Saturday 3 October 2015

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ."



ಶಾಲೆಯಿಂದ ಮನೆಗೆ ಬಂದ ೪ ವರ್ಷದ ಮಗುವೊಂದು ಊಟ ನಿರಾಕರಿಸಿ ತೆಪ್ಪಗೆ ಕುಳಿತುಬಿಟ್ಟಿತ್ತು. ತಾಯಿ, ಅಜ್ಜಿ, ತಾತ ಯಾರ ಜುಲುಮೆಗೂ ಬಗ್ಗಲಿಲ್ಲ. ಮುದ್ದು ಮಾಡಿದರು, ಚಾಕಲೇಟ್-ಐಸ್ಕ್ರೀಮ್ ನ ಆಮಿಷ ಒಡ್ಡಿದರು, ಗದರಿದರು, ಬುದ್ಧಿ ಹೇಳಿದರು-ಏನೇ ಮಾಡಿದರೂ ಒಂದು ತುತ್ತಿಗೂ ಬಾಯಿ ಬಿಡಲಿಲ್ಲ. ರಾತ್ರಿ ಆಫೀಸಿನಿಂದ ಮರಳಿ ಬಂದ ತಂದೆಗೆ ವರದಿ ಹೋಯಿತು. ಗಾಬರಿಗೊಂಡ ತಂದೆ ಎಲ್ಲ ಕೆಲಸವನ್ನೂ ಬಿಟ್ಟು ಮಗನನ್ನು ತೊಡೆಯ ಮೇಲೆತ್ತಿಕೊಂಡು ಊಟ ಮಾಡದಿರುವುದಕ್ಕೆ ಕಾರಣ ಕೇಳಿದ.
"ನಾನು ಕೇಳಿದ್ದನ್ನು ಒಪ್ಪಿಕೊಂಡರೆ ತಿನ್ನುವೆ."-ಎಂದಿತು ಮಗು.
"ಆಯ್ತು, ನಿನಗೇನು ಬೇಕು ಹೇಳು. ಕೈಲಾದಲ್ಲಿ ಕೊಡಿಸುವೆ. ತೀರ ದುಬಾರಿಯದ್ದು ಕೇಳಿದರೆ ಕೊಡಿಸಲಾರೆ." ಎಂದ ಅಪ್ಪ ಪಟ್ಟು ಬಿಡದೆ.

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ." ತಂದೆ ಒಪ್ಪಿದ.

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ." ತಂದೆ ಒಪ್ಪಿದ.
ಮಗು ಹೇಳಿತು-"ನೀನು ಸೆಲೂನಿಗೆ ಕರೆದುಕೊಂಡು ಹೋಗಿ ನನ್ನ ತಲೆ ಬೋಳಿಸಬೇಕು."
"ಇದೆಂಥ ವಿಲಕ್ಷಣ ಆಸೆ!" ವಿಸ್ಮಿತನಾಗಿ ತಂದೆ ನುಡಿದ. "ಎಷ್ಟು ಅವಲಕ್ಷಣವಾಗಿ ಕಾಣುವೆ ನೀನು ಗೊತ್ತೇ? ಶಾಲೆಯಲ್ಲೂ ಹುಡುಗರು ನಿನ್ನನ್ನು ನೋಡಿ ನಗುವರು."
"ನೀನು ಪ್ರಾಮಿಸ್ ಮಾಡಿದೀಯ"-ಮುಖ ಊದಿಸಿಕೊಂಡಿತು ಮಗು.
ಅಂತೂ ಇಂತೂ ಭರವಸೆಯನ್ನು ಈಡೇರಿಸದಿದ್ದರೆ ಮಗುವಿಗೆ ತಪ್ಪು ಸಂದೇಶ ಕೊಟ್ಟಂತಾಗುವುದೆಂದು ತಂದೆ ಒಪ್ಪಿದ. ಮಗು ಊಟ ಮಾಡಿತು. ತಂದೆ ಮಗುವನ್ನು ಸೆಲೂನಿಗೆ ಕರೆದುಕೊಂಡು ಹೋಗಿ ತಲೆ ಬೋಳಿಸಿಕೊಂಡು ಬಂದ.
ಮರುದಿನ ಬೋಡುತಲೆಯ, ಗುಂಡುಗುಂಡಾಗಿದ್ದ, ಮಗನ ಅರಳು ಕಣ್ಣುಗಳಲ್ಲಿ ಮಿಂಚುತ್ತಿದ್ದ ಸಂತಸವನ್ನು ಕಂಡು ಸಂಭ್ರಾಂತನಾದ. ಶಾಲೆಗೆ ಬಿಡುತ್ತಿದ್ದಂತೆ ಮಗು ಕಾರಿನಿಂದ ಇಳಿದು ತನ್ನಂತೆಯೇ ಬೋಡುತಲೆಯಿದ್ದ ಹೆಣ್ಣುಮಗುವಿನ ಕೈ ಹಿಡಿಯಲು ಓಡಿ ಹೋಯಿತು. ಎರಡು ಮಕ್ಕಳೂ ಜೋರಾಗಿ ಕೇಕೆ ಹಾಕಿ, ನಕ್ಕು ಕೈಹಿಡಿದು ಜೊತೆಯಾಗಿ ಶಾಲೆಯೊಳಕ್ಕೆ ಹೊರಟು ಹೋದವು.ಇನ್ನೊಂದು ಮಗುವಿನ ತಾಯಿ ಈತನಿದ್ದ ಕಡೆಗೆ ಬಂದು-" ಇಂಥ ಮಗುವನ್ನು ಪಡೆದ ನೀವು ಅದೃಷ್ಟಶಾಲಿ" ಎಂದು ಅಭಿನಂದಿಸಿದಳು.
ಅರೆಕ್ಷಣ ವಿಸ್ಮಿತನಾದ ಅವನಿಗೆ "ನನ್ನ ಮಗು ಕ್ಯಾನ್ಸರ್ ಪೀಡಿತೆ. ಕೀಮೋಥೆರಪಿ ಮತ್ತು ರೇಡಿಯೇಶನ್ ನಿಂದಾಗಿ ತಲೆ ಬೋಡಾಗಿದೆ. ಶಾಲೆಗೆ ಬರಲು ಮುಜುಗರ ಪಡುತ್ತಿದ್ದ ಅವಳನ್ನು ಸಂತೈಸಿ ನಿಮ್ಮ ಮಗು "ನಾನೂ ನಿನ್ನಂತೆಯೇ ಆಗುತ್ತೇನೆ, ನಿನಗೆ ಮುಜುಗರವಾಗದು" ಎಂದು ಹೇಳಿ ಕೊಟ್ಟ ಭಾಷೆ ಉಳಿಸಿಕೊಂಡು ಅವಳ ನೆಮ್ಮದಿಗೆ ಕಾರಣನಾಗಿದ್ದಾನೆ. ಇಷ್ಟು ಪುಟ್ಟ ಮಗು ಅವಳ ನೋವನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿದ್ದಾನೆ. ಅವನ ಮಾತನ್ನು ನಡೆಸಿಕೊಟ್ಟ ನೀವೆಷ್ಟು ವಿಶಾಲ ಹೃದಯಿಗಳು!" ಎಂದಳು.
ಹಿಂದಿನ ದಿನವಷ್ಟೇ ತೊಡೆಯ ಮೇಲೆ ಕೂರು ಹಠ ಮಾಡಿದ ಮಗು, ಇದ್ದಕ್ಕಿದ್ದ ಹಾಗೆ ಎಲ್ಲವನ್ನೂ ಮೀರಿಸಿ ಆಕಾಶದೆತ್ತರ ಬೆಳೆದು ನಿಂತಂತೆ ಭಾಸವಾಯಿತು ಅವನಿಗೆ. ಕಣ್ಣುಗಳು ಆರ್ದ್ರವಾದವು.
ಬಾಲ್ಯವೊಂದು ನಂದನ. ಎಳೆಯ ಮನಸ್ಸುಗಳು ತೆಗೆದುಕೊಳ್ಳುವ ನಿರ್ಧಾರಗಳಿಗೂ ವಯಸ್ಸಿಗೂ ಸಂಬಂಧವಿಲ್ಲ. ಅವರು ನೋವಿಗೆ, ಅಸಹಾಯಕತೆಗೆ, ಸ್ನೇಹಕ್ಕೆ, ಪ್ರೀತಿಗೆ, ಭಾವನೆಗಳಿಗೆ ತೆರೆದುಕೊಳ್ಳುವಷ್ಟು ನಾವು ತೆರೆದುಕೊಳ್ಳಲಾರೆವು. ಅವರು ಕ್ಷಣಾರ್ಧದಲ್ಲಿ ಅಚ್ಚರಿ, ಅಗಾಧತೆಗಳನ್ನು ಸೃಷ್ಟಿಸಿಬಿಡಬಲ್ಲರು. ಅವರ ಮಾತುಗಳನ್ನು ಅಪಹಾಸ್ಯಕ್ಕೀಡು ಮಾಡಿಯೋ, ಹಗುರವಾಗಿಯೋ ತೆಗೆದುಕೊಂಡರೆ ಅದಕ್ಕಿಂತ ಹೆಚ್ಚಿನ ದಡ್ಡತನ ಮತ್ತೊಂದಿಲ್ಲ.
ಕೆಲಸದ ಒತ್ತಡಗಳಲ್ಲಿ ಮಕ್ಕಳನ್ನು ಮಾತನಾಡಿಸಲು ಹೊತ್ತಿಲ್ಲವೆಂದು ನಿರಾಕರಿಸುವವರೇ ಬಹಳ ಮಂದಿ. ತುಂಬ ಮಾತನಾಡಬೇಕಾದ ವಯಸ್ಸು ಅದು. ಕಿವಿಯಷ್ಟನ್ನೇ ಅಲ್ಲ, ಮನಸ್ಸು ಕೊಟ್ಟು ಆಲಿಸಬೇಕಾದದ್ದು ಹಿರಿಯರೆಲ್ಲರ ಆದ್ಯ ಕರ್ತವ್ಯ..
ನಿಮಗಿಷ್ಟವಾಗಿದ್ರೆ ಶೇರ್ ಮಾಡಿ 🙏

No comments:

Post a Comment