾಮನಹಟ್ಟಿಯ ಜಿಂಕೆ ಪಾರ್ಕ್‌, ದೂಫದಾಳದ ಪಕ್ಷಿಧಾಮ ವನ್ಯಮೃಗ ಪಕ್ಷಿ ವೀಕ್ಷಣೆಗೆ ಹೇರಳ ಅವಕಾಶ ಒದಗಿಸಿವೆ.
ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುವ ತರಕಾರಿಗೆ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ಬೇಡಿಕೆ ಇದೆ. ಮೂರು ರಾಜ್ಯಗಳಿಗಾಗುವಷ್ಟು ತರಕಾರಿಯನ್ನು ಈ ಒಂದು ಜಿಲ್ಲೆಯಲ್ಲಿಯೇ ಬೆಳೆಯಲಾಗುತ್ತದೆ. ಜೊತೆಗೆ ಹತ್ತಿ, ತಂಬಾಕು, ಜೋಳ, ಬೇಳೆಕಾಳೂ, ಭತ್ತ ಬೆಳೆದು ಸಮೃದ್ಧವಾಗಿದೆ. ಹೇರಳವಾಗಿ ಕಬ್ಬು ಬೆಳೆಯುವುದರಿಂದ ಹಲವಾರು ಸಕ್ಕರೆ ಕಾರ್ಖಾನೆಗಳು ಇಲ್ಲಿವೆ. ಅದಕ್ಕಾಗಿಯೇ ಇದ ಸಕ್ಕರೆಯ ಸಿಹಿ ಜಿಲ್ಲೆ.
ಔದ್ಯೋಗಿಕವಾಗಿ ಬೆಳಗಾವಿ ಸಾಕಷ್ಟು ಬೆಳೆದಿದೆ. ಗುಡಿ ಕೈಗಾರಿಕೆಯಿಂದ ಬೃಹತ್‌ಉದ್ಯಮದವರೆಗೆ ಸಾಗಿದೆ. ವಿದೇಶಗಳಿಗೆ ರಫ್ತು ಮಾಡುವ ಸೀರೆ ತಯಾರಿಸುವಲ್ಲಿ ವಡಗಾವಿ, ಹಳೆ ಬೆಳಗಾವಿ, ಸುಳೇಭಾವಿ, ದೇಶನೂರ, ರಾಮದುರ್ಗಗಳು ಪ್ರಸಿದ್ಧಿ ಪಡೆದಿವೆ. ಹುದಲಿಯ ಖಾದಿಯ ಖದಿರು ದೇಶಕ್ಕೆಲ್ಲ ಹರಡಿದೆ. ವಾಹನಗಳ ಬಿಡಿಭಾಗಗಳನ್ನು ತಯಾರಿಸುವ ಉದ್ಯಮಬಾಗ ದೇಶದ ವಾಹನ ತಯಾರಿಕಾ ಕೈಗಾರಿಕೆಯ ಆಧಾರ ಸ್ತಂಭವಾಗಿದೆ. ಬಸ್ಸು, ಲಾರಿಗಳ ಕವಚ ಕಟ್ಟುವ ಕೈಗಾರಿಕೆ ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಖಾನಾಪುರದ ಹಂಚು ಇಟ್ಟಿಗೆ, ಮಡಿಕೆಗಳಿಗೆ ಹೊರರಾಜ್ಯದಲ್ಲೂ ಬೇಡಿಕೆಯಿದೆ.
ಬೆಳಗಾವಿ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ಕೇಂದ್ರವಾಗಿದೆ. ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಸರಕಾರಿ ಶಾಲೆಗಳ ಜೊತೆಗೆ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಳಗಾವಿಯಲ್ಲಿ ಇವೆ. ಕೆ.ಎಲ್‌.ಇ, ನಾಗನೂರ ಶಿವಬಸವ, ರಾಣಿ ಚನ್ನಮ್ಮಾ ವಿಶ್ವವಿದ್ಯಾನಿಲಯ, ಜಿ.ಐ.ಟಿ., ಬಿಮ್ಸ್‌, ಬಿ.ಕೆ. ಮಾಡೆಲ್‌, ಅಂಗಡಿ ತಾಂತ್ರಿಕ ಕಾಲೇಜಿ, ಗೋಮಟೇಶ ವಿದ್ಯಾಪೀಠ ಮುಂತಾದ ಶಿಕ್ಷಣ ಸಂಸ್ಥೆಗಳು ಪೂರ್ವ ಪ್ರಾಥಮಿಕ ವಿಭಾಗದಿಂದ ವೈದ್ಯಕೀಯ, ತಾಂತ್ರಿಕ ಶಿಕ್ಷಣದ ಸ್ನಾತಕೋತ್ತರ ಹಂತದವರೆಗೆ ಕೊಡುವ ಶಿಕ್ಷಣ ಅಂತರಾಷ್ಟ್ರೀಯ ಮಟ್ಟದ್ದು. ಗುಣಮಟ್ಟದ ಹಾಗೂ ಹೃದಯವಂತ ಶಿಕ್ಷಕರನ್ನು ತರಬೇತಿಗೊಳಿಸುವ ಡಯಟ, ಸಿಟಿಇ ಜೊತೆಗೆ ಹಲವಾರು ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿವೆ. ದೇಶದ ಹೆಮ್ಮೆಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆ.ಎಲ್‌.ಇ. ಆಸ್ಪತ್ರೆ ಏಷ್ಯಾದಲ್ಲಿಯೇ ದೊಡ್ಡದು ಮತ್ತು ಆಧುನಿಕವಾದುದು. ಟಿಳಕವಾಡಿಯ ವ್ಯಾಕ್ಸಿನ್‌ಡಿಪೋ ದೇಶದ ಮಹತ್ವದ ಲಸಿಕಾ ಕೇಂದ್ರವಾಗಿದೆ. ಕೋಟೆಯಲ್ಲಿಯ ಅಲ್ಪಸಂಖ್ಯಾತರ ಅಧ್ಯಯನ ಕೇಂದ್ರ ದೇಶಕ್ಕೆ ಒಂದೇ.
ವೀರ ಸನ್ಯಾಸಿ ವಿವೇಕಾನಂದರು ಭೇಟಿ ನೀಡಿ ಆಧ್ಯಾತ್ಮಿಕ ಮಾರ್ಗದರ್ಶನ ನಮಗೆಲ್ಲ ನೀಡಿದ್ದಾರೆ೧೯೨೪ರ ಬೆಳಗಾವಿ ಕಾಂಗ್ರೆಸ್‌ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಮಹಾತ್ಮಾ ಗಾಂಧಿಯವರುಕುಮಾರ ಗಂಧರ್ವಏಣಗಿ ಬಾಳಪ್ಪಹುಕ್ಕೇರಿ ಬಾಳಪ್ಪಶಾಂತವ್ವ ಪಾತ್ರೋಟ ಮುಂತಾದವರು ನಮ್ಮ ಜಿಲ್ಲೆಯ ಹೆಮ್ಮೆಯ ಕಲಾವಿದರು.
ಪೋರ್ಚುಗೀಸರ ನೆಲೆಯಾಗಿದ್ದ ಗೋವಾವನ್ನು ಭಾರತ ಗಣರಾಜ್ಯದಲ್ಲಿ ಸೇರಿಸಲು ನಡೆದ ಯುದ್ಧದಲ್ಲಿ ಭಾರತೀಯ ವಾಯುದಳದ ನೆಲೆ ಬೆಳಗಾವಿಯಾಗಿತ್ತು. ಸಾಂಬ್ರಾ ವಿಮಾನ ನಿಲ್ದಾಣ ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ನಾಗರಿಕ ವಿಮಾನಯಾನ ಸೌಲಭ್ಯವನ್ನು ಹೊಂದುವುದರ ಜೊತೆಗೆ ವಾಯುಸೇನೆಯ ಪ್ರಮುಖ ತರಬೇತಿ ಕೇಂದ್ರವಾಗಿದೆ.
ಸಜನಾ ಕಾವ್ಯನಾಮದೊಂದಿಗೆ ವೈಜ್ಞಾನಿಕ ಹಾಗೂ ವೈದ್ಯಕೀಯ ಕೃತಿಗಳನ್ನು ರಚಿಸಿ ಜನರಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿದ ಡಾ. ಸ.ಜ. ನಾಗಲೋತಿಮಠ ಅವರು ಆಧುನಿಕ ವೈದ್ಯಕೀಯ ವಿಜ್ಞಾನದೊಂದಿಗೆ ಶರಣ ಸಂಪ್ರದಾಯವನ್ನು ಮೇಳವಿಸಿದವರು. ಅವರ ಹೆಸರಿನ ವಿಜ್ಞಾನ ಕೇಂದ್ರ ಬೆಳಗಾವಿಗೆ ಕಿರೀಟಪ್ರಾಯ.
ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಬೆಳಗಾವಿ ಕುಂದಾ, ಗೋಕಾಕದ ಕರದಂಟು ಜಗತ್ಪ್ರಸಿದ್ಧ. ಇಲ್ಲಿಯ ಜನರ ಮಾತು ಕರದಂಟಿನಂತೆ ಒರಟಾಗಿದ್ದರೂ ಇವರ ಹೃದಯ ಕುಂದಾದಷ್ಟೇ ಸಿಹಿ.
ಭಾರತದ ನಯಾಗರಾ ಎಂದು ಕರೆಯುವ ಗೋಕಾಕ ಜಲಪಾತ ರಮ್ಯ ಮನೋಹರವಾದುದು. ೫೭ ಅಡಿ ಕಲ್ಲು ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಘಟಪ್ರಭೆಯನ್ನು ನೋಡುವುದೇ ಭಾಗ್ಯ. 
ಮಹಾಲಿಂಗೇಶ್ವರ ದೇವಸ್ಥಾನ, ಯೋಗಿಕೊಳ್ಳ, ತೂಗುಸೇತುವೆ.

೧೯೩೫ ರಲ್ಲಿ ಗ್ರಾಮೀಣ ಭಾರತದ ಆರೋಗ್ಯದ ಕನಸು ಹೊತ್ತು ಡಾ. ಜಿ.ಆರ್‌. ಕೊಕಟನೂರ, ಡಾ. ಎಂ.ಕೆ. ವೈದ್ಯ, ಡಾ. ನಾ.ಸು. ಹರ್ಡೀಕರರಿಂದ ೨೦೦ ಎಕರೆ ಪ್ರದೇಶದಲ್ಲಿ ಸ್ಥಾಪಿತವಾದ ಕರ್ನಾಟಕ ಆರೋಗ್ಯಧಾಮ ಕರ್ನಾಟಕದ ಹೆಮ್ಮೆ. ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವ ಇಲ್ಲಿ ಕ್ಷಯರೋಗಕ್ಕೆ ವಿಶೇಷ ಉಪಚಾರವಿದೆ. ಗ್ರಾಮೀಣ ಮಹಿಳೆಯರ ಅಭಿವೃದ್ಧಿಗೆ ಸ್ವಸಹಾಯ ಸಂಘಗಳ ಕಲ್ಪನೆಯನ್ನು ವತ್ಸಲಾ ತಾಯಿ ವೈದ್ಯರು ಅಂದೇ ಸಾಕಾರಗೊಳಿಸಿದ್ದರು.
೧೯೨೩ರಲ್ಲಿ ಹಿಂದೂಸ್ಥಾನಿ ಸೇವಾದಲವನ್ನು ಸ್ಥಾಪಿಸಿ ಭರತ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಶಿಸ್ತು ಒದಗಿಸಿಕೊಟ್ಟು. ಭಾರತ ಸೇವಾದಲ ಸ್ಥಾಪಿಸಿ ಕರ್ನಾಟಕದ ಶಾಲೆಗಳಲ್ಲಿ ದೇಶಭಕ್ತಿಯನ್ನು ಪಸರಿಸಿದ, ಡಾ. ನಾ.ಸು. ಹರ್ಡೀಕರ ಸಮಾಧಿ ಇಲ್ಲಿದೆ.
ಬೆಳಗಾವಿಯಿಂದ – ೮೦ ಕಿ.ಮೀ.
ಗೋಕಾಕದಿಂದ – ೧೫ ಕಿ.ಮೀ.

ಡಾ. ನಾ.ಸು. ಹರ್ಡೀಕರರ ಸಮಾಧಿ
ಬೆಳಗಾವಿಯಿಂದ – ೮೦ ಕಿ.ಮೀ.
ಗೋಕಾಕದಿಂದ – ೧೫ ಕಿ.ಮೀ.

ಮಾರ್ಕಂಡೇಯ ನದಿಯು ಎರಡು ಸ್ಥಳಗಳಲ್ಲಿ ಉಂಟು ಮಾಡಿರುವ ಗೊಡಚಿನಮಲ್ಕಿ ಜಲಪಾತ ರಮಣೀಯವಾದುದು. ಟ್ರೆಕ್ಕಿಂಗ್‌ಗೆ ಅತ್ಯುತ್ತಮವಾದ ಸ್ಥಳವಾಗಿದೆ.
ಬೆಳಗಾವಿಯಿಂದ – ೭೧ ಕಿ.ಮೀ.
ಗೋಕಾಕದಿಂದ ೬.ಕಿ.ಮೀ.

ವೀರಶೈವ ಭಕ್ತಿಕೇಂದ್ರವಾದ ಅರಭಾವಿಯ ಮಠವು ಹಿಮಾಲಯದಿಂದ ಬಂದು ಸ್ಥಾಪಿಸಿದ ದುರುದುಂಡೇಶ್ವರ ಪುಣ್ಯಕ್ಷೇತ್ರವಾಗಿದೆ. ಕೆಂಪುಕಲ್ಲಿನಲ್ಲಿ ಕಟ್ಟಿದ ಕಟ್ಟಡದ ಶಿಲ್ಪಕಲೆ. ಕೆತ್ತನೆಯ ಕೆಲಸಗಳು ಅದ್ಭುತವಾಗಿವೆ. ಏಕಶಿಲಾ ಸರಪಳಿಗಳು ಶಿಲ್ಪ ಕಂಬಗಳು ಆಕರ್ಷಕವಾಗಿವೆ. ಈ ಕಟ್ಟಡವನ್ನು ಕ್ರಿ.ಶ. ೧೧೫೦ ರಲ್ಲಿ ಕಟ್ಟಲಾಗಿದೆ.
ಗೋಕಾಕ ತಾಲ್ಲೂಕಿನ ಎಲ್ಲ ಸ್ಥಳಗಳನ್ನು ಸಂಪರ್ಕಿಸುವ ರೈಲು ವ್ಯವಸ್ಥೆಯಿದೆ.
ಸಾವಳಗಿಮಠ
ದೂಪದಾಳ ಡ್ಯಾಮ
ಗೋಕಾಕ ಗಿರಣಿ


ರಾಯಬಾಗ
ಬೆಳಗಾವಿಯಿಂದ – ೧೨೫ ಕಿ.ಮೀ.
ರಾಯಬಾಗದಿಂದ – ೧೦ ಕಿ.ಮೀ.

ಕೃಷ್ಣಾ ನದಿ ತಟದಲ್ಲಿರುವ ಚಿಂಚಲಿ, ಮಾಯಕ್ಕನಿಂದ ಪ್ರಸಿದ್ಧಿ ಪಡೆದ ಊರು, ಕೋಲ ಮತ್ತು ಕಟ್ಟ ಎಂಬ ರಾಕ್ಷಸರನ್ನು ಸಂಹಾರ ಮಾಡಿ ಜನರನ್ನು ಮಾಯಕ್ಕ ರಕ್ಷಿಸಿದಳೆಂಬ ಐತಿಹ್ಯವಿದೆ. ಅವರ ಸಮಾಧಿಗೆ ಸಂಬಂಧಿಸಿದ ‘ಹಗೆ’ಗಳು ಈಗಲೂ ಚಿಂಚಲಿಯಲ್ಲಿವೆ. ಮೂರು ವರ್ಷಕ್ಕೊಮ್ಮೆ ನಡೆಯುವ ಮಾಯಕ್ಕನ ಜಾತ್ರೆ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಲ್ಲಿ ಮಹತ್ವದ್ದಾಗಿದೆ. ಇಲ್ಲಿ ವರ್ಷ ಪೂರ್ತಿ ನಿರಂತರ ಅನ್ನದಾಸೋಹ ನಡೆಯುತ್ತದೆ.
ಬೆಳಗಾವಿಯಿಂದ – ೧೧೦ ಕಿ.ಮೀ.
ರಾಯಬಾಗದಿಂದ – ೩೮ ಕಿ.ಮೀ.

೧೯೩೩ ರಲ್ಲಿ ಯಲ್ಲಾಲಿಂಗ ಪ್ರಭುಗಳಿಂದ ಸ್ಥಾಪನೆಯಾಗಿ ನಿರಂತರ ಅಭಿವೃದ್ಧಿ ಹೊಂದಿದ ಕ್ಷೇತ್ರ ಮುಗಳಖೋಡ. ಜನರಲ್ಲಿ ಧೈರ‍್ಯ, ಆತ್ಮವಿಶ್ವಾಸ, ಸನ್ಮಾರ್ಗವನ್ನು ಬಿತ್ತರಿಸಿ ಸಮಾಜವನ್ನು ಶುಚಿಗೊಳಿಸಲು ಪ್ರಯತ್ನಿಸಿದ ಕ್ಷೇತ್ರ ನಾಡಿನ ಜನರನ್ನು ಆಕರ್ಷಿಸಿದೆ.

ಅಥಣಿ
ಬೆಳಗಾವಿಯಿಂದ – ೧೨೦ ಕಿ.ಮೀ.
ಅಥಣಿಯಿಂದ – ೩೦ ಕಿ.ಮೀ.

ಮಂಗಸೂಳಿ ಮಲ್ಲಯ್ಯ ದೇವಸ್ಥಾನ
ವಂಟಮುರಿ ದೇಸಾಯರ ಕಾಲದಲ್ಲಿ ಸ್ಥಾಪಿತವಾದ ಈ ದೇವಾಲಯದ ಹಿನ್ನೆಲೆ ಪವಾಡಗಳೊಮದಿಗೆ ತಳಕು ಹಾಕಿಕೊಂಡಿದೆ. ಆದಿಲ್‌ಶಾಹಿ ಅರಸರು ವಂಟಮುರಿ ದೇಸಾಯರನ್ನು ಬಂಧಿಸಿದಾಗ, ಮಲ್ಲಯ್ಯನ ಆಶೀರ್ವಾದದಿಂದ ದೇಸಾಯರು ಬಿಡುಗಡೆ ಹೊಂದಿದರು ಎಂಬ ನಂಬಿಕೆ. ಅದರಿಂದ ಅವರಿಂದ ಸ್ಥಾಪನೆಯಾದ ಮಂದಿರ ಪ್ರಸಿದ್ಧಿಯನ್ನು ಪಡೆದಿದೆ.
ಬೆಳಗಾವಿಯಿಂದ – ೧೪೮ ಕಿ.ಮೀ.
ಮುರುಘೇಂದ್ರ ಶಿವಯೋಗಿಗಳ ಮಠ (ಗಚ್ಚಿನ ಮಠ)
ಕರ್ನಾಟಕ ಹೆಬ್ಬಾಗಿಲು ಎಂದು ಕರೆಯುವ ಅಥಣಿಯಲ್ಲಿಯ ಗಚ್ಚಿನಮಠ ಅಥವಾ ಮುರುಘರಾಜೇಂದ್ರ ಶಿವಯೋಗಿ ಮಠ ಇಲ್ಲಿಯ ಆಕರ್ಷಣೆ. ಇದರೊಂದಿಗೆ ಇಲ್ಲಿರುವ ಅಮೃತೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ ಮತ್ತು ಮಸೀದಿಗಳು ಒಂದೇ ಆವರಣದಲ್ಲಿದ್ದು ಧಾರ್ಮಿಕ ಐಕ್ಯಭಾವನೆಯನ್ನು ಬೆಳೆಸಲು ಕಾರಣವಾಗಿವೆ. ಚಾಲುಕ್ಯ ಮಾದರಿಯ ಶಿಲ್ಪಕಲೆಯನ್ನು ಹೊಂದಿರುವ ಅಮೃತೇಶ್ವರ ದೇವಾಲಯದ ಶಿಲ್ಪಕಲೆ ಪುರಾತನವಾದುದು. ಸಮರ್ಥ ರಾಮದಾಸರಿಂದ ಶೋಧಿಸಲ್ಪಟ್ಟ ರಾಮಮಂದಿರ ಪುರಾತನವಾದುದು.

ಚಿಕ್ಕೋಡಿ
ಬೆಳಗಾವಿಯಿಂದ – ೭೦ ಕಿ.ಮೀ.
ಚಿಕ್ಕೋಡಿಯಿಂದ – ೨೨ ಕಿ.ಮೀ.

ಸ್ಥವನಿಧಿ
ತವಂದಿ ಬೆಟ್ಟ ಗುಡ್ಡಗಳ ತಳದಲ್ಲಿಯ ಗವ್ಹಾನ ಗ್ರಾಮದಲ್ಲಿ ಇರುವ ಸ್ತವನಿಧಿ ರಾಷ್ಟ್ರೀಯ ಹೆದ್ದಾರಿ ೪ ರ ಪಕ್ಕದಲ್ಲಿಯೇ ಇರುವ ಜೈನ ಕ್ಷೇತ್ರ. ಐದು ಗರ್ಭಗೃಹಗಳಿರುವ ಬ್ರಹ್ಮದೇವರ ಗುಡಿ ಬ್ರಹ್ಮದೇವ, ಪಾರ್ಶ್ವನಾಥರ ಪ್ರಾಚೀನ ಮೂರ್ತಿಗಳನ್ನು ಹೊಂದಿದೆ. ೨೦ ಕೆತ್ತನೆಯ ಕಂಬಗಳನ್ನು ಹೊಂದಿರುವ ಬಸದಿಯ ಶಿಲ್ಪಕಲೆ ಉತ್ಕೃಷ್ಟವಾದುದಾಗಿದೆ. ಚಾಲುಕ್ಯರ ಪ್ರಸಿದ್ಧ ಅರಸ ಪುಲಿಕೇಶಿ ಮತ್ತು ಇಬ್ರಾಹಿಂ ಆದಿಲಶಾಹಿಯ ಕಾಲದಲ್ಲಿ ಜೀರ್ಣೋದ್ಧಾರವಾದುದಕ್ಕೆ ಶಿಲಾ ಶಾಸನಗಳಿವೆ. ಇಲ್ಲಿರುವ ಝರಿಗಳು, ವನೌಷಧಿ ಸಸ್ಯಗಳು ಈ ಪ್ರದೇಶವನ್ನು ಆಕರ್ಷಣೀಯವಾಗಿಸಿವೆ
ಬೆಳಗಾವಿಯಿಂದ – ೯೦ ಕಿ.ಮೀ.
ಚಿಕ್ಕೋಡಿಯಿಂದ – ೧೦ ಕಿ.ಮೀ.

ಶ್ರೀಕ್ಷೇತ್ರಪಾಲ ಬ್ರಹ್ಮದೇವ ದೇವಸ್ಥಾನ ಸ್ತವನಿಧಿ
ಶಾಂತಗಿರಿ ಕೋಥಳಿ
ಶ್ರೀ ದೇಶಭೂಷಣ ಜೈನ ಮುನಿಗಳ ಜನ್ಮಭೂಮಿಯಾದ ಕೋಥಳಿಯ ಶಾಂತಗಿರಿಯಲ್ಲಿ ೧೪೫ ಅಡಿ ಎತ್ತರದ ಬೆಟ್ಟದ ಮೇಲೆ, ಶಾಂತಿನಾಥರ ೨೧ ಅಡಿ ಎತ್ತರದ, ಶ್ರೀ ಚಂದ್ರಪ್ರಭಾ ಮತ್ತು ಮಹಾವೀರರ ೧೯ ಅಡಿ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಆಧ್ಯಾತ್ಮಿಕ ಚಿಂತನೆ ಸಾರುವ ಶಾಂತ, ನಿಸರ್ಗ ಪ್ರದೇಶ ಶಾಂತಗಿರಿಗೆ ಅನ್ವರ್ಥಕವಾಗಿದೆ.
ಬೆಳಗಾವಿಯಿಂದ – ೯೨ ಕಿ.ಮೀ.
ಚಿಕ್ಕೋಡಿಯಿಂದ – ೨೨ ಕಿ.ಮೀ.

ಯಡೂರ
ಕೃಷ್ಣಾನದಿ ದಂಡೆಯ ಮೇಲಿರುವ ಪ್ರಾಚೀನ ವೀರಭದ್ರ ದೇವರ ದೇವಸ್ಥಾನವು ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿದೆ.

ಹುಕ್ಕೇರಿ
ಜಿಲ್ಲಾ ಕೇಂದ್ರದಿಂದ – ೫೦ ಕಿ.ಮೀ.
ಹುಕ್ಕೇರಿ ಗುಮ್ಮಟಗಳು
ಕ್ರಿ.ಶ. ೧೫೦೨ ರಿಂದ ೧೫೪೦ ರ ಅವಧಿಯಲ್ಲಿ ಬಿಜಾಪುರದ ಆದಿಲ್‌ಶಾಹಿ ವಂಶದ ಐನುಲ್‌ ಮುಲ್ಕಿ ನಿರ್ಮಿಸಿದ ಇವುಗಳನ್ನು ಐನುಬ್‌ ಗುಮ್ಮಟ ಎಂದೇ ಕರೆಯುವರು. ನಂತರ ಪತೇ ಉಲ್ಮಲ್‌ ೧೫೭-೧೫೬೮ರಲ್ಲಿ, ರುಕ್ತುಮ ಝಮಾನ ೧೭ನೇ ಶತಮಾನದಲ್ಲಿ ಕಟ್ಟಿದ ಮೂರು ಗುಮ್ಮಟಗಳಿವೆ. ಒಂದೇ ಸಾಲಿನಲ್ಲಿದ್ದರೂ ಒಂದರ ನೆರಳು ಇನ್ನೊಂದರ ಮೇಲೆ ಬೀಳುವುದಿಲ್ಲ. ೫೦೦ ವರ್ಷಗಳಷ್ಟು ಹಳೆಯದಾದರೂ ಉತ್ತಮ ಸ್ಥಿತಿಯಲ್ಲಿ ಇಲ್ಲಿನ ಕಾರಂಜಿ ಕೊಳಗಳು ಇತಿಹಾಸ ದಾಖಲೆಗಳಾಗಿವೆ.
ಜಿಲ್ಲಾ ಕೇಂದ್ರದಿಂದ ದೂರ: ೫೫ ಕಿ.ಮೀ.
ತಾಲೂಕಾ ಕೇಂದ್ರದಿಂದ ದೂರ: ೧೦ ಕಿ.ಮೀ.

ಅಮ್ಮಣಗಿ
ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎರಡನೆಯದಾದ ಶ್ರೀಶೈಲದ ಮಲ್ಲಿಕಾರ್ಜುನ ಕ್ಷೇತ್ರದ ಪ್ರತಿಕೃತಿಯಂತಿರುವ ಈ ಕ್ಷೇತ್ರ ಕರ್ನಾಟಕ, ಮಹಾರಾಷ್ಟ್ರದಲ್ಲಿ ಅಪಾರ ಭಕ್ತರನ್ನು ಹೊಂದಿದೆ. ಮಕರ ಸಂಕ್ರಾಂತಿಯಂದು ಪ್ರಾರಂಭವಾಗಿ ೫ ದಿನಗಳ ಕಾಲ ವಿಜೃಂಭಣೆಯಿಂದ ಜಾತ್ರೆಯಾಗುತ್ತದೆ. ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಕೊಂಡಿಯಾಗಿದೆ. ಅಮ್ಮಣಗಿಯ ಮಲ್ಲಿಕಾರ್ಜುನ ದೇವರ ಜಾತ್ರೆ.
ಜಿಲ್ಲಾ ಕೇಂದ್ರದಿಂದ – ೫೫ ಕಿ.ಮೀ.
ತಾಲೂಕಾ ಕೇಂದ್ರದಿಂದ – ೧೦ ಕಿ.ಮೀ.

ಕ್ರಿ.ಶ. ೧೨೫೭ ರ ಕಾಲದ ತೃಟಿತವಾದ ದಾನ ಶಾಸನವನ್ನು ಹೊಂದಿರುವ ಬಸದಿಯ ಖಡ್ಗಾಸನದ ಪಾರ್ಶ್ವನಾಥ ಮೂರ್ತಿಯನ್ನು ಹೊಂದಿದೆ. ದಕ್ಷಿಣಾಭಿಮುಖವಾಗಿರುವ ಈ ಬಸದಿಯು ಆಕರ್ಷಕ ಜಿನ ಸಂಸ್ಕೃತಿಯ ಚಿತ್ರಗಳನ್ನು ಹೊಂದಿದೆ. ನಾಲ್ಕು ಅಂಕಗಳಿಂದಾದ ಬಸದಿಯು ಪ್ರತಿ ಅಂಕಣದಲ್ಲಿಯ ಕೆತ್ತನೆಗಳು ವಿಶೆಷವಾಗಿವೆ. ಅಮ್ಮಣಗಿಯು ಜೈನ ಇತಿಹಾಸಕ್ಕೆ ಇನ್ನೂ ಪುರಾವೆಗಳನ್ನು ಒದಗಿಸುವಂತಿದೆ. ಸಂಶೋಧನೆ ನಡೆಸಿದರೆ ೯ನೇ ಶತಮಾನದ ಹಲವು ರಚನೆಗಳು ಸಿಗಬಹುದು.
ಜಿಲ್ಲಾ ಕೇಂದ್ರದಿಂದ – ೫೦ ಕಿ.ಮೀ.
ತಾಲೂಕಾ ಕೇಂದ್ರದಿಂದ – ೨೫ ಕಿ.ಮೀ.

ನಿಡಸೋಸಿ ಮಠ
೨೬-೦೮-೧೭೬೫ ರಂದು ನಿಜಲಿಂಗಪ್ಪ – ಬಾಳಮ್ಮ ದಂಪತಿಗಳಿಂದ ಸ್ಥಾಪಿತವಾದ ಈ ಗದ್ದುಗೆ ದುರುದುಂಡೇಶ್ವರರ ಭಸ್ಮ, ರುದ್ರಾಕ್ಷಿ, ಬಿಲ್ವದಳ, ಉತ್ತತ್ತಿಗಳ ಕುರುಹು ಆಗಿದೆ. ಇಂದು ಮಠ ಸಂಸ್ಕೃತಿಯ ಸಂಕೇತವಾದ ಇದು ಕಾಯಕ, ದಾಸೋಹ, ಸಮಾನತೆ, ಸಂಸ್ಕೃತಿ, ಜ್ಞಾನ, ಮಾನವಿಕ, ಧಾರ್ಮಿಕ ನೆಲೆಯಾಗಿದೆ. ಇಲ್ಲಿಯವರೆಗೆ ೯ ಜನ ಪೀಠಾಧಿಪತಿಗಳನ್ನು ಹೊಂದಿರುವ ಮಠ ಪ್ರಗತಿಯ ಹೆಜ್ಜೆಯೊಂದಿಗೆ ಹೆಜ್ಜೆ ಸೇರಿಸಿ ಶಿಕ್ಷಣ ಪ್ರಸಾರ, ಧರ್ಮ, ಜಾಗೃತಿ, ಮೂಡನಂಬಿಕೆಗಳನ್ನು ದೂರ ಮಾಡುವ ವಿಶಾಲ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಕಾರ‍್ಯತತ್ಪರವಾಗಿದೆ.

ದೇವಗಾಂವ
ಕಮಲನಾರಾಯಣ ಬಸದಿ
ಬೈಲಹೊಂಗಲದಿಂದ ೨೬ ಕಿ.ಮೀ. ಹಾಗೂ ರಾಷ್ಟ್ರೀಯ ಹೆದ್ದಾರಿ ಇರುವ ಕಿತ್ತೂರಿನಿಂದ ೫ ಕಿ.ಮೀ. ದೂರದಲ್ಲಿ ದೇವಗಾಂವ ಇದೆ. ಇಲ್ಲಿಯ ಕಮಲನಾರಾಯಣ ಬಸದಿ ಅತ್ಯಂತ ಸುಂದರವಾದುದು. ೧೨ ನೇ ಶತಮಾನದ ಚಾಲುಕ್ಯ ಶೈಲಿಯ ಕಮಲನಾರಾಯಣ ಬಸದಿಯನ್ನು ಗೋವೆಯ ಕದಂಬರು ಕಟ್ಟಿಸಿದರು. ಇದು ಸೂಕ್ಷ್ಮ ಕಲೆಗಾರಿಕೆಯಿಂದ ಕೂಡಿದ ಪ್ರಸಿದ್ಧ ಸ್ಮಾರಕವಾಗಿದೆ.




ಬೈಲಹೊಂಗಲ
ಕಿತ್ತೂರ
ಜಿ. ಕೇಂದ್ರದಿಂದ – ೪೫ ಕಿ.ಮೀ.
ತಾ. ಕೇಂದ್ರದಿಂದ – ೩೦ ಕಿ.ಮೀ.

ಕ್ರಿ.ಶ. ೧೫೮೫ ರಿಂದ ೧೮೨೪ ರವರೆಗೆ ೨೩೯ ವರ್ಷಗಳವರೆಗೆ ಆಡಳಿತ ನಡೆಸಿದ ೧೨ ಜನ ಕಿತ್ತೂರು ಅರಸರ ಇತಿಹಾಸ ಕಿತ್ತೂರಿನದು. ಶಿವಮೊಗ್ಗ ಜಿಲ್ಲೆ ಸಾಗರದ ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿಗಳಿಂದ ಪ್ರಾರಂಭವಾಗಿ ಭರತ ಸ್ವಾತಂತ್ರ‍್ಯ ಚಳುವಳಿಯ ಬೆಳ್ಳಿಚುಕ್ಕಿ ರಾಣಿ ಚನ್ನಮ್ಮನವರೆಗೆ ಮುಂದುವರೆದುದು. ೧೬೬೦ ರಿಂದ ೧೬೯೧ ರವರೆಗೆ ರಾಜ್ಯ ಆಳಿದ ಅಲ್ಲಪ್ಪಗೌಡ ಸರದೇಸಾಯಿ ವಿಖ್ಯಾತನು. ಕೆಚ್ಚೆದೆಯ ಕನ್ನಡಿಗರು ಎಂದು ಹೆಮ್ಮೆಯಿಂದ ಬಾಳಿದ ಕಿತ್ತೂರ ಸಂಸ್ಥನದ ಗತ ವೈಭವವನ್ನು ಹೇಳುವ ಕೋಟೆ ಅವಶೇಷ ಕಿತ್ತೂರಿನಲ್ಲಿದೆ. ವಿಶಾಲದ್ವಾರ ಮಂಟಪ, ತೇಗಿನ ಮರದ ಕಂಬದ ಶ್ರೇಣಿ, ಅತಿಥಿ ಕೋಣೆಗಳು, ಸಭಾಗೃಹ, ಭೋಜನಾಲಯ, ಉಗ್ರಾಣ, ಸ್ನಾನದ ಮನೆ, ನೀರಿನ ಬಾವಿ, ನೀರು ಪೂರೈಕೆಯ ತಾಮ್ರದ ಕೊಳವೆ, ಕಲ್ಲಿನ ಪಾತ್ರೆಗಳು, ಬಾನಿಗಳು ಏನೆಲ್ಲವನ್ನು ಒಳಗೊಂಡ ಮೂರಂತಸ್ತಿನ ಅರಮನೆ ಇದಾಗಿತ್ತು.

ಬೈಲಹೊಂಗಲ
೧೮೨೪ರ ಅಕ್ಟೋಬರ ೨೩ ರ ವಿಜಯೋತ್ಸವದ ನಂತರ ಡಿಸೆಂಬರ ೫ ರಂದು ಬಂದಿಯಾದ ಚನ್ನಮ್ಮನನ್ನು ಬೈಲಹೊಂಗಲದ ಜೈಲಿನಲ್ಲಿಡಲಾಯಿತು. ೧೮೨೯ನೇ ಫೆಬ್ರವರಿ ೨ ರಂದು ಚನ್ನಮ್ಮ ಕೊನೆಯುಸಿರೆಳೆದಳು. ವೀರ ರಾಣಿಯ ಸಮಾಧಿ ಬೈಲಹೊಂಗದಲ್ಲಿದೆ.
ಬೆಳವಡಿ ಮಲ್ಲಮ್ಮ – ಕರ್ನಾಟಕ ಇತಿಹಾಸದಲ್ಲಿ ಬೆಳವಡಿ ಮಲ್ಲಮ್ಮಳ ಹೆಸರು ಸುಪ್ರಸಿದ್ಧ. ಶಿವಾಜಿಯೊಂದಿಗೆ ಕಾದಾಡಿ ಜಯ ಪಡೆದು ತನ್ನ ಸಂಸ್ಥಾನವನ್ನು ರಕ್ಷಿಸಿದಳು.


ಸವದತ್ತಿ
ಜಿಲ್ಲಾ ಕೇಂದ್ರದಿಂದ: ೯೬ ಕಿ.ಮೀ.
ಹಿಂದೆ ಸುಗಂಧವರ್ತಿ ಎಂದು ಪ್ರಸಿದ್ಧವಾದ ಇಂದಿನ ಸವದತ್ತಿ ಯಲ್ಲಮ್ಮನಿಂದಾಗಿ ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಶಕ್ತಿ ಸ್ಥಳವಾಗಿದೆ. ಪರಶುರಾಮನ ತಾಯಿ, ಜಮದಗ್ನಿಯ ಪತ್ನಿ ಪಾವಿತ್ರ‍್ಯತೆಯ ಪ್ರತೀಕ ರೇಣುಕಾದೇವಿ. ಮಲಪ್ರಭೆಯ ದಡದಲ್ಲಿ ಯಲ್ಲಮ್ಮನ ಗುಡ್ಡದಲ್ಲಿ ಎಲ್ಲರ ಅಮ್ಮ ಎಲ್ಲಮ್ಮನೆನಿಸಿರುವಳು. ವರ್ಷದ ೬ ತಿಂಗಳು ನಿರಂತರ ಜಾತ್ರೆ ನಡೆಯುತ್ತಿರುತ್ತದೆ.
ಸವದತ್ತಿ ಕೋಟೆ
ಸವದತ್ತಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ೯ ಕೊಟೆಗಳಿವೆ. ಪರಸಗಡ, ಹೂಲಿ, ತಲ್ಲೂರ, ಮುರಗೋಡ ಹಾಗೂ ಚಚಡಿ ಕೋಟೆ ಮಹತ್ವದ್ದಾಗಿವೆ. ಸವದತ್ತಿ ಕೋಟೆಯನ್ನು ೧೦೯೬ರಲ್ಲಿ ಇಮ್ಮಡಿ ಕಾರ್ತಿವೀರ ಕಟ್ಟಿದನೆಂದು ಹೇಳುತ್ತಾರೆ. ಎತ್ತರವಾದ ಹಾಗೂ ಗಟ್ಟಿಮುಟ್ಟಾದ ಗೋಡೆ ಕಲ್ಲಿನಿಂದ ನಿರ್ಮಿತವಾದ ಬಾಗಿಲುಗಳು, ಗುಪ್ತಮಾರ್ಗ, ಅರಮನೆ ಮುಂತಾದ ಅಂಶಗಳನ್ನು ಹೊಂದಿದ ಸವದತ್ತಿ ಕೋಟೆ ಶೈಕ್ಷಣಿಕ ಮಾರ್ಗದರ್ಶಿಯಾಗಿದೆ.
ಸವದತ್ತಿಯಿಂದ – ೯ ಕಿ.ಮೀ.
ಬೆಳಗಾವಿಯಿಂದ – ೮೭ ಕಿ.ಮೀ.

ಹೂಲಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವು ಸುಮಾರು ೧೦೪೪ರಲ್ಲಿ ಕಟ್ಟಿಸಿದ ಪುರಾತನ ದೇವಾಲಯವಾಗಿದೆ. ೫ ಗರ್ಭಗುಡಿಗಳನ್ನು ಹೊಂದಿರುವುದಕ್ಕೆ ಇದು ಪಂಚಲಿಂಗೇಶ್ವರ ದೇವಾಲಯವಾಗಿರಬಹುದು. ವಿಶಾಲವಾದ  ನವರಂಗ, ಸುಂದರ ಕೆತ್ತನೆ, ೨೦ ಕಂಬಗಳು, ೧೨ ಅಂಕಣಗಳು ಇವೆ. ಪ್ರಾಚೀನ ಶಿಲ್ಪಕಲೆಯ ಈ ಮಾದರಿ ಆಕರ್ಷಕವಾಗಿದೆ.
ಸವದತ್ತಿಯಿಂದ – ೨೫ ಕಿ.ಮೀ.
ಬೆಳಗಾವಿಯಿಂದ – ೫೫ ಕಿ.ಮೀ.
ಬೈಲಹೊಂಗಲದಿಂದ – ೧೫ ಕಿ.ಮೀ.

ಶಿವ-ಪಾರ‍್ವತಿಯರ ಕಲ್ಯಾಣ ಕ್ಷೇತ್ರವೆಂದು ಪ್ರಸಿದ್ಧವಾದ ಸೊಗಲ ಸೋಮೇಶ್ವರ ದೇವಸ್ಥಾನ ಪುರಾತನ ಶಿಲ್ಪ ಶೈಲಿಯನ್ನು ಹೊಂದಿದೆ. ದೇವಸ್ಥಾನದ ಎದುರಿಗೆ ಇರುವ ಜಲಪಾತ ಬೆನ್ನುನೋವು ನಿವಾರಕವೆಂದು ಪ್ರಸಿದ್ಧವಾಗಿದೆ.
ಬೆಳಗಾವಿಯಿಂದ – ೬೩ ಕಿ.ಮೀ.
ಸವದತ್ತಿಯಿಂದ – ೨೦ ಕಿ.ಮೀ.

ಬೆಟ್ಟಗುಡ್ಡಗಳಲ್ಲಿ ಹರಿಯುವ ಮಲಪ್ರಭೆ ಮುನವಳ್ಳಿಯ ಹತ್ತಿರದ ಈ ಪ್ರದೇಶದಲ್ಲಿ ವಿಶಾಲ ಬೆಟ್ಟಗಳಿಂದಾಗಿ ನಿಂತಾಗ ನವಿಲೊಂದು ಬೆಟ್ಟದ ಮೇಲೆ ನಿಂತು ಮಲಪ್ರಭೆಯನ್ನು ಹೀಯಾಳಿಸಿತಂತೆ. ಆಗ ಮಲಪ್ರಭೆ ತನ್ನ ಶಕ್ತಿಯನ್ನೆಲ್ಲ ಬಳಸಿ ಬೆಟ್ಟ ಹಾಗೂ ನವಿಲನ್ನು ನಾಶಮಾಡಿ ಮುನ್ನುಗ್ಗಿತಂತೆ. ಅದಕ್ಕಾಗಿ ನವಿಲುತೀರ್ಥವೆಂಬ ಹೆಸರು ಬಂದಿತೆಂದು ಪ್ರತೀತಿ. ಬೆಳಗಾವಿ, ಧಾರವಾಡ ಜಿಲ್ಲೆಯ ರೈತರ, ಕುಡಿಯುವ ನೀರಿನ ಆಸರೆಯಾಗಿರುವ ಅಣೆಕಟ್ಟೆಗೆ ಹತ್ತಿರದ ರೇಣುಕಾ ಎಲ್ಲಮ್ಮನ ಹೆಸರನ್ನಿಡಲಾಗಿದೆ. ಅಣೆಕಟ್ಟು ಪ್ರದೇಶದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ. ಆಕರ್ಷಣೀಯ ಪ್ರವಾಸ ಕೇಂದ್ರವಾಗಿದೆ.



ಬೆಳಗಾವಿ ನಗರ – ಪರಿಚಯ

ವೇಣುಗ್ರಾಮ ಬಳ್ಳಿಗಾವಿ ಬೆಳಗಾವಿ
ರಾಜ್ಯದ ಅತ್ಯಂತ ಹಳೆಯ ಪಟ್ಟಣ ಬೆಳಗಾವಿ. ನಗರದ ಪೂರ್ವದಲ್ಲಿ ವರ್ತುಲಾಕಾರದ ಕೋಟೆಯಿದೆ. ಸುಭದ್ರವಾದ ೧೦ ಎಕರೆಯಷ್ಟು ವಿಸ್ತಾರವಾದ ಕೋಟೆ ಎರಡು ಬಾಗಿಲುಗಳನ್ನು ಹೊಂದಿದ್ದು, ಉತ್ತರದ ಬಾಗಿಲಲ್ಲಿ ದುರ್ಗಾದೇವಿಯ ದೇವಸ್ಥಾನವಿದೆ. ಸುತ್ತಲೂ ಕಂದಕವಿರುವ ಕೋಟೆಯ ಗೋಡೆ, ಶಿಲಾಲೇಖಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳಿಂದ ಕೂಡಿದೆ. ಕೋಟೆಯೊಳಗಿರುವ ಸಫಾ ಮಸೀದಿ, ರಾಮಕೃಷ್ಣ ಆಶ್ರಮ, ಐತಿಹಾಸಿಕ ಹಿನ್ನೆಲೆ ಹೊಂದಿದ ಅತ್ಯಂತ ಸುಂದರ ರಚನೆಗಳಾಗಿವೆ. ಇಲ್ಲಿರುವ ಅಲ್ಪಸಂಖ್ಯಾತರ ಅಧ್ಯಯನ ಕೇಂದ್ರವು ರಾಷ್ಟ್ರಮಟ್ಟದ ಕಛೇರಿಯಾಗಿದೆ.
ಸಫಾ ಮಸೀದಿ ಕೋಟೆ, ಬೆಳಗಾವಿ
ಕೋಟೆಯ ಉತ್ತರ ದಿಕ್ಕಿನ ಹೆಬ್ಬಾಗಿಲ ಎದುರುಗಡೆ ಕೋಟೆ ಕೆರೆ ಇದೆ. ಪುರಾತನವಾದ ಈ ಕೆರೆಯನ್ನು ಆಧನೀಕರಣಗೊಳಿಸಿ ವಿಹಾರ ತಾಣವನ್ನಾಗಿಸಲಾಗಿದೆ. ಕೋಟೆಯಲ್ಲಿರುವ ಕಮಲ ಬಸದಿ ಹಾಗೂ ಇನ್ನಿತರ ಬಸದಿಗಳನ್ನು ಸುಮಾರು ೧೦-೧೨ನೇ ಶತಮಾನದ ಕಾಲಾವಧಿಯಲ್ಲಿ ಜೈನ ಅರಸರು ಕಟ್ಟಿಸಿದರೆಂದು ಇತಿಹಾಸದ ಪುಟಗಳು ಹೇಳುತ್ತವೆ. ಹಲವಾರು ಪುರಾತನ ಬಾವಿಗಳಿರುವ ಈ ಕೋಟೆಯಲ್ಲಿ ೧೦೮ ಬಸದಿಗಳು ಇದ್ದವೆಂದು ಪ್ರತೀತಿ.
ಕೋಟೆಕೆರೆ, ಬೆಳಗಾವಿ
ಕಮಲ ಬಸದಿ, ಕೋಟೆ ಬೆಳಗಾವಿ
ಬ್ರಿಟೀಷರ ಕಾಲದ ವಾಸ್ತುಶಿಲ್ಪವನ್ನು ಹೊಂದಿದ ಕಟ್ಟಡಗಳ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮಳ ಮೂರ್ತಿ ಇರುವ ಚನ್ನಮ್ಮ ವೃತ್ತ ಎಲ್ಲರ ಹೆಮ್ಮೆಯದು. ಪಕ್ಕದ ಜಿಲ್ಲಾಧಿಕಾರಿಗಳ ಕಟ್ಟಡದ ಹತ್ತಿರವೇ ಶೂರ ಸಂಗೊಳ್ಳಿ ರಾಯಣ್ಣನ ಸ್ಮಾರಕವಿದೆ.
ರಾಣಿ ಚೆನ್ನಮ್ಮ ವೃತ್ತ, ಬೆಳಗಾವಿ
ಸಂಗೊಳ್ಳಿ ರಾಯಣ್ಣನ ಪ್ರತಿಮೆ, ಬೆಳಗಾವಿ
ಉನ್ನತ ವಿದ್ಯಾಭ್ಯಾಸಕ್ಕೆ ಉತ್ತರ ಕರ್ನಾಟಕದ ಜನರ ವಿದ್ಯಾರ್ಥಿಗಳ ಹಸಿವು ನೀಗಿಸಿದ ಕೆ.ಎಲ್‌.ಇ. ಸಂಸ್ಥೆ ಸಿರಸಂಗಿ ಲಿಂಗರಾಜರ ಮಹಾವಿದ್ಯಾಲಯ, ರಾಜಾ ಲಖಮಗೌಡ ವಿಜ್ಞಾನ ವಿದ್ಯಾಲಯಗಳು ವಾಸ್ತುಶಿಲ್ಪದಲ್ಲಿಯೂ ಪ್ರಾಚೀನ ಸೊಬಗನ್ನು ಹೊಂದಿವೆ. ಸಂಭಾಜಿ ವೃತ್ತದ ಮನೆ ಪುರಾತನ ವಾಸ್ತುಶಿಲ್ಪದ ಆಕರ್ಷಣೆ ಹೊಂದಿದೆ. ದಂಡು ಪ್ರದೇಶದ ಸೇಂಟ್‌ಮೇರಿ ಚರ್ಚ್‌, ಮಹದೇವ ಮಂದಿರ, ದೇಶಕ್ಕೆ ಅಗ್ರಗಣ್ಯ ಕಮಾಂಡೋಗಳನ್ನು ಒದಗಿಸುವ ಮರಾಠಾ ಲೈಟ್‌ಇಣ್‌ಫೆಂಟ್ರಿ ವಿಭಾಗದಲ್ಲಿರುವ ಯುದ್ಧ ಟ್ಯಾಂಕರಗಳು ಆಕರ್ಷಣೀಯವಾಗಿವೆ.
ಸೇಂಟ್‌ಮೇರಿ ಚರ್ಚ್‌, ಬೆಳಗಾವಿ
ಮಿಲಿಟರಿ ವಸ್ತು ಸಂಗ್ರಹಾಲಯ, ಬೆಳಗಾವಿ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕಪಿಲೇಶ್ವರ ದೇವಸ್ಥಾನ, ಟಿಳಕವಾಡಿಯ ಸಾಯಿಮಂದಿರ, ಮಾರುತಿಗಲ್ಲಿಯ ಮಾರುತಿ ದೇವಸ್ಥಾನ, ಪಾಟೀಲ ಗಲ್ಲಿಯ ಶನಿಮಂದಿರ, ಮಾಳಮಾರುತಿಯ ಮಾರುತಿ ದೇವಸ್ಥಾನಗಳು ಐತಿಹಾಸಿಕ ಹಿನ್ನೆಲೆಯೊಂದಿಗೆ ಶ್ರದ್ಧಾ-ಭಕ್ತಿಯ ಕೇಂದ್ರಗಳೂ ಆಗಿವೆ.
ಮರಾಠಾ ಲೈಟ್‌ ಇನ್‌ಫೆಂಟ್ರಿ, ಕ್ಯಾಂಪ್‌, ಬೆಳಗಾವಿ
ವೀರಸೌಧ, ಬೆಳಗಾವಿ
ಶಹಾಪುರದಲ್ಲಿರುವ ಕುಮಾರ ಗಂಧರ್ವರ ಮನೆ, ಹಳೆಯ ಕಾರ್ಪೋರೇಶನ ಕಟ್ಟಡದ ಪಕ್ಕದಲ್ಲಿರುವ ವಿವೇಕಾನಂದರು ವಾಸಮಾಡಿದ್ದ ಮನೆ, ಬೆನನ್‌ಸ್ಮಿಥ್‌ಹೈಸ್ಕೂಲ ಹಿಂಭಾಗದ ಹಾಗೂ ರೇಲ್ವೇ ಸೇತುವೆಯ ಹತ್ತಿರದ ಬ್ರಿಟಿಷ್‌ಅಧಿಕಾರಿಗಳ ಸಮಾಧಿಗಳು ಇತಿಹಾಸದ ಹೆಜ್ಜೆ ಗುರುತುಗಳಾಗಿವೆ. ಗಣಪತಿ ಗಲ್ಲಿಯ ಗಡಿಯಾರ, ಶಿವಾಜಿ ಉದ್ಯಾನವನ, ಗಾಂಧೀಜಿ ಉದ್ಯಾನವನ, ಅಂಬೇಡ್ಕರ ಉದ್ಯಾನವನಗಳು ನಗರದ ಹೆಗ್ಗುರುತುಗಳಾಗಿವೆ.
ಕಪಿಲೇಶ್ವರ ದೇವಾಲಯ, ಬೆಳಗಾವಿ
ಶಿವಾಜಿ ಗಾರ್ಡನ್‌, ಬೆಳಗಾವಿ
ವೈಜ್ಞಾನಿಕ ಚಿಂತನೆ ಹಾಗೂ ಬಾಹ್ಯಾಕಾಶ ಅಧ್ಯಯನಕ್ಕಾಗಿ ಶಿವಬಸವ ನಗರದ ವಿಜ್ಞಾನ ಕೇಂದ್ರ, ಅಂಧ ಮಕ್ಕಳಿಗೆ ಜ್ಞಾನದ ದೃಷ್ಟಿಯಿಂದ ಜಗತ್ತನ್ನು ತೋರಿಸುವ ಮಹೇಶ್ವರಿ ಅಂಧ ಮಕ್ಕಳ ಶಾಲೆ ನಾಡಿಗೆ ಮಾದರಿಯಾಗಿವೆ.
ಕೆ.ಎಲ್‌.ಇ. ಸಂಸ್ಥೆಯ ವೈದ್ಯಕೀಯ ಆಸ್ಪತ್ರೆ, ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಬೆಳಗಾವಿ











      Saturday 16 March 2013


      ¸ÀgÀPÁj ¥ËæqsÀ ±Á¯É PÉ0UÁ£ÀÆgÀ Dgï,J0.J¸ï,J. CrAiÀÄ°è M0zÀÄ ¢£ÀzÀ ±ÉÊPÀëtÂPÀ ¥ÀæªÁ¸ÀzÀ ¨sÁªÀ avÀæUÀ¼ÀÄ