Saturday 3 October 2015

ಇತಿಹಾಸ ಮರೆತ ಜನನಾಯಕ ಶಾಸ್ತ್ರಿಜಿ....
ಕಾಂಗ್ರೆಸ್ಸಿನವರು ಇಂದೇನಾದರೂ ಅಸ್ತಿತ್ವದಲ್ಲಿದ್ದರೆ ಅದು ಶಾಸ್ತ್ರಿ, ಪಟೇಲ್, ಮೊರಾರ್ಜಿ ಅಂಥವರ ಹೆಸರಿನಿಂದಲೇ ಹೊರತು ಇಂದಿನವರ ಕುಖ್ಯಾತ ಆಡಳಿತದಿಂದಲ್ಲ......
"We would prefer to live in poverty for as long as necessary but we shall not allow our freedom to be subverted" ಎಂದಿದ್ದರು ಶಾಸ್ತ್ರಿ. ಆದರೆ ಇಂದಿನ ರಾಜಕಾರಣಿಗಳು ಇದಕ್ಕೆ ತದ್ವಿರುದ್ಧ. ತಮ್ಮ ಇಲಾಖೆಯ ಸಚಿವಾಲಯದಲ್ಲಿ ಇರುವ ಖಜಾನೆಯ ಹಣವನ್ನು ನುಂಗಿ ನೀರು ಕುಡಿಯುವ ಮತ್ತು ಕಾನೂನಿನ ಕೈಗೆ ಸಿಗದೆ ನುಣುಚಿಕೊಳ್ಳುವ ಮೇಧಾವಿ ರಾಜಕಾರಣಿಗಳ ದಂಡೇ ಇಂದಿನ ಭಾರತ ಘನ ಸರ್ಕಾರದ ಸಂಪತ್ತು. 1965ರ ಯುಧ್ಧದ ಪರಿಣಾಮದಿಂದ ಖಾಲಿಯಾಗಿದ್ದ ಖಜಾನೆಯನ್ನು ತುಂಬಲು ಮತ್ತು ದೇಶದ ಒಳಿತಿಗಾಗಿ ಒಂದು ಹೊತ್ತು ಉಪವಾಸ ಮಾಡಲು ಕರೆ ಕೊಟ್ಟ ಅಂದಿನ ಪ್ರಧಾನಿ ಒಂದೆಡೆಯಾದರೆ, ಇಂದು ಇಡಿ ರಾಷ್ಟ್ರದ ಖಜಾನೆಯನ್ನೇ ಲೂಟಿ ತಾನು ಶುಧ್ಧಹಸ್ತನೆಂದು ಸಾರುತ್ತ ತಿರುಗುವ ತಮ್ಮ ಮಂತ್ರಿಗಳ ದಂಡು ಇನ್ನೊಂದೆಡೆ. ರಾಷ್ಟ್ರದ ಸಂಪತ್ತನ್ನು ಬರಿದಾಗಿಸಿ ವಿದೇಶದಲ್ಲಿ ತಮ್ಮ ಖಾತೆಗಳಲ್ಲಿ ಜಮೆ ಮಾಡಿಕೊಂಡಿರುವ ದೇಶ್ದ್ರೋಹಿಗಳು ನಮ್ಮನಾಳುವುದು ನಮ್ಮ ದೇಶದ ದುರ್ದೈವ.
ಅದೊಂದು ದಿನ ಪ್ರಧಾನ ಮಂತ್ರಿ ಶಾಸ್ತ್ರಿ ಅವರು ಬಳಸುತ್ತಿದ್ದ ವಾಹನವನ್ನು ಅವರ ಮಗ ಸುನಿಲ್ ಶಾಸ್ತ್ರಿ ವೈಯ್ಯಕ್ತಿಕ ಕೆಲಸಕ್ಕೆ ಉಪಯೋಗಿಸಿದ್ದು ಅವರ ಗಮನಕ್ಕೆ ಬಂದಾಗ ವಾಹನದ ಚಾಲಕನನ್ನು ಕರೆದು ವಾಹನ ಕ್ರಮಿಸಿದ ವಿವರವನ್ನು ಪಡೆದ ಶಾಸ್ತ್ರೀಜಿ ಅವರು ಅದರ ವೆಚ್ಚವನ್ನು ಸರ್ಕಾರಕ್ಕೆ ಪಾವತಿಸಿದರು!. ಇವರು ಬಹುಶಃ ಭಾರತ ಕಂಡ ಪ್ರಧಾನಿಯಾದ ಅತ್ಯಂತ ಪ್ರಾಮಾಣಿಕ ಜೀವಿ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಇವರ ಸ್ವಾಭಿಮಾನ್, ದೇಶಾಭಿಮಾನ ಕೂಡ ತಲೆದೂಗುವಂತದ್ದು.
ಇಂಥಹ ಪ್ರಾಮಾಣಿಕ ನಾಯಕತ್ವದ ಮಹಾನ್ ಚೇತನವನ್ನು ಅವರ ಜನ್ಮದಿನದಂದು ನೆನೆಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
ಜೈ ಹಿಂದ್. ಜೈ ಜವಾನ್, ಜೈ ಕಿಸಾನ್....









No comments:

Post a Comment