Tuesday 28 May 2013


ಕೆಲ ದುಂಡಿರಾಜ್ ಹನಿಗವನಗಳು
ಬ್ಯಾಂಕಿನ ಕ್ಯಾಶ್ ಕೌಂಟರಿನ ಹಿಂದಿನ ಹುಡುಗಿ ಕೊಂಚವೂ ನಗದು
ಆದ್ದರಿಂದ ಕ್ಯಾಶ್ ಕೌಂಟರಿನ ಮುಂದಿದೆ ಬೋರ್ಡು “ನಗದು”
ಕಣ್ಣಿಲ್ಲ, ಕಾಲಿಲ್ಲ ಎಂದು ಸತ್ಯ ಹೇಳಿ ಬೇಡುವುದು ಭಿಕ್ಷಾಟನೆ
ಸಾವಿರ ಸುಳ್ಳು ಹೇಳಿ ಮತ ಯಾಚಿಸುವುದು ಚುನಾವಣೆ..!!!
ಅತಿಥಿಗಳಿಗೆ ಮಾವಿನ ರಸ ಕೊಟ್ಟರೆ ಆಹಾ!! ಮ್ಯಾಂಗೊ ಜ್ಯೂಸ್
ಕಿತ್ತಳೆ ರಸವಾದರೆ ವ್ಹಾ ವ್ಹಾ!! ಆರೆಂಜ್ ಜ್ಯೂಸ್
ಬರೀ ನೀರು ಕೊಟ್ರೆ… ಕಂಜ್ಯೂಸ್…..!!!!
ಬಿಸಿ ರಕ್ತದ ಉತ್ಸಾಹದಲ್ಲಿ
ಲವ್ ಲವ್ ಲವ್,
ವಯಸ್ಸಾದಂತೆ ಕೋಪ ಹೆಚ್ಚಾಗಿ
ಬೌ ಬೌ ಬೌ….!!!
ಮರುಳಾಗಿದ್ದೆ ಅಂದು ಇವಳ ನಾಸಿಕ ಕಂಡು
ಹಾಡಿ ಹೊಗಳಿದ್ದೆ ಆಹಾ !!! ಸಂಪಿಗೆಗಿಂತ ಸುಂದರ
ಅನ್ನಿಸುತ್ತಿದೆ ಇಂದು ಎಂಥ ದರಿದ್ರ ಮೂಗು
ಕೇಳುತ್ತಿದ್ದಾಳೆ ಕುಡಿದು ಬಂದಿರಾ ???
ಹೇಗಿದೆ ನೋಡಿ
ಭಾರತೀಯರ ಸತ್ಯಪ್ರಿಯತೆ
ಕಳ್ಳ ನೊಟಿನಲ್ಲೂ ಅಚ್ಚಾಗಿರತ್ತೆ
ಸತ್ಯಮೇವ ಜಯತೆ !!!
ಮದುವೆಯ ನಂತರ
ಹೆಂಗಸರು ಅಗುತ್ತಾರೆ ದಪ್ಪ
ಗಂಡಸರೂ ಆಗುವರು
ಬರೆ “ಹೌದಪ್ಪ”.
ಪ್ರಿಯ ನಿನ್ನ ಮುಖವೇಕೆ ಹೀಗೆ
ಕಪ್ಪಿಟ್ಟಿದೆ
ಏನು ಮಾಡಲಿ ಪ್ರಿಯೆ ಎದುರಿಗೆ ನೀ ಮಾಡಿದ
ಉಪ್ಪಿಟ್ಟಿದೆ.
ಅಪ್ಪಟ್ಟ ಗಾಂಧಿವಾದಿ ಎಂದರೆ ನಾನೆ
ಒಂದು ಕೆನ್ನೆಗೆ ಕೊಟ್ಟರೆ ಕೂಡಲೆ ಒಡ್ಡುತ್ತೇನೆ ಇನ್ನೊಂದು ಕೆನ್ನೆ
ಬೇಕಿದ್ದರೆ ಕೇಳಿ
ನನ್ನ ಪ್ರೆಯಸಿ ಬಳಿ
ಹೇಗೆ ತಡೆಯಲಿ ಮೈ ನಡುಗುವ ಚಳಿ ?
ಇಲ್ಲ ನನ್ನ ಬಳಿ ಹೊದೆಯಲು ಕಂಬಳಿ,
ಆದ್ದರಿಂದ ಪ್ರಿಯೆ ನೀನೆ Come ಬಳಿ…..!!
ದೃಢ ಚಿತ್ತದ ದಡ
ಉತ್ತೇಜನ ಕೊಡದಿದ್ದರೂ ಕೂಡ
ಮತ್ತೆ ಮತ್ತೆ ಯತ್ನಿಸುತ್ತೆ ಕಡಲು
ಮುತ್ತು ಕೊಡಲು
ಕುಚೇಲ ಕೃಷ್ಣನಿಗೆ
ಕೊಟ್ಟ ಅವಲಕ್ಕಿ |
ನಿಜವಾಗಿಯೂ
ಅವ ಲಕ್ಕಿ
ನಡೆಯಲಿಲ್ಲ
ಓಡಲಿಲ್ಲ
ಕಾರಲ್ಲಿ ಬಂದರೂ
ಇಷ್ಟೊಂದು ಸುಸ್ತೆ ?
ಹೌದು ಮಾರಾಯ್ರೆ
ಹಾಗಿದೆ ನಮ್ಮ ರಸ್ತೆ.
ಭರತ ನಾಟ್ಯ
ಡಿಸ್ಕೋ ನೃತ್ಯ
ಕಥಕ್ಕಳಿ
ಕಲಿಕಲಿ
ಅನ್ನುತ್ತದೆ
ರಸ್ತೆಕುಳಿ.

No comments:

Post a Comment